ಮನೆಯಲ್ಲಿ ಒಂದೇ ಮಗು ಇದ್ದರೆ ಆಗುವ ಹಾನಿ !
‘ಸದ್ಯ ಬಹುತೇಕ ಕುಟುಂಬಗಳಲ್ಲಿ ಒಂದೇ ಮಗು ಇರುತ್ತದೆ. ಆದ್ದರಿಂದ ಅವನಿಗೆ ಎಲ್ಲಾ ರೀತಿಯಿಂದ ಮುದ್ದು ಮಾಡಲಾಗುತ್ತದೆ; ಆದರೆ ಹಾಗೆ ಮಾಡುವಾಗ, ಪೋಷಕರು ಅವನ ಸ್ವಭಾವದೋಷಗಳಿಗೆ ನಿರ್ಲಕ್ಷ ಮಾಡುತ್ತಾರೆ. ಅಂತಹ ಮಕ್ಕಳು ತಮ್ಮ ಸ್ವಂತ ವಸ್ತುಗಳನ್ನು ಇತರರಿಗೆ ನೀಡಲು, ಕಡಿಮೆತನದಿಂದ ಇತರರಿಂದ ಕೇಳಲು ಮತ್ತು ಇತರರು ಬಳಸಿದ ವಸ್ತುಗಳನ್ನು ಬಳಸಲು ಆಗುವುದಿಲ್ಲ. ನಂತರ, ಈ ಮಕ್ಕಳು ಹಠಮಾರಿಗಳಾಗುತ್ತಾರೆ. ಅವರ ಪ್ರಬಲವಾಗಿರುವ ಸ್ವಭಾವದೋಷಗಳು ಅವರಿಗೆ, ಅವರ ಕುಟುಂಬದವರಿಗೆ ಮತ್ತು ಸಮಷ್ಟಿಗೂ ತೊಂದರೆಯಾಗುತ್ತವೆ’. ತದ್ವಿರುದ್ಧ, ಮನೆಯಲ್ಲಿ ೨-೩ ಮಕ್ಕಳಿದ್ದರೆ, ಎಲ್ಲರಿಗೂ ಸಮಾನ ವರ್ತನೆ ನೀಡಲಾಗುತ್ತದೆ. ಯಾರದ್ದಾದರೂ ತಪ್ಪಿದ್ದರೆ ಅವರಿಗೆ ಅರಿವು ಮಾಡಿಕೊಡಲಾಗುತ್ತದೆ. ಕೆಲವೊಮ್ಮೆ ಆತನಿಗೆ ಶಿಕ್ಷೆಯೂ ನೀಡಲಾಗುತ್ತದೆ. ಹಾಗಾಗಿ ಇತರ ಮಕ್ಕಳಿಗೂ ‘ಹೀಗೆ ಅಯೋಗ್ಯ ಕೃತಿ ಮಾಡಬಾರದು’, ಎಂಬುದರ ಅರಿವಾಗುತ್ತದೆ ಮತ್ತು ಎಲ್ಲರಿಗೂ ಪರಸ್ಪರರನ್ನು ಹೊಂದಿಕೊಂಡು ಹೋಗುವ ಅಭ್ಯಾಸವಾಗುತ್ತದೆ !
– (ಪರಾತ್ಪರ ಗುರು) ಡಾ. ಆಠವಲೆ (೪.೧೨.೨೦೨೧)
ನಿಮ್ಮ ಆಯುಷ್ಯವು ನಿಮ್ಮ ಕೈಯಲ್ಲಿಯೇ ಇದೆ !
ಅನೇಕ ದೈಹಿಕ ಕಾಯಿಲೆಗಳು ‘ದೇಹದ ಪ್ರಾಣಶಕ್ತಿ’ಯಲ್ಲಿನ ಅಡೆತಡೆಗಳಿಂದ ಉಂಟಾಗಿರುತ್ತವೆ. ಪ್ರಾಣಶಕ್ತಿಯಲ್ಲಿನ ಈ ಅಡೆತಡೆಗಳನ್ನು ವಿವಿಧ ನ್ಯಾಸ, ಮುದ್ರೆಗಳು ಮತ್ತು ಅವುಗಳ ಜತೆಗೆ ಸೂಕ್ತವಾದ ದೇವತೆಯ ನಾಮಸ್ಮರಣೆಯಿಂದ ದೂರ ಮಾಡಬಹುದು. ಈ ಖರ್ಚಿಲ್ಲದ ಚಿಕಿತ್ಸಾಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ‘ನಮ್ಮ ಆಯುಷ್ಯವು ನಮ್ಮ ಕೈಯಲ್ಲಿಯೇ ಇದೆ’ ಎಂದು ಅನುಭೂತಿ ಬರುತ್ತದೆ. ಅನೇಕ ಕಾಯಿಲೆಗಳಿಗೆ ಔಷಧೋಪಚಾರದೊಂದಿಗೆ ಈ ಪದ್ಧತಿಯಿಂದ ಚಿಕಿತ್ಸೆ ಮಾಡಿದರೆ ಕಡಿಮೆ ಸಮಯದಲ್ಲಿ ಕಾಯಿಲೆಗಳನ್ನು ಗುಣಪಡಿಸಬಹುದು. ಸನಾತನದ ಅನೇಕ ಸಾಧಕರು ಇದನ್ನು ಹಲವು ವರ್ಷಗಳಿಂದ ಅನುಭವಿಸುತ್ತಿದ್ದಾರೆ.
– (ಪರಾತ್ಪರ ಗುರು) ಡಾ. ಆಠವಲೆ (೫.೧.೨೦೨೨)
ಟಿಪ್ಪಣಿ : ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯು ‘ಪ್ರಾಣಶಕ್ತಿ’ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ ಎಂಬ ಗ್ರಂಥವನ್ನು ಪ್ರಕಟಿಸಿದೆ.