`ಲಜ್ಜಾ’ ಪುಸ್ತಕವನ್ನು ಆಧರಿಸಿ ಚಲನಚಿತ್ರ ನಿರ್ಮಿಸುವ ಧೈರ್ಯ ಯಾರೂ ಮಾಡಿಲ್ಲ ! – ಲೇಖಕಿ ತಸ್ಲೀಮಾ ನಸ್ರೀನ್ ಇವರ ದುಃಖ

ಲೇಖಕಿ ತಸ್ಲೀಮಾ ನಸ್ರೀನ್

ನವ ದೆಹಲಿ : `ಲಜ್ಜಾ’ ಈ ಕಾದಂಬರಿಯು ಕಳೆದ 29 ವರ್ಷಗಳಿಂದ ಹೆಚ್ಚು ಮಾರಾಟವಾಗುವ ಪುಸ್ತಕಗಳ ಪಟ್ಟಿಯಲ್ಲಿದೆ; ಆದರೆ ಈ ಪುಸ್ತಕದ ಮೆಲೆ ಚಲನಚಿತ್ರ ನಿರ್ಮಿಸಲು ಯಾರೂ ಧೈರ್ಯ ಮಾಡಲಿಲ್ಲ’, ಎಂದು ಈ ಪುಸ್ತಕದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ. ಈ ಪುಸ್ತಕದಲ್ಲಿ ಬಾಂಗ್ಲಾದೇಶದಲ್ಲಿಯ ಮತಾಂಧರು ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ಪುಸ್ತಕದಿಂದಾಗಿಯೇ ಬಾಂಗ್ಲಾದೇಶದ ಮತಾಂಧರು ತಸ್ಲೀಮಾ ಅವರನ್ನು ಕೊಲ್ಲಲು ಫತ್ವಾ ಹೊರಡಿಸಿದ್ದರು. ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಬಳಿಕ ಅವರು ದೇಶದಿಂದ ಪಲಾಯನ ಮಾಡಿದರು. ಈಗ ಅವರು ವಿದೇಶದಲ್ಲಿ ವಾಸಿಸುತ್ತಿದ್ದಾರೆ.