೧. ರಷ್ಯಾದ ದಾದಾಗಿರಿಗೆ ಮಣಿಯದೇ ಉಕ್ರೇನ್‌ನ ಜನರು ಹೋರಾಡಲು ಸಿದ್ಧರಾಗಿರುವುದರಿಂದ ಯುದ್ಧವು ದೀರ್ಘಾವಧಿ ನಡೆಯುವುದು
‘ಮಾಧ್ಯಮಗಳಲ್ಲಿ ಬರುತ್ತಿರುವ ವಾರ್ತೆಗಳಿಂದ ತಿಳಿಯುವ ಅಂಶವೆಂದರೆ, ರಷ್ಯಾವು ಉಕ್ರೇನ್‌ನ ರಾಜಧಾನಿಯಾದ ಕೀವ್‌ಗೆ ಮೂರೂ ದಿಕ್ಕಿನಿಂದ ಮುತ್ತಿಗೆ ಹಾಕಿದೆ. ಹೀಗಿದ್ದರೂ ಈ ರಾಜಧಾನಿಯ ಮೇಲೆ ಆಕ್ರಮಣ ಮಾಡುವಂತಹ ನಿಯೋಜನೆ ಇನ್ನೂ ಆರಂಭವಾಗಿಲ್ಲ. ಅವರ ಈ ಮುತ್ತಿಗೆಯಿಂದಾಗಿ ಯಕ್ರೇನ್‌ನ ಅನೇಕ ನಾಗರಿಕರು ವಿಶೇಷವಾಗಿ ಮಹಿಳೆಯರು, ಸಣ್ಣಮಕ್ಕಳು ಮತ್ತು ಹಿರಿಯ ನಾಗರಿಕರು ಹೊರಗೆ ಹೋಗುತ್ತಿದ್ದಾರೆ. ರಷ್ಯಾಗೆ ‘ನಾವು ಉಕ್ರೇನ್‌ನ ಒಳಗೆ ಯುದ್ಧಟ್ಯಾಂಕ್ ಕಳಿಸಿದೆವು, ‘ಕ್ರೂಝ್’ ಕ್ಷಿಪಣಿಗಳನ್ನು ಬಿಟ್ಟೆವು, ತೋಪುಗಳನ್ನು ಉಪಯೋಗಿಸಿದೆವು, ಹೆಲಿಕಾಪ್ಟರ್‌ಗಳನ್ನು ಹಾರಿಸಿದೆವು, ವಿಮಾನಗಳನ್ನು ಉಪಯೋಗಿಸಿದೆವು, ಇದರಿಂದ ಉಕ್ರೇನ್ ಹೆದರುವುದು’ ಎಂದು ಅನಿಸಿತ್ತು, ಆದರೆ ಇಷ್ಟು ಮಾಡಿದರೂ ಜನರು ಮತ್ತು ನೇತೃತ್ವವು ಹೆದರಲಿಲ್ಲ. ಸದ್ಯಕ್ಕಂತೂ ಉಕ್ರೇನ್‌ನ ನೇತೃತ್ವ ಹಾಗೂ ಸೈನಿಕರು ಹೋರಾಡುತ್ತಿದ್ದಾರೆ ಮತ್ತು ಅವರ ನಾಗರಿಕರೂ ದೇಶಕ್ಕಾಗಿ ಸೈನ್ಯದಲ್ಲಿ ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಪುತಿನ್‌ರವರ ಆಕ್ರಮಕ ಕಾರ್ಯಾಚರಣೆಯಿಂದ ಉಕ್ರೇನ್‌ನಲ್ಲಿ ಭಯ ನಿರ್ಮಾಣವಾಗಿಲ್ಲ. ತದ್ವಿರುದ್ಧ ಅವರ ನಾಗರಿಕರು ಹೋರಾಟ ಮಾಡಲು ಎದೆ ತಟ್ಟಿ ಸೆಟೆದು ನಿಂತಿದ್ದಾರೆ. ಆದ್ದರಿಂದ ಶೀಘ್ರದಲ್ಲಿಯೇ ರಷ್ಯಾವು ಉಕ್ರೇನ್‌ನನ್ನು ವಶಪಡಿಸಿಕೊಳ್ಳಬಹುದು ಎನ್ನುವ ಸಾಧ್ಯತೆ ದೂರ ಸರಿದಿದೆ.
೨. ‘ನ್ಯಾಟೋ’ ಶಾಂತಿವಾದಿಯಾಗಿದ್ದ ಕಾರಣ ಅದು ನಿಜವಾದ ಯುದ್ಧವನ್ನು ಮಾಡಲು ಆವಶ್ಯಕವಿರುವ ಕ್ಷಮತೆಯನ್ನು ಹೆಚ್ಚಿಸಿಕೊಂಡಿಲ್ಲ
‘ನ್ಯಾಟೋ’ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಂರಕ್ಷಕ ಸಮೂಹವಾಗಿದೆ. ಅವರ ಓರ್ವ ಬ್ರಿಟಿಷ ಜನರಲ್ ‘ನ್ಯಾಟೋ’ದ ಎರಡನೇ ಕ್ರಮಾಂಕ ಸೇನಾಪತಿಯಾಗಿದ್ದರು, ಅವರ ಒಂದು ಲೇಖನ ಪ್ರಕಾಶನವಾಗಿದೆ. ಅವರು ಹೇಳುತ್ತಾರೆ ‘ಕಳೆದ ಒಂದುವರೆ ದಶಕದಲ್ಲಿ ನ್ಯಾಟೋದಲ್ಲಿನ ಜನರು ಎಷ್ಟು ಶಾಂತಿವಾದಿಗಳಾಗಿದ್ದಾರೆಂದರೆ, ಅವರಲ್ಲಿದ್ದ ಶಸ್ತ್ರಾಸ್ತ್ರಗಳು ಕೂಡ ಆಧುನೀಕರಣವಾಗಿಲ್ಲ ಹಾಗೂ ಅವರ ಸೈನಿಕರಿಗೆ ಹೆಚ್ಚಿನ ತರಬೇತಿಯೂ ಸಿಗುವುದಿಲ್ಲ. ಅವರು ಸೈನಿಕರ ಶಕ್ತಿಯನ್ನು ಕಡಿಮೆಗೊಳಿಸುತ್ತಾ ಬಂದಿದ್ದಾರೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಅನಿರೀಕ್ಷಿತ ಯುದ್ಧ ಆರಂಭವಾದರೆ, ಅವರಲ್ಲಿ ಶತ್ರುವಿನೊಂದಿಗೆ ಹೋರಾಡಲು ಒಂದು ಡಿವಿಜನ್ (ಒಂದು ಗುಂಪಿನಲ್ಲಿ ೧೫ ರಿಂದ ೨೦ ಸಾವಿರ ಸೈನಿಕರು ಮತ್ತು ಶಸ್ತ್ರಾಸ್ತ್ರಗಳು) ಸೈನ್ಯವೂ ಸಿದ್ಧತೆಯಲ್ಲಿಲ್ಲ. ಅಮೇರಿಕಾಗೆ ಯುದ್ಧ ಮಾಡುವ ಕ್ಷಮತೆಯಿದೆ; ಆದರೆ ‘ನ್ಯಾಟೋ’ದ ಇತರ ದೊಡ್ಡ ರಾಷ್ಟ್ರಗಳಲ್ಲಿ ಹೋರಾಡುವ ಕ್ಷಮತೆಯಿಲ್ಲ’.
