ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಪರಾತ್ಪರ ಗುರು ಡಾ.ಆಠವಲೆಯವರ ಸಂಕಲ್ಪಕ್ಕನುಸಾರ ಕೆಲವೇ ವರ್ಷಗಳಲ್ಲಿ ಈಶ್ವರೀ ರಾಜ್ಯ ಸ್ಥಾಪನೆಯಾಗಲಿಕ್ಕಿದೆ. ಅನೇಕ ಜನರ ಮನಸ್ಸಿನಲ್ಲಿ ‘ಈ ರಾಷ್ಟ್ರವನ್ನು ನಡೆಸುವವರು ಯಾರು ?, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ಈಶ್ವರನು ಉಚ್ಚ ಲೋಕದಿಂದ ದೈವೀ ಬಾಲಕರಿಗೆ ಪೃಥ್ವಿಯ ಮೇಲೆ ಜನ್ಮ ನೀಡಿ ಕಳುಹಿಸಿದ್ದಾನೆ. ಈ ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಸಿದ್ಧಪಡಿಸುತ್ತಿದ್ದೇವೆ.

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

(ಪರಾತ್ಪರ ಗುರು) ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು ! – ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಸನಾತನದ ವತಿಯಿಂದ ಪ್ರಕಟಿಸಲಾದ ‘ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ (ಗುಣವೈಶಿಷ್ಟ್ಯಗಳು, ಕಾರ್ಯ, ಸಿದ್ಧಿ ಮತ್ತು ದೇಹತ್ಯಾಗ) ಈ ಗ್ರಂಥದ ಬಗ್ಗೆ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) ಇವಳಿಗೆ ಬಂದ ಅನುಭೂತಿಗಳು

ಕು. ಪ್ರಾರ್ಥನಾ ಮಹೇಶ ಪಾಠಕ

೧. ‘ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ (ಗುಣವೈಶಿಷ್ಟ್ಯಗಳು, ಕಾರ್ಯ, ಸಿದ್ಧಿ ಮತ್ತು ದೇಹತ್ಯಾಗ) ಈ ಗ್ರಂಥದ ಮುಖಪುಟಕ್ಕೆ ಚಂದನದ ಸುಗಂಧ ಬರುವುದು

‘ನಮ್ಮ ಬಳಿ ‘ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ರ ಗ್ರಂಥವಿದೆ. ನಮ್ಮಲ್ಲಿರುವ ಈ ಗ್ರಂಥದ ಮುಖಪುಟಕ್ಕೆ ಚಂದನದ ಸುಗಂಧ (ಪರಿಮಳ) ಬರುತ್ತದೆ.

೨. ಈ ಗ್ರಂಥದ ಪುಟಗಳ ಸಂಖ್ಯೆ ೧೬೩ ಆಗಿದ್ದರೂ, ಗ್ರಂಥದಲ್ಲಿನ ಚೈತನ್ಯದಿಂದ ಅದು ಭಾರವೆನಿಸದೇ ಹಗುರವೆನಿಸುತ್ತದೆ.

೩. ‘ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಮತ್ತು ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥಗಳನ್ನು ನೋಡಿ ‘ಇಬ್ಬರೂ ಏಕರೂಪರಾಗಿದ್ದಾರೆ, ಎಂದು ಅನಿಸುವುದು

ಈ ಗ್ರಂಥದ ಮುಖಪುಟದ ಮೇಲೆ ಪ.ಪೂ. ದಾದಾಜಿ ವೈಶಂಪಾಯನರ ಛಾಯಾಚಿತ್ರವಿದೆ. ಈ ಗ್ರಂಥವನ್ನು ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥದ ಪಕ್ಕದಲ್ಲಿಟ್ಟಾಗ, ನನಗೆ ‘ಯೋಗತಜ್ಞ ದಾದಾಜಿ ವೈಶಂಪಾಯನ ಮತ್ತು ಪರಾತ್ಪರ ಗುರು ಡಾಕ್ಟರ ಇವರಲ್ಲಿ ತುಂಬಾ ಸಾಮ್ಯತೆ ಇದೆ ಮತ್ತು ಅವರಿಬ್ಬರೂ ಏಕರೂಪ ವಾಗಿದ್ದಾರೆ, ಎಂದು ಅನಿಸಿತು.

