ಜಿಹಾದಿ ಭಯೋತ್ಪಾದಕರು ಗುರಿಯಿಟ್ಟ ಮೊದಲ ಕಾಶ್ಮೀರಿ ಮುಖಂಡ : ಪಂಡಿತ ಟೀಕಾಲಾಲ ಟಪಲೂ

ಡಿಸೆಂಬರ್ ೨೮ ಇರುವ ಕಾಶ್ಮೀರಿ ಹಿಂದೂಗಳ ‘ಹೋಮ್‌ಲ್ಯಾಂಡ್ ಡೇ’ ನಿಮಿತ್ತ

ನನ್ನ ಮಿತ್ರನ ಜೊತೆಗೆ ‘ದ ಕಶ್ಮೀರ್ ಫೈಲ್ಸ್’ ಈ ಚಲನಚಿತ್ರದ ಬಗ್ಗೆ ಚರ್ಚೆ ನಡೆದಿತ್ತು. ಅದರ ಪ್ರಮುಖ ಪಾತ್ರಧಾರಿ ಕಲಾವಿದ ಅನುಪಮ ಖೇರ್ ಇವರು ಕೂಡ ಮೂಲತಃ ಕಾಶ್ಮೀರದವರೆ ಆಗಿದ್ದಾರೆ. ಈ ಚಲನಚಿತ್ರದಲ್ಲಿ ಅವರ ಒಂದು ಸಂವಾದ ಇದೆ. ‘ಶ್ಯಾಮಾಪ್ರಸಾದ ಮುಖರ್ಜಿ ಇವರ ನಂತರ ಟೀಕಾಲಾಲ ಟಪಲೂ ಇವರು ಎಲ್ಲರಿಗಿಂತ ಜನಪ್ರಿಯ ನೇತಾರ ಆಗಿದ್ದರು; ಆದ್ದರಿಂದ ಭಯೋತ್ಪಾದಕರು ಅವರನ್ನೆ ಮೊದಲು ಹತ್ಯೆ ಮಾಡಿದರು; ಏಕೆಂದರೆ ಮೊದಲು ನೇತೃತ್ವವನ್ನು ಹತ್ಯೆ ಮಾಡಿದರೆ ನಂತರದ ಕೆಲಸ ಸುಲಭವಾಗುತ್ತದೆ.’

೧. ಪಂಡಿತ ಟೀಕಾಲಾಲ ಟಪಲೂ ಇವರಿಗೆ ಸಮಾಜದ ಪ್ರತಿಯೊಂದು ಘಟಕದಿಂದ ಸಮರ್ಥನೆಯಿತ್ತು !

೧೯೩೦ ರಲ್ಲಿ ಜನಿಸಿದ ಪಂಡಿತ ಟೀಕಾಲಾಲ ಟಪಲೂ ಇವರು ಎಮ್.ಎ., ಎಲ್.ಎಲ್.ಬಿ. ಆಗಿದ್ದರು. ಪ್ರಖರ ಸ್ವಯಂಸೇವಕರಾಗಿದ್ದ ಟಪಲೂ ಸೆರೆಮನೆಗೂ ಹೋಗಿದ್ದರು. ಕಾಶ್ಮೀರ ಪ್ರದೇಶ ಭಾಜಪದ (ಅಂದಿನ ಜನಸಂಘದ) ಉಪಾಧ್ಯಕ್ಷರೂ ಆಗಿದ್ದರು. ಜಮ್ಮೂ ಮತ್ತು ಕಾಶ್ಮೀರ ಕಣಿವೆಯಲ್ಲಿ ಅವರು ಪ್ರಖ್ಯಾತರಾಗಿದ್ದರು. ಸಮಾಜದ ಪ್ರತಿಯೊಂದು ಘಟಕದಿಂದ ಅವರಿಗೆ ಸಮರ್ಥನೆಯಿತ್ತು. ಆ ಕಾಲದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು.

೨. ಕಾಶ್ಮೀರದಲ್ಲಿ ೯೦ ರ ದಶಕದಲ್ಲಿ ಜಿಹಾದಿ ಚಟುವಟಿಕೆಗಳಲ್ಲಿ ಹೆಚ್ಚಳ !

ಕೆಲವೇ ವರ್ಷಗಳಲ್ಲಿ ಕಾಶ್ಮೀರದಲ್ಲಿ ಕೋಲಾಹಲ ಆರಂಭವಾಯಿತು. ಯಾರಾದರೂ ರೇಶನ್ ತರಲು ಹೋಗಿದ್ದರೆ, ‘ಇನ್ಶಾಅಲ್ಲಾ ಆಗಲಾ ರೇಶನ್ ಇಸ್ಲಾಮಾಬಾದಸೆ |’ (ಅಲ್ಲಾಹನ ಕೃಪೆಯಿಂದ ಮುಂದಿನ ರೇಶನ್ ಪಾಕಿಸ್ತಾನದ ಇಸ್ಲಾಮಾ ಬಾದದಿಂದ ಸಿಗುವುದು; ಅಂದರೆ ಕಾಶ್ಮೀರ ಪಾಕಿಸ್ತಾನದ ಭಾಗವಾಗುವುದು)’ ಇಂತಹ ಮಾತುಗಳು ಕೇಳಲು ಆರಂಭವಾದುವು. ಜಿಹಾದಿ ಸಂಘಟನೆ ‘ಜೆ.ಕೆ.ಎಲ್.ಎಫ್.’ನ ಭಿತ್ತಿ ಪತ್ರಗಳು ಅಲ್ಲಲ್ಲಿ ಕಾಣಿಸತೊಡಗಿದುವು. ಈ ಸಂಘಟನೆಯಲ್ಲಿ ಜಿಹಾದಿಗಳ ಭರ್ತಿ ಆರಂಭವಾಯಿತು. ‘ಮುಜಾಹಿದ್ದೀನ’ (ಜಿಹಾದಿ ಕಾರ್ಯಾಚರಣೆ ಮಾಡುವ ಗುಂಪು) ಈ ಶಬ್ದ ಕಿವಿಗೆ ಬೀಳಲು ಆರಂಭವಾಯಿತು. ಜಿಹಾದಿ ಸಂಘಟನೆಗಳು ಫತವಾ ಹೊರಡಿಸಲು ಆರಂಭಿಸಿದವು.

೩. ಕಾಶ್ಮೀರಿ ಹಿಂದೂಗಳಲ್ಲಿ ಭಯ ಹುಟ್ಟಿಸಲು ಟೀಕಾಲಾಲ ಟಪಲೂ ಇವರ ಕ್ರೂರ ಹತ್ಯೆ !

ಈ ವಿಷಯದ ಮಾಹಿತಿಯು ದೆಹಲಿಯಲ್ಲಿದ್ದ ಟಪಲೂ ಇವರಿಗೆ ತಿಳಿಯಿತು. ೧೯೮೯ ರ ಸುಮಾರಿಗೆ ತಮ್ಮ ಕುಟುಂಬದವರನ್ನು ದೆಹಲಿಯಲ್ಲಿ ಬಿಟ್ಟು ಕಾಶ್ಮೀರಿ ಪಂಡಿತರ ಸಹಾಯಕ್ಕಾಗಿ ಟಪಲೂ ಕಾಶ್ಮೀರಕ್ಕೆ ತಲುಪಿದರು. ‘ಕಾಶ್ಮೀರಿ ಹಿಂದೂಗಳಿಗೆ ದೊಡ್ಡ ಪ್ರಮಾಣದಲ್ಲಿ ನನ್ನ ಅವಶ್ಯಕತೆ ಇರಬಹುದು’, ಎಂದು ಅವರಿಗೆ ಆ ಸಮಯದಲ್ಲಿ ಅನಿಸಿರಲಿಕ್ಕಿಲ್ಲ. ೧೨ ಸಪ್ಟೆಂಬರ ೧೯೮೯ ರಂದು ಅವರ ಮನೆಯ ಮೇಲೆ ಆಕ್ರಮಣವಾಯಿತು. ಅವರು ಭಯಪಡದೆ ಹೊರಗೆ ಬಂದು ಭಯೋತ್ಪಾದಕರಿಗೆ ಸವಾಲೊಡ್ಡಿದರು. ಭಯೋತ್ಪಾದಕರು ಹತ್ಯೆಗೊಳಿಸಲು ಒಬ್ಬ ಜನಪ್ರಿಯ ಹಿಂದುತ್ವನಿಷ್ಠ ವ್ಯಕ್ತಿಯನ್ನು ಹುಡುಕುತ್ತಿದ್ದರು. ‘ಇಂತಹ ಜನಪ್ರಿಯ ವ್ಯಕ್ತಿಯನ್ನು ಹತ್ಯೆಗೈದರೆ ಕಾಶ್ಮೀರದಲ್ಲಿ ಭಯದ ವಾತಾವರಣವನ್ನು ನಿರ್ಮಿಸಬಹುದು’, ಎಂಬುದು ಅವರ ಉದ್ದೇಶವಾಗಿತ್ತು. ಪಂಡಿತ ಟೀಕಾಲಾಲ ಟಪಲೂ ಇವರ ಹೊರತು ಅವರ ದೃಷ್ಟಿಯಲ್ಲಿ ಯಾರೂ ಕಾಣಿಸಲಿಲ್ಲ. ಭಯೋತ್ಪಾದಕರು ೧೪ ಸಪ್ಟೆಂಬರ ೧೯೮೯ ರಂದು ಅನೇಕರ ಮುಂದೆ ಟಪಲೂ ಇವರ ಮೇಲೆ ಗುಂಡಿನ ಮಳೆಗರೆದು ಅವರ ಹತ್ಯೆಗೈಯ್ದರು.

ಪಂಡಿತ ಟೀಕಾಲಾಲ ಟಪಲೂ ಇವರು ಹತ್ಯೆಗೀಡಾದ ಮೊದಲ ಕಾಶ್ಮೀರಿ ಪಂಡಿತರಾಗಿದ್ದರು. ಅನಂತರ ಈ ಸರಣಿಯು ಅಖಂಡವಾಗಿ ಮುಂದುವರಿಯಿತು. ಸ್ತ್ರೀಯರ ಮೇಲಿನ ಅತ್ಯಾಚಾರದ ಬಗ್ಗೆ ಕೇಳುವುದೇ ಬೇಡ. ಕಾಶ್ಮೀರಿ ಪಂಡಿತರಲ್ಲಿ ಹುತಾತ್ಮಾ ಟಪಲೂ ಇವರ ಬಗ್ಗೆ ತುಂಬಾ ಗೌರವವಿದೆ. ಪ್ರತಿ ವರ್ಷ ಸಪ್ಟೆಂಬರ ೧೪ ರಂದು ಅವರ ಸ್ಮೃತಿ ದಿನವನ್ನು ಆಚರಿಸಲಾಗುತ್ತದೆ. ಇಂತಹ ಈ ಶ್ರೇಷ್ಠ ಪಂಡಿತರಿಗೆ ಅನೇಕಾನೇಕ ವಂದನೆಗಳು !

– ಶ್ರೀ. ಗುರುದಾಸ ಕುಲಕರ್ಣಿ, ಢವಳೀ, ಫೋಂಡಾ, ಗೋವಾ.