ಅಧ್ಯಾತ್ಮಪ್ರಸಾರದ ಕಾರ್ಯಕ್ಕಾಗಿ ಪ್ರವಾಸ ಮಾಡುವ ಸಾಧಕರಿಗೆ ತಮ್ಮ ಪರಿಚಿತರಲ್ಲಿ ನಿವಾಸ ಮತ್ತು ಭೋಜನದ ವ್ಯವಸ್ಥೆ ಆಗಬಹುದಿದ್ದರೆ ಅದರ ಮಾಹಿತಿ ತಿಳಿಸಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ವಿನಂತಿ ! 

ಸನಾತನ ಸಂಸ್ಥೆಯ ಪೂರ್ಣವೇಳೆ ಸಾಧಕರು ಅಧ್ಯಾತ್ಮಪ್ರಸಾರ ಹಾಗೂ ಹಿಂದೂ ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳಿಗಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುತ್ತಾರೆ. ಈ ಪ್ರವಾಸದ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಅಧ್ಯಾತ್ಮಪ್ರೇಮಿ ಜಿಜ್ಞಾಸುಗಳು ಹಾಗೂ ಹಿಂದೂ ರಾಷ್ಟ್ರಪ್ರೇಮಿಗಳನ್ನು ಭೇಟಿಯಾಗುವುದು; ಪ್ರವಚನಗಳು, ಸಭೆಗಳು, ಚರ್ಚೆ, ಶಿಬಿರಗಳು ಇತ್ಯಾದಿಗಳ ಆಯೋಜನೆ ಮಾಡುವುದು ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಭಾರತದಲ್ಲಿನ ಹೆಚ್ಚಿನ ಜಿಲ್ಲೆಗಳು ಹಾಗೂ ರಾಜ್ಯಗಳಲ್ಲಿ ಸನಾತನದ ಕಾರ್ಯ ಇಲ್ಲದಿರುವುದರಿಂದ ಆ ಸ್ಥಳಗಳಲ್ಲಿ ಪೂರ್ಣವೇಳೆ ಸಾಧಕರ ನಿವಾಸ ಮತ್ತು ಭೋಜನದ ವ್ಯವಸ್ಥೆ ಮಾಡಲು ಮಿತಿ ಬರುತ್ತದೆ. ಈ ದೃಷ್ಟಿಯಿಂದ ಎಲ್ಲ ಕಡೆಗಳಲ್ಲಿನ ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳು ತಮ್ಮ ಪರಿಚಿತರು, ಸಂಬಂಧಿಕರು ಅಥವಾ ತಮ್ಮ ಸಂಪರ್ಕದಲ್ಲಿರುವ ಹಿಂದುತ್ವನಿಷ್ಠರು ಈ ರೀತಿಯ ವ್ಯವಸ್ಥೆಯನ್ನು ಮಾಡಲು ಸಿದ್ಧರಿದ್ದರೆ ಅವರ ಮಾಹಿತಿಯನ್ನು ಸೌ. ಭಾಗ್ಯಶ್ರೀ ಸಾವಂತ ಇವರಲ್ಲಿ ಈ ಮುಂದಿನಂತೆ ತಿಳಿಸಿರಿ. ತಾವು ಈ ಮಾಹಿತಿ ೨೫ ಮಾರ್ಚ ೨೦೨೨ ರ ವರೆಗೆ ತಿಳಿಸಿದರೆ ಪೂರ್ಣವೇಳೆ ಸಾಧಕರಿಗೆ ಅನುಕೂಲವಾಗಬಹುದು. (ಸನಾತನದ ಸಾಧಕರ ಈ ಮಾಹಿತಿಯನ್ನು ಜಿಲ್ಲಾಸೇವಕರಿಗೆ ತಿಳಿಸಿರಿ. ಜಿಲ್ಲಾಸೇವಕರಿಗೆ ಈ ಬಗ್ಗೆ ಗೂಗಲ್‌ಫಾರ್ಮ್ ಕಳುಹಿಸಲಾಗುವುದು. ಅವರು ಅದನ್ನು ತುಂಬಿಸಿ ಕಳುಹಿಸಿರಿ.)

೧. ಪರಿಚಿತರ ಹೆಸರು, ಪೂರ್ಣ ವಿಳಾಸ ಮತ್ತು ಸಂಪರ್ಕ ಸಂಖ್ಯೆ

೨. ಪರಿಚಿತರ ಬಗ್ಗೆ ಸಂಕ್ಷಿಪ್ತ ಮಾಹಿತಿ (ಅಧ್ಯಾತ್ಮ / ಹಿಂದುತ್ವದ ಆಸಕ್ತಿ, ಶಿಕ್ಷಣ, ಉದ್ಯೋಗ, ಇತರ..)

೩. ಹೆಸರು ಕಳುಹಿಸುವವರ ಹೆಸರು ಹಾಗೂ ಸಂಪರ್ಕ ಸಂಖ್ಯೆ, ಪರಿಚಿತರೊಂದಿಗಿನ ಸಂಬಂಧ

೪. ನಿವಾಸ, ಭೋಜನ, ವಾಹನ ಇತ್ಯಾದಿಗಳಲ್ಲಿ ಯಾವ ಸೌಲಭ್ಯ ಕಲ್ಪಿಸಬಹುದು ?

೫. ವ್ಯವಸ್ಥೆಯನ್ನು ಎಷ್ಟು ದಿನ ಹಾಗೂ ಎಷ್ಟು ಜನರಿಗಾಗಿ ಮಾಡಬಹುದು ?

ಈ ಮಾಧ್ಯಮದಿಂದ ತಮ್ಮ ಪರಿಚಿತರು, ಸಂಬಂಧಿಕರು ಅಥವಾ ಹಿಂದುತ್ವನಿಷ್ಠರನ್ನೂ ಅಧ್ಯಾತ್ಮಪ್ರಸಾರ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಜೋಡಿಸಿಕೊಳ್ಳಬಹುದು.

ಆದ್ಯತೆಗನುಸಾರ ಮುಂದಿನ ರಾಜ್ಯಗಳು / ಜಿಲ್ಲೆಗಳ ಮಾಹಿತಿ ಸಿಕ್ಕಿದ್ದಲ್ಲಿ ಅದಕ್ಕನುಸಾರ ಪೂರ್ಣವೇಳೆ ಸಾಧಕರ ಪ್ರವಾಸದ ಆಯೋಜನೆಯನ್ನು ಆದ್ಯತೆಯಿಂದ ಮಾಡಲಾಗುವುದು.

ಸಂಪರ್ಕಕ್ಕಾಗಿ : ವಿ-ಅಂಚೆ ವಿಳಾಸ : [email protected]

ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