ಶ್ರೀವಿಠ್ಠಲನ ಬಗ್ಗೆ ಮುಗ್ಧಭಾವವುಳ್ಳ ಸಾಂಗ್ಲಿಯ ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ

ಪೂ. ರಾಜಾರಾಮ ನರೂಟೆ ಅವರನ್ನು ಸತ್ಕಾರ ಮಾಡುತ್ತಿರುವ ಪೂ. ಪೃಥ್ವಿರಾಜ ಹಜಾರೆ

ರಾಮನಾಥಿ, ಗೋವಾ – ಆನಂದಿ, ಹಸನ್ಮುಖಿ ಮತ್ತು ಮುಗ್ದಭಾವದಿಂದ ಶ್ರೀವಿಠ್ಠಲನ ಭಕ್ತಿಯಲ್ಲಿ ತಲ್ಲೀನರಾಗಿರುವ ಈಶ್ವರಪುರದ (ಇಸ್ಲಾಮಪುರ, ಸಾಂಗ್ಲಿ, ಮಹಾರಾಷ್ಟ್ರ) ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಇವರು ಸಂತ ಪದವಿಯಲ್ಲಿ ವಿರಾಜಮಾನರಾದರೆಂದು ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಘೋಷಿಸಿದರು. ಮಾರ್ಚ್ ೧೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನೆರವೇರಿದ ಒಂದು ಭಾವ ಸಮಾರಂಭದಲ್ಲಿ ಈ ಆನಂದದಾಯಕ ಘೋಷಣೆಯನ್ನು ಮಾಡಲಾಯಿತು. ಈ ಶುಭಸಂದರ್ಭದಲ್ಲಿ ಸನಾತನ ಸಂಸ್ಥೆಯ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಪೂ. ಪೃಥ್ವಿರಾಜ ಹಜಾರೆ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಹಾಗೆಯೇ ಪೂ. ರಾಜಾರಾಮ ಭಾವೂ ನರೂಟೆಯವರ ಕುಟುಂಬದವರು ಮತ್ತು ಸನಾತನದ ಕೆಲವು ಸಾಧಕರು ಈ ಸಮಯದಲ್ಲಿ ಉಪಸ್ಥಿತರಿದ್ದರು.