ಊನಾ (ಹಿಮಾಚಲ ಪ್ರದೇಶ)ದಲ್ಲಿ ಮತಾಂಧನಿಂದ ೧೫ ವರ್ಷದ ಹುಡುಗಿಯ ಹತ್ಯೆ

ಬಲಾತ್ಕಾರವವನ್ನು ವಿರೋಧಿಸಿದ್ದರ ಪರಿಣಾಮ !

ಇಂತಹ ವಾಸನಾಂಧ ಮತಾಂಧರ ಮೇಲೆ ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ಖಟ್ಲೆಯನ್ನು ನಡೆಸಿ ಅವರಿಗೆ ಗಲ್ಲು ಶಿಕ್ಷೆಯಾಗಲು ರಾಜ್ಯದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಜನತೆಗೆ ಅನಿಸುತ್ತದೆ !

ಊನಾ (ಹಿಮಾಚಲ ಪ್ರದೇಶ) – ಇಲ್ಲಿ ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡುವ ಪ್ರಯತ್ನದಿಂದ ಆಕೆಯ ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಆಸೀಫನನ್ನು ಬಂಧಿಸಲಾಗಿದೆ. ಸ್ಥಳೀಯರು ಆಸೀಫನಿಗೆ ಗಲ್ಲು ಶಿಕ್ಷೆ ನೀಡಬೇಕಾಗಿ ಮನವಿ ಮಾಡಿದ್ದಾರೆ. ಆಸೀಫನು ಇಲ್ಲಿ ದಿನಪತ್ರಿಕೆಯನ್ನು ವಿತರಿಸುವ ಕೆಲಸ ಮಾಡುತ್ತಿದ್ದನು. ದಿನಪತ್ರಿಕೆಯ ಹಣ ಪಡೆಯಲು ಅವನು ಈ ಹುಡುಗಿಯ ಮನೆಗೆ ಹೋಗಿದ್ದನು. ಆಕೆಯು ಮನೆಯಲ್ಲಿ ಒಬ್ಬಳೇ ಇರುವುದನ್ನು ನೋಡಿ ಅವನು ಆಕೆಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದನು. ಆಗ ಆ ಹುಡುಗಿಯು ಅವನನ್ನು ವಿರೋಧಿಸಿದ್ದರಿಂದ ಆಸೀಫನು ಹರಿತವಾದ ಶಸ್ತ್ರದಿಂದ ಆಕೆಯ ಕುತ್ತಿಗೆಯನ್ನು ಕತ್ತರಿಸಿ ಆಕೆಯ ಹತ್ಯೆ ಮಾಡಿದನು.