ಇದು ಹಿಂದುತ್ವದ ಗೆಲುವು !

ದೇಶದಲ್ಲಿನ ೫ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶ ಬಂದಿದೆ. ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಒಲವು ನೋಡಿದರೆ ಆಕ್ರಮಕ ಮತ್ತು ನೇರವಾಗಿ ಹಿಂದುತ್ವ ಹಾಗೂ ರಾಷ್ಟ್ರೀಯತೆ ಇವುಗಳಿಗೆ ಬಹುಮತ ದೊರಕಿದೆ, ಎಂದು ಸಹಜವಾಗಿ ಕಂಡುಬರುತ್ತದೆ. ೨೦೧೭ ರಲ್ಲಿ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದರು. ಆಗ ಅನೇಕ ಜನರು ಅಚ್ಚರಿಗೊಂಡಿದ್ದರು. ‘ಕೇಸರಿ ವಸ್ತ ತೊಟ್ಟ ಈ ಮಹಂತನು ರಾಜ್ಯವನ್ನು ಹೇಗೆ ನಡೆಸುವನು ?’, ಎಂದು ಹೇಳಿ ತಿರಸ್ಕರಿಸಿದ್ದರು. ವಾಸ್ತವದಲ್ಲಿ ಮಾತ್ರ ಯೋಗಿ ಆದಿತ್ಯನಾಥರು ಶೀಘ್ರ ಗತಿಯಿಂದ ಕಾರ್ಯವನ್ನು ಮಾಡುತ್ತ ಮತ್ತೊಮ್ಮೆ ರಾಜ್ಯದಲ್ಲಿ ಜಯಭೇರಿ ಬಾರಿಸಿದರು. ಇತರ ರಾಜ್ಯಗಳಲ್ಲಿ ಭಾಜಪದ ಅಭಿವೃದ್ಧಿಯು ಪಾತ್ರವನ್ನು ವಹಿಸುತ್ತಿದ್ದರೂ ಉತ್ತರಪ್ರದೇಶದಲ್ಲಿ ಮಾತ್ರ ಹಿಂದುತ್ವದ ಆಧಾರದಲ್ಲಿ ೫ ವರ್ಷ ಆಡಳಿತ ನಡೆಸಿತು. ಧಾರ್ಮಿಕ ಮತ್ತು ರಾಷ್ಟ್ರೀಯತೆಯ ಅಂಶಗಳನ್ನು ಮುಂದಿಟ್ಟು ಉತ್ತಮ ಕಾರ್ಯವನ್ನು ಮಾಡಿದರೆ, ಹಿಂದೂಗಳು ಹೇಗೆ ಭಾರೀ ಬೆಂಬಲ ನೀಡುತ್ತಾರೆ, ಎಂಬುದು ಈ ಚುನಾವಣೆಯಲ್ಲಿ ಕಂಡುಬಂದಿತು. ೨೦೧೭ ರ ಮೊದಲು ಉತ್ತರಪ್ರದೇಶದಲ್ಲಿ ಗೂಂಡಾರಾಜ್ಯ, ಅಪರಾಧ, ಮಹಿಳೆಯರ ಮೇಲಿನ ದೌರ್ಜನ್ಯ, ಕೋಮು ಗಲಭೆಗಳು, ಇಂತಹ ವಾತಾವರಣವೇ ಇತ್ತು. ಯೋಗಿ ಆದಿತ್ಯನಾಥರು ತುಂಬ ಶ್ರಮವಹಿಸಿ ಅಲ್ಲಿನ ಅಪರಾಧಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರು.

ಈ ಹಿಂದೆ ಗಲಭೆಕೋರರು ಎಲ್ಲಿ ರಕ್ಷಣೆ ಪಡೆಯುತ್ತಿದ್ದರೋ, ಅಲ್ಲಿ ಗಲಭೆಕೋರರ ಮೇಲೆ ರಾಷ್ಟ್ರೀಯ ಸುರಕ್ಷಾ ಕಾನೂನಿನ ಅಂತರ್ಗತ ಕ್ರಮಕೈಗೊಳ್ಳಲಾಯಿತು. ‘ಲವ್ ಜಿಹಾದ್’ ವಿರುದ್ಧ ಕಾನೂನು ತರುವ ಉತ್ತರಪ್ರದೇಶವು ದೇಶದ ಮೊದಲ ರಾಜ್ಯವಾಗಿದೆ. ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ, ವಾರಣಾಸಿಯಲ್ಲಿನ ಬೃಹತ್ ಕಾರಿಡಾರಗಳ ಲಾಭ ಸ್ವಲ್ಪ ಪ್ರಮಾಣದಲ್ಲಿ ಉತ್ತರಪ್ರದೇಶದಲ್ಲಿ ಭಾಜಪಕ್ಕೆ ಸಿಕ್ಕಿದೆ. ಹೀಗಿದ್ದರೂ, ಯೋಗಿ ಆದಿತ್ಯನಾಥ ಇವರು ಧಾರ್ಮಿಕ ಕಾರ್ಯಗಳನ್ನೊಳಗೊಂಡು ಗ್ರಾಮಗ್ರಾಮಗಳಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಪ್ರತ್ಯಕ್ಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿನ ರಾಜಕೀಯ ಪಕ್ಷಗಳು ಚುನಾವಣೆಗೆ ಮೊದಲು ಎಲ್ಲ ಮತದಾರರಿಗೆ ಹಂಚಲಾಗುವ ಉಡುಗೊರೆ, ಸರಾಯಿ, ಗೋದಿ, ಅಕ್ಕಿಗಳೊಂದಿಗೆ ಭರವಸೆಗಳ ಉದ್ದದ ಪಟ್ಟಿ ನೀಡುವ ರೂಢಿಯನ್ನು ಮಾಡಿವೆ. ‘ಚುನಾವಣೆಯ ನಂತರ ಆಡಳಿತ ಪಕ್ಷವು ವಾಸ್ತವದಲ್ಲಿ ಮಾಡಿದ ಕಾರ್ಯವನ್ನು ನೋಡಿ ಮತದಾನ ಮಾಡಬೇಕು ಎಂಬ ರೂಢಿಯನ್ನು ಯೋಗಿಯವರು ಮತದಾರರಲ್ಲಿ ಅಳವಡಿಸುತ್ತಿದ್ದಾರೆ’, ಎಂಬುದು ಈ ಚುನಾವಣೆಗಳ ಫಲಿತಾಂಶಗಳಿಂದ ಕಂಡುಬರುತ್ತಿದೆ.

ಧಾರ್ಮಿಕತೆ ಮತ್ತು ರಾಷ್ಟ್ರೀಯತೆಗೆ ಬೆಂಬಲ !

ಉತ್ತರಾಖಂಡವು ದೇವಭೂಮಿಯಾಗಿದೆ. ಈ ರಾಜ್ಯದಲ್ಲಿ ಚಾರಧಾಮಗಳ ಸಹಿತ ಅನೇಕ ಪ್ರಾಚೀನ ಮತ್ತು ಜಾಗೃತ ದೇವಸ್ಥಾನಗಳಿವೆ. ಅಲ್ಲಿನ ಧಾರ್ಮಿಕ ಅಂಶಗಳು ಈ ಚುನಾವಣೆಯ ಮುಖ್ಯ ಭಾಗಗಳಾಗಿದ್ದವು. ತಾವು ಜಾತ್ಯತೀತರು ಎಂದು ತೋರಿಸಿಕೊಳ್ಳುವ ಆಮ ಆದ್ಮಿ ಪಕ್ಷವೂ ಉತ್ತರಾಖಂಡವನ್ನು ದೇಶದ ‘ಧಾರ್ಮಿಕ ರಾಜಧಾನಿ’ ಮಾಡುವುದಾಗಿ ಭರವಸೆ ನೀಡಿತ್ತು. ಭಾಜಪವೂ ಇಲ್ಲಿನ ಭಾವಿಕ ಮತದಾರರನ್ನು ಸಹಕರಿಸಿತ್ತು. ಚಾರಧಾಮ ದೇವಸ್ಥಾನಗಳ ಸರಕಾರೀಕರಣವನ್ನು ಮಾಡುವ ವಿಚಾರವನ್ನು ಅಲ್ಲಿನ ಭಾಜಪ ಸರಕಾರವು ಹಿಂಪಡೆಯಿತು. ಅದರಿಂದ ಭಾಜಪಕ್ಕೆ ಲಾಭವಾಯಿತು, ಎಂದು ಹೇಳಬಹುದು. ಉತ್ತರಾಖಂಡದಲ್ಲಿ ‘ಆಡಳಿತ ಪಕ್ಷವು ಪುನಃ ಆರಿಸಿ ಬರುವುದು’, ಇದೇ ಮೊದಲ ಬಾರಿ ಆಗಿದೆ.

ಮಣಿಪುರದಲ್ಲಿಯೂ ಭಾಜಪವು ಸ್ಪಷ್ಟ ಬಹುಮತ ಪಡೆದಿದೆ. ಅಂದರೆ ಇಲ್ಲಿನ ಬಹುಮತಗಳು ರಾಷ್ಟ್ರೀಯತೆಗೆ ನೀಡಿದ ಬಹುಮತಗಳಾಗಿವೆ. ಕಾಂಗ್ರೆಸ್‍ವು ಈಶಾನ್ಯ ರಾಜ್ಯಗಳಲ್ಲಿ ಸೈನ್ಯಗಳಿಗೆ ಇರುವ ವಿಶೇಷ ಅಧಿಕಾರವನ್ನು ತೆಗೆದು ಹಾಕುವ ಭರವಸೆಯನ್ನು ಈ ಸ್ಥಳದಲ್ಲಿ ನೀಡಿತ್ತು. ಪ್ರತ್ಯೇಕತಾವಾದಿಗಳು ಮತ್ತು ನುಸುಳುಕೋರರಿಗೆ ಪೂರಕವಾಗಿರುವ ಆಶ್ವಾಸನೆಯನ್ನು ನೀಡುವ ಕಾಂಗ್ರೆಸ್ಸಿಗೆ ಮತದಾರರು ಮನೆಯ ದಾರಿಯನ್ನು ತೋರಿಸಿ ಭಾಜಪವನ್ನು ಅಪಾರ ವಿಶ್ವಾಸದಿಂದ ಅಧಿಕಾರಕ್ಕೆ ತಂದಿದ್ದಾರೆ. ಈಶಾನ್ಯ ಕಡೆಯಲ್ಲಿನ ರಾಜ್ಯಗಳು ಅರ್ಥಿಕದೃಷ್ಟಿಯಿಂದ ಬಲಹೀನರಾಗಿರುವುದರಿಂದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಮೇಲೆ ಅವಲಂಬಿಸಿರುತ್ತವೆ. ಆದುದರಿಂದ ಅನೇಕ ಬಾರಿ ಕೇಂದ್ರದಲ್ಲಿ ಯಾವ ಪಕ್ಷದ ಆಡಳಿತ ಇದೆಯೋ, ಅದೇ ಪಕ್ಷಕ್ಕೆ ರಾಜ್ಯದಲ್ಲಿ ಬಹುಮತಗಳನ್ನು ನೀಡುವುದರಲ್ಲಿ ಜನತೆಯ ಒಲವು ಕಂಡು ಬಂದಿದೆ. ಹೇಗಾದರೂ, ಭಾಜಪವು ಈಗ ಇಲ್ಲಿ ಸಂಪೂರ್ಣ ಬಹುಮತ ಪಡೆದಿದೆ. ಮಣಿಪುರವನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ಭಾಜಪವು ತುಂಬಾ ಪ್ರಯತ್ನಗಳನ್ನು ಮಾಡಬೇಕಾಗುತ್ತಿದೆ. ೨ ವರ್ಷಗಳ ಹಿಂದೆ ಪೌರತ್ವ ತಿದ್ದುಪಡಿ ಮಸೂದೆಗೆ ಈಶಾನ್ಯ ಕಡೆಯಲ್ಲಿನ ರಾಜ್ಯಗಳಿಂದ ತೀವ್ರ ವಿರೋಧವಾಯಿತು. ಆ ಡಂಭಾಚಾರದ ವಿರೋಧದಿಂದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಗೋವಾದಲ್ಲಿ ಶೇ. ೫೦ ರಷ್ಟು ಹೊಸ ಮುಖಗಳು !  

ಗೋವಾ ರಾಜ್ಯದಲ್ಲಿ ನಡೆದ ಚುನಾವಣೆಯು ಅದ್ಭುತವಾಗಿತ್ತು; ಏಕೆಂದರೆ ಹಲವು ರಾಜಕೀಯ ಪಕ್ಷಗಳು ಕೇವಲ ೪೦ ಸ್ಥಾನಗಳಿಗಾಗಿ ಪೈಪೋಟಿ ನಡೆಸಿದ್ದೆವು. ೨೦೧೭ ರಲ್ಲಿ ಗೋವಾದಲ್ಲಿ ಕಾಂಗ್ರೆಸ್‍ಗೆ ಬಹುಮತವಿರುವುದರಿಂದ ಈ ಬಾರಿ ಏನಾಗುವುದು, ಎಂಬ ಉತ್ಸುಕತೆಯೇ (ಕುತೂಹಲವೇ) ಆಗಿತ್ತು. ಹೀಗಿದ್ದರೂ, ವಿರೋಧಿಗಳು ಸಂಘಟಿತರಾಗಿರಲಿಲ್ಲ. ಕಾಂಗ್ರೆಸ್, ಮಗೋಪ-ತೃಣಮೂಲ ಮೈತ್ರಿ, ರಿವಲ್ಯುಶನರಿ ಗೊವನ್ಸ್, ಆಪ ಈ ರಾಜಕೀಯ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಹೀಗೆ ಅನೇಕ ಅಭ್ಯರ್ಥಿಗಳಿರುವುದರಿಂದ ವಿರೋಧಿಗಳ ಮತಗಳು ವಿಭಜನೆಗೊಂಡವು. ಅದರಿಂದ ಭಾಜಪಕ್ಕೆ ಸ್ವಲ್ಪ ಪ್ರಮಾಣದಲ್ಲಿ ಲಾಭವೇ ಆಯಿತು. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಶೀಘ್ರಗತಿಯಿಂದ ಪ್ರಸಾರವನ್ನು ಮಾಡಿತ್ತು; ಆದರೆ ತೃಣಮೂಲದ ಒಬ್ಬ ಅಭ್ಯರ್ಥಿಯೂ ಆರಿಸಿ ಬರಲಿಲ್ಲ. ಗೋವಾದಲ್ಲಿ ಆಯ್ಕೆಯಾಗಿದ್ದವರಲ್ಲಿ ಶೇ. ೫೦ ರಷ್ಟು ಹೊಸ ಮುಖಗಳಿರುವವು, ಇದು ವಿಶೇಷವಾಗಿದೆ !

ಪಂಜಾಬನಲ್ಲಿ ಯಾರ ಯಶಸ್ಸು ? 

ಪಂಜಾಬನಲ್ಲಿನ ಫಲಿತಾಂಶದಿಂದ ಮಾತ್ರ ರಾಷ್ಟ್ರಪ್ರೇಮಿಗಳಲ್ಲಿ ಚಿಂತೆಯ ವಾತಾವರಣವು ನಿರ್ಮಾಣವಾಗಿದೆ. ಪಂಜಾಬದ ಒಂದು ಗಡಿಯು ಪಾಕಿಸ್ತಾನಕ್ಕೆ ಅಂಟಿಕೊಂಡಿದೆ. ಪಂಜಾಬನಲ್ಲಿ ಬಹುಮತ ಪಡೆದ ಆಮ ಆದ್ಮಿ ಪಕ್ಷದ (‘ಆಪ’ದ) ಹಿನ್ನೆಲೆಯು ಅಷ್ಟೇನು ಸರಿಯಿಲ್ಲ. ಈ ಮೊದಲೂ ಆಪದ ಮೇಲೆ ಖಾಲಿಸ್ತಾನಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಗಳಾಗಿತ್ತು. ರೈತರ ಆಂದೋಲನದ ತೆರೆಮರೆಯಲ್ಲಿ ಅಲ್ಲಿ ಖಲಿಸ್ತಾನಿ ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಯಿತು. ಇತ್ತೀಚೆಗೆ ಇಲ್ಲಿ ಪ್ರಧಾನಮಂತ್ರಿಗಳ ವಾಹನಗಳ ತಂಡವನ್ನು ತಡೆಹಿಡಿಯುವ ಘಟನೆಯೂ ಘಟಿಸಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ಆಪದಂತಹ ಪಕ್ಷಕ್ಕೆ ಬಹುಮತ ಪಡೆಯುವುದು ಚಿಂತೆಯ ವಿಷಯವಾಗಿದೆ. ಪಂಜಾಬನಲ್ಲಿನ ಮಾದಕ ವಸ್ತು, ವ್ಯಾಪಾರ, ಕಳ್ಳಸಾಗಾಣಿಕೆ ಮತ್ತು ಹೆಚ್ಚಳವಾಗುತ್ತಿರುವ ಅಪರಾಧಿಗಳ ಪ್ರಮಾಣವನ್ನು ನೋಡಿದರೆ ಅಲ್ಲಿ ರಾಷ್ಟ್ರೀಯತೆಯನ್ನು ಕಾಪಾಡುವುದು, ಇದು ದೇಶದ ಮುಂದಿರುವ ದೊಡ್ಡ ಸವಾಲಾಗಿದೆ.

