1. ರಾಜಧಾನಿ ಕಿವ, ಈಶಾನ್ಯದಲ್ಲಿನ ಖಾರಕೀವ ಮತ್ತು ದಕ್ಷಿಣದಲ್ಲಿನ ಖೆರಸನ ನಗರಗಳಲ್ಲಿ ಭಯಂಕರ ಯುದ್ಧ
2. ಬಾರ್ಸಿಲಕೀವನಲ್ಲಿ ರಷ್ಯಾ ಸೈನಿಕರಿಂದ ಗುಂಡಿನ ದಾಳಿ, ಅಲ್ಲಿನ ತೈಲ ಡಿಪೋಗೆ ಬೆಂಕಿ
3. ಯುಕ್ರೇನಿನಿಂದ ರಷ್ಯಾ ಮತ್ತು ಬೇಲಾರುಸ್‍ನ ಗಡಿ ಬಂದ
4. ಚೆರ್ನೋಬಿಲ್ ವಶಕ್ಕೆ ಪಡೆದ ನಂತರ ಪರಮಾಣು ವಿಕಿರಣದ ಅಪಾಯ
5. ಯೂಟ್ಯೂಬ್ ರಷ್ಯಾದ ಪ್ರಸಾರ ಮಾಧ್ಯಮವಾದ `ಆರ್ ಟಿ.’ಯೊಂದಿಗೆ ಅನೇಕ ವೃತ್ತ ವಾಹಿನಿಗಳ ಮೇಲೆ ನಿರ್ಬಂಧ ಹೇರಿದೆ
6. ಯುದ್ಧವನ್ನು ನಿಷೇಧಿಸುತ್ತಿರುವ ರಷ್ಯಾದ 3 ಸಾವಿರಕ್ಕೂ ಹೆಚ್ಚಿನ ನಾಗರಿಕರು ವಶಕ್ಕೆ
7. ಯುಕ್ರೇನಿನಿಂದ ಒಂದುವರೆ ಲಕ್ಷಕ್ಕಿಂತ ಹೆಚ್ಚಿನ ನಾಗರಿಕರು ಪೋಲ್ಯಾಂಡ್, ಮೋಲ್ಡೋವಾ ಮತ್ತು ರೋಮಾನಿಯಾಗೆ ಸ್ಥಳಾಂತರ
8. ಜರ್ಮನಿಯ ವಾಯುಪ್ರದೇಶದಲ್ಲಿ ರಷ್ಯಾದ ವಿಮಾನಗಳ ಮೇಲೆ ನಿರ್ಬಂಧ
9. ಫೇಸ್ಬುಕ್ ಸಂಸ್ಥೆಯ `ಮೆಟಾ’ದಿಂದ ರಷ್ಯಾದ ಎಲ್ಲ ಪ್ರಸಾರ ಮಾಧ್ಯಮಗಳಿಗೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್‍ನಲ್ಲಿ ಜಾಹೀರಾತು ನೀಡಲು ನಿರ್ಬಂಧ
10. ಯೂಟ್ಯೂಬ್ ನಿಂದ ರಷ್ಯಾದ ರಾಜ್ಯಮಾಧ್ಯಮ `ಆರ್ ಟಿ’ಯೊಂದಿಗೆ ಅನೇಕ ವಾಹಿನಿಗಳ ಮೇಲೆ ನಿರ್ಬಂಧ
11. ಉತ್ತರ ಕೊರಿಯಾವು ಯುಕ್ರೇನ್ ಯುದ್ಧಕ್ಕೆ ಅಮೇರಿಕ ಜವಾಬ್ದಾರವಾಗಿದೆ ಎಂದು ಹೇಳುತ್ತ `ಅಮೇರಿಕ ಮೊದಲು ಮಹಾಶಕ್ತಿಯಾಗಿತ್ತು, ಈಗ ಆ ದಿನಗಳಿಲ್ಲ’ ಎಂದು ಹೇಳಿತು.
12. ರಷ್ಯಾದ ಆಕ್ರಮಣದಲ್ಲಿ ಇಲ್ಲಿಯವರೆಗೆ 198 ಜನರು ಸಾವನ್ನಪ್ಪಿರುವ ಮಾಹಿತಿಯನ್ನು ಯುಕ್ರೇನ್ ನೀಡಿದ್ದು ಅದರಲ್ಲಿ 33 ಮಕ್ಕಳೂ ಸೇರಿದ್ದಾರೆ. ಇದರೊಂದಿಗೆ 1 ಸಾವಿರದ 115 ಜನರು ಗಾಯಗೊಂಡಿದ್ದಾರೆ.