ಲಡಾಖ್ ನಲ್ಲಿ ಚೀನಾದಿಂದ ಗಡಿ ವಿಷಯದ ಒಪ್ಪಂದದ ಉಲ್ಲಂಘನೆ ನಡೆಯುತ್ತಿದೆ ! – ಭಾರತ

ಭಾರತವು ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು ! – ಸಂಪಾದಕರು 

ವಿದೇಶಾಂಗ ಸಚಿವ ಎಸ್. ಜಯಶಂಕರ

ಮ್ಯಾನಿಚ (ಜರ್ಮನಿ) – ಚೀನಾದಿಂದ ಭಾರತ ಮತ್ತು ಚೀನಾದ ನಡುವಿನ ಲಡಾಖ್‍ನಲ್ಲಿನ ಗಡಿ ಒಪ್ಪಂದದ ಪಾಲನೆ ಆಗುತ್ತಿಲ್ಲ. ಭಾರತದ ಚೀನಾದ ಜೊತೆ ಇರುವ ದ್ವಿಪಕ್ಷೀಯ ಸಂಬಂಧ ಎಲ್ಲಕ್ಕಿಂತ ಕಠಿಣ ಪರಿಸ್ಥಿತಿಯಲ್ಲಿ ಹಾದುಹೋಗುತ್ತಿದೆ, ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಇಲ್ಲಿಯ ರಕ್ಷಣಾ ಪರಿಷತ್ತಿನಲ್ಲಿ ಹೇಳಿದರು.

ಜಯಶಂಕರ ತಮ್ಮ ಮಾತನ್ನು ಮುಂದುವರೆಸುತ್ತಾ, 1975 ರಿಂದ ಸರಾಸರಿ 45 ವರ್ಷ ಭಾರತ ಮತ್ತು ಚೀನಾ ಇವರ ಗಡಿಯಲ್ಲಿ ಶಾಂತತೆ ಇತ್ತು. ಗಡಿ ವ್ಯವಸ್ಥೆಯು ಸ್ಥಿರವಾಗಿತ್ತು. ಸೈನಿಕರ ಜೀವಹಾನಿ ನಡೆದಿರಲಿಲ್ಲ; ಆದರೆ ಈಗ ಹಾಗೆ ನಡೆಯುತ್ತಿಲ್ಲ. ಭಾರತವು ಚೀನಾದ ಗಡಿಯಲ್ಲಿ ಅಥವಾ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಸೈನ್ಯ ನೇಮಿಸದಿರುವ ಒಪ್ಪಂದ ನಡೆದಿತ್ತು; ಆದರೆ ಈಗ ಚೀನಾ ಈ ಒಪ್ಪಂದದ ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿದರು.