ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಉಪಯೋಗಿಸುತ್ತಿರುವ ‘ಲ್ಯಾಪಟಾಪ್’ನ ‘ಸ್ಟಿಕ್ಕರ್’ನ ಮೇಲೆ ಬಿದ್ದ ಪ್ರಕಾಶದಿಂದ ‘ಓಂ’ನ ಪ್ರತಿಬಿಂಬ ಪ್ರತಿಫಲಿಸುವುದು

(ಸದ್ಗುರು) ಡಾ. ಮುಕುಲ ಗಾಡಗೀಳ

 

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಸಾಧನೆಯಿಂದ ಆಧ್ಯಾತ್ಮಿಕ ಪ್ರಗತಿಯಾದಂತೆ ವ್ಯಕ್ತಿಯ ಶರೀರ ಮತ್ತು ಅವರು ಬಳಸುವ ವಸ್ತುಗಳಲ್ಲಿಯೂ ದೈವೀ ಬದಲಾವಣೆಗಳು ಕಂಡು ಬರುತ್ತವೆ. ಈ ದೈವೀ ಬದಲಾವಣೆಗಳು ವ್ಯಕ್ತಿಯಲ್ಲಿ ಹೆಚ್ಚುತ್ತಿರುವ ದೇವತ್ವವನ್ನು ತೋರ್ಪಡಿಸುತ್ತದೆ. ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಬಳಸುವ ‘ಲ್ಯಾಪಟಾಪ್’ ಮೇಲಿನ ಸ್ಟಿಕ್ಕರ ಮೇಲೆ ಬೀಳುತ್ತಿದ್ದ ಪ್ರಕಾಶದ ಸ್ವರೂಪವು ‘‘ನಂತೆ ಪ್ರತಿಫಲಿಸಿದ ಹಿಂದಿನ ಶಾಸ್ತ್ರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ‘ಲ್ಯಾಪ್‌ಟಾಪ್’ನ ಎಡಬದಿಯ ಸ್ಟಿಕರ್‌ನಿಂದ ಪಕ್ಕದ ಸಂಚಾರಿವಾಣಿ ಮೇಲೆ ಬಿದ್ದ ‘ಓಂ’ರೂಪದ ಪ್ರತಿಬಿಂಬ (ಗೋಲದಲ್ಲಿ ದೊಡ್ಡದು ಮಾಡಲಾಗಿದೆ)

 

‘ಲ್ಯಾಪ್‌ಟಾಪ್’ನ ಸ್ಟಿಕರ್ ಮೇಲೆ ಬಿದ್ದ ಪ್ರಕಾಶವು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಕೈ ಮೇಲೆ ‘ಓಂ’ನ ಆಕಾರದಲ್ಲಿ ಮೂಡಿದ ಪ್ರತಿಬಿಂಬ (ಗೋಲದಲ್ಲಿ ದೊಡ್ಡದು ಮಾಡಲಾಗಿದೆ)

ಜುಲೈ ೩ ರಿಂದ ೧೩, ೨೦೨೦ ಈ ಕಾಲಾವಧಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕರ್ನಾಟಕದ ಮೂಲ್ಕಿಯ ಸೇವಾ ಕೇಂದ್ರದಲ್ಲಿ ವಾಸ್ತವ್ಯದಲ್ಲಿದ್ದರು. ೧೨.೭.೨೦೨೦ ರಂದು ಅವರು ತಮ್ಮ ‘ಲ್ಯಾಪ್‌ಟಾಪ್’ನಲ್ಲಿ ಸೇವೆ ಮಾಡುತ್ತಿದ್ದರು.

