‘ಸಮಾಜವು ಸತ್ಯವನ್ನು ನೋಡಲು ಇಷ್ಟಪಡುತ್ತದೆ’ ಎಂಬುದನ್ನು ‘ದ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಸಿಕ್ಕಿದ ಪ್ರತಿಕ್ರಿಯೆಯು ತೋರಿಸಿಕೊಟ್ಟಿದೆ ! – ಭಾಷಾ ಸುಂಬಲಿ, ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ನಟಿ

ನಟಿ ಭಾಷಾ ಸುಂಬಲಿ

ಮುಂಬೈ – ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಭಾರತದಲ್ಲಿ ಕ್ರಾಂತಿಯನ್ನೇ ಮಾಡಿದೆ. ೩೨ ವರ್ಷಗಳಿಂದ ಜನರಿಂದ ಮುಚ್ಚಿಟ್ಟ ಸತ್ಯ ಜನರೆದುರು ಬಂದ ಕಾರಣ ಬೃಹತ್ಪ್ರಮಾಣದಲ್ಲಿ ಜಾಗೃತಿಯಾಗಿದೆ. ಈ ಚಲನಚಿತ್ರದ ನಂತರ ತೆರೆಕಂಡ ಹಲವು ದೊಡ್ಡ ಚಲನಚಿತ್ರಗಳಿಗೆ ಜನ ಬೆನ್ನು ತೋರಿಸಿದ್ದಾರೆ. ಇದರಿಂದ ಜನರಿಗೆ ಏನು ಇಷ್ಟ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ‘ಸಬ್ ಚಲ್ತಾ ಹೈ’ ಅಲ್ಲ ‘ಕೇವಲ್ ಸಚ್ ಚಲ್ತಾ ಹೈ !’ ಎಂಬುದು ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಕಂಡುಬಂದಿದೆ, ಎಂದು ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರದಲ್ಲಿ ‘ಶಾರದಾ ಪಂಡಿತ್’ ಈ ಪಾತ್ರ ನಿರ್ವಹಿಸಿದ ಖ್ಯಾತ ನಟಿ ಭಾಷಾ ಸುಂಬಲಿ ಇವರು ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ದ ಕಾಶ್ಮೀರ್ ಫೈಲ್ಸ್’ಗೆ ಹಿಂದೂ ಸಮಾಜದ ಬೆಂಬಲ : ನಟರ ಮನಸ್ಸಿನಲ್ಲಿರುವ ವಿಚಾರಗಳೇನು ? ಈ ಕುರಿತು ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ನಟಿ ಭಾಷಾ ಸುಂಬಲಿ ಮತ್ತು ನಟ ಹಾಗೂ ಬರಹಗಾರರಾದ ಶ್ರೀ. ಯೋಗೇಶ ಸೋಮಣ ಇವರು ತಮ್ಮ ವಿಚಾರವನ್ನು ವ್ಯಕ್ತ ಪಡಿಸಿದರು.

‘ದ ಕಾಶ್ಮೀರ ಪೈಲ್ಸ್’ ಈ ಚಲನಚಿತ್ರದಿಂದ ಎಡ ವಿಚಾರಸರಣಿಯವರು, ಪ್ರಗತಿಪರರು, ಉದಾರವಾದಿ ಜನರು ಚಿಂತೆಯಲ್ಲಿದ್ದಾರೆ – ಯೋಗೇಶ ಸೋಮಣ, ನಟ ಹಾಗೂ ಲೇಖಕ