ಅನೇಕ ಜನರು ಹಾಸ್ಯ ಮಾಡುತ್ತಾ, “ನ್ಯಾಟೋ ತನ್ನ ಯುದ್ಧಟ್ಯಾಂಕ್‌ಗಳನ್ನು ‘ಥಿಂಕ್‌ಟ್ಯಾಂಕ್’ಗೆ (ತಜ್ಞರ ವೈಚಾರಿಕ ಗುಂಪಿಗೆ) ಪರಿವರ್ತಿಸಿದೆ” ಎನ್ನುತ್ತಾರೆ. ನಾವು ಮಾಧ್ಯಮಗಳಲ್ಲಿ ಚರ್ಚೆಗಳನ್ನು ಮಾಡಿ ಮತ್ತು ವಾದವಿವಾದಗಳನ್ನು ಮಾಡುತ್ತಿರೋಣ ಮತ್ತು ಅಲ್ಪಸ್ವಲ್ಪ ಶಸ್ತ್ರಗಳನ್ನಿಟ್ಟುಕೊಂಡು ಜನರನ್ನು ಭಯಭೀತರನ್ನಾಗಿ ಮಾಡಬಹುದು,ಎಂದು ‘ನ್ಯಾಟೋ’ಗೆ ಅನಿಸಿತ್ತು. ಅವರಿಗೆ ಪುತಿನ್‌ರವರು ಮಹಾ ಭಯಂಕರ ವ್ಯಕ್ತಿಯಾಗಿದ್ದಾರೆ ಹಾಗೂ ಅವರು ಇಂತಹ ಯಾವುದೇ ವಿಷಯದ ಬಗ್ಗೆ ಹೆದರುವುದಿಲ್ಲ ಎನ್ನುವ ವಿಷಯವು ತಿಳಿಯಬೇಕಿತ್ತು. ತನ್ನ ನೇತೃತ್ವದ ಪ್ರಭಾವದಿಂದ ಏನು ಮಾಡಬಹುದು ಎಂಬುದನ್ನು ಪುತಿನ್‌ರವರು ತೋರಿಸಿಕೊಟ್ಟಿದ್ದಾರೆ. ಈ ಯುದ್ಧದ ವಿಷಯದಲ್ಲಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರ ಧೋರಣೆಯ ಬಗ್ಗೆ ಈಗ ಅವರ ಜನರೇ ಇಲ್ಲಸಲ್ಲದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ. ಅಮೇರಿಕಾದ ಮುಖ್ಯ ರಾಷ್ಟ್ರೀಯ ಪಕ್ಷ ತನ್ನ ಅಧ್ಯಕ್ಷರ ಧೋರಣೆಯ ವಿರುದ್ಧವೇ ಹೋಗುತ್ತಿದೆ. ಹೀಗೆಯೇ ಭಾರತದಲ್ಲಿಯೂ ಆಗುತ್ತದೆ. ಆದ್ದರಿಂದ ಕೇವಲ ಚರ್ಚೆ ಮಾಡುವ ಪದ್ಧತಿಯನ್ನು ನಿಲ್ಲಿಸಿ ಕಾರ್ಯಾಚರಣೆಯನ್ನು ಮಹತ್ವದ್ದಾಗಿದೆ.
೩. ಭಾರತದ ತಥಾಕಥಿತ ತಜ್ಞರು ಯುದ್ಧದ ವಿಷಯದಲ್ಲಿ ಏನು ಹೇಳುವರು ?
ಕೆಲವು ತಥಾಕಥಿತ ತಜ್ಞರು, ‘೨೧ ನೆಯ ಶತಮಾನದಲ್ಲಿ ಯುದ್ಧವಾಗುವುದೇ ಇಲ್ಲ’, ಎನ್ನುತ್ತಿದ್ದರು. ಅವರ ಭವಿಷ್ಯವಾಣಿ ಎಷ್ಟು ತಪ್ಪಾಗಿತ್ತು, ಎಂಬುದು ಈ ಪರಿಸ್ಥಿತಿಯಿಂದ ಅರಿವಾಗುತ್ತದೆ. ಭಾರತದಲ್ಲಿ ಒಂಟೆಯ ಮೇಲಿಂದ ಕುರಿ ಮೇಯಿಸುವ ಕೆಲವು ತಜ್ಞರು, ‘ಶಸ್ತ್ರಾಸ್ತ್ರಗಳ ಅವಶ್ಯಕತೆಯೇ ಇಲ್ಲ. ನಾವು ಕೇವಲ ನಮ್ಮ ಆರ್ಥಿಕ ಬಲವನ್ನು ಹೆಚ್ಚಿಸಬೇಕು. ಕೇವಲ ತಂತ್ರಜ್ಞಾನದ ಸಹಾಯದಿಂದ ಭಾರತ ಯುದ್ಧವನ್ನು ಗೆಲ್ಲಬಹುದು’, ಎನ್ನುತ್ತಿದ್ದರು. ತಂತ್ರಜ್ಞಾನದ ಸಹಾಯದಿಂದ ಕೇವಲ ರಾಜ್ಯಗಳೊಂದಿಗೆ ಯುದ್ಧ ಮಾಡಬಹುದು. ಯುದ್ಧದಲ್ಲಿ ಸೈನಿಕರು ಮತ್ತು ಅವರ ಶಸ್ತ್ರಗಳು ಮಹತ್ವದ್ದಾಗಿರುತ್ತವೆ. ಅನೇಕ ಬಾರಿ ಶಸ್ತ್ರಾಸ್ತ್ರಗಳ ಜೊತೆಗೆ ಸೈನಿಕರ ಹೋರಾಡುವ ವೃತ್ತಿಯೂ ಹೆಚ್ಚು ಮಹತ್ವದ್ದಾಗಿರುತ್ತದೆ.
