ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್‌ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣ

ಕು ಮಂಜೂಷಾ ಪೈ

ಮಂಗಳೂರಿನ ಸನಾತನದ ಸಾಧಕಿಯಾದ ಸೌ.ಲಕ್ಷ್ಮಿ ಪೈ ಇವರ ದ್ವಿತೀಯ ಪುತ್ರಿ ಕುಮಾರಿ ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್‌ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡುತ್ತಿದ್ದಾರೆ. ಜಾಹೀರಾತು ಸಂರಚನೆಯ ಸೇವೆ ಹಾಗೂ ಆನ್ಲೈನ್ ಸತ್ಸಂಗಗಳಿಗೆ ಸಂಬಂಧಿಸಿದ ಸೇವೆಯನ್ನು ಮಾಡುತ್ತಿದ್ದಾರೆ. ಮಂಜುಷಾಳ ಈ ಸಾಧನೆಗೆ ಕೇವಲ ಗುರುಕೃಪೆಯೊಂದೇ ಕಾರಣ ಎಂದು ಸೌ. ಲಕ್ಷ್ಮಿ ಪೈಯವರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದ್ದಾರೆ.