‘ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯ’ ಈ ಕುರಿತು ‘ಆನ್‍ಲೈನ್’ ವಿಶೇಷ ಸಂವಾದ ಸಂಪನ್ನ !
ಮುಂಬೈ – ೭೦೦ ಕಾಶ್ಮೀರಿ ಕುಟುಂಬಗಳೊಂದಿಗೆ ಚರ್ಚಿಸಿ ೩ ವರ್ಷಗಳ ಅಧ್ಯಯನದ ನಂತರ ಹಿಂದೂಗಳ ಸತ್ಯಸಂಗತಿಗಳನ್ನು ಪ್ರಸ್ತುತಪಡಿಸುವ ‘ದಿ ಕಾಶ್ಮೀರ ಫೈಲ್ಸ್’ ಈ ಚಲನಚಿತ್ರವನ್ನು ಮಾಡಲಾಗಿದೆ. ಈ ಚಲನಚಿತ್ರದ ಮೂಲಕ ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯದ ಭಯಾನಕ ಸತ್ಯವನ್ನು ಭಾರತೀಯರ ವರೆಗೆ ತಲುಪಿಸಲಾಗಿದೆ; ಆದರೆ ಯಾವ ಸರಕಾರವೂ ಈ ಕುರಿತು ಸಮಿತಿ ರಚಿಸಿ ಸತ್ಯವನ್ನು ಹುಡುಕುವ ಪ್ರಯತ್ನ ಮಾಡಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುವ ಮಾಧ್ಯಮಗಳು ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಏಕೆ ಮಾತನಾಡಲಿಲ್ಲ ? ಎಂದು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮತ್ತು ರಾಜಕೀಯ ವಿಶ್ಲೇಷಕಿ ರೇಣುಕಾ ಧರ್ ಬಜಾಜ್ ಪ್ರಶ್ನಿಸಿದ್ದಾರೆ.
ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದಿ ಕಾಶ್ಮೀರ ಫೈಲ್ಸ್: ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯ !’ ಎಂಬ ‘ಆನ್‍ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ವಿಶೇಷ ಸಂವಾದವನ್ನು ೧೧ ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಶೇಷ ಸಂವಾದದಲ್ಲಿ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರದ ಓರ್ವ ನಟ ಶ್ರೀ. ಪ್ರಕಾಶ ಬೆಲವಾಡಿ, ‘ಜಮ್ಮುಇಕ್ಕಜುಟ್ಟ’ ಸಂಘಟನೆಯ ಅಧ್ಯಕ್ಷ ಮತ್ತು ನ್ಯಾಯವಾದಿ ಅಂಕುರ್ ಶರ್ಮಾ, ಸನಾತನ ಸಂಸ್ಥೆಯ ಸೌ. ಕ್ಷಿಪ್ರಾ ಜುವೇಕರ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ಮೋಹನ ಗೌಡರವರು ಪಾಲ್ಗೊಂಡಿದ್ದರು.
ಇನ್ನಾದರೂ ಹಿಂದೂಗಳು ಜಾಗೃತರಾಗಿ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಬೇಕು – ನಟ ಶ್ರೀ. ಪ್ರಕಾಶ ಬೆಲವಾಡಿ
೩೨ ವರ್ಷಗಳ ಹಿಂದೆ ಭಾರತದ ಒಂದು ರಾಜ್ಯದಲ್ಲಿ ಹಿಂದೂಗಳೊಂದಿಗೆ ಏನಾಯಿತು, ಎಂದು ಭಾರತದವರಿಗೆ ಇನ್ನೂ ತಿಳಿದಿಲ್ಲ, ಇದು ಆಘಾತಕಾರಿಯಾಗಿದೆ. ವಾಸ್ತವದಲ್ಲಿ ಕಳೆದ ೩೨ ವರ್ಷಗಳಲ್ಲಿ, ಭಾರತದಲ್ಲಿನ ಹಿಂದೂಗಳು ಕಾಶ್ಮೀರಿ ಹಿಂದೂಗಳಿಗಾಗಿ ಏನನ್ನೂ ಮಾಡಿಲ್ಲ. ಈಗಲಾದರೂ ಹಿಂದೂಗಳು ಜಾಗೃತಗೊಂಡು ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಕೊಡಿಸಬೇಕು. ಈ ಚಲನಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯಬೇಕು.
