ಪಾಕಿಸ್ತಾನದಲ್ಲಿಯ `ಒಐಸಿ’ ಪರಿಷತನಲ್ಲಿ ಚೀನಾ ಸಹಭಾಗ !

ಇದು ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನವಾಗಿದೆ ! ಭವಿಷ್ಯದಲ್ಲಿ ಒಂದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಇವರನ್ನು ಸರಕಾರ ಹೇಗೆ ಎದುರಿಸಲಿದೆ ? -ಸಂಪಾದಕರು 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ

ಇಸ್ಲಾಮಬಾದ : ಮಾರ್ಚ್ 22 ಮತ್ತು 23 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ `ಇಸ್ಲಾಮಿಕ್ ಸಹಕಾರ ಸಂಘಟನೆ’ಯ (ಒಐಸಿ) ವಿದೇಶಾಂಗ ಸಚಿವರ ಪರಿಷತನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ `ವಿಶೇಷ ಅತಿಥಿ’ಯಾಗಿ ಭಾಗವಹಿಸಲಿದ್ದಾರೆ.

ಮಾರ್ಚ್ 22 ರಂದು ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮುಖ್ಯ ಭಾಷಣವಿರುತ್ತದೆ. ಈ ಪರಿಷತನಲ್ಲಿ `ಒಐಸಿ’ ದೇಶಗಳ ಹಿರಿಯ ಅಧಿಕಾರಿಗಳು, ವಿಶ್ವಸಂಸ್ಥೆಯ ಹಿರಿಯ ಪ್ರತಿನಿಧಿಗಳು, `ಅರಬ್ ಲೀಗ್’ ಮತ್ತು `ಕೊಲ್ಲಿ ರಾಷ್ಟ್ರದ ಸಹಕಾರ ಮಂಡಳಿ, ಸಹಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘಟನೆಗಳು ಭಾಗವಹಸಿಲಿವೆ.