ಕಾಶಿ ವಿಶ್ವನಾಥ ದೇವಸ್ಥಾನದ ಪ್ರಕರಣ
ಪ್ರಯಾಗರಾಜ (ಉತ್ತರಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಅಲ್ಲಿಯ ಜ್ಞಾನವಾಪಿ ಮಶೀದಿ ನಡುವಿನ ಪ್ರಕರಣದ ವಿಚಾರಣೆಯ ಸಮಯದಲ್ಲಿ ದೇವಸ್ಥಾನದ ನ್ಯಾಯವಾದಿಗಳು ‘ಈ ಪ್ರಕರಣದಲ್ಲಿ ವಕ್ಫ ಕಾನೂನು ಜಾರಿಗೊಳ್ಳಲು ಸಾಧ್ಯವಿಲ್ಲ; ಕಾರಣ ಈ ವಿವಾದ ಹಿಂದೂ ಮತ್ತು ಮುಸಲ್ಮಾನರ ನಡುವಿನದ್ದಾಗಿದೆ. ಇಬ್ಬರ ಮುಸಲ್ಮಾನ ಗುಂಪಿನ ನಡುವಿನದ್ದಲ್ಲ, ಎಂದು ಪ್ರತಿವಾದದ ಸಮಯದಲ್ಲಿ ತಿಳಿಸಿದೆ, ಇದರ ಮೇಲೆ ಮುಂದಿನ ಆಲಿಕೆಯನ್ನು ಎಪ್ರಿಲ್ ೮ ರಂದು ನಡೆಯಲಿದೆ.
ದೇವಸ್ಥಾನದ ನ್ಯಾಯವಾದಿ ವಿಜಯ ಶಂಕರ ರಸ್ತೋಗಿಯವರು ಪ್ರತಿವಾದ ಮಾಡುವಾಗ, ಈ ವಿವಾದ ಕೇವಲ ಸಂಪತ್ತಿನ ವಿಷಯವಲ್ಲ, ಬದಲಾಗಿ ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಕರಣವಾಗಿದೆ. ಈ ಪ್ರಕರಣ ಭಗವಾನ ಕಾಶಿ ವಿಶ್ವೇಶ್ವರನಿಗೆ ಸಂಬಂಧಿಸಿದೆ. ಮುಸಲ್ಮಾನರು ಅಲ್ಲಿ ಮಶೀದಿ ಇದೆಯೆಂದು ವಾದಿಸುತ್ತಿದ್ದಾರೆ. ಎಂದು ಹೇಳಿದರು.
ಏನಿದು ಪ್ರಕರಣ ?
ಔರಂಗಜೇಬನು ವಾರಣಾಸಿಯ ಕಾಶಿ ವಿಶ್ವನಾಥ ಮಂದಿರವನ್ನು ಧ್ವಂಸಗೊಳಿಸಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದನು. ಅಲ್ಲಿ ಮುಸಲ್ಮಾನರು ೫ ಸಲ ನಮಾಜ್ ಮಾಡುತ್ತಾರೆ. ೧೯೯೧ ರಲ್ಲಿ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಮೊದಲು ಕಾಶಿ ವಿಶ್ವೇಶ್ವರನ ದೇವಸ್ಥಾನವಿತ್ತು ಮತ್ತು ಅಲ್ಲಿ ಶೃಂಗಾರ ಗೌರಿ ಪೂಜೆಯನ್ನು ಮಾಡಲಾಗುತ್ತಿತ್ತು, ಎಂದು ಹೇಳುತ್ತಾ ಅವರ ಮೇಲೆ ದಾವೆ ಮಾಡಲಾಗಿತ್ತು. ಮುಸಲ್ಮಾನರಿಗೆ ಅಲ್ಲಿಂದ ಸ್ಥಳಾಂತರಿಸಿ ಹಿಂದೂಗಳಿಗೆ ಆ ಸ್ಥಳವನ್ನು ಕೊಡಬೇಕು ಎಂದರೆ ಅಲ್ಲಿ ಅವರಿಗೆ ಪೂಜೆ ಮಾಡಲು ಸಾಧ್ಯವಾಗುತ್ತದೆ ಎಂದು ದಾವೆಯಲ್ಲಿ ಕೋರಲಾಗಿದೆ. ಇದನ್ನು ಅಂಜುಮನ್ ಇಂತೆಜಾಮಿಯಾ ಮಸೀದಿ ವಿರೋಧಿಸುತ್ತಿದೆ. ಎಪ್ರಿಲ್ ೮, ೨೦೨೧ ರಂದು ನ್ಯಾಯಾಲಯವು ಭಾರತೀಯ ಪುರಾತತ್ವ ವಿಭಾಗದಿಂದ ಈ ಸ್ಥಳದ ಸರ್ವೇಕ್ಷಣೆ ನಡೆಸಲು ಆದೇಶ ನೀಡಿತ್ತು. ತದನಂತರ ಸಪ್ಟೆಂಬರ ೯, ೨೦೨೧ ರಂದು ಅಲಹಾಬಾದ ಉಚ್ಚ ನ್ಯಾಯಾಲಯವು ಸರ್ವೇಕ್ಷಣೆ ನಡೆಸುವುದನ್ನು ಸ್ಥಗಿತಗೊಳಿಸಿತ್ತು.