ಶ್ರೀ ಯೋಗೇಶ ಸೋಮಣ

ಕಾಶ್ಮೀರದ ವಿಷಯದಲ್ಲಿ ಈ ಮೊದಲು ‘ಹೈದರ್’, ‘ಮಿಷನ್ ಕಾಶ್ಮೀರ್’, ‘ರೋಜಾ’ ಮುಂತಾದ ಚಲನಚಿತ್ರಗಳು ಬಂದಿವೆ; ಆದರೆ, ಈ ಚಲನಚಿತ್ರಗಳಲ್ಲಿ ಕಾಶ್ಮೀರಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ತೋರಿಸುವ ಬದಲು ಒಂದು ಬದಿಯನ್ನು ತೋರಿಸಿದವು. ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಮೂಡಿಸುವುದರಿಂದ ಹಿಡಿದು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಹೇಗೆ ದೌರ್ಜನ್ಯ ನಡೆಸುತ್ತಿದೆ, ಎಂಬುದನ್ನು ತೋರಿಸಲಾಗಿದೆ. ಇದರಿಂದ ಚಲನಚಿತ್ರಗಳು ಜನಮನಕ್ಕೆ ಹೋಗಲಿಲ್ಲ. ತದ್ವಿರುದ್ಧ ಸತ್ಯ ಮತ್ತು ವಸ್ತುನಿಷ್ಠ ಮಾಹಿತಿಯನ್ನು ತೋರಿಸಿದ್ದರಿಂದ ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಜನಪ್ರಿಯವಾಗಿದೆ. ‘ಉರಿ’, ‘ದಿ ಕಾಶ್ಮೀರ ಫೈಲ್ಸ್’ನಂತಹ ಚಲನಚಿತ್ರಗಳು ಮೋದಿ ಸರಕಾರದ ಪ್ರಚಾರಕ್ಕಾಗಿಯೇ ತಯಾರಾದವು ಎಂದು ಆರೋಪಗಳಾಗುತ್ತಿವೆ ಹಾಗಾದರೆ, ಹಿಂದಿನ ಚಲನಚಿತ್ರಗಳು ಕಾಂಗ್ರೆಸ್ ಮತ್ತು ಅಂದಿನ ಆಡಳಿತಗಾರರ ಪ್ರಚಾರಕ್ಕಾಗಿಯೇ ನಿರ್ಮಿಸಲಾಗಿದ್ದವೇ ? ‘ಹೈದರ್’ ಚಲನಚಿತ್ರದ ಪ್ರಭಾವದಿಂದ ಒಬ್ಬ ನಟ ಅನಂತರ ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಿರ್ದಿಷ್ಟ ಸಿದ್ಧಾಂತವನ್ನು ಜನರ ಮೇಲೆ ಹೇರುವ ಕೆಲಸ ಈ ಹಿಂದೆ ನಡೆದಿದ್ದರೆ ಈಗ ಅದರ ಇನ್ನೊಂದು ಮುಖವೂ ಜನರ ಮುಂದೆ ಬರಬೇಕು. ಈ ಚಲನಚಿತ್ರದಿಂದಾಗಿ ಎಡಪಂಥೀಯ, ಪ್ರಗತಿಪರ, ಉದಾರವಾದಿ ಜನರು ಚಿಂತಿತರಾಗಿದ್ದಾರೆ; ಏಕೆಂದರೆ ಅವರು ಮಂಡಿಸಿದ ಸುಳ್ಳು ಇತಿಹಾಸದ ಬಗ್ಗೆ ಪ್ರಶ್ನೆ ಚಿಹ್ನೆ ಮೂಡಿದೆ.

ಕೇಂದ್ರ ಸರಕಾರವು ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು – ನಟಿ ಭಾಷಾ ಸುಂಬಲಿ

‘ದ ಕಾಶ್ಮೀರ ಪೈಲ್ಸ್’ ಈ ಚಲನಚಿತ್ರ ‘ಕಾಶ್ಮೀರದಲ್ಲಿ ಘಟಿಸಿದ್ದು ಭಾರತದಲ್ಲಿ ಬೇರೆಡೆ ಆಗಬಾರದು, ಅದಕ್ಕಾಗಿ ಜಾಗೃತಿಯನ್ನೂ ಮೂಡಿಸುತ್ತಿದೆ; ಆದರೆ ಯಾರಿಗೂ ಸತ್ಯ ಬೇಡವಾಗಿದೆ, ಯಾರು ಕಾಶ್ಮೀರಿ ಹಿಂದೂಗಳ ನರಮೇಧ ಮಾಡಿದರೋ ಅಂತಹವರೇ, ಈ ನರಮೇಧವನ್ನು ಮುಚ್ಚಿಡಲು ಬಯಸುತ್ತಾರೆ, ಅದೇ ಜನರು ಈ ಚಲನಚಿತ್ರವನ್ನು ವಿರೋಧಿಸುತ್ತಿದ್ದಾರೆ. ಈ ಚಲನಚಿತ್ರದಿಂದ ದೇಶಾದ್ಯಂತ ಜಾಗೃತಿ ಮೂಡಿಸುತ್ತಿದೆ. ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ನೀಡುವಲ್ಲಿ ಕೇಂದ್ರ ಸರಕಾರವು ಕೃತಿಶೀಲ ಪಾತ್ರವನ್ನು ನಿರ್ವಹಿಸಬೇಕು.