ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಪರಾತ್ಪರ ಗುರು ಡಾ.ಆಠವಲೆಯವರ ಸಂಕಲ್ಪಕ್ಕನುಸಾರ ಕೆಲವೇ ವರ್ಷಗಳಲ್ಲಿ ಈಶ್ವರೀ ರಾಜ್ಯ ಸ್ಥಾಪನೆಯಾಗಲಿಕ್ಕಿದೆ. ಅನೇಕ ಜನರ ಮನಸ್ಸಿನಲ್ಲಿ ‘ಈ ರಾಷ್ಟ್ರವನ್ನು ನಡೆಸುವವರು ಯಾರು ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ಈಶ್ವರನು ಉಚ್ಚ ಲೋಕದಿಂದ ದೈವೀ ಬಾಲಕರಿಗೆ ಪೃಥ್ವಿಯ ಮೇಲೆ ಜನ್ಮ ನೀಡಿ ಕಳುಹಿಸಿದ್ದಾನೆ. ಈ ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಸಿದ್ಧಪಡಿಸುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/59042.html

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು’. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಕಲ್ಲಿಗೆ ಸಕಾರಾತ್ಮಕ ದೃಷ್ಟಿಕೋನ ನೀಡಿ ಅದರಲ್ಲಿನ ಭಾವವನ್ನು ಅನುಭವಿಸುವ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಕು. ಪ್ರಾರ್ಥನಾ ಮಹೇಶ ಪಾಠಕ

‘೨೦.೩.೨೦೨೧ ರಂದು ನಾನು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿನ ಯಜ್ಞ ಕುಂಡದ ಪರಿಸರದಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಆರಿಸುವ (ತೆಗೆಯುವ) ಸೇವೆಯನ್ನು ಮಾಡುತ್ತಿದ್ದೆ.  ಆಗ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಕೃಪೆಯಿಂದ ಕಲ್ಲು ಮತ್ತು ನನ್ನಲ್ಲಿ ನಡೆದ ಭಾವಸಂವಾದವನ್ನು ಇಲ್ಲಿ ನೀಡಿದ್ದೇನೆ’.

ಕಲ್ಲು : ನಾನು ಎಲ್ಲರ ಕಾಲಿಗೆ ಚುಚ್ಚುತ್ತೇನೆ, ನನಗೆ ಅದರ ದುಃಖವಾಗುತ್ತದೆ.

ನಾನು : ಅರೇ, ನೀನೇಕೆ ದುಃಖಪಡುತ್ತಿ ? ನೀನು ವಿಷ್ಣುಸ್ವರೂಪ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಆಶ್ರಯದಲ್ಲಿ ಬಂದಿರುವೆ. ನೀನು ದುಃಖ ಪಡಬೇಡ.

ಕಲ್ಲು : ನನ್ನ ಉಪಯೋಗವಾದರೂ ಏನಿದೆ ?

ನಾನು : ಇಲ್ಲಿ ನೋಡು, ಕಲ್ಲುಗಳಿಂದಲೇ ಮಣ್ಣಾಗುತ್ತದೆ ಮತ್ತು ಮಣ್ಣಿನಿಂದಲೇ ಬೆಳೆ ಬರುತ್ತದೆ ಮತ್ತು ಎಲ್ಲರಿಗೂ ಆಹಾರಧಾನ್ಯಗಳು ಸಿಗುತ್ತವೆ. ಅವುಗಳಿಂದಲೇ ನಾವು ಅಡುಗೆಯನ್ನು ಮಾಡುತ್ತೇವೆ ಮತ್ತು ಅದನ್ನು ಸೇವಿಸುತ್ತೇವೆ. ಅದರಿಂದಲೇ ನಾವು ಬದುಕುತ್ತೇವೆ. ಅಲ್ಲವೇ ?

ಕಲ್ಲು : ಹೌದು. ಸರಿಯಿದೆ. ನನ್ನ ಮಹತ್ವ ಬಹಳ ದೊಡ್ಡದಿದೆ; ಆದರೆ ಅದು ಗುರುಗಳ ಕೃಪೆಯಿಂದಲೇ ಇದೆ !

ನಾನು : ನಿನ್ನ ಭಾವ ಎಷ್ಟು ಚೆನ್ನಾಗಿದೆ ? ನನಗೆ ಕಲಿಯಲು ಸಿಕ್ಕಿತು.

