ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಖಂಡನೀಯ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು – ಹಿಂದೂ ಜನಜಾಗೃತಿ ಸಮಿತಿ
ನವ ದೆಹಲಿ – 20 ಫೆಬ್ರವರಿಯಂದು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ, 26 ವರ್ಷದ ಹರ್ಷ ಇವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. 2 ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕ ಮುಕ್ರಂ ಖಾನ್ ಇವರು ಹಿಜಾಬ್ ನ ಪರವಾಗಿ ಪ್ರತಿಕ್ರಿಯಿಸುತ್ತಾ ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದರು. ಹಿಜಾಬ್ ಪ್ರಕರಣದ ಬೆನ್ನಲ್ಲೇ ರಾಜ್ಯದ ದಾವಣಗೆರೆ, ನಲ್ಲೂರು, ಕುಶಾಲ ನಗರ, ಮಂಗಳೂರು ಇನ್ನೂ ಹಲವಾರು ಕಡೆಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು, ಆಕ್ರಮಣಗಳು ಹೆಚ್ಚುತ್ತಿವೆ. ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ 14 ಫೆಬ್ರವರಿಗೆ ಹಿಂದೂ ಸಂಘಟನೆಗಳು ಗೃಹ ಸಚಿವರನ್ನು ಭೇಟಿ ಮಾಡಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕು ಎಂದು ಬೇಡಿಕೆ ಸಲ್ಲಿಸಿದ್ದವು.
ಮೊದಲಿನಿಂದಲೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಮತಾಂಧ ಸಂಘಟನೆಗಳು ಅತ್ಯಂತ ಹಿಂಸಕ ರೀತಿಯಲ್ಲಿ ಮಾತನಾಡುತ್ತಿವೆ. ಇಂದು ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಮತಾಂಧರು ಹಿಜಾಬ್ ವಿಷಯದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿ ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಈ ರೀತಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಭಂಗ ತರುವಂತಹ ಕೃತ್ಯಗಳು ನಡೆಯುತ್ತಿವೆ. ಇದರ ಹಿಂದೆ ಈ ಮತಾಂಧ ಸಂಘಟನೆಗಳ ಕೈವಾಡವಿದೆ.
ಉದ್ರೇಕಕಾರಿ ಹೇಳಿಕೆ ನೀಡಿದ ಮುಕ್ರಂ ಖಾನ್ ನನ್ನು ಇದುವರೆಗೆ ಬಂಧಿಸಿಲ್ಲ, ಅವರಿಂದ ಪ್ರೇರಣೆ ಪಡೆದೇ ಈ ಹತ್ಯೆಯು ನಡೆದಿರುವ ಆರೋಪ ಕೇಳಿಬರುತ್ತಿದೆ. ಇವರಿಗೆ ನ್ಯಾಯಾಂಗದ ಮೇಲೆ ವಿಶ್ವಾಸವಿಲ್ಲ, ನ್ಯಾಯಾಲಯದ ಆದೇಶದ ಬಗ್ಗೆ ಬೆಲೆ ಇಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಕಠೋರವಾಗಿ ಪರಿಗಣಿಸಬೇಕು, ಸಂಬಂಧಿತ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಮುಕ್ರಾಂ ಖಾನ್ ನನ್ನು ಸಹ ಕೂಡಲೇ ಬಂಧಿಸಬೇಕು ಹಾಗೂ ಹರ್ಷ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.