೪. ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಶಿಕ್ಷಣವನ್ನು ದೊರಕಿಸಿ ಕೊಡಬೇಕು !
‘ಸೆಂಟ್ರಲ್ ಏಶಿಯನ್ ರಿಪಬ್ಲಿಕ್ಸ್’ನಲ್ಲಿ ಅರ್ಧ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಸಿಗುತ್ತದೆ. ಆದ್ದರಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಕಲಿಯಲು ಅಲ್ಲಿಗೆ ಹೋಗುತ್ತಾರೆ. ಪ್ರಧಾನಮಂತ್ರಿ ಮೋದಿಯವರು ಇತ್ತೀಚೆಗಷ್ಟೆ ಒಂದು ವಿಷಯ ಹೇಳಿದ್ದಾರೆ, ‘ಭಾರತದ ಖಾಸಗಿ ಮಹಾವಿದ್ಯಾಲಯಗಳು ಹೆಚ್ಚು ಮಹಾವಿದ್ಯಾಲಯಗಳನ್ನು ತೆರೆಯಬೇಕು. ಅದರಿಂದ ಭಾರತೀಯ ವಿದ್ಯಾರ್ಥಿಗಳಿಗೆ ದೇಶದ ಹೊರಗೆ ಹೋಗುವ ಅವಶ್ಯಕತೆಯಿರುವುದಿಲ್ಲ’. ಭಾರತದಲ್ಲಿ ಖಾಸಗಿ ಹಾಗೂ ಸರಕಾರಿ ಕ್ಷೇತ್ರದವರು ಇದರ ಬಗ್ಗೆ ವಿಚಾರ ಮಾಡಿ ವೈದ್ಯಕೀಯ ಶಿಕ್ಷಣದ ಖರ್ಚನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.
೫. ಯುದ್ಧದಿಂದ ಭಾರತ ಪಾಠ ಕಲಿಯಬೇಕು !
ಈ ಯುದ್ಧದಿಂದ ಭಾರತ ಕಲಿಯಬೇಕಾದ ಅಂಶವೆಂದರೆ, ಅನೇಕ ಮಿತ್ರ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡು ‘ನಾವು ನಿಮಗೆ ಸಹಾಯ ಮಾಡುವೆವು’, ಎಂದು ಹೇಳುತ್ತವೆ; ಆದರೆ ಪ್ರಸಂಗ ಬಂದಾಗ ಅವುಗಳು ಸಹಾಯ ಮಾಡಬಹುದೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಸಂರಕ್ಷಣೆಯ ವಿಷಯದಲ್ಲಿ ಸ್ವಾವಲಂಬಿಯಾಗಬೇಕು ಅಂದರೆ ಎಲ್ಲ ದೊಡ್ಡ ಶಸ್ತ್ರಗಳನ್ನು ಭಾರತದಲ್ಲಿಯೇ ತಯಾರಿಸದೇ ಪರ್ಯಾಯವಿಲ್ಲ.
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.