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ

೪. ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಗ್ರಂಥದಿಂದ ‘ತುಂಬಾ ಪ್ರಕಾಶ ಬರುತ್ತದೆ ಮತ್ತು ಈ ಗ್ರಂಥದಲ್ಲಿನ ಚೈತನ್ಯದಿಂದ ‘ಈ ಗ್ರಂಥವನ್ನು ಸತತ ಓದುತ್ತಲೇ ಇರಬೇಕು, ಎಂದು ಅನಿಸುತ್ತದೆ

‘ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ (ಗುಣ ವೈಶಿಷ್ಟ್ಯಗಳು, ಕಾರ್ಯ, ಸಿದ್ಧಿ ಮತ್ತು ದೇಹತ್ಯಾಗ) ಈ ೧೬೩ ಪುಟಗಳ ಗ್ರಂಥವನ್ನು ನಾನು ೩ ದಿನಗಳಲ್ಲಿಯೇ ಸಂಪೂರ್ಣ ಓದಿ ಮುಗಿಸಿದೆನು. ನನಗೆ ‘ಈ ಗ್ರಂಥವನ್ನು ಬದಿಗೆ ಇಡಲೇಬಾರದು, ಎಂದು ಅನಿಸುತ್ತಿತ್ತು. ಗ್ರಂಥವನ್ನು ಓದುವಾಗ ನನಗೆ ‘ಈ ಗ್ರಂಥದಿಂದ ತುಂಬಾ ಪ್ರಕಾಶ ಬರುತ್ತಿದೆ ಮತ್ತು ಆ ಪ್ರಕಾಶದಲ್ಲಿ ಕುಳಿತು ನಾನು ಗ್ರಂಥವನ್ನು ಓದುತ್ತಿದ್ದೇನೆ, ಎಂದು ಅನಿಸುತ್ತಿತ್ತು. ‘ಈ ಗ್ರಂಥವು ಸ್ವಯಂಪ್ರಕಾಶಿತವಾಗಿದೆ. ಗ್ರಂಥದಲ್ಲಿನ ಚೈತನ್ಯದಿಂದ ನನಗೆ ಈ ಗ್ರಂಥವನ್ನು ಸತತವಾಗಿ ಓದುತ್ತಲೇ ಇರಬೇಕು, ಎಂದು ಅನಿಸುತ್ತಿತ್ತು.

ನನಗೆ ಈ ಗ್ರಂಥದ ಸಂದರ್ಭದಲ್ಲಿ ಒಳ್ಳೆಯ ಅನುಭೂತಿಗಳನ್ನು ನೀಡಿದ ಬಗ್ಗೆ ನಾನು ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. – ಗುರುದೇವರ ಆನಂದದ ಹೂವು, ಕು. ಪ್ರಾರ್ಥನಾ ಮಹೇಶ ಪಾಠಕ (ವಯಸ್ಸು ೧೦), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೦.೨೦೨೧)

ಹರ ಸಾಂಸ ಮೇ ಔರ ಹೃದಯ

ಮಂದಿರ ಮೇ ಆಪ ಹೀ ಗುರುದೇವ |

ಆಂಖೇ ಖೊಲೂ ತೋ ಆಪ ಹೀ ದಿಖೆ |

ಬಂದ ನಯನೋ ಮೇ ಭೀ ಆಪ ಹೀ ದಿಖೆ || ೧ ||

ಆಗೆ ದೇಖೂ ತೋ ಆಪಕೆ ದರ್ಶನ |

ಪಿಛೆ ದೇಖೂ ತೋ ಭೀ ಆಪಕೆ ದರ್ಶನ || ೨ ||

ದಶ ದಿಶಾವೋ ಮೇ ಆಪ ಹೀ ಗುರುವರ್ |

ಚರಾಚರ ಮೇ ವ್ಯಾಪ್ತ ಆಪ ಹೀ ಗುರುವರ್ || ೩ ||

ಹರ ಸಾಂಸ ಮೇ ಆಪ ಹೀ ಗುರುವರ್ |

ಹೃದಯ ಮಂದಿರ ಮೇ ಆಪ ಹೀ ಗುರುವರ್ || ೪ ||

ಜೋ ಆಪ ಚಾಹೇ ವಹ ಮೈ ಕರೂ |

ಜೈಸೇ ಆಪ ಚಾಹೇ ವೈಸೆ ಹೀ ರಹೂ || ೫ ||

ಅಸ್ತಿತ್ವ ಭೀ ಮೇರಾ ನಾ ಅನುಭವ ಕರ ಪಾವೂ |

ಆಪಸೆ ಹೀ ಮೈ ಏಕರೂಪ ಹೊ ಜಾವೂ || ೬ ||

– ಗುರುದೇವರ ಆನಂದಿ ಹೂವು,

ಕು. ಪ್ರಾರ್ಥನಾ ಮಹೇಶ ಪಾಠಕ, (ವಯಸ್ಸು ೧೦, ಆಧ್ಯಾತ್ಮಿಕ ಮಟ್ಟ ಶೇ. ೬೭),  ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೧೦.೨೦೨೧)