ಮೂರನೇಯ ಜಾಗತಿಕ ಮಹಾಯುದ್ಧದ ಭವಿಷ್ಯಕಥನ, ಮಹಾಯುದ್ಧದ ದುಷ್ಪರಿಣಾಮ ಮತ್ತು ಅದರಿಂದ ಬದುಕುಳಿಯಲು ಮಾಡುವ ಉಪಾಯ

ಪರಾತ್ಪರ ಗುರು ಡಾ. ಆಠವಲೆ

ಹಿಂದಿನ ವಾರದಲ್ಲಿ ಪ್ರಕಾಶಿತ ಲೇಖನದಲ್ಲಿ ಮೂರನೇಯ ಜಾಗತಿಕ ಮಹಾಯುದ್ಧದ ಬಗ್ಗೆ ಮಾಡಲಾದ ಭವಿಷ್ಯಕಥನ ಮತ್ತು ಸೂಕ್ಷ್ಮದಲ್ಲಿನ ಯುದ್ಧ ಈ ಬಗೆಗಿನ ಅಂಶಗಳನ್ನು ನಾವು ತಿಳಿದುಕೊಂಡೆವು. ಇಂದು ಅದರ ಮುಂದಿನ ಭಾಗವನ್ನು ಇಲ್ಲಿ ನೋಡೋಣ.   (ಉತ್ತರಾರ್ಧ)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/60992.html

‘ಏನಾದರೂ ಕೆಟ್ಟದ್ದು ಸಂಭವಿಸಿದಾಗ ಅಥವಾ ಸಾವು ಸಮೀಪ ಬಂದಾಗ, ನಮಗೆ ದೇವರ ಸ್ಮರಣೆಯಾಗುತ್ತದೆ. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಜನರು ‘ಹೇ ದೇವರೇ’, ಎಂದು ಹೇಳುತ್ತಾರೆ. ತದ್ವಿರುದ್ಧ ನೀವು ಮಹಾಯುದ್ಧದ ಮೊದಲು ದೇವರನ್ನು ಸ್ಮರಿಸಿದರೆ ಮತ್ತು ಸಾಧನೆಯನ್ನು ಆರಂಭಿಸಿದರೆ, ಯುದ್ಧ ಆರಂಭವಾದಾಗ ದೇವರು ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಮತ್ತು ನಿಮ್ಮನ್ನು ರಕ್ಷಿಸುತ್ತಾನೆ. ಈ ಸಮಯದಲ್ಲಿ ‘ಹೇ ದೇವರೇ’, ಎಂದು ಹೇಳುವ ಪ್ರಮೇಯವು ಬರಲಾರದು. ಯುದ್ಧದ ಸಮಯದಲ್ಲಿ ದೇವರು ನಿಮ್ಮನ್ನು ರಕ್ಷಿಸಿದಾಗ, ಅವನಿಗೆ ಕೇವಲ ಧನ್ಯವಾದ ಮಾತ್ರವಲ್ಲ, ಅವನ ಚರಣಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮರೆಯದಿರಿ’.

– (ಪರಾತ್ಪರ ಗುರು) ಡಾ. ಆಠವಲೆ

ಹೆಚ್ಚೆಚ್ಚು ಜನರು ಸಾಧನೆಯನ್ನು ಮಾಡಲು ಆರಂಭಿಸಿದರೆ ವಿನಾಶಕಾರಿ ಕಾಲದ ತೀವ್ರತೆಯು ಕಡಿಮೆಯಾಗಲು ಸಹಾಯವಾಗುವುದು !

