ಚೈತ್ರ ಕೃಷ್ಣ ದ್ವಿತೀಯಾ ೧೮.೪.೨೦೨೨ ರಂದು ಶ್ರೀಧರ ಸ್ವಾಮಿಯವರ ಆರಾಧನೆ ಇದೆ. ಆ ನಿಮಿತ್ತ….
ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹಾರ್ಣವೇ |
ಸಮೇತ್ಯ ಚ ವ್ಯಪೇಯಾತಾಂ ಕಾಲಮಾಸಾದ್ಯ ಕಞ್ಚನ ||
– ರಾಮಾಯಣ, ಕಾಂಡ ೨, ಸರ್ಗ ೧೦೫, ಶ್ಲೋಕ ೨೬
ಅರ್ಥ : ಯಾವ ರೀತಿ ಮಹಾಸಾಗರದಲ್ಲಿ ಹರಿಯುತ್ತಾ ಹೋಗುವ ಎರಡು ಕಟ್ಟಿಗೆಯು ಕೆಲವೊಮ್ಮೆ ಒಂದಕ್ಕೊಂದು ಭೇಟಿಯಾಗುತ್ತದೆ ಕೆಲವು ಸಮಯದ ನಂತರ ಬೇರೆಯಾಗುತ್ತದೆ. ಅದರಂತೆ ಎರಡು ವ್ಯಕ್ತಿಗಳು ಸ್ವಲ್ಪ ಕಾಲಕ್ಕಾಗಿ ಒಟ್ಟಿಗೆ ಬರುತ್ತಾರೆ ಹಾಗೂ ಕಾಲಚಕ್ರದ ಗತಿಯಲ್ಲಿ ಬೇರೆಯಾಗುತ್ತಾರೆ. ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ ಹಾಗೂ ಎಲ್ಲಿಯಾದರೂ ದೂರ ಹೊರಟು ಹೋಗುತ್ತದೆ. ಮೃತ್ಯುವಿನ ನಂತರ ಯಾರಿಗೂ ಯಾರೊಂದಿಗೂ ಅಷ್ಟೇನು ಸಂಬಂಧ ಉಳಿಯುವುದಿಲ್ಲ.
– ಪ.ಪ. ಭಗವಾನ ಶ್ರೀಧರಸ್ವಾಮಿ (ಸಂದರ್ಭ : ಮಾಸಿಕ ಶ್ರೀಧರ-ಸಂದೇಶ, ಸಪ್ಟೆಂಬರ ೧೯೯೮)