ಮಕ್ಕಳಿಗೆ ಕೇವಲ ಭಗವದ್ಗೀತೆ ಕಲಿಸುವುದಕ್ಕಿಂತ ಸಾಧನೆ ಕಲಿಸುವುದು ಹೆಚ್ಚು ಸೂಕ್ತ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಭಗವದ್ಗೀತೆ’ ಇದು ಹಿಂದೂಗಳ ಪವಿತ್ರ ಧರ್ಮಗ್ರಂಥವಾಗಿದ್ದು ಹಿಂದೂ ಸಂಸ್ಕೃತಿಯ ಘನತೆಯನ್ನು ಹೆಚ್ಚಿಸುವ ಕೇಂದ್ರಬಿಂದುವಾಗಿದೆ. ಪಾಶ್ಚಿಮಾತ್ಯ ತತ್ತ್ವಜ್ಞಾನಿಗಳೂ ಭಗವದ್ಗೀತೆಯ ಶ್ರೇಷ್ಠತೆಯನ್ನು ಹಾಡಿಹೊಗಳಿದ್ದಾರೆ. ಬಹಳಷ್ಟು ಸಲ ಚಿಕ್ಕವರು ಮತ್ತು ಯುವಕರಿಗೆ ಭಗವದ್ಗೀತೆ ಓದಲು ಅಥವಾ ಬಾಯಿಪಾಠ ಮಾಡಲು ಹೇಳುತ್ತಾರೆ; ಆದರೆ ‘ಸದ್ಯದ ಅವರ ಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಭಗವದ್ಗೀತೆಯ ಉಪಯೋಗವಾಗಲಿದೆ’, ಈ ಬಗ್ಗೆ ಗಮನ ಹರಿಸುವುದಿಲ್ಲ. ಈ ಕುರಿತು ಮುಂದಿನ ಅಂಶಗಳು ಉಪಯೋಗವಾಗಲಿದೆ.

ಶಾಲೆ, ಮಹಾವಿದ್ಯಾಲಯಗಳು ಪಠ್ಯಪುಸ್ತಕಗಳು ಮುಂತಾದ ವಿವಿಧ ಮಾಧ್ಯಮಗಳಿಂದ ಮತ್ತು ವಿವಿಧ ಸ್ತರಗಳಲ್ಲಿ ‘ಸಾಧನೆ’ ಈ ವಿಷಯವನ್ನು ಕಲಿಸುವುದು ಆತ್ಯಾವಶ್ಯಕವಾಗಿದೆ. ಅಲ್ಲದೇ ‘ಸಾಧನೆ’ ಈ ಕುರಿತು ಪಠ್ಯಕ್ರಮ ನಿರ್ಧರಿಸಿ ಅದನ್ನು ಕಲಿಸಬೇಕಾಗಿದೆ. ಈ ಬಗ್ಗೆ ಪ್ರಯತ್ನಿಸಲು ಬಯಸುವವರಿಗೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಸಹಾಯ ಮಾಡಲಿದೆ !

ಅಂಚೆ ವಿಳಾಸ : ಶ್ರೀ. ಅಭಿಜಿತ ಸಾವಂತ, ‘ಭಗವತಿ ಕೃಪಾ ಆಪಾರ್ಟಮೆಂಟ್ಸ್’, ಎಸ್-೧, ಎರಡನೇ ಮಹಡಿ, ಬಿಲ್ಡಿಂಗ್ ಎ, ಢವಳಿ, ಫೋಂಡಾ, ಗೋವಾ. ೪೦೩೪೦೧.

ವಿ-ಅಂಚೆ ವಿಳಾಸ : [email protected]

೧. ಮಕ್ಕಳಿಗೆ ಕೇವಲ ಭಗವದ್ಗೀತೆ ಕಲಿಸುವುದರಲ್ಲಿರುವ ಮಿತಿ !

ಅ. ಯಾವುದೇ ವಿಷಯವನ್ನು ಕಲಿಸುವಾಗ ಕಲಿಯುವವನ ಕ್ಷಮತೆ ಇದೆಯೇ ಅಥವಾ ಇಲ್ಲವೇ, ಎಂಬುದನ್ನು ನೋಡಿ ಕಲಿಸಲಾಗುತ್ತದೆ. ಭಗವದ್ಗೀತೆ ದೊಡ್ಡವರಿಗೂ ಅರ್ಥವಾಗುವುದಿಲ್ಲ ಹಾಗಾದರೆ ಮಕ್ಕಳಿಗೆ ಹೇಗೆ ಅರ್ಥವಾಗುವುದು ? ‘ಮಕ್ಕಳಿಗೆ ಭಗವದ್ಗೀತೆ ಕಲಿಸುವುದು’ ಅಂದರೆ, ಇದು ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಶಿಕ್ಷಣ ಕಲಿಸುವುದಕ್ಕಿಂತಲೂ ಕಷ್ಟವಾಗಿದೆ ! ಒಬ್ಬನಲ್ಲಿ ಮೂಲದಲ್ಲಿ ಜ್ಞಾನ ಮಾರ್ಗದ ಪ್ರವೃತ್ತಿ ಇದ್ದರೆ, ಆತನಿಗೆ ಸಣ್ಣಗಿರುವಾಗಲೇ ಭಗವದ್ಗೀತೆ ಕಲಿಸಲು ಸಾಧ್ಯವಾಗುತ್ತದೆ; ಆದರೆ ಹೀಗೆ ಸಿಗುವುದು ತುಂಬಾ ವಿರಳವಾಗಿದೆ.

ಆ. ಭಗವದ್ಗೀತೆಯನ್ನು ಮೂಲ ಭಾಷೆಯಾಗಿರುವ ಸಂಸ್ಕೃತದಲ್ಲಿ ಕಲಿಸಿದರೆ ಅವರಿಗೆ ಎಂದಿಗೂ ಅರ್ಥವಾಗುವುದಿಲ್ಲ.

ಇ. ಮಕ್ಕಳಿಗೆ ಭಗವದ್ಗೀತೆಯ ಬೋಧನೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಬೇಸರ ಬರಬಹುದು. ಆದ್ದರಿಂದ ಮಕ್ಕಳಿಗೆ ಭಗವದ್ಗೀತೆ, ಅದೇ ರೀತಿ ಹಿಂದೂಗಳ ಇತರ ಧರ್ಮಗ್ರಂಥಗಳ ಬಗ್ಗೆ ನಕಾರಾತ್ಮಕ ಹಾಗೂ ಉದಾಸೀನತೆ ನಿರ್ಮಾಣವಾಗಬಹುದು.

ಈ. ಗೀತೆಯನ್ನು ಕೇವಲ ಬಾಯಿಪಾಠ ಮಾಡಿಕೊಂಡರೆ ಅದರಿಂದ ಉಪಯೋಗವಿಲ್ಲ. ಅದರಲ್ಲಿನ ವಿಚಾರವನ್ನು ಅರ್ಥಮಾಡಿಕೊಂಡು ಕೃತಿಯಲ್ಲಿ ತರುವುದು ಹೆಚ್ಚು ಮಹತ್ವದ್ದಾಗಿದೆ.

ಎ. ನಮ್ಮ ಭಾರತಭೂಮಿಯು ಸಂತರ ನಾಡಾಗಿದೆ. ಈ ಸಂತರ ಪೈಕಿ ಎಷ್ಟು ಸಂತರು ಇದುವರೆಗೆ ಸಮಾಜಕ್ಕೆ ಭಗವದ್ಗೀತೆಯನ್ನು ಕಲಿಸಿದ್ದಾರೆ ಅಥವಾ ಕಲಿಸುತ್ತಿದ್ದಾರೆ ?

೨. ಮಕ್ಕಳಿಗೆ ಆದ್ಯತೆಯಿಂದ ಸಾಧನೆ ಕಲಿಸುವುದು ಮಹತ್ವದ್ದಾಗಿದೆ !

ಅ. ಮಕ್ಕಳಿಗೆ ಗೀತೆಯಲ್ಲಿನ ತಾತ್ತ್ವಿಕ ಮಾಹಿತಿ ಕಲಿಸುವ ಬದಲು ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನೆಯನ್ನು ಕಲಿಸುವುದು ಹಾಗೂ ಅದು ಅವರಿಂದ ಮಾಡಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ‘ಸಾಧನೆ’ ಅಂದರೆ ಈಶ್ವರಪ್ರಾಪ್ತಿಗಾಗಿ ಪ್ರತಿದಿನ ಕೃತಿಯ ಸ್ತರದಲ್ಲಿ ಮಾಡುವ ಪ್ರಯತ್ನವಾಗಿದೆ, ಉದಾ. ನಾಮಜಪ, ಸತ್ಸೇವೆ.

ಆ. ಮಕ್ಕಳಿಗೆ ಸಾಧನೆ ಕಲಿಸಿ ಅದನ್ನು ಅವರಿಂದ ಮಾಡಿಸಿಕೊಂಡರೆ ಮಾತ್ರ ನಿಜವಾದ ಅರ್ಥದಲ್ಲಿ ‘ಹಿಂದೂ’ ಆಗಬಹುದು ! ‘ಹಿಂದೂ’ ಪದದ ಅರ್ಥ – ‘ಹೀನಾನ್ ಗುಣಾನ್ ದೂಷಯತಿ ಇತಿ ಹಿಂದುಃ |’ ಅಂದರೆ ‘ಕನಿಷ್ಠ, ಹೀನ ಈ ರೀತಿಯ ರಜ ಮತ್ತು ತಮ’ ಗುಣಗಳನ್ನು ನಾಶ ಮಾಡುವವನೇ ‘ಹಿಂದೂ’ ಆಗಿದ್ದಾನೆ.

ಇ. ವ್ಯಕ್ತಿಯು(ಮಕ್ಕಳು, ಯುವಕರು ಇತ್ಯಾದಿ) ಸಾಧನೆ ಮಾಡಿದರೆ ಅವರಲ್ಲಿ ಸಾತ್ತಿಕತೆಯು ಹೆಚ್ಚಾದರೆ ಅವರ ಮನಸ್ಸು, ಬುದ್ಧಿ ಮತ್ತು ಚಿತ್ತವು ಶುದ್ಧಿಯಾಗಲು ಆರಂಭವಾಗುತ್ತದೆ. ಇದರಿಂದ ವ್ಯಕ್ತಿಯಲ್ಲಿ ತನ್ನಿಂದತಾನೇ ಸದಾಚಾರ, ನೈತಿಕತೆ, ಪರಸ್ಪರರ ಬಗ್ಗೆ ಪ್ರೇಮಭಾವ, ಧರ್ಮಾಭಿಮಾನ, ರಾಷ್ಟ್ರಪ್ರೇಮ, ಧರ್ಮಬಾಂಧವ್ಯ ಇತ್ಯಾದಿ ಗುಣಗಳು ನಿರ್ಮಾಣವಾಗುತ್ತದೆ. ರಾಷ್ಟ್ರದಲ್ಲಿ ಎಲ್ಲರಲ್ಲಿ ಈ ರೀತಿಯ ಗುಣಗಳು ನಿರ್ಮಾಣವಾದರೆ ರಾಷ್ಟ್ರವು ಆದರ್ಶ ರಾಮರಾಜ್ಯದ ದಿಕ್ಕಿನತ್ತ ಸಾಗುತ್ತದೆ.

ಈ. ಗೀತೆಯಲ್ಲಿ ಉಚ್ಚ ಆಧ್ಯಾತ್ಮಿಕ ತತ್ತ್ವಜ್ಞಾನ ಅರ್ಥಮಾಡಿಕೊಳ್ಳಲು ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೫೦ ಕ್ಕೂ ಹೆಚ್ಚು ಇರಬೇಕಾಗುತ್ತದೆ. ಸದ್ಯದ ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಸರಾಸರಿ ಆಧ್ಯಾತ್ಮಿಕ ಮಟ್ಟ ಹೆಚ್ಚೆಂದರೆ ಶೇ. ೨೦ ರಷ್ಟೇ ಇರುವುದರಿಂದ ಅವರಿಗೆ ಗೀತೆ ಅರ್ಥವಾಗುವುದಿಲ್ಲ. ವ್ಯಕ್ತಿಯು ಸಾಧನೆ ಮಾಡಿದಾಗ ಅವನ ಆಧ್ಯಾತ್ಮಿಕ ಮಟ್ಟ ಹೆಚ್ಚಾಗುತ್ತದೆ, ಅದೇ ರೀತಿ ಉಚ್ಚ ಆಧ್ಯಾತ್ಮಿಕ ತತ್ತ್ವಜ್ಞಾನ ಅರ್ಥಮಾಡಿಕೊಳ್ಳಲು ಬೇಕಾಗಿರುವ ವಿವೇಕಶೀಲತೆ ಹಾಗೂ ಬುದ್ಧಿಯ ಪ್ರಗಲ್ಭತೆಯೂ ಅವನಲ್ಲಿ ನಿರ್ಮಾಣವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗೀತೆಯನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಆಧ್ಯಾತ್ಮಿಕ ಅಡಿಪಾಯ ನಿರ್ಮಾಣವಾಗುತ್ತದೆ. ಅನಂತರ ವ್ಯಕ್ತಿಗೆ ಗೀತೆ ಅರ್ಥವಾಗಲು ಸಾಧ್ಯವಾಗುತ್ತದೆ.

ಎ. ಮಕ್ಕಳಿಗೆ ಸಾಧನೆ ಕಲಿಸುವುದರ ಜೊತೆಗೆ ಗೀತೆಯ ಬದಲು ಸಂತರ ಸುಲಭವಾದ ಭಜನೆ, ಅಭಂಗ ಇತ್ಯಾದಿ ಕಲಿಸಿ ಅವರ ವಿಷಯದಲ್ಲಿ ಗೀತೆಯ ಶ್ಲೋಕ ಹೇಳಿದರೆ ಮಕ್ಕಳಿಗೆ ವಿಷಯ ಕಲಿಯಲು ಸಾಧ್ಯವಾಗುತ್ತದೆ ಹಾಗೂ ಅವರಿಗೆ ಗೀತೆಯ ಮಹತ್ವವೂ ಅರ್ಥವಾಗುತ್ತದೆ.

(‘ಕಾಲಾನುಸಾರ ಯಾವ ಸಾಧನೆ ಮಾಡುವುದು ಹೆಚ್ಚು ಸೂಕ್ತವಾಗಿದೆ’, ಈ ಬಗೆಗಿನ ಮಾರ್ಗದರ್ಶನವು ‘ಸನಾತನ ಸಂಸ್ಥೆ’ಯಿಂದ ಹಾಗೂ ಸನಾತನದ ಗ್ರಂಥಗಳಿಂದ ಸಿಗುತ್ತದೆ.)

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೨೪.೩.೨೦೨೨)