ಹೀಗಿದ್ದರೂ ಯುದ್ಧದ ಕಾಲಾವಧಿ ಮತ್ತು ತೀವ್ರತೆಯಲ್ಲಿ ಬದಲಾವಣೆಯಾಗಬಹುದು. ಜಗತ್ತು ವಿನಾಶಕಾರಿ ಯುದ್ಧದ ಕಡೆಗೆ ವೇಗವಾಗಿ ಚಲಿಸುತ್ತಿದೆ; ಆದರೆ ಅದೇ ಸಮಯದಲ್ಲಿ ಪೃಥ್ವಿಯಲ್ಲಿನ ಅತ್ಯುನ್ನತ ಆಧ್ಯಾತ್ಮಿಕ ಮಟ್ಟದ ಸಂತರು ‘ಮನುಕುಲದ ರಕ್ಷಣೆಗಾಗಿ ಮತ್ತು ಮಹಾಯುದ್ಧದ ತೀವ್ರತೆಯನ್ನು ಕಡಿಮೆ ಮಾಡಲು’, ನಿರಂತರ ಪ್ರಯತ್ನಿಸುತ್ತಿದ್ದಾರೆ. ಹೆಚ್ಚೆಚ್ಚು ಜನರು ಸಾಧನೆಯನ್ನು ಆರಂಭಿಸುತ್ತಿದ್ದಂತೆ, ‘ಅವರಿಗೆ ಸಾಧನೆಯನ್ನು ಮಾಡಲು ಕಾಲಾವಕಾಶ ಸಿಗಬೇಕು ಮತ್ತು ಅವರ ಸಾಧನೆಯ ಬುನಾದಿ ಗಟ್ಟಿಯಾಗಬೇಕೆಂದು’, ಈ ಉನ್ನತ ಸಂತರು ತಮ್ಮ ಸಂಕಲ್ಪದಿಂದ ಈ ಯುದ್ಧದ ಕಾಲಾವಧಿಯನ್ನು ಮುಂದೂಡುತ್ತಿದ್ದಾರೆ. ‘ಈ ಯುದ್ಧದ ಕಾಲಾವಧಿ ಮತ್ತು ತೀವ್ರತೆಯು ಯಾವ ಶಕ್ತಿಗಳ ಪ್ರಯತ್ನ ಹೆಚ್ಚಿದೆ ?’, ಎಂಬುದರ ಮೇಲೆ ಅವಲಂಬಿಸಿದೆ. ಒಂದು ವೇಳೆ ಕೆಟ್ಟ ಶಕ್ತಿಗಳು ಹೆಚ್ಚು ಪ್ರಯತ್ನಶೀಲರಾಗಿದ್ದರೆ, ಯುದ್ಧದ ತೀವ್ರತೆ ಹೆಚ್ಚಾಗಿರುತ್ತದೆ; ತದ್ವಿರುದ್ಧ ಹೆಚ್ಚೆಚ್ಚು ಜನರು ಸಾಧನೆಯನ್ನು ಆರಂಭಿಸಿದರೆ ಈ ವಿನಾಶಕಾರಿ ಕಾಲದ ತೀವ್ರತೆ ಕಡಿಮೆಯಾಗುವುದು. ‘ಮೂರನೇಯ ಜಾಗತಿಕ ಮಹಾಯುದ್ಧದ ಕಾಲಾವಧಿಯು ಸಾಧಕರ ಈಶ್ವರಭಕ್ತಿಯ ಮೇಲೆ ಅವಲಂಬಿಸಿರುತ್ತದೆ. ಈ ಯುದ್ಧವು ಭಕ್ತರು (ಧರ್ಮಾಚರಣೆ ಮಾಡುವ ಜೀವಗಳು) ಮತ್ತು ಕೆಟ್ಟ ಶಕ್ತಿಗಳ (ಅಧರ್ಮಾಚರಣೆ ಮಾಡುವ ಜೀವಗಳು) ನಡುವೆ ನಡೆಯಲಿದೆ, ಆದುದರಿಂದ ಯುದ್ಧದ ಕಾಲಾವಧಿ ಯಲ್ಲಿ ಬದಲಾವಣೆಯಾಗಬಹುದು. ಸಾಧನೆಯಿಂದ ಅಖಿಲ ಮನುಕುಲದ ಪ್ರಾರಬ್ಧದಲ್ಲಿ ಸಕಾರಾತ್ಮಕ ಪರಿವರ್ತನೆಯಾಗಬಹುದು’.

– (ಪರಾತ್ಪರ ಗುರು) ಡಾ. ಆಠವಲೆ

೫. ಮೂರನೇಯ ಜಾಗತಿಕ ಮಹಾಯುದ್ಧದಿಂದಾಗುವ ದುಷ್ಪರಿಣಾಮಗಳು

ಅ. ‘ಮೂರನೇಯ ಜಾಗತಿಕ ಮಹಾಯುದ್ಧದಿಂದ ಉಂಟಾದ ಪ್ರಚಂಡ ಹಾನಿಯನ್ನು ನಿಭಾಯಿಸಲು ಆವಶ್ಯಕವಾಗಿರುವ ತುರ್ತು ಪರಿಹಾರ ವ್ಯವಸ್ಥೆಗಳಿಗಾಗಿ ಸರಕಾರದ ನೆರವು ಲಭ್ಯವಾಗಲಾರದು ಅಥವಾ ಈ ಹಾನಿಯನ್ನು ಎದುರಿಸುವ ಕ್ಷಮತೆ ಅವರಲ್ಲಿರುವುದಿಲ್ಲ.’

