ಕಾಶ್ಮೀರಿ ಮುಸಲ್ಮಾನರು ಜಿಹಾದಿ ಉಗ್ರರಿಗೆ ಸಹಾಯ ಮಾಡಿದ್ದರಿಂದಲೇ ಹಿಂದೂಗಳ ನರಮೇಧ ಸುಲಭವಾಯಿತು ! – ಡಾ. ಕ್ಷಮಾ ಕೌಲ್, ಸಾಹಿತಿ, ಜಮ್ಮು

‘ದ ಕಶ್ಮೀರ್ ಫೈಲ್ಸ್’ – ಹಿಂದೂ ಮಹಿಳೆಯರ ಮನಸ್ಸಿನ ಮೇಲೆ ಗಾಯಗಳು !’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !

ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯವನ್ನು ಸಮಾಜವು ಕೊನೆಗೂ ಒಪ್ಪಿಕೊಳ್ಳಬೇಕಾಯಿತು. ಇದು ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರದಿಂದ ಸಾಧ್ಯವಾಯಿತು. ೧೯೯೦ ರ ಭಯಾನಕ ಕಾಲರಾತ್ರಿಯ ನಂತರ, ಆಗಿನ ಸರಕಾರವು ಕಾಶ್ಮೀರಿ ಹಿಂದೂಗಳಿಗಾಗಿ ಏನಾದರೂ ಮಾಡುವುದು ಎಂದೆನಿಸುತ್ತಿತ್ತು; ಆದರೆ ಅಂತಹದ್ದೇನೂ ಆಗಲಿಲ್ಲ ಮತ್ತು ಕಾಶ್ಮೀರಿ ಹಿಂದೂಗಳು ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಮುಂದುವರೆದವು. ಕಾಶ್ಮೀರದಲ್ಲಿ ಮುಸಲ್ಮಾನ ಪುರುಷರೊಂದಿಗೆ ಮುಸಲ್ಮಾನ ಮಹಿಳೆಯರೂ ಜಿಹಾದಿ ಉಗ್ರರಿಗೆ ಸಹಾಯ ಮಾಡಿದರೆಂದೇ ಜಿಹಾದಿಗಳಿಗೆ ಕಾಶ್ಮೀರಿ ಹಿಂದೂಗಳ ನರಮೇಧ ಮಾಡಲು ಸುಲಭವಾಯಿತು. ಎಂಬ ಆಘಾತಕಾರಿ ವಾಸ್ತವಿಕತೆಯನ್ನು ಜಮ್ಮುವಿನ ಸಾಹಿತಿ ಡಾ. ಕ್ಷಮಾ ಕೌಲ್ ಇವರು ಮಂಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದ ಕಾಶ್ಮೀರ್ ಫೈಲ್ಸ್’ – ಹಿಂದೂ ಮಹಿಳೆಯರ ಮನಸ್ಸಿನ ಮೇಲಿನ ಗಾಯ !’ ಎಂಬ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ‘ದ ನ್ಯೂ ಇಂಡಿಯನ್’ನ ಸಂಸ್ಥಾಪಕ ಸಂಪಾದಕರಾದ ಆರತಿ ಟಿಕ್ಕೂ ಇವರು ಮಾತನಾಡುತ್ತಾ, 1990 ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳ ಸಾಮೂಹಿಕ ಹತ್ಯಾಕಾಂಡದ ನೈಜತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯವನ್ನು ಯಾರು ಮುಚ್ಚಿಟ್ಟಿದ್ದರು ಮತ್ತು ಅದನ್ನು ಮುಂದೆ ಬರಲು ಬಿಡಲಿಲ್ಲ ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಿದೆ. ಇದಕ್ಕೆ ಎಲ್ಲಾ ಪಕ್ಷದ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ. 1990 ರಲ್ಲಿ ಕಾಶ್ಮೀರಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಅವರ ಹತ್ಯೆ ಮಾಡಲಾಯಿತು. ಹಿಂದೂಗಳು ತಮ್ಮ ಅಸ್ಮಿತೆಯನ್ನು ಮರೆಯಬೇಕು, ಈ ರೀತಿಯಲ್ಲಿ ಭಯವನ್ನುಂಟು ಮಾಡಲಾಯಿತು. ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ ವಾಸ್ತವಿಕತೆ ಬಹಿರಂಗವಾಗಬಾರದು ಮತ್ತು ಸಾಮೂಹಿಕ ಭಯೋತ್ಪಾದನೆಯ ಕಾರ್ಖಾನೆಯು ಹೀಗೆಯೇ ಮುಂದುವರಿಯಬೇಕು, ಎಂಬ ಇಚ್ಛೆಯುಳ್ಳ ಇಸ್ಲಾಮಿಕ ಭಯೋತ್ಪಾದಕರ ಈ ಕೃತ್ಯದಿಂದ ಯಾರಿಗೆಲ್ಲ ಲಾಭವಾಯಿತೋ ಅವರೆಲ್ಲ ಮೌನವಾಗಿದ್ದರು ಎಂದು ಹೇಳಿದರು.

‘ಪನೂನ್ ಕಾಶ್ಮೀರ’ದ ಪ್ರಾ. ಶೈಲೆಜಾ ಭಾರದ್ವಾಜ ಇವರು ಮಾತನಾಡುತ್ತಾ, ಕಾಶ್ಮೀರಿ ಮುಸಲ್ಮಾನ ಸಮುದಾಯವು ಕಟ್ಟರ ಭಯೋತ್ಪಾದಕರನ್ನು ಆಹ್ವಾನಿಸಿ ಸಹಾಯ ಮಾಡಿದ್ದರಿಂದಲೇ 1990 ರಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡವಾಯಿತು. ಅದೇ ಸಮಯದಲ್ಲಿ, ‘ಆಜಾದ ಕಶ್ಮೀರ’ನ ಹೆಸರಿನಡಿಯಲ್ಲಿ ನೀಡಲಾಗಿದ್ದ ಘೋಷಣೆಯಲ್ಲಿ ಭಯೋತ್ಪಾದಕರು, ‘ಜೆ.ಕೆ.ಎಲ್.ಎಫ್.’ ನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಮುಸಲ್ಮಾನ ನಾಗರಿಕರು ಸಹ ಭಾಗಿಯಾಗಿದ್ದರು. ಆ ಸಮಯದಲ್ಲಿ ಭಾರತೀಯ ಸೇನೆ ಮಧ್ಯಪ್ರವೇಶಿಸದೇ ಇದ್ದಿದ್ದರೆ ಕಾಶ್ಮೀರ ಭಾರತದಿಂದ ಬೇರ್ಪಡುತ್ತಿತ್ತು. ಇಂದಿಗೂ ಕಾಶ್ಮೀರವು ಭಾರತೀಯ ಸೇನೆಯಿಂದಾಗಿ ನಿಯಂತ್ರಣದಲ್ಲಿದೆ, ಎಂದರು.