ಸಿದ್ಧಲಿಂಗ ಸ್ವಾಮೀಜಿ ಸಹಿತ ಪ್ರಮೋದ ಮುತಾಲಿಕ ಮತ್ತು ಇನ್ನೋರ್ವ ಹಿಂದುತ್ವನಿಷ್ಠರಿಗೆ ಮಾರ್ಚ ೩ರ ವರೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧ !

ಅಪವಿತ್ರಗೊಂಡ ಶಿವಮಂದಿರವನ್ನು ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸಲು ನಿಷೇಧ !

ರಾಯಚೂರು – ಕೆಲವು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಆಳಂದಿದಲ್ಲಿ ಶಿವಲಿಂಗ ಅಪವಿತ್ರಗೊಳಿಸಿದ ಶ್ರೀ ಈಶ್ವರಮಂದಿರದ ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಹಸ್ತದಿಂದ ಶುದ್ಧೀಕರಣಗೊಳಿಸಲು ನಿರ್ಧರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀರಾಮ ಸೇವೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಹಿಂದುತ್ವನಿಷ್ಠ ಚೈತ್ರಾ ಕುಂದಾಪೂರ ಬರುವವರಿದ್ದರು; ಆದರೆ ಜಿಲ್ಲಾಡಳಿತವು ಅವರನ್ನು ಮಾರ್ಚ ೩ರ ವರೆಗೆ ಕಲಬುರ್ಗಿ ಜಿಲ್ಲೆಗೆ ಪ್ರವೇಶಿಸಲು ನಿರ್ಬಂಧಿಸಿದೆ. ‘ಡೈಜಿವರ್ಲ್ಡ’ ಈ ವಾತಾಧಜಾಲತಾಣವು ಈ ವಾರ್ತೆಯನ್ನು ಪ್ರಸಾರ ಮಾಡಿದೆ.

 (ಸೌಜನ್ಯ : Daily Salar)

ಈ ವಾರ್ತೆಯನುಸಾರ, ‘ ಈ ಆದೇಶವನ್ನು ಉಲ್ಲಂಘಿಸಿ, ಜಿಲ್ಲೆಗೆ ಪ್ರವೇಶಿಸಲು ಪ್ರಯತ್ನಿಸಿದ ಚೈತ್ರಾ ಕುಂದಾಪೂರ ಇವರನ್ನು ಶಹಾಬಾದ ಪೊಲಿಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಡಳಿತದ ಈ ನಿರ್ಧಾರವನ್ನು ಹಿಂದುತ್ವವಾದಿ ಸಂಘಟನೆಗಳು ವಿರೋಧಿಸಿವೆ.

ಈ ಹಿನ್ನೆಲೆಯಲ್ಲಿ ಪೊಲಿಸರು ಇಲ್ಲಿ ಮಾರ್ಚ ೩ರ ವರೆಗೆ ನಿರ್ಬಂಧನೆಯ ಆದೇಶವನ್ನು ಜಾರಿಗೊಳಿಸಿದೆ. ಪೊಲೀಸರು ನೀಡಿದ ಮಾಹಿತಿಯನುಸಾರ, ದೇವಸ್ಥಾನದಲ್ಲಿ ವಿಶೇಷ ಪೂಜೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ದಿನ ಅಪವಿತ್ರಗೊಂಡ ಈಶ್ವರ ಮಂದಿರದ ಪಕ್ಕದಲ್ಲಿರುವ ಲಾಡಲೆ ಮಶಕ ದರ್ಗಾದಲ್ಲಿ ಶಬ-ಎ-ಬಾರಾತ ಸಮಾರಂಭ ಆಚರಿಸಲಾಗುತ್ತಿದೆ. ಇದರಿಂದ ಕಟ್ಟುನಿಟ್ಟಿನ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ’.

ಆಡಳಿತದ ಕ್ರಮವು ಹಿಂದುವಿರೋಧಿ ! -ಪ್ರಮೋದ ಮುತಾಲಿಕ
ಈ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಪ್ರಮೋದ ಮುತಾಲಿಕರವರು, ‘ಕಲಬುರ್ಗಿ ಜಿಲ್ಲಾಡಳಿತದ ಕ್ರಮ ಹಿಂದುವಿರೋಧಿಯಾಗಿದೆ’ ಎಂದು ಹೇಳಿದರು.