ಭಾರತಕ್ಕೆ ಕಸಾಬನ ಮಾಹಿತಿಯನ್ನು ನವಾಜ ಶರೀಫ ಅವರೇ ನೀಡಿದ್ದರು ! – ಪಾಕಿಸ್ತಾನ ಗೃಹ ಸಚಿವರ ಹೇಳಿಕೆ

(ಸೌಜನ್ಯ :TV9 )

ಇಸ್ಲಾಮಾಬಾದ (ಪಾಕಿಸ್ತಾನ) – ಮುಂಬಯಿ ಮೇಲೆ ನವೆಂಬರ 26, 2008 ರ ಆಕ್ರಮಣದಲ್ಲಿ ಜೀವಂತ ಸೆರೆಹಿಡಿಯಲಾಗಿದ್ದ ಏಕೈಕ ಭಯೋತ್ಪಾದಕ ಅಜಮಲ ಕಸಾಬನ ಪಾಕಿಸ್ತಾನದ ವಿಳಾಸವನ್ನು ಪಾಕಿಸ್ತಾನದ ಆಗಿನ ಪ್ರಧಾನ ಮಂತ್ರಿ ನವಾಜ ಶರೀಫ ಅವರೇ ಭಾರತಕ್ಕೆ ನೀಡಿದ್ದರು. ಈ ಕಾರಣದಿಂದ ಕಸಾಬನ ಮನೆ ಪಾಕಿಸ್ತಾನದ ಫರೀದಕೋಟನಲ್ಲಿ ಇದೆಯೆಂದು ಭಾರತಕ್ಕೆ ತಿಳಿಯಿತು’, ಎಂದು ಪಾಕಿಸ್ತಾನದ ಗೃಹಸಚಿವ ಶೇಖ ರಶೀದ ಅಹಮ್ಮದ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. `ನಾನು ಅತ್ಯಂತ ಜವಾಬ್ದಾರಿಯಿಂದ ಈ ಆರೋಪ ಮಾಡಿದ್ದೇನೆ. ಒಂದು ವೇಳೆ ಈ ಮಾಹಿತಿ ಸುಳ್ಳಾಗಿದ್ದರೆ, ನಾನು ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ.’ ಎಂದೂ ರಶೀದ ಹೇಳಿದರು.

ರಶೀದ ತಮ್ಮ ಮಾತನ್ನು ಮುಂದುವರಿಸುತ್ತಾ, ನವಾಜ ಶರೀಫ ಮತ್ತು ಅವರ ಹಿಂಬಾಲಕರು ಮಾರಾಟವಾಗಿದ್ದಾರೆ. ಪಾಕಿಸ್ತಾನದ ರಾಜಕಾರಣದಲ್ಲಿ ಇವರು ಹುಳುಗಳಾಗಿದ್ದಾರೆ. ಹಣ ನುಂಗಿ ಇವರು ತಮ್ಮ ಪ್ರಾಮಾಣಿಕತೆಯನ್ನು ಒತ್ತೆಯಿಟ್ಟಿದ್ದಾರೆ. ಪಾಕಿಸ್ತಾನಕ್ಕೆ ಇವರು ಕಳಂಕವಾಗಿದ್ದಾರೆ. ಸದ್ದಾಂ ಹುಸೇನ, ಮುಅಮ್ಮರ ಗದ್ದಾಫಿ ಮತ್ತು ಒಸಾಮಾ ಬಿನ್ ಲಾಡೆನ್ ಈ ಮೂವರಿಂದ ಶರೀಫ ಹಣ ಕೀಳುತ್ತಿದ್ದರು. ಗದ್ಧಾಫಿಯೊಂದಿಗಿನ ಕರಾರಿಗೆ ನಾನು ಸಾಕ್ಷಿದಾರನಾಗಿದ್ದೇನೆ ಎಂದೂ ಶೇಖ ರಶೀದ ಆರೋಪಿಸಿದರು.