ಧಾರವಾಡದ ಸನಾತನದ ಸಾಧಕರಾದ ಶ್ರೀಮತಿ ಅರುಣಾ ಅಸೂಟಿ, ಶ್ರೀಮತಿ ವಸುಂಧರಾ ನಿಡಗುಂದಿ ಮತ್ತು ಸೌ. ಗಾಯತ್ರಿ ನಾಗಠಾಣ ಇವರು ಜನ್ಮಮೃತ್ಯು ಚಕ್ರದಿಂದ ಮುಕ್ತ

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ರಮಾನಂದ ಇವರಿಂದ ಭಾವಪೂರ್ಣ ಸತ್ಕಾರ

ಹುಬ್ಬಳ್ಳಿ – ಧಾರವಾಡ ಜಿಲ್ಲೆಯವರಾದ ಶ್ರೀಮತಿ ಅರುಣಾ ಗುರುನಾಥ ಅಸೂಟಿ ಇವರು ಶೇ. ೬೨, ಶ್ರೀಮತಿ ವಸುಂಧರಾ ಮೋಹನರಾವ ನಿಡಗುಂದಿ ಇವರು ಶೇ. ೬೧ ಮತ್ತು ಸೌ. ಗಾಯತ್ರಿ ಈರಣ್ಣಾ ನಾಗಠಾಣ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ  ಜನ್ಮಮೃತ್ಯು ಚಕ್ರದಿಂದ ಬಿಡುಗಡೆಯಾದರೆಂದು ಕರ್ನಾಟಕ ರಾಜ್ಯದ ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ಘೋಷಿಸಿದರು. ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಶ್ರೀಕೃಷ್ಣನ ಭಾವಚಿತ್ರ ಹಾಗೂ ಉಡುಗೊರೆಯನ್ನು ನೀಡಿ ಅವರನ್ನು ಸತ್ಕರಿಸಿದರು.

೭೫ ವರ್ಷ ವಯಸ್ಸಿನ ಮತ್ತು ಕಳೆದ ಸುಮಾರು ೧೭ ವರ್ಷಗಳಿಂದ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿರುವ ಹುಬ್ಬಳ್ಳಿಯ ಶ್ರೀಮತಿ ಅರುಣಾ ಗುರುನಾಥ ಅಸೂಟಿಯವರು ಅನಾರೋಗ್ಯದಿಂದಾಗಿ ಸ್ವಲ್ಪ ಕಾಲ ಸೇವೆಯನ್ನು ಮಾಡಲಾಗದಿದ್ದರೂ ತಮ್ಮ ವ್ಯಷ್ಟಿ ಸಾಧನೆಯನ್ನು ಒಳ್ಳೆಯದಾಗಿ ಮಾಡಿದರು. ಅಲ್ಲದೇ ಅನೇಕ ವಿರೋಧ, ಸಂಕಟಗಳ ನಡುವೆಯೂ ನಿರಂತರ ಗುರುಸ್ಮರಣೆಯೊಂದಿಗೆ ಜೀವನವನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಪೂಜನೀಯ ರಮಾನಂದ ಗೌಡ ಇವರು, ‘ಅನೇಕ ವರ್ಷಗಳ ಕಾಲ ಸಾಧಕರ ಸಂಪರ್ಕದಲ್ಲಿ ಇಲ್ಲದಿದ್ದರೂ ಇವರು ಸಾಧನೆಯನ್ನು ಏಕಲವ್ಯನಂತೆ ಮಾಡಿದ್ದಾರೆ’ ಎಂದರು.

ತ್ಯಾಗವೃತ್ತಿ, ಇತರರ ಬಗ್ಗೆ ವಿಚಾರ ಮಾಡುವ ಹುಬ್ಬಳ್ಳಿಯ ೭೮ ವರ್ಷದ ಶ್ರೀಮತಿ ವಸುಂಧರಾ ಮೋಹನರಾವ ನಿಡಗುಂದಿ ಇವರು ಚಿಕ್ಕಂದಿನಲ್ಲೇ ಪೂ. ರಾನಡೆ ಮಹಾರಾಜರಿಂದ ದೀಕ್ಷೆಯನ್ನು ಪಡೆದರು. ಅಲ್ಲದೇ ಸನಾತನದ ಸಾಧಕರ ಸಂಪರ್ಕದಲ್ಲಿಯೂ ಇದ್ದಾರೆ. ಸತತ ತ್ಯಾಗಭಾವದಲ್ಲಿರುವ ಇವರ ಬಗ್ಗೆ ಸಂತರು ಕೃತಜ್ಞತೆಯನ್ನು ಸಲ್ಲಿಸಿದರು.

ಪ್ರೇಮಭಾವ, ಸಂಪರ್ಕ ಕೌಶಲ್ಯ, ಸ್ವೀಕಾರವೃತ್ತಿ, ಗುರುಸೇವೆಯ ತೀವ್ರ ತಳಮಳವಿರುವ ೬೦ ವರ್ಷ ವಯಸ್ಸಿನ ಧಾರವಾಡದ ಸೌ. ಗಾಯತ್ರಿ ಈರಣ್ಣಾ ನಾಗಠಾಣ ಇವರ ಬಗ್ಗೆ ಹೇಳಿದ ಪೂ. ರಮಾನಂದಣ್ಣನವರು ‘ಗುರುಸೇವೆಯ ತೀವ್ರ ಹಂಬಲವಿದ್ದರೆ ಹಾಗೂ ತೀವ್ರ ಇಚ್ಛಾಶಕ್ತಿಯಿದ್ದರೆ ಎಂತಹ ಪರಿಸ್ಥಿತಿಯನ್ನೂ ಸಹ ಜಯಿಸಿ ಗುರುಸೇವೆಯನ್ನು ಮಾಡಬಹುದು ಎನ್ನುವುದಕ್ಕೆ ಸೌ. ಗಾಯತ್ರಿ ನಾಗಠಾಣ ಆದರ್ಶರಾಗಿದ್ದಾರೆ’ ಎಂದರು.