ಕಾಂಗ್ರೆಸ್ ನಾಮಾವಶೇಷವಾಗುವ ಸ್ಥಿತಿಯಲ್ಲಿದೆ !

ಕಾಂಗ್ರೆಸ್‍ನಲ್ಲಿ ರಾಹುಲ ಗಾಂಧಿಯ ನಾಯಕತ್ವವು ವಿಫಲವಾಗಿತ್ತು. ಈಗ ಪ್ರಿಯಾಂಕಾ ವಾದ್ರಾ ಇವರ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಸಲಾಯಿತು. ಅಲ್ಲಿ ಹೆಚ್ಚೆಚ್ಚು ಸ್ಥಾನವನ್ನು ಗೆಲ್ಲುವುದು ಬಿಡಿ; ಪ್ರಿಯಾಂಕಾರವರ ನಾಯಕತ್ವದಲ್ಲಿ ಶೇಕಡಾವಾರು ಮತಗಳೂ ಕಡಿಮೆಯಾದವು. ಭಾರತವು ಶೀಘ್ರದಲ್ಲಿಯೇ ಕಾಂಗ್ರೆಸ್‍ಮುಕ್ತವಾಗುವುದೆಂದೂ, ಈ ಚುನಾವಣೆಯಿಂದ ಪುನಃ ಸ್ಪಷ್ಟವಾಯಿತು. ಬಹುಜನ ಸಮಾಜವಾದಿ ಪಕ್ಷದ ಮಾಯಾವತಿಯವರಿಗೂ ಬೆರಳೆಣಿಕೆಯಷ್ಟು ಸ್ಥಾನಗಳ ಮೇಲೆ ಸಮಾಧಾನ ಪಡಬೇಕಾಯಿತು. ‘ಜೋ ಹಿಂದೂಹಿತ ಕಿ ಬಾತ್ ಕರೇಗಾ, ವೋ ಹಿ ರಾಜ ಕರೇಗಾ |’ ಇದೇ ಈ ಫಲಿತಾಂಶಗಳು ಸ್ಪಷ್ಟಪಡಿಸಿವೆ !

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ಕಾನೂನು ಇಲ್ಲ – ನ್ಯಾಯವಾದಿ ಯುಧವೀರ ಸಿಂಹ ಚೌಹಾನ್, ದೆಹಲಿ ಉಚ್ಚ ನ್ಯಾಯಾಲಯ

ಹಿಂದೂ ಧರ್ಮದ ವಿಷಯದಲ್ಲಿ ಹಾಸ್ಯ ಮಾಡಲಾಗುತ್ತದೆ, ಹಿಂದೂ ದೇವತೆಗಳ ಅವಮಾನ ಮಾಡಲಾಗುತ್ತದೆ ಹಾಗೂ ಹಿಂದೂಗಳು ಇದನ್ನು ಸಹಿಸುತ್ತಿದ್ದಾರೆ. ಹಾಸ್ಯದ ಹೆಸರಿನಲ್ಲಿ ಹಿಂದೂ ಧರ್ಮವನ್ನು ಅವಮಾನಿಸುವವರ ವಿರುದ್ಧ ಹಲವೆಡೆ ದೂರು ನೀಡುವುದು ಆವಶ್ಯಕವಾಗಿದೆ. ಆಗ ಮಾತ್ರ ಹಿಂದೂ ಧರ್ಮದ ಅವಮಾನ ಮಾಡುವವರಿಗೆ (ನ್ಯಾಯಯುತ)ವಾಗಿ ಪಾಠ ಕಲಿಸಬಹುದು. ಅಲ್ಪಸಂಖ್ಯಾತರ ರಕ್ಷಣೆಗಾಗಿ ಈ ದೇಶದಲ್ಲಿ ಬಹಳಷ್ಟು ಕಾನೂನುಗಳಿವೆ; ಆದರೆ ಬಹುಸಂಖ್ಯಾತ ಹಿಂದೂಗಳ ಸುರಕ್ಷೆಗಾಗಿ ಕಾನೂನು ಇಲ್ಲ.