ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನು ಎರಡನೇಯ ಮಹಾಯುದ್ಧದಲ್ಲಿ ಕೋಟಿಗಟ್ಟಲೆ ಜ್ಯೂ ಜನರ ನರಮೇಧ ನಡೆಸಿದನು. ಪ್ರತಿಯೊಬ್ಬರಿಗೆ ಈ ಇತಿಹಾಸವು ಗೊತ್ತಿದೆ. ಜಗತ್ತಿನಲ್ಲಿ ಇಂತಹ ಅನೇಕ ನರಮೇಧಗಳಾಗಿವೆ. ವಿಭಜನೆಯ ಸಮಯದಲ್ಲಿ ಸ್ಟಾಲಿನ್ ರಷ್ಯಾದಲ್ಲಿ, ಮಾವೋ ಚೀನಾದಲ್ಲಿ ಮತ್ತು ಭಾರತದಲ್ಲಿ ನರಮೇಧ ಮಾಡಿದ್ದನು. ಹಿಟ್ಲರ್ ಮಾಡಿದ ಜ್ಯೂಗಳ ನರಮೇಧದ ಬಗ್ಗೆ ಅನೇಕ ಚಲನಚಿತ್ರಗಳು ತಯಾರಾಗಿವೆ. ಅದರಲ್ಲಿ ‘ಶಿಂಡಲರ್ಸ್ ಲಿಸ್ಟ್’ ಈ ಚಲನಚಿತ್ರವು ಹೆಚ್ಚು ಪ್ರಸಿದ್ಧವಾಯಿತು. ಯಾವ ರೀತಿ ಜ್ಯೂ ಜನರ ನರಮೇಧದ ಬಗ್ಗೆ ಚಲನಚಿತ್ರವು ತಯಾರಾಯಿತೋ, ಅದೇ ರೀತಿ ಮೇಲಿನ ಇತರ ನರಮೇಧಗಳ ಬಗ್ಗೆ ವಾಸ್ತವಿಕತೆಯ ಚಲನಚಿತ್ರಗಳನ್ನು ಯಾರೂ ತಯಾರಿಸುವ ಧೈರ್ಯವನ್ನು ಮಾಡಲಿಲ್ಲ, ಎಂಬುದು ಸಹ ಸತ್ಯವಾಗಿದೆ.
ಕಾಶ್ಮೀರದಲ್ಲಿ ೧೯೯೦ ನೇ ಇಸವಿಯಲ್ಲಿ ನಡೆದ ಕಾಶ್ಮೀರಿ ಹಿಂದೂಗಳ ನರಮೇಧದ ಬಗ್ಗೆ ಈಗ ಅಂದರೆ ೩೨ ವರ್ಷಗಳ ನಂತರ ‘ದಿ ಕಾಶ್ಮೀರ್ ಫೈಲ್ಸ್’ ಈ ವಾಸ್ತವವಾದಿ ಚಲನಚಿತ್ರವನ್ನು ತಯಾರಿಸಲಾಯಿತು ಮತ್ತು ಅದಕ್ಕೆ ಅತ್ಯುತ್ತಮ ಬೆಂಬಲವೂ ಸಿಗತೊಡಗಿದೆ. ಆದ್ದರಿಂದ ಈಗ ಕೇರಳದಲ್ಲಿನ ಮೋಪಲಾ ಮುಸಲ್ಮಾನರು ಮಾಡಿದ ಹಿಂದೂಗಳ ನರಮೇಧ, ವಿಭಜನೆಯ ಸಮಯದಲ್ಲಿನ ನರಮೇಧ, ಗಾಂಧಿಯವರ ಹತ್ಯೆಯ ನಂತರ ಗೈಯ್ಯಲಾದ ಬ್ರಾಹ್ಮಣರ ನರಮೇಧ, ಬಾಂಗ್ಲಾದೇಶದಲ್ಲಿ ೧೯೭೧ ನೇ ಇಸವಿಯಲ್ಲಿ ಹಿಂದೂಗಳ ನರಮೇಧ, ೧೯೮೪ ರ ಸಿಕ್ಖ್‌ರ ನರಮೇಧ, ಅದರೊಂದಿಗೆ ಭಾರತದಲ್ಲಿ ೧೯೭೫ ನೇ ಇಸವಿಯಲ್ಲಿ ಜಾರಿಗೆ ತಂದ ತುರ್ತುಪರಿಸ್ಥಿತಿ ಈ ಕುರಿತಾದ ಚಲನಚಿತ್ರವನ್ನೂ ತಯಾರಿಸಬೇಕೆಂಬ ಬೇಡಿಕೆ ಬರತೊಡಗಿವೆ. ಇದರ ಅರ್ಥ, ಯಾವ ಇತಿಹಾಸ ಜನರೆದುರು ಯಾವ ರೀತಿ ಬರಬೇಕಿತ್ತೋ, ಆ ರೀತಿ ಇಲ್ಲಿಯವರೆಗೆ ಬಂದಿಲ್ಲ ಎಂದಾಗಿದೆ. ಅದಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಮಾರ್ಗ ತೋರಿಸಿದುದರಿಂದ ಈಗ ಈ ಪ್ರಕಾರದ ಬೇಡಿಕೆಗಳು ಬರತೊಡಗಿವೆ. ಇಷ್ಟೇ ಅಲ್ಲದೇ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸರಿನ್ ಇವರೂ ‘೨೯ ವರ್ಷಗಳ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯದ ಬಗ್ಗೆ ಬರೆದ ನನ್ನ ‘ಲಜ್ಜಾ ಈ ಕಾದಂಬರಿಯನ್ನು ಆಧರಿಸಿ ಇಂದಿನವರೆಗೆ ಯಾರೂ ಚಲನಚಿತ್ರವನ್ನು ತಯಾರಿಸುವ ಧೈರ್ಯವನ್ನು ತೋರಿಸಿಲ್ಲ’, ಎಂದು ಹೇಳುತ್ತಾ ಆ ಕುರಿತಾದ ಚಲನಚಿತ್ರಗಳನ್ನು ತಯಾರಿಸುವ ಬಗ್ಗೆ ಕರೆಯನ್ನು ನೀಡಿದ್ದಾರೆ. ಸ್ವಾತಂತ್ರ್ಯದ ೭೪ ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ನರಮೇಧಗಳ ವಾಸ್ತವವನ್ನು ಯಾವಾಗಲೂ ಮುಚ್ಚಿಡಲು ಪ್ರಯತ್ನಿಸಿತ್ತು. ಶಾಲೆ ಮತ್ತು ಮಹಾವಿದ್ಯಾಲಯದ ಶಿಕ್ಷಣದಲ್ಲಿಯೂ ಈ ಇತಿಹಾಸವನ್ನು ಬಹಿರಂಗ ಪಡಿಸಲು ಅವಕಾಶ ನೀಡಲಿಲ್ಲ. ಇಷ್ಟೇ ಅಲ್ಲದೇ, ೧೯೬೬ ನೇ ಇಸವಿಯಲ್ಲಿ ಸಾಧು-ಸಂತರು ಗೋಹತ್ಯೆಯನ್ನು ನಿಷೇಧಿಸಲು ಪ.ಪೂ. ಕರಪಾತ್ರಿ ಸ್ವಾಮಿಯವರ ನೇತೃತ್ವದಲ್ಲಿ ಸಂಸತ್ತಿನಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದ್ದರು. ಈ ಮೆರವಣಿಗೆಯ ಮೇಲೆ ಗೋಲಿಬಾರ್ ಮಾಡಿ ನೂರಾರು ಸಾಧು-ಸಂತರನ್ನು ಕೊಂದ ಘಟನೆಯು ಜನರಿಗೆ ಇಂದಿಗೂ ತಿಳಿದಿಲ್ಲ.
ಈ ಬಗ್ಗೆ ಚಲನಚಿತ್ರವು ತಯಾರಾಗುವುದು ಆವಶ್ಯಕವಾಗಿದೆ. ತನ್ನನ್ನು ಅಹಿಂಸಾವಾದಿ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನ ಈ ನರಮೇಧ ಜಗತ್ತಿನೆದುರು ಬರುವುದು ಆವಶ್ಯಕವಾಗಿದೆ. ೧೯೭೫ ನೇ ಇಸವಿಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಿಡುಗಡೆಯಾಗಬೇಕಿದ್ದ ‘ಕಿಸ್ಸಾ ಕುರ್ಸಿ ಕಾ’ ಈ ಚಲನಚಿತ್ರದ ಪ್ರದರ್ಶನವನ್ನು ಇದೇ ಕಾಂಗ್ರೆಸ್ ತಡೆಹಿಡಿದಿತ್ತು. ಈ ಚಲನಚಿತ್ರವು ಇಂದಿಗೂ ಪ್ರದರ್ಶನಗೊಂಡಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುವಿಕೆಯಾಗಿದೆ. ಹಿಂದಿ ಚಿತ್ರರಂಗದಲ್ಲಿ ಒಂದು ವಿಷಯದ ಚಲನಚಿತ್ರವು ಜನಪ್ರಿಯವಾದರೆ, ಅದರ ಹಿಂದೆ ಅದೇ ಸಾಲಿನ ಸಿನೆಮಾ ತಯಾರಿಸಲು ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ಪೈಪೋಟಿ ಏರ್ಪಡುತ್ತದೆ. ಅವರಲ್ಲಿ ದೇಶದಲ್ಲಿ ಮೇಲಿನ ನರಮೇಧಗಳ ಬಗ್ಗೆ ಸಿನೆಮಾ ತಯಾರಿಸುವ ಪೈಪೋಟಿ ನಿರ್ಮಾಣವಾದರೆ, ದೇಶದಲ್ಲಿನ ಹಿಂದೂಗಳಿಗೆ ನಿಜವಾದ ಇತಿಹಾಸವನ್ನು ನೋಡಲು ಸಿಗುತ್ತದೆ. ಅದರಿಂದ ಅವರಲ್ಲಿ ಜಾಗೃತಿ ಮೂಡಿದರೆ, ಆ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಮಹಾನ ಸಾಧನೆ ಎಂದೇ ಭಾವಿಸಬೇಕಾಗುತ್ತದೆ.