. ಜಗತ್ತಿನ ಬಹುಪಾಲು ಪ್ರಮುಖ ನಗರಗಳು ನಾಶವಾಗುವವು ಮತ್ತು ಜಗತ್ತಿನ ಶೇ. ೭೦ ರಷ್ಟು ಸಂಪರ್ಕವ್ಯವಸ್ಥೆಯು ನಾಶವಾಗುವುದು.

. ಆಧುನಿಕ ವೈದ್ಯರು ಮತ್ತು ಆಸ್ಪತ್ರೆಗಳು ಅತಿ ವಿರಳವಾಗಿರುತ್ತವೆ ಮತ್ತು ಔಷಧಗಳ ಕೊರತೆ ಅಪಾರವಿರುತ್ತದೆ.

. ವಿಕಿರಣ ವಿಸರ್ಜನೆಯು ಮಾನವ, ಪ್ರಾಣಿ, ಜಲಚರಗಳು ಮತ್ತು ಭೂಮಿಯನ್ನು ಕಲುಷಿತಗೊಳಿಸುತ್ತವೆ. ವಿಕಿರಣ ವಿಸರ್ಜನೆ ಎಂದರೆ ಅಣುಬಾಂಬ್‌ನ ಸ್ಫೋಟದ ನಂತರ ವಿಕಿರಣಶೀಲ ಕಣಗಳ ಅಥವಾ ವಿಕಿರಣಗಳಿಂದ ಹೊರಗೆ ಎರಚಲ್ಪಡುವ ಧೂಳಿನ ಮಳೆ ಮತ್ತು ಹೊರಸೂಸುವಿಕೆಯಾಗಿದೆ.

. ವಿಕಿರಣ ವಿಸರ್ಜನೆಯು ಸುಮಾರು ಒಂದು ವರ್ಷದವರೆಗೆ ನೀರನ್ನುಕ ಲುಷಿತಗೊಳಿಸುತ್ತದೆ.

. ಈ ಯುದ್ಧದ ನಂತರ ಮುಂದಿನ ೧೦ ವರ್ಷಗಳ ಕಾಲ ಧಾನ್ಯದ ಕೊರತೆಯನ್ನು ಎದುರಿಸಬೇಕಾಗುವುದು ಮತ್ತು ಇಂಧನದ ಕೊರತೆಯು ಉದ್ಭವಿಸುವುದು. ಇದರಿಂದ ಇಂಧನ ಆಧಾರಿತ ಎಲ್ಲ ವಾಹನಗಳು ಸ್ಥಗಿತಗೊಳ್ಳಲಿವೆ. ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಕಡಿಮೆ ಇರುತ್ತದೆ.

. ಜನರಿಗೆ ನಿರಾಶೆ, ಅತಿ ಚಿಂತೆ ಮತ್ತು ದುಃಖ ಇವುಗಳಂತಹ ಮಾನಸಿಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ.

. ಯುದ್ಧದ ನಂತರ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವುದು. ಆದ್ದರಿಂದ ಮನುಷ್ಯನಲ್ಲಿ ಕೆಟ್ಟ ಪ್ರವೃತ್ತಿ ತಲೆ ಎತ್ತಿ, ಲೂಟಿ ಸುಲಿಗೆ ಮತ್ತು ಅಪರಾಧಗಳು ಹೆಚ್ಚಾಗುವವು. ಪ್ರತಿದಿನ ಜೀವಂತವಾಗಿರಲು ಹರಸಾಹಸ ಮಾಡಬೇಕಾಗುವುದು. ಈ ಕಠಿಣ ಕಾಲದಲ್ಲಿ ಮನುಷ್ಯನ ನಿಜವಾದ ಸ್ವಭಾವದ ಪರಿಚಯವಾಗುವುದು.