ಪ್ರತಿನಿತ್ಯ ಉಪಯೋಗಿಸುವ ಅವರ ಆ ‘ಲ್ಯಾಪ್‌ಟಾಪ್’ನ ಎಡಭಾಗದಲ್ಲಿ ಒಂದು ಬೆಳ್ಳಿಯ ‘ಸ್ಟಿಕ್ಕರ್’ ಇದ್ದೂ ಅದರ ಮೇಲೆ ‘ಲ್ಯಾಪ್‌ಟಾಪ್’ನ ಮಾಹಿತಿ ಬರೆದಿದೆ; ಆದರೆ ಈಗ ಅದು ಅಳಿಸಿ ಹೋಗಿದೆ.  ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸೇವೆ ಮಾಡುವಾಗ ಎಡಗೈಯ ಮೊಣಕೈಯನ್ನು ‘ಲ್ಯಾಪ್‌ಟಾಪ್’ನ ಪಕ್ಕದಲ್ಲಿ ಇಟ್ಟು ಕೈಯನ್ನು ಮೇಲಿನ ದಿಕ್ಕಿನಲ್ಲಿ ಇಟ್ಟಿದ್ದರು. ಆ ಸಮಯದಲ್ಲಿ ಅವರ ಮೊಣಕೈಯಿಂದ ಮಣಿಕಟ್ಟಿನ ವರೆಗೆ ‘ಲ್ಯಾಪ್‌ಟಾಪ್’ ಮೇಲಿನ ಬೆಳ್ಳಿಯ ‘ಸ್ಟಿಕ್ಕರ್’ನ ಪ್ರತಿಬಿಂಬ ‘‘ ನ ಸ್ವರೂಪದಲ್ಲಿ ಪ್ರತಿಫಲಿಸುತ್ತಿರುವುದು ಕಂಡು ಬಂದಿತು. ಆಗ ಅದರ ಛಾಯಾಚಿತ್ರವನ್ನು ತೆಗೆಯಲಾಯಿತು. ಈ ‘‘ ನ ವೈಶಿಷ್ಟ್ಯವೆಂದರೆ ಪ್ರತ್ಯಕ್ಷ ‘ಸ್ಟಿಕ್ಕರ್’ ಮೇಲೆ ಅದು ಕಾಣಿಸುವುದಿಲ್ಲ; ಆದರೆ ‘ಸ್ಟಿಕ್ಕರ್’ ಮೇಲೆ ಪ್ರಕಾಶ ಬಿದ್ದೊಡನೆ ಅದು ನಮ್ಮ ಕೈ, ಸಂಚಾರವಾಣಿ ಹೀಗೆ ಯಾವುದೇ ವಸ್ತುಗಳ ಮೇಲೆ ‘‘ ನ ರೂಪದಲ್ಲಿಯೇ ಪ್ರತಿಫಲಿಸುತ್ತದೆ. ಇದರಿಂದ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗೈಯು ಲ್ಯಾಪ್‌ಟಾಪ್‌ಗೆ ನಿರಂತರವಾಗಿ ಸ್ಪರ್ಶವಾದುದರಿಂದ ಆ ಸ್ಥಾನದಲ್ಲಿ ‘ಕಾರದ ತತ್ತ್ವ ಜಾಗೃತವಾಗಿ ಆ ತತ್ತ್ವವು ಸ್ಥೂಲದಲ್ಲಿ ಪ್ರತಿಬಿಂಬದ ರೂಪದಲ್ಲಿ ಗೋಚರಿಸುತ್ತಿದೆ.

‘ಲ್ಯಾಪ್‌ಟಾಪ್’ ಮೇಲಿನ ಬೆಳ್ಳಿಯ ‘ಸ್ಟಿಕ್ಕರ್’ ಮೇಲೆ ಬಿದ್ದ ಪ್ರಕಾಶದ ಪ್ರತಿಬಿಂಬವು ‘‘ ನ ರೂಪದಲ್ಲಿ ಗೋಚರಿಸಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಅದನ್ನು ನಿಯಮಿತವಾಗಿ ಉಪಯೋಗಿಸುತ್ತಿರುವುದೇ ಕಾರಣವಾಗಿದೆ. ‘ಲ್ಯಾಪ್‌ಟಾಪ್’ನಲ್ಲಿ ಬೆರಳಚ್ಚು ಮಾಡುವಾಗ ಅವರ ಎಡಗೈಗೆ ಯಾವಾಗಲೂ ಆ ಬೆಳ್ಳಿಯ ‘ಸ್ಟಿಕ್ಕರ’ ಸ್ಪರ್ಶಿಸುತ್ತಿರುತ್ತದೆ. ಶ್ರೀಚಿತ್‌ಶಕ್ತಿ (ಸೌ.)ಅಂಜಲಿ ಇವರು ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ಪರಾತ್ಪರ ಗುರು ಡಾ. ಆಠವಲೆ ಇವರ ‘ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದಾರೆ’ ಜೊತೆಗೆ ಶ್ರೀ ಮಹಾಲಕ್ಷ್ಮೀ ದೇವಿಯ ಅಂಶವೇ ಆಗಿದ್ದಾರೆ. ಇದರಿಂದ ‘ಅವರು ಅಧ್ಯಾತ್ಮದಲ್ಲಿ ಉನ್ನತರಾಗಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ. ಹಾಗಾಗಿ ಅವರ ಸ್ಪರ್ಶದಿಂದ ಅವರು ಸೇವೆಗಾಗಿ ಬಳಸುವ ‘ಲ್ಯಾಪ್ ಟಾಪ್’ನ ‘ಸ್ಟಿಕ್ಕರ್’ನ ಪ್ರತಿಬಿಂಬ ‘‘ ನ ರೂಪದಲ್ಲಿ ಪ್