ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚೀನಾವನ್ನು ಮರಳಿ ಪಡೆಯಲು ಭಾರತ ಆಕ್ರಮಣಕಾರಿಯಾಗಬೇಕು!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಜಗತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ೫ ನಿಮಿಷಗಳಲ್ಲಿ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿತು. ರಷ್ಯಾದ ಸೇನಾ ಸಾಮರ್ಥ್ಯದ ದೃಷ್ಟಿಯಿಂದ ನೋಡಿದರೆ ಉಕ್ರೇನ್ ಹೆಚ್ಚು ಕಾಲ ಉಳಿಯುವುದು ಅಸಂಭವವೆಂದು ಅನಿಸುವುದಿಲ್ಲ. ರಶಿಯಾ ತನಗೆ ಬೇಕಾದುದನ್ನು ಪಡೆಯಲು ಎಂದಿಗೂ ‘ಅಮೇರಿಕಾಗೆ ಏನು ಅನಿಸಬಹುದು?’ ಅಥವಾ ‘ಯುರೋಪಿಯನ್ ದೇಶಗಳು ಏನು ಯೋಚಿಸುತ್ತವೆ?’ ಎಂಬ ಬಗ್ಗೆ ಚಿಂತಿಸಲಿಲ್ಲ. ರಷ್ಯಾ ಒಂದು ಗುರಿಯನ್ನು ನಿಗದಿಪಡಿಸಿ, ಅದನ್ನು ಸಾಧಿಸಲು ಕ್ರಮಗಳನ್ನು ಮುಂದುವರಿಸಿತು. ಸಾಂಸ್ಕೃತಿಕವಾಗಿ, ಭಾಷಿಕವಾಗಿ ಮತ್ತು ರಾಜಕೀಯವಾಗಿ ಉಕ್ರೇನ್ ರಷ್ಯಾದ ಭಾಗವಾಗಿದೆ ಎಂದು ಪುತಿನ್ ಬಹಳ ಹಿಂದೆಯೇ ಆಗಾಗ ಹೇಳಿದ್ದಾರೆ. ಆದ್ದರಿಂದ ಉಕ್ರೇನ್ ಮೇಲೆ ಯಾವಾಗಲೂ ’ರಷ್ಯಾ’ ಎಂಬ ತೂಗುಗತ್ತಿ ನೇತಾಡುತ್ತಿತ್ತು. ಉಕ್ರೇನ್ ನ್ಯಾಟೋಗೆ ಸೇರಲು ಹೆಜ್ಜೆ ಇಟ್ಟಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧವು ಮತ್ತಷ್ಟು ಹದಗೆಟ್ಟಿತು, ಇದು ಯುದ್ಧಕ್ಕೆ ಕಾರಣವಾಯಿತು. ಉಕ್ರೇನ್‌ನಲ್ಲಿ, ರಷ್ಯನ್ ಭಾಷೆ ಮಾತನಾಡುವ ಜನರು ರಷ್ಯಾವನ್ನು ಸೇರಲು ಬಯಸುತ್ತಾರೆ, ಆದರೆ ಉಕ್ರೇನಿಯನ್ ಭಾಷೆ ಮಾತನಾಡುವ ಜನರು ಯುರೋಪಿಯನ್ ದೇಶಗಳೊಂದಿಗೆ ವ್ಯಾಪಾರ ಮತ್ತು ಯುದ್ಧತಂತ್ರದ ಸಂಬಂಧಗಳನ್ನು ವಿಸ್ತರಿಸಲು ಬಯಸುತ್ತಾರೆ. ರಷ್ಯಾ ಎರಡು ಉಕ್ರೇನಿಯನ್ ಪ್ರಾಂತ್ಯಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ‘ರಾಷ್ಟ್ರಗಳು’ ಎಂದು ಮಾನ್ಯತೆ ನೀಡಿತು. ‘ರಷ್ಯಾ ಇಷ್ಟಕ್ಕೆ ನಿಲ್ಲುತ್ತದೆ’ ಎಂದು ಭಾವಿಸುವಾಗಲೇ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿತು. ಪುತಿನ್ ಇವರಿಗೆ ಉಕ್ರೇನ್ ಅನ್ನು ನಿಶ್ಯಸ್ತ್ರಗೊಳಿಸಬೇಕಾಗಿದೆ. ಪುತಿನ್ ಅವರ ಯುದ್ಧದ ಮನೋಭಾವವನ್ನು ಬೆಂಬಲಿಸುವುದು ತಪ್ಪು; ಆದರೆ, ಉಕ್ರೇನ್ ಮೇಲೆ ದಾಳಿ ಮಾಡುವ ಅವರ ನಿರ್ಧಾರದಿಂದ ‘ನಾವು ಜಗತ್ತಿನ ಪಾಲಕರಾಗಿದ್ದೇವೆ’, ಎಂಬ ಹುಂಬತನದಿಂದಿದ್ದ ಅಮೆರಿಕಾ ಸೇರಿದಂತೆ ಹಲವು ಐರೋಪ್ಯ ರಾಷ್ಟ್ರಗಳ ನಿಜ ಸ್ವರೂಪವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಪುತಿನ್ ಇವರ ಯುದ್ಧ ತಂತ್ರ!
೧೯೯೧ ರಲ್ಲಿ, ‘ಸೋವಿಯತ್ ರಷ್ಯಾ’ದ ವಿಭಜನೆಯಾಯಿತು. ರಷ್ಯಾದ ವಿಘಟನೆಯ ನಂತರ ಅಮೇರಿಕಾ ವಿಶ್ವದ ಏಕೈಕ ಬಲಿಷ್ಠರಾಷ್ಟ್ರವಾಯಿತು; ಆದರೆ ಅಮೇರಿಕಾ ಮತ್ತು ರಷ್ಯಾ ನಡುವಿನ ಶೀತಲ ಸಮರ ಅಲ್ಲಿಗೆ ಕೊನೆಗೊಳ್ಳಲಿಲ್ಲ. ವ್ಲಾದಿಮಿರ್ ಪುತಿನ್ ಏಕಪಕ್ಷೀಯವಾಗಿ ಅಧಿಕಾರದ ಗದ್ದುಗೆ ಏರಿದ ನಂತರ ರಷ್ಯಾ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯುವ ಕನಸು ನನಸಾಗತೊಡಗಿತು. ‘ಅಮೆರಿಕ ಹೇಳಿದ್ದೇ ಪೂರ್ವದಿಕ್ಕು’ ಎಂಬ ಸ್ಥಿತಿ ಇರುವ ಜಗತ್ತಿನಲ್ಲಿ ಅಮೇರಿಕಾಗೆ ಹುಬ್ಬೇರಿಸುವ ದಿಟ್ಟತನವನ್ನು ಪುತಿನ್ ತೋರಿಸಿದ್ದಾರೆ. ಉಕ್ರೇನ್ ಮೇಲೆ ಹೇಗೆ ಪ್ರಾಬಲ್ಯ ಸಾಧಿಸಬಹುದು ? ಎಂಬುದಕ್ಕಾಗಿ ಪುತಿನ್ ಯಾವಾಗಲೂ ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು ಜಗತ್ತಿನ ಯಾವುದೇ ಮಹಾಶಕ್ತಿಗಳಿಗೆ ಬಗ್ಗಲಿಲ್ಲ.
‘ಪುತಿನ್ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ?’, ಎಂಬುದನ್ನು ಅರಿಯುವುದು ಕಠಿಣವಾಗಿದೆ. ಹಾಗಾಗಿ ‘ರಷ್ಯಾ-ಉಕ್ರೇನ್ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ?’ ಎಂಬುದನ್ನು ಅರಿತುಕೊಳ್ಳುವುದು ಕಠಿಣವಾಗಿದೆ. ರಷ್ಯಾ ಇಲ್ಲಿಯವರೆಗೆ ಚಾಲನೆಯಲ್ಲಿ ತಂದ ನೀತಿಗಳು ಅದರ ವಿರೋಧಿಗಳಿಗೆ ತಿಳಿದಿಲ್ಲ ಅಥವಾ ‘ರಷ್ಯಾ ಇಂತಹದೇನಾದರೂ ಮಾಡಬಹುದು’ ಎಂದು ಯಾರೂ ಭಾವಿಸಿರಲಿಲ್ಲ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಸಾರಿದಾಗ, ‘ಜೋ ಬೈಡೆನ್ ವಿರುದ್ಧ ಪುತಿನ್’ ಈ ರೀತಿ ಸಮರವಾಗುವುದು, ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಊಹಿಸಿದ್ದರು. ಆದರೂ ಸದ್ಯಕ್ಕೆ, ಪುತಿನ್ ಬೈಡೆನ್ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುತ್ತಿರುವಂತೆ ತೋರುತ್ತಿದೆ. ಇದಕ್ಕೆ ಪ್ರತ್ಯುತ್ತರ ನೀಡುವಾಗ, ಅಮೇರಿಕಾ ‘ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುವುದು’ ಇತ್ಯಾದಿ ಭಾಷಣ ಬಿಗಿಯುವುದನ್ನು ಹೊರತುಪಡಿಸಿ ಬೇರೆ ಏನನ್ನೂ ಮಾಡಿಲ್ಲ. ಹಾಗಾಗಿ ಅಮೇರಿಕಾ ರಷ್ಯಾಕ್ಕೆ ಪಾಠ ಕಲಿಸುವುದೇ? ಅಥವಾ ಕೇವಲ ಮೂಕ ಪ್ರೇಕ್ಷಕರ ನಿಲುವನ್ನು ತೆಗೆದುಕೊಳ್ಳುವುದೇ? ಎಂಬುದನ್ನು ಕಾಲವೇ ಉತ್ತರಿಸುತ್ತದೆ.
ಬಲಿಷ್ಠ ನಾಯಕತ್ವ ಬೇಕು!
ಜಾಗತಿಕ ಹಿತಕ್ಕಾಗಿ ನ್ಯಾಟೋ, ವಿಶ್ವ ಸಂಸ್ಥೆಗಳು, ಜಿ-೨೦ ಮುಂತಾದ ಅನೇಕ ಸಂಸ್ಥೆಗಳು ಪ್ರಸ್ತುತ ಕಾರ್ಯನಿರತವಾಗಿವೆ. ಉಕ್ರೇನ್‌ಗಾಗಿ ಈ ಸಂಸ್ಥೆಗಳು ಏನು ಮಾಡಿದವು? ಒಂದು ವೇಳೆ ಯುದ್ಧ ನಡೆದರೆ ನಾವು ಉಕ್ರೇನ್‌ಗೆ ಸಹಾಯ ಮಾಡುತ್ತೇವೆ ಎಂದು ಎಲ್ಲರೂ ಆಶ್ವಾಸನೆ ನೀಡಿದರು. ಆದರೆ ಅದರ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ. ಇದರಿಂದ ಇಂತಹ ಸಂಸ್ಥೆಗಳ ಜಾಗತಿಕ ಸ್ತರದಲ್ಲಿ ಯಾವುದೇ ಉಪಯೋಗವಿಲ್ಲ ಎಂದು ಗಮನಕ್ಕೆ ಬರುತ್ತದೆ. ಇದರಿಂದ ಯಾವಾಗ ಯಾವುದಾದರೊಂದು ರಾಷ್ಟ್ರವು ಬಿಕ್ಕಟ್ಟನ್ನು ಎದುರಿಸಿದಾಗ, ಅದು ತನ್ನದೇ ಆದ ರಕ್ಷಣೆಯ ಏರ್ಪಾಡನ್ನು ಮಾಡಿಕೊಳ್ಳಬೇಕಾಗುತ್ತದೆ. ಬೇರೆ ದೇಶಗಳ ಮೇಲೆ ಅವಲಂಬಿಸಿದರೆ ಉಕ್ರೇನ್ ನಂತೆಯೇ ಗತಿಯಾಗುವುದು ಎಂಬುದನ್ನು ಈ ಯುದ್ಧವು ತೋರಿಸಿಕೊಟ್ಟಿದೆ.
ಬಲಿಷ್ಠ ನಾಯಕತ್ವ ಮತ್ತು ಸ್ವಯಂಸಿದ್ಧ ರಾಷ್ಟ್ರವಿದ್ದರೆ ಏನಾಗಬಹುದು? ಇದು ರಷ್ಯಾದ ನಿಲುವಿನಿಂದ ಸ್ಪಷ್ಟವಾಗಿದೆ. ರಷ್ಯಾ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲವನ್ನು ಪೂರೈಸುತ್ತದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ, ಜರ್ಮನಿಯು ‘ನಾರ್ಡ್ ಸ್ಟ್ರೀಮ್ ೨’ ಅನಿಲವಾಹಿನಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ರಷ್ಯಾವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿತು; ಆದರೆ ರಷ್ಯಾ ಅದರಲ್ಲಿ ಸಿಲುಕಲಿಲ್ಲ; ಏಕೆಂದರೆ ರಷ್ಯಾ ಐರೋಪ್ಯ ರಾಷ್ಟ್ರಗಳಿಗೆ ನೈಸರ್ಗಿಕ ಅನಿಲ ಪೂರೈಕೆ ನಿಲ್ಲಿಸಿದರೆ ಐರೋಪ್ಯ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಲಿವೆ. ಇದರಿಂದ ‘ಯಾವ ದೇಶ ಇಂಧನ ಮತ್ತು ಇತರ ವಿಷಯಗಳಲ್ಲಿ ಸ್ವಾವಲಂಬಿಯಾಗಿದೆಯೋ, ಅದೇ ಜಗತ್ತನ್ನು ಆಳುತ್ತದೆ ಎಂಬುದು ಸಿದ್ಧವಾಗುತ್ತದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಲಾಭವನ್ನು ಪಡೆದುಕೊಂಡು ಚೀನಾದ ಯುದ್ಧ ವಿಮಾನಗಳು ತೈವಾನ್ ಮೇಲೆ ಹಾರಿದವು. ಚೀನಾ ತೈವಾನ್‌ಅನ್ನು ಕಬಳಿಸಲು ಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಮತ್ತೊಂದೆಡೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವಾಗಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ರಷ್ಯಾದಲ್ಲಿದ್ದು ರಷ್ಯಾ ದಾಳಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ನಾನು ನಿರ್ಣಾಯಕ ಸಮಯದಲ್ಲಿ ಇಲ್ಲಿದ್ದೇನೆ ಮತ್ತು ನಾನು ಬಹಳ ಉತ್ಸುಕನಾಗಿದ್ದೇನೆ’ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತ ಪಡಿಸಿದರು. ಆರ್ಥಿಕ ಸ್ಥಿತಿ ಚಿಂತಾಜನಕವಾಗಿರುವ ಮತ್ತು ಭಾರತದ ವಿರುದ್ಧ ಪದೇ ಪದೇ ಯುದ್ಧದಲ್ಲಿ ಸೋತಿರುವ ರಾಷ್ಟ್ರವಾದ ಪಾಕಿಸ್ತಾನವು ರಷ್ಯಾದ ಆಕ್ರಮಣದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವುದು ಆಶ್ಚರ್ಯಕರವಾಗಿದೆ.
ಕಸುವುಳ್ಳವನೇ ಕಿವಿಹಿಂಡುವನು (ಬಳಿ ತೊ ಕಾನ ಪಿಳೀ’,) ಇದು ಜಗದ ನಿಯಮವಾಗಿದೆ. ಆದುದರಿಂದ ‘ಅಮೇರಿಕಾ ಏನು ಹೇಳುತ್ತದೆ?’, ‘ನ್ಯಾಟೋ ಏನು ಹೇಳುತ್ತದೆ?’ ಎಂದು ಯೋಚಿಸದೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಭಾರತವು ಪ್ರಯತ್ನಿಸುವುದು ಅಗತ್ಯವಾಗಿದೆ. ಭಾರತದ ದೃಷ್ಟಿಯಿಂದ, ಹಿಂದಿನ ರಾಜರು ಚಕ್ರವರ್ತಿಯಾಗಿದ್ದರು ಮತ್ತು ಇಡೀ ಭೂಮಿಯ ಮೇಲೆ ಆಳ್ವಿಕೆ ನಡೆಸಿದರು. ಬ್ರಿಟಿಶರ ಆಳ್ವಿಕೆಯಲ್ಲಿ, ಪಾಕಿಸ್ತಾನ, ಭೂತಾನ್ ಮತ್ತು ನೇಪಾಳ ಸೇರಿದಂತೆ ಭಾರತವು ಸಹ ಬಹಳ ಕೀಳು ದರ್ಜೆಯ ಸಂಕಟಗಳನ್ನು ಅನುಭವಿಸಬೇಕಾಯಿತು ಚೀನಾ ಮತ್ತು ಪಾಕಿಸ್ತಾನ ಇವುಗಳಿಗೆ ಏಕಕಾಲದಲ್ಲಿ ಪಾಠ ಕಲಿಸಬೇಕಿದ್ದರೆ ಭಾರತವು ಸ್ವಯಂಸಿದ್ಧವಾಗುವುದು ಅನಿವಾರ್ಯವಾಗಿದೆ. ಇದರಿಂದ ಭಾರತವು ಗತವೈಭವವನ್ನು ಪಡೆಯಲು ಸಾಧ್ಯವಾಗುತ್ತದೆ!