. ಈ ಯುದ್ಧದ ಪರಿಣಾಮವು ೩೦ ವರ್ಷಗಳ ಕಾಲ ಉಳಿಯು ವುದು ಮತ್ತು ಜಗತ್ತಿನ ಪುನರ್‌ನಿರ್ಮಾಣಕ್ಕೆ ೧೦೦ ವರ್ಷಗಳು ತಗಲಲಿದೆ. ಈ ಕಾಲಾವಧಿಯು ತುಲನೆಯಲ್ಲಿ ಚಿಕ್ಕದಾದರೂ ಸಾಕಾಗುವಷ್ಟಿದೆ; ಏಕೆಂದರೆ ಈ ಯುದ್ಧದಲ್ಲಿ ಜಗತ್ತಿನ ಶೇ. ೫೦ ರಷ್ಟು ಜನಸಂಖ್ಯೆಯು ನಾಶವಾಗಲಿದೆ. ಆದ್ದರಿಂದ ಉಳಿದ ಜನರಿಗೆ ಬದುಕಲು ಆವಶ್ಯಕವಾಗಿರುವ ಧನಧಾನ್ಯ ಮತ್ತು ಇತರ ಸುಖಸೌಲಭ್ಯಗಳನ್ನು ಒದಗಿಸಬಹುದು.

ಯುದ್ಧದ ನಂತರದ ಈ ಅವಧಿಯು ಜಗತ್ತಿನಲ್ಲಿ ಒಂದು ಮಹತ್ವದ ತಿರುವಾಗಿರಲಿದೆ. ಮೂರನೇಯ ಜಾಗತಿಕ ಮಹಾಯುದ್ಧದ ನಂತರ ಉಳಿಯುವ ಜನರು ಅತ್ಯಂತ ಪ್ರತಿಕೂಲ ಮತ್ತು ಗೊಂದಲದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಅವಧಿಯು ಮಾನವ ಸಹಿಷ್ಣುತೆ ಮತ್ತು ಇಚ್ಛಾಶಕ್ತಿಯ ಸತ್ವಪರೀಕ್ಷೆಯಾಗಿದೆ. ‘ಸ್ವಾವಲಂಬಿಗಳಾಗುವುದು ಈ ಯುದ್ಧದಲ್ಲಿ ಬದುಕುಳಿದವರ ಧ್ಯೇಯವಾಕ್ಯವಾಗಿರುತ್ತದೆ. ಆದ್ದರಿಂದಲೇ ಶಿಥಿಲಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಗಳನ್ನು ಅವಲಂಬಿಸದೇ ಬದುಕಲು ಬೇಕಾದ ಕೌಶಲ್ಯಗಳನ್ನು ಕಲಿಯುವುದು ಮಹತ್ವದ್ದಾಗಿದೆ. ‘ಆವಶ್ಯಕವಾಗಿರುವ ಸಾಧನಸಾಮಗ್ರಿಗಳನ್ನು ಸಂಗ್ರಹಿಸುವುದು, ಈ ಕಾಲದಲ್ಲಿ ಉದ್ಭವಿಸುವ ವಿವಿಧ ಸಂಕಟಗಳನ್ನು ಎದುರಿಸಲು ನಮ್ಮ ಶಾರೀರಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವುದು, ಹಾಗೆಯೇ ವಿಕಿರಣ ವಿಸರ್ಜನೆಯ ದೀರ್ಘಾವಧಿಯ ಪರಿಣಾಮಗಳನ್ನು ಎದುರಿಸುವ ಸಿದ್ಧತೆ ಮಾಡಿಕೊಳ್ಳುವುದು, ಇವುಗಳನ್ನು ಆರಂಭಿಸಿದರೆ ಯುದ್ಧದ ನಂತರದ ಅವಧಿಯನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗಲಿದೆ. ಆಪತ್ಕಾಲದಲ್ಲಿ ಜೀವಂತವಾಗಿರಲು ಆವಶ್ಯಕ ಪ್ರತಿಯೊಂದು ಸಾಧನ ಮತ್ತು ಜ್ಞಾನವನ್ನು ಯೋಗ್ಯ ರೀತಿಯಲ್ಲಿ ಸಂಗ್ರಹಿಸುವುದು, ಇದು ಜೀವನವನ್ನು ಪ್ರದಾನಿಸುವ, ಹಾಗೆಯೇ ತುರ್ತು ಪರಿಸ್ಥಿತಿಯಲ್ಲಿ ಬದುಕುಳಿಯುವ ಸನ್ನದ್ಧತೆಯನ್ನು ಹೆಚ್ಚಿಸುವಂತಹದ್ದೆಂದು ಸಾಬೀತಾಗಲಿದೆ.

