ಪಾಕಿಸ್ತಾನದಲ್ಲಿ ೨೦೨೧ ರಲ್ಲಿ ಧರ್ಮನಿಂದನೆಯ ಪ್ರಕರಣದಲ್ಲಿ ಅರ್ಧಕ್ಕಿಂತ ಅಧಿಕ ಆರೋಪಿಗಳು ಮುಸಲ್ಮಾನರೇ !

(ಧರ್ಮನಿಂದನೆ ಎಂದರೆ ಶ್ರದ್ಧಾಸ್ಥಾನದ ಅವಮಾನ ಮಾಡುವುದು)

ಪಾಕಿಸ್ತಾನದಲ್ಲಿ ಮುಸಲ್ಮಾನರೇ ಮುಸಲ್ಮಾನರ ಮೇಲೆ ಧರ್ಮನಿಂದನೆಯ ಆರೋಪ ಮಾಡುತ್ತಿದ್ದರೇ, ಇತರ ಧರ್ಮದವರ ಸ್ಥಿತಿ ಏನಿರಬಹುದು, ಎಂಬುದು ಗಮನಕ್ಕೆ ಬರುತ್ತದೆ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ೨೦೨೧ ರಲ್ಲಿ ಧರ್ಮನಿಂದನೆಯ ಪ್ರಕರಣದಲ್ಲಿ ಅರ್ಧಕ್ಕಿಂತ ಹೆಚ್ಚು ಆರೀಪಿಗಳು ಮುಸಲ್ಮಾನರೇ ಆಗಿದ್ದರು, ಎನ್ನುವ ಮಾಹಿತಿಯನ್ನು ‘ಸೆಂಟರ ಫಾರ ಸೋಶಿಯಲ್ ಜಸ್ಟೀಸ’ ನ ‘ಹ್ಯೂಮನ ರೈಟ್ಸ್ ಆರ್ಬ್ಸವರ ೨೦೨೨’ ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ವಯ ೨೦೨೧ ರಲ್ಲಿ ಧರ್ಮನಿಂದೆಯ ಪ್ರಕರಣದಲ್ಲಿ ಒಟ್ಟು ೮೪ ಜನರ ಮೇಲೆ ದೂರು ದಾಖಲಿಸಲಾಗಿತ್ತು. ಅದರಲ್ಲಿ ೪೨ ಮುಸಲ್ಮಾನರು, ೨೫ ಅಹಮ್ಮದಿಗಳು, ೭ ಹಿಂದೂಗಳು, ೩ ಕ್ರೈಸ್ತರು ಹಾಗೂ ಇನ್ನುಳಿದ ೭ ಜನರು ಇತರೆ ಆಗಿದ್ದರು.

೧. ಈ ವರದಿಯಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಧರ್ಮನಿಂದೆಯ ಅನೇಕ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಇದರಿಂದ ಗುಂಪಿನಿಂದ ಹತ್ಯೆ ಮತ್ತು ಇತರೆ ಅಪರಾಧಗಳಲ್ಲಿ ಹೆಚ್ಚಳವಾಗಿದೆ. ವ್ಯಯಕ್ತಿಕ ದ್ವೇಷ ಮತ್ತು ಮುಸಲ್ಮಾರೇತರರ ವಿರುದ್ಧವಲ್ಲ, ಮುಸಲ್ಮಾನರ ವಿರುದ್ಧವೂ ಧರ್ಮನಿಂದೆಯ ಕಾನೂನಿನ ದುರುಪಯೋಗವಾಗುತ್ತಿದೆ ಎಂದು ತಿಳಿಸಲಾಗಿದೆ.

೨. ಪಾಕಿಸ್ತಾನದಲ್ಲಿ ಧರ್ಮನಿಂದೆಯ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿಕೊಳ್ಳಲು ನ್ಯಾಯವಾದಿಗಳು ಹೆದರುತ್ತಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ರಕ್ಷಿಸುವ ನ್ಯಾಯವಾದಿಗಳ ಮೇಲೆ ಆಕ್ರಮಣ ನಡೆಸಲಾಗಿದೆ. ಮುಲ್ತಾನದಲ್ಲಿ ಹಿಂದೆ ಒಬ್ಬ ಆರೋಪಿ ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿಯನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಆದ್ದರಿಂದ ನ್ಯಾಯವಾದಿಗಳು ಈ ಪ್ರಕರಣಗಳ ವಕಾಲತ್ತು ವಹಿಸಲು ನಿರಾಕರಿಸುತ್ತಾರೆ. ಪರಿಣಾಮವಾಗಿ ಆರೋಪಿ ಅನೇಕ ವರ್ಷಗಳವರೆಗೆ ಕಾರಾಗೃಹದಲ್ಲಿಯೇ ಕೊಳೆಯುತ್ತಿರುತ್ತಾರೆ. ಅನೇಕ ಸಲ ಸುಳ್ಳು ಆರೋಪಗಳ ಕಾರಣದಿಂದ ವ್ಯಕ್ತಿಗೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕೆಲವು ಕನಿಷ್ಠ ನ್ಯಾಯಾಲಯಗಳಲ್ಲಿ ಇನ್ನೂ ವಿಚಾರಣೆಯ ಮೊದಲೇ ಆರೋಪಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

೩. ಲಾಹೋರ ಉಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರನ್ನು ಅವರ ಕಚೇರಿಯಲ್ಲಿಯೇ ಗುಂಡುಹಾರಿಸಿ ಹತ್ಯೆಗೈಯಲಾಗಿತ್ತು. ಈ ನ್ಯಾಯಾಧೀಶರು ಧರ್ಮನಿಂದೆಯ ಪ್ರಕರಣದ ಆರೋಪಿಯನ್ನು ಖುಲಾಸೆ ಗೊಳಿಸಿದ್ದರು.