ಪಾಕಿಸ್ತಾನದಲ್ಲಿ ಚೀನಾದ ಕಾರ್ಮಿಕರು ಕ್ರೈಸ್ತ ಮತ್ತು ಮುಸಲ್ಮಾನ ಯುವತಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ

ಇಸ್ಲಾಮಾಬಾದ (ಪಾಕಿಸ್ತಾನ) – ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿಯ ಕಾಮಗಾರಿ ನಡೆದಿದೆ. ಈ ಹೆದ್ದಾರಿಯ ಮೇಲೆ ಚೀನಾದಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಚೀನಾದ ಕಾರ್ಮಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಇದೇ ಕಾಲಾವಧಿಯಲ್ಲಿ ಪಾಕಿಸ್ತಾನದಲ್ಲಿರುವ ಅನೇಕ ಯುವತಿಯರು, ವಿಶೇಷವಾಗಿ ಕ್ರೈಸ್ತ ಯುವತಿಯರ ಕಳ್ಳಸಾಗಣೆ ಮಾಡಿ ಅವರನ್ನು ಚೀನಾಗೆ ಕಳುಹಿಸುತ್ತಿರುವುದು ಕಂಡು ಬರುತ್ತಿದೆ. ಇಲ್ಲಿ ಬಂದಿರುವ ಚೀನಾದ ಕಾರ್ಮಿಕರು ಪಾಕಿಸ್ತಾನದಲ್ಲಿರುವ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರೊಂದಿಗೆ ವಿವಾಹ ಆಗುತ್ತಾರೆ ಮತ್ತು ಅವರನ್ನು ಚೀನಾಗೆ ಕರೆದೊಯ್ಯುತ್ತಾರೆ. ಈ ಸಂದರ್ಭದಲ್ಲಿ ಅವರು ೪ ಲಕ್ಷಗಳ ವರೆಗೆ ಹಣವನ್ನು ವೆಚ್ಚ ಮಾಡುತ್ತಾರೆ.

೧. ಇತ್ತೀಚೆಗಷ್ಟೇ ಪಾಕಿಸ್ತಾನವು ಅವರ ದೇಶದ ಮುಸಲ್ಮಾನ ಯುವತಿಯರನ್ನು ಮುಸಲ್ಮಾನೇತರ ಪುರುಷರೊಂದಿಗೆ ವಿವಾಹ ಮಾಡಲು ಶರಿಯತ ಕಾನೂನಿನನ್ವಯ ನಿರ್ಬಂಧಿಸಿದ್ದಾರೆ. ಇದರಿಂದ ಚೀನಾದ ಕಾರ್ಮಿಕರಿಗೆ ಮುಸಲ್ಮಾನ ಯುವತಿಯರೊಂದಿಗೆ ವಿವಾಹವಾಗಲು ಅಡ್ಡಿಯಾಗುತ್ತಿದೆ. ಇದರಿಂದ ಅವರು ಕ್ರೈಸ್ತ ಯುವತಿಯರನ್ನು ಗುರಿ ಮಾಡುತ್ತಿದ್ದಾರೆ. ಪಂಜಾಬ್‌ನ ಗುಜರಾಂವಾಲಾದಿಂದ ಪ್ರತಿವರ್ಷ ೭೫೦ ರಿಂದ ೧ ಸಾವಿರ ಕ್ರೈಸ್ತ ಯುವತಿಯರನ್ನು ಚೀನಾದ ಕಾರ್ಮಿಕರು ಖರೀದಿಸಿ ಚೀನಾಗೆ ಕರೆದುಕೊಂಡು ಹೋಗಿದ್ದಾರೆ. ಈ ಯುವತಿಯರಿಗೆ ಚೀನಿ ಸಂಸ್ಕೃತಿ, ಭಾಷೆಗಳ ಜ್ಞಾನವಿರುವುದಿಲ್ಲ. ಚೀನಾಗೆ ಹೋದಬಳಿಕ ಅವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಹಾಗೆಯೇ ಅವರಿಗೆ ವೇಶ್ಯಾವಾಟಿಕೆಗೆ ದಬ್ಬಲಾಗುತ್ತದೆ. ಕೆಲವು ಯುವತಿಯರ ಹತ್ಯೆ ಮಾಡಿ ಅವರ ಅಂಗಾಂಗಗಳನ್ನು ತೆಗೆದು ಮಾರಾಟ ಮಾಡಲಾಗುತ್ತಿದೆಯೆಂದು ಹೇಳಲಾಗುತ್ತಿದೆ.

೨. ಚೀನಾದಲ್ಲಿ ಒಂದೇ ಮಗುವಿನ ಕಾನೂನು ಇರುವುದರಿಂದ ಇಲ್ಲಿಯವರೆಗಿನ ಸರಕಾರದ ನಿಯಮಗಳ ಕಾರಣದಿಂದ ಚೀನಾದಲ್ಲಿ ಯುವತಿಯರ ಕೊರತೆ ಕಾಡುತ್ತಿದೆ. ಇಲ್ಲಿ ಹೆಣ್ಣು ಶಿಶುವನ್ನು ಗರ್ಭದಲ್ಲಿಯೇ ಹತ್ಯೆ ಮಾಡುತ್ತಿರುವುದರಿಂದ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣದಿಂದ ಚೀನಿ ಯುವಕರಿಗೆ ಹೆಣ್ಣುಮಕ್ಕಳು ಸಿಗುವುದು ಕಠಿಣವಾಗುತ್ತಿದೆ.

೩. ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪೊಲಿಸರು ಮಾನವ ಕಳ್ಳಸಾಗಾಣಿಕೆ ಮಾಡುವವರ ಮೇಲೆ ಕ್ರಮ ಕೈಕೊಳ್ಳುತ್ತದೆ; ಆದರೆ ಚೀನಾದ ಕಾರ್ಮಿಕರ ಮೇಲೆ ಕ್ರಮ ಜರುಗಿಸಲು ಮುಂದಾಗುವುದಿಲ್ಲ. ಇದಕ್ಕೆ ಪಾಕಿಸ್ತಾನ ಸರಕಾರದ ಚೀನಾದೊಂದಿಗೆ ಇರುವ ಸಾಮರಸ್ಯ ಕಾರಣವೆಂದು ಹೇಳಲಾಗುತ್ತಿದೆ.