ಲಂಡನ್ ನಲ್ಲಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕ್ರಾಂತಿಕಾರರ ‘ಇಂಡಿಯಾ ಹೌಸ’ ಕುರಿತು ಸಿನೆಮಾ !

ಸ್ವಾತಂತ್ರ್ಯವೀರ ಸಾವರಕರರ ಜಯಂತಿಯ ದಿನದಂದು ನಟ ರಾಮಚರಣ ಇವರಿಂದ ಘೋಷಣೆ

ಮುಂಬಯಿ – ಹೆಸರಾಂತ ನಟ ರಾಮಚರಣ ಮತ್ತು `ದಿ ಕಾಶ್ಮೀರ ಫಾಯಿಲ್ಸ’ ಚಲನಚಿತ್ರ ನಿರ್ಮಾಪಕ ಅಭಿಷೇಕ ಅಗರವಾಲ ಇವರು `ಇಂಡಿಯಾ ಹೌಸ’ ಹೆಸರಿನ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ. ರಾಮ ಚರಣ ಇವರು ಸ್ವಾತಂತ್ರ್ಯವೀರ ಸಾವರಕರ ಇವರ ಜಯಂತಿಯಂದು ಘೋಷಿಸಿದರು. ಈ ಚಲನಚಿತ್ರ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದೆ. ಲಂಡನ್ ನ `ಇಂಡಿಯಾ ಹೌಸ’ನ್ನು ಸ್ಥಾಪಿಸಿದ ಭಾರತದ ಸ್ವಾತಂತ್ರ್ಯ ಸೈನಿಕ ಶಾಮಜಿ ಕೃಷ್ಣ ವರ್ಮಾ ಇವರ ಜೀವನಚರಿತ್ರೆಯನ್ನು ತೋರಿಸಲಿದ್ದಾರೆ. ಹೆಸರಾಂತ ನಟ ಅನುಪಮ ಖೇರ ಇವರು ಶಾಮಜಿ ಕೃಷ್ಣ ವರ್ಮಾ ಇವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇಂಡಿಯಾ ಹೌಸ ಕ್ರಾಂತಿಕಾರರ ಪ್ರಮುಖ ಸ್ಥಾನವಾಗಿತ್ತು. ಇಲ್ಲಿಯೇ ಸ್ವಾತಂತ್ರ್ಯವೀರ ಸಾವರಕರರೂ ಉಳಿಯುತ್ತಿದ್ದರು.