ಕಾಶ್ಮೀರಿ ಹಿಂದೂಗಳ ನರಮೇಧ ನಿರಾಕರಿಸುವುದು ದ್ವಿಗುಣ ದೌರ್ಜನ್ಯಕ್ಕೆ ಸಮ ! – ನ್ಯಾಯವಾದಿ ಅಂಕುರ್ ಶರ್ಮಾ, ಅಧ್ಯಕ್ಷರು, ‘ಜಮ್ಮು ಇಕ್ಕಜುಟ್ಟ’ ಸಂಘಟನೆ
೧೯೪೭ ರಿಂದ ಭಾರತದಲ್ಲಿ ನಡೆದ ಹಿಂದೂಗಳ ನರಮೇಧವನ್ನು ಎಲ್ಲಾ ಸರಕಾರಗಳು, ಪ್ರಸಾರ ಮಾಧ್ಯಮಗಳು ಮತ್ತು ಆಡಳಿತಾಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ, ಎಂಬುದನ್ನು ನಾವು ಈ ಸಂದರ್ಭದಲ್ಲಿ ಗಮನಿಸಬೇಕಾಗಿದೆ. ಕಾಶ್ಮೀರದಲ್ಲಿ ನಡೆದ ನರಮೇಧದ ತನಿಖೆಗಾಗಿ ‘ವಿಶೇಷ ತನಿಖಾ ತಂಡ’ ರಚಿಸುವಂತೆ ಕಾಶ್ಮೀರಿ ಹಿಂದೂಗಳು ಮಾಡಿದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಕಾಶ್ಮೀರಿ ಹಿಂದೂಗಳ ನರಮೇಧ ನಡೆದಿದೆ ಎಂಬುದನ್ನೇ ನಿರಾಕರಿಸುತ್ತಿರುವಾಗ ಕಾಶ್ಮೀರಿ ಹಿಂದೂಗಳಿಗೆ ಹೇಗೆ ನ್ಯಾಯ ಸಿಗುವುದು ? ಈ ನರಮೇಧವನ್ನು ನಿರಾಕರಿಸುವುದು ಎಂದರೆ ನರಮೇಧ ದ್ವಿಗುಣಗೊಳಿಸುವಂತಿದೆ.
ಕಾಶ್ಮೀರಿ ಹಿಂದೂಗಳ ನರಮೇಧ ಇದು ಆಯೋಜನಾಬದ್ಧ ಸಂಚು – ಸೌ. ಕ್ಷಿಪ್ರಾ ಜುವೇಕರ, ಸನಾತನ ಸಂಸ್ಥೆ
ಕಾಶ್ಮೀರಿ ಹಿಂದೂಗಳ ನರಮೇಧ ಒಂದೇ ದಿನದಲ್ಲಿ ಏಕಾಏಕಿ ಸಂಭವಿಸಿದ್ದಲ್ಲ. ಈ ಷಡ್ಯಂತ್ರ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಅದಕ್ಕಾಗಿ ಅವರಿಗೆ ಹಣ ಒದಗಿಸಲಾಗಿದೆ. ಹಿಂದೂಗಳ ಪಟ್ಟಿ ಮಾಡಿ ಎಲ್ಲಾಕಡೆಗಳಲ್ಲಿ ಹಂಚಲಾಗಿತ್ತು. ‘ಹಮೆ ಕಾಶ್ಮೀರ ಚಾಹಿಯೇ, ಹಿಂದೂ ನಹಿ !’ (ನಮಗೆ ಕಾಶ್ಮೀರ ಬೇಕು, ಹಿಂದೂಗಳಲ್ಲ !’), ಎಂಬ ಪ್ರಕಟಣೆಗಳನ್ನು ತೆಗೆಯಲಾಯಿತು; ಅದನ್ನು ಅಂದಿನ ರಾಜ್ಯ ಮತ್ತು ಕೇಂದ್ರ ಸರಕಾರಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದವು.
ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವ ತನಕ ಹಿಂದೂ ಜನಜಾಗೃತಿ ಸಮಿತಿ ಹೋರಾಟ ಮುಂದುವರಿಸಲಿದೆ ! – ಶ್ರೀ. ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ವಕ್ತಾರರು.
ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ದೊರಕಿಸಲು ಹಿಂದೂ ಜನಜಾಗೃತಿ ಸಮಿತಿಯು ಕಳೆದ ೧೦ ವರ್ಷಗಳಲ್ಲಿ ದೇಶಾದ್ಯಂತ ೫೦೦ ಚಿತ್ರಪ್ರದರ್ಶನಗಳನ್ನು ಆಯೋಜಿಸಿ ಅದೇ ರೀತಿ ಸಭೆಗಳನ್ನು ಮಾಡಿ ೧೦ ಲಕ್ಷ ಹಿಂದೂಗಳನ್ನು ಜಾಗೃತಗೊಳಿಸಿದೆ. ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವವರೆಗೂ ಹಿಂದೂ ಜನಜಾಗೃತಿ ಸಮಿತಿಯು ಈ ಹೋರಾಟವನ್ನು ಮುಂದುವರೆಸಲಿದೆ.