೬. ಮೂರನೇಯ ಜಾಗತಿಕ ಮಹಾಯುದ್ಧದಲ್ಲಿ ಭಾರತದ ಪಾತ್ರ

ಪ್ರಾಚೀನ ಕಾಲದಿಂದ ಭಾರತವು ಸಂಪೂರ್ಣ ಜಗತ್ತಿನ ಆಧ್ಯಾತ್ಮಿಕ ನೇತೃತ್ವವನ್ನು ವಹಿಸಿದೆ. ಆಧ್ಯಾತ್ಮಿಕ ಸಂಶೋಧನೆಯಿಂದ,  ಭಾರತವು ಆಧ್ಯಾತ್ಮಿಕವಾಗಿ ಈ ಮಹಾಯುದ್ಧದ ಕೇಂದ್ರವಾಗಿರುತ್ತದೆ ಎಂದು ಕಂಡುಬಂದಿದೆ. ‘ಸಂಪೂರ್ಣ ಜಗತ್ತಿನ ಸಾತ್ತ್ವಿಕತೆಯು ಹೆಚ್ಚಾಗಿ ಮೂರನೇಯ ಮಹಾಯುದ್ಧದ ಭೀಕರತೆ ಕಡಿಮೆಯಾಗಲಿ’, ಎಂಬ ಉದ್ದೇಶದಿಂದ ಭಾರತದ ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ಸಂತರು ಸರ್ವತೋಮುಖವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಮಹಾಯುದ್ಧದಲ್ಲಿ ಭಾರತದ ಮಹತ್ವದ ಸ್ಥಾನವನ್ನು ಗಮನದಲ್ಲಿಟ್ಟು ಅದನ್ನು ಅಸ್ಥಿರಗೊಳಿಸುವ ದೃಷ್ಟಿಯಿಂದ ಕೆಟ್ಟ ಶಕ್ತಿಗಳು ಸುತ್ತಮುತ್ತಲಿನ ದೇಶಗಳಿಗೆ ಭಾರತದ ಮೇಲೆ ದಾಳಿ ಮಾಡಲು ಬೆಂಬೆತ್ತುವವು. ಆದ್ದರಿಂದ ಈ ಯುದ್ಧದಲ್ಲಿ ಭಾರತದ ಸುಮಾರು ಶೇ. ೫೦ ರಷ್ಟು ಜನಸಂಖ್ಯೆಯು ನಾಶವಾಗುವುದು.

೭. ಈ ಯುದ್ಧವನ್ನು ತಡೆಯಬಹುದೇ ?

ಈ ಪ್ರಶ್ನೆಗೆ ಸಂಕ್ಷಿಪ್ತದಲ್ಲಿ ಉತ್ತರ ‘ಇಲ್ಲ’ವೆಂದೇ ಆಗಿದೆ; ಆದರೆ ‘ಯುದ್ಧದ ತೀವ್ರತೆ ಮತ್ತು ಕಾಲಾವಧಿ, ಹಾಗೆಯೇ ನೈಸರ್ಗಿಕ ಆಪತ್ತುಗಳ ಪ್ರಮಾಣ ಇವುಗಳಲ್ಲಿ ಸ್ವಲ್ಪ ಬದಲಾವಣೆಗಳಾಗಬಹುದು. ಈ ವಿನಾಶಕಾರಿ ಘಟನೆ ಅನಿವಾರ್ಯವಾಗಿರುವುದರ ಹಿಂದಿನ ಕಾರಣವನ್ನು ತಿಳಿದುಕೊಳ್ಳೋಣ.

ಕಳೆದ ಕೆಲವು ದಶಕಗಳಲ್ಲಿ ಪೃಥ್ವಿಯಲ್ಲಿನ ರಜ-ತಮವು ಹೆಚ್ಚಾದುದರಿಂದ ಪೃಥ್ವಿಯ ಸಾತ್ತ್ವಿಕತೆ ವೇಗವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ‘ಜನರಲ್ಲಿ ಹೆಚ್ಚಾಗಿರುವ ಸ್ವಭಾವದೋಷ, ಮಾಯೆ ಯೆಡೆಗೆ ಸಮಾಜಕ್ಕಿರುವ ಅತೀವ ಒಲವು, ಸಾಧನೆಯ ಅಭಾವ, ಹಾಗೆಯೇ ಸಪ್ತಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳ ಪ್ರಭಾವದಿಂದ ಜನರು ತಮಗೆ ಇಷ್ಟ ಬಂದಂತೆ  ನಡೆದುಕೊಳ್ಳುವ ಪ್ರವೃತ್ತಿ ಹೆಚ್ಚಿದೆ ಎಂಬ ಅಂಶಗಳೇ ಇದಕ್ಕೆ ಕಾರಣವಾಗಿವೆ.     ಪೃಥ್ವಿಯಲ್ಲಿ ತಜ-ತಮದ ಹೆಚ್ಚಳದಿಂದಾಗಿ ಸಾತ್ತ್ವಿಕತೆಯು ಕಡಿಮೆಯಾದಾಗ, ಸಮಾಜ ಮತ್ತು ವಾತಾವರಣದಲ್ಲಿ ಅಸ್ಥಿರತೆಯು ನಿರ್ಮಾಣವಾಗುತ್ತದೆ. ಆದ್ದರಿಂದ ನೈಸರ್ಗಿಕ ಆಪತ್ತು, ಭಯೋತ್ಪಾದಕರ ಕಾರ್ಯಾಚರಣೆ ಮತ್ತು ಯುದ್ಧಗಳಂತಹ ವಿನಾಶಕಾರಿ ಘಟನೆಗಳು ಸಂಭವಿಸುತ್ತವೆ. ಈ ಘಟನೆ ಎಂದರೆ ರಜ-ತಮದ ಹೆಚ್ಚಳವಿರುವ ಜನರನ್ನು ನಾಶ ಮಾಡಲು ನಡೆಯುವ ಸ್ವಯಂಚಾಲಿತ ಶುದ್ಧಿಕರಣ ಪ್ರಕ್ರಿಯೆಯಾಗಿದೆ.