– ಗುರುದೇವರ ಆನಂದದ ಹೂವು,

ಕು. ಪ್ರಾರ್ಥನಾ ಮಹೇಶ ಪಾಠಕ (ಆಧ್ಯಾತ್ಮಿಕ ಮಟ್ಟ ಶೇ. ೬೭,  ೧೦ ವರ್ಷ), ಪುಣೆ (೧೨.೬.೨೦೨೧)

ಗುರುದೇವಾ, ಸತ್ವರ ಘ್ಯಾ ಯಾ ಪ್ರಾರ್ಥನೇಲಾ ತುಮಚಾ ಚರಣಾ |

(ಗುರುದೇವಾ, ಬೇಗನೇ ಕರೆದುಕೊಳ್ಳಿರಿ ಈ ಪ್ರಾರ್ಥನೆಯನ್ನು ತಮ್ಮ ಚರಣಗಳಲ್ಲಿ |)

ನನಗೆ ಪರಮ ಪೂಜ್ಯ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ತುಂಬಾ ನೆನಪಾಗುತ್ತಿತ್ತು. ಆಗ ನನ್ನ ಮನಸ್ಸು ಅವರ ದರ್ಶನಕ್ಕಾಗಿ ವ್ಯಾಕುಲವಾಗಿತ್ತು ಆಗ ಅವರೇ ನನಗೆ ಈ ಮುಂದಿನ ಕವಿತೆಯನ್ನು ಸೂಚಿಸಿದರು. (ಕನ್ನಡ ಅನುವಾದವನ್ನು ನೀಡಲಾಗಿದೆ)

ಗುರುದೇವಾ, ಮನಸ್ಸು ಎಲ್ಲಿ ಓಡುತ್ತದೆ ನನಗೆ ತಿಳಿಯುವುದಿಲ್ಲ |

ಈಗ ನಿಮ್ಮಹೊರತು ನನಗೇನು ನೆನಪಾಗುವುದಿಲ್ಲ || ೧ ||

ಯಾವಾಗ ಆಗುವೆನು ನಾನು ಮುಕ್ತಾ (ಟಿಪ್ಪಣಿ ೧), ಯಾವಾಗ ಆಗುವೆನು ನಾನು ಜನಾ (ಟಿಪ್ಪಣಿ ೨) |

ಅಲ್ಲಿಯವರೆಗೆ ತೆಗೆದುಕೊಳ್ಳಿರಿ ಈ ಪ್ರಾರ್ಥನೆಯನ್ನು ತಮ್ಮ ಚರಣಗಳಲ್ಲಿ || ೨||

ರೋಮರೋಮಗಳಲ್ಲಿ ನಿಮ್ಮ ನಾಮವೇ ವಾಸ ಮಾಡಲಿ |

ನೇತ್ರಗಳನ್ನು ತೆರೆದಾಗ ನನಗೆ ನೀವೇ ಕಾಣಿಸಲಿ || ೩ ||

ಈ ನಿಮ್ಮ ಚಲುವ, ಸುಂದರ ರೂಪ |

ನನ್ನ ಮನಸ್ಸೆಂಬ ಚಿಪ್ಪಿನಲ್ಲಿ ಸಂಗ್ರಹವಾಗಲಿ || ೪ ||

ನೀರು ಇಲ್ಲದೇ ಮೀನು ಹೇಗೆ ತಳಮಳಿಸುತ್ತದೆಯೋ |

ಹಾಗಾಗಲಿ ನನ್ನ ಸ್ಥಿತಿ ನಿಮ್ಮ ದರ್ಶನಕ್ಕಾಗಿ || ೫ ||

ನಿಮ್ಮ ಹೊರತು ಈಗ ನನಗೆ ಏನೂ ಬೇಡ |

ನೀವೇ ನನ್ನ ಕೃಷ್ಣ, ನೀವೇ ನನ್ನ ವಿಠ್ಠಲ || ೬ ||

ಟಿಪ್ಪಣಿ ೧ – ಸಂತ ಮುಕ್ತಾಬಾಯಿ

ಟಿಪ್ಪಣಿ ೨ – ಸಂತ ಜನಾಬಾಯಿ

– ಗುರುದೇವರ ಆನಂದದ ಹೂವು.

ಕು. ಪ್ರಾರ್ಥನಾ ಮಹೇಶ ಪಾಠಕ (ಆಧ್ಯಾತ್ಮಿಕ ಮಟ್ಟ ಶೇ. ೬೭, ೧೦ ವರ್ಷ), ಪುಣೆ (೧೨.೬.೨೦೨೧)