ಈ ಘಟನೆಯನ್ನು ತಡೆಗಟ್ಟಲು ಪೃಥ್ವಿಯಲ್ಲಿನ ರಜ-ತಮದ ಪ್ರಮಾಣ ಕಡಿಮೆ ಮಾಡಿ ಪೃಥ್ವಿಯ ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ. ಇದು ಸಂಭವಿಸಬೇಕಾದರೆ ಅಖಿಲ ಮನುಕುಲವು ತನ್ನ ಸದ್ಯದ ಜೀವನಶೈಲಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುವುದು, ಹಾಗೆಯೇ ಸಾಧನೆಯ ೬ ಮೂಲಭೂತ ತತ್ತ್ವಗಳಿಗುನಾರ (ಟಿಪ್ಪಣಿ) ಸಾಧನೆಯನ್ನು ಮಾಡುವುದು ಅತ್ಯಗತ್ಯವಾಗಿದೆ. ೬ ಮೂಲಭೂತ ತತ್ತ್ವಗಳಿಗನುಸಾರ ಸಾಧನೆಯನ್ನು ಮಾಡಿದರೆ ಮಾತ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.

(ಟಿಪ್ಪಣಿ – ಅನೇಕದಿಂದ ಏಕಕ್ಕೆ ಬರುವುದು, ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವುದು, ಮಟ್ಟಕ್ಕನುಸಾರ ಸಾಧನೆ, ವರ್ಣಾನುಸಾರ ಸಾಧನೆ, ಆಶ್ರಮಾನುಸಾರ ಸಾಧನೆ ಮತ್ತು ಕಾಲಾನುಸಾರ ಸಾಧನೆ.)

ಯಾವ ಪಂಥ ಅಥವಾ ಸಂಪ್ರದಾಯಗಳು ‘ತಮ್ಮ ಸಾಧನಾ ಮಾರ್ಗವು ಈಶ್ವರಪ್ರಾಪ್ತಿಯ ಏಕೈಕ ಮಾರ್ಗವಾಗಿದೆ’, ಎಂದು ಪ್ರಚಾರ ಮಾಡುವವೋ, ಹಾಗೆಯೇ ಸಮಾಜದ ಜನರನ್ನು ಕಡ್ಡಾಯವಾಗಿ ಅಥವಾ ಆಮಿಷ ತೋರಿಸಿ ಅವರನ್ನು ಮತಾಂತರಿಸುವರೋ, ಅವರೆಲ್ಲರೂ ಸಾಧನೆಯ ಮೂಲಭೂತ ತತ್ತ್ವಗಳನ್ನು ಪಾಲಿಸುವುದಿಲ್ಲ. ಆದ್ದರಿಂದ ಇಂತಹ ಪಂಥಗಳಲ್ಲಿನ ಜನರ ಸಾಧನೆಯ ಪ್ರಯತ್ನ ಸೀಮಿತವಾಗಿರುತ್ತದೆ. ಕೆಲವು ಪಂಥಗಳು ಬಹಿರಂಗವಾಗಿ ಸಾಮಾಜಿಕ ಹಿಂಸಾಚಾರದ ಶಿಕ್ಷಣವನ್ನು ನೀಡುತ್ತವೆ ಮತ್ತು ಯಾವ ಜನರು ಈ ಶಿಕ್ಷಣದ ಪಾಲನೆಯನ್ನು ಮಾಡುವರೋ, ಅವರ ಆಧ್ಯಾತ್ಮಿಕ ಅಧೋಗತಿಯಾಗುತ್ತದೆ ಮತ್ತು ಅವರು ತಮಗಾಗಿ ತೀವ್ರ ಪ್ರಾರಬ್ಧವನ್ನು ನಿರ್ಮಿಸುತ್ತಾರೆ. ಸಮಾಜದ ಜೀವನಶೈಲಿಯಲ್ಲಿ ಅಮೂಲಾಗ್ರ ಬದಲಾವಣೆ ಆಗುವ ಸಾಧ್ಯತೆ ಶೇಕಡಾ ಶೂನ್ಯದಷ್ಟಿರುವುದರಿಂದ ಈ ವಿನಾಶವು ಸಂಭವಿಸುವುದು ಅನಿವಾರ್ಯವಾಗಿದೆ.

೮. ಸಾಧನೆಯನ್ನು ಮಾಡುವುದರಿಂದ ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ಅಥವಾ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವ ಜೀವಗಳೇ ಈ ಮಹಾಯುದ್ಧದಲ್ಲಿ ಬದುಕುಳಿಯುವರು.

೯. ಸೂಕ್ಷ್ಮದಲ್ಲಿ ಯುದ್ಧವನ್ನು ಮಾಡುವ ಒಳ್ಳೆಯ ಶಕ್ತಿಗಳು ಯಾವವು ?

ಸೂಕ್ಷ್ಮದಲ್ಲಿ ಯುದ್ಧವನ್ನು ೧೯೯೯ ರಿಂದ ೨೦೨೪ ಈ ಕಾಲಾವಧಿಯಲ್ಲಿ ಹೋರಾಡಲಾಗುವುದು. ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವಿನ ಈ ಯುದ್ಧದಲ್ಲಿ ಒಳ್ಳೆಯ ಶಕ್ತಿಗಳ ನೇತೃತ್ವವನ್ನು ಪೃಥ್ವಿಯಲ್ಲಿ ವಾಸ ಮಾಡುವ ಶೇ. ೯೦ ಕ್ಕಿಂತ ಮತ್ತು ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಂತರು (ಪರಾತ್ಪರ ಗುರು) ಮಾಡುತ್ತಿದ್ದಾರೆ. ಆರಂಭದಲ್ಲಿ ಕೇವಲ ಪರಾತ್ಪರ ಗುರು ಮತ್ತು ಕೆಲವು ಸಾಧಕರು ಈ ಸೂಕ್ಷ್ಮ ಯುದ್ಧವನ್ನು ಹೋರಾಡುತ್ತಿದ್ದರು. ಕಾಲಾನುಸಾರ ಹೆಚ್ಚೆಚ್ಚು ಸಂತರು ಮತ್ತು ಸಾಧಕರು ಈ ಸೂಕ್ಷ್ಮಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಪ್ತಲೋಕಗಳಲ್ಲಿನ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಜೀವಗಳೂ ಈ ಯುದ್ಧದಲ್ಲಿ ಪಾಲ್ಗೊಳ್ಳುತ್ತಿವೆ.

೧೦. ತಾತ್ಪರ್ಯ

ನಾವು ಪ್ರಸ್ತುತ ಯುಗಪರಿವರ್ತನೆಯ ಕಾಲಾವಧಿಯ ಮೂಲಕ ಸಾಗುತ್ತಿದ್ದೇವೆ. ಈ ಲೇಖನವು ಸಮಾಜದಲ್ಲಿ ಭಯವನ್ನು ನಿರ್ಮಾಣ ಮಾಡುವುದಕ್ಕಲ್ಲ, ಆದರೆ ಸಮಾಜವನ್ನು ಜಾಗರೂಕ ಮತ್ತು ಸಾವಧಾನ ಮಾಡಲು ಪ್ರಕಾಶಿಸುತ್ತಿದ್ದೇವೆ. ಸಾಧನೆಯ ಒಲವಿರುವ ಜೀವಗಳು ಮತ್ತು ಸಾಧಕರು ಈ ಲೇಖನದ ಅಧ್ಯಯನ ಮಾಡಿ ತಮ್ಮ ಸಾಧನೆಯು ಸುದೃಢವಾಗುವ ದೃಷ್ಟಿಯಿಂದ ಪ್ರಯತ್ನಿಸಬೇಕು. ಸದ್ಯದ ಕಾಲವು ಆಧ್ಯಾತ್ಮಿಕ ಪ್ರಗತಿಗಾಗಿ ಅತ್ಯಂತ ಪೂರಕವಾಗಿದೆ. ಕಠೋರ ಸಾಧನೆಯನ್ನು ಮಾಡಿದರೆ ಸಾಧಕರಿಗೆ ಮಹಾಯುದ್ಧದ ತೀವ್ರತೆಯನ್ನು ಕಡಿಮೆ ಮಾಡುವ ಮತ್ತು ತಮ್ಮ ರಕ್ಷಣೆ ಮಾಡಿಕೊಳ್ಳುವ ಬಲವು ಪ್ರಾಪ್ತವಾಗುವುದು. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ‘ವಿಸಾ’ (ಪ್ರವೇಶ ಪರವಾನಿಗೆ ಅನುಮತಿಯ ಮುದ್ರೆ) ಬೇಕಾಗುತ್ತದೆ, ಅದರಂತೆ ‘ಕಠೋರ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳುವುದು’, ಇದು ಈಶ್ವರೀ ರಾಜ್ಯದಲ್ಲಿರುವ ‘ವಿಸಾ’ ಆಗಿದೆ. ಯಾರು ತಳಮಳದಿಂದ ಸಾಧನೆ ಮಾಡಿ ಸಾಧಕನಾಗಲು ಪ್ರಯತ್ನಿಸುವರೋ, ಅವರ ರಕ್ಷಣೆಯನ್ನು ಈಶ್ವರನು ನಿಶ್ಚಿತವಾಗಿಯೂ ಮಾಡಲಿರುವನು.

ಈ ಯುದ್ಧದ ಸ್ವರೂಪ ‘ಒಂದು ದೇಶವು ಇನ್ನೊಂದು ದೇಶವನ್ನು ಯುದ್ಧದಲ್ಲಿ ಸೋಲಿಸಿತು ಮತ್ತು ತನ್ನ ಜೀವನಶೈಲಿಯನ್ನು ರಕ್ಷಿಸಿಕೊಂಡಿತು, ಹೀಗಿರುವುದಿಲ್ಲ. ಈ ಯುದ್ಧವು ‘ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಅಥವಾ ನಿರ್ಧಿಷ್ಟ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ. ಈ ಯುದ್ಧವು ‘ಒಳ್ಳೆಯ ಶಕ್ತಿ ಮತ್ತು ಕೆಟ್ಟ ಶಕ್ತಿ, ಹಾಗೆಯೇ ‘ಸಾತ್ತ್ವಿಕತೆ ಮತ್ತು ಅಸಾತ್ತ್ವಿಕತೆ ಇವುಗಳ ನಡುವಿನದ್ದಾಗಿದೆ. ಈ ಯುದ್ಧವು ಆಧ್ಯಾತ್ಮಿಕ ಸ್ವರೂಪದ್ದಾಗಿದೆ ಮತ್ತು ಜಗತ್ತಿನ ಆಧ್ಯಾತ್ಮಿಕ ಶುದ್ಧಿ ಮಾಡುವ ದೃಷ್ಟಿಯಿಂದ ಇದನ್ನು ಹೋರಾಡಲಾಗುತ್ತಿದೆ. ಈ ಯುದ್ಧದಲ್ಲಿ ಸಾತ್ತ್ವಿಕತೆಯ ಪ್ರಮಾಣ ಹೆಚ್ಚಾಗಿರುವ ಎಲ್ಲ ಜೀವಗಳ ರಕ್ಷಣೆಯಾಗಲಿಕ್ಕೇ ಇದೆ.

– ಶ್ರೀ. ಶಾನ್ ಕ್ಲಾರ್ಕ್ (ಆಧ್ಯಾತ್ಮಿಕ ಮಟ್ಟ ಶೇ. ೬೪), ಸಂಪಾದಕರು, ಎಸ್.ಎಸ್.ಆರ್.ಎಫ್. ಮತ್ತು ಸಂಶೋಧನಾ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦೧೬ ನೇ ಇಸವಿ)

(ಮುಕ್ತಾಯ)

ಈ ಲೇಖನ http://ssrf.org/ww3 ಈ ಲಿಂಕ್ (ಕೊಂಡಿ) ನಲ್ಲಿ ಲಭ್ಯವಿದೆ.)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆಯನ್ನು ಮಾಡುವವರಿಗೆ ಬರುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಜಗತ್ತು’ ಎನ್ನುತ್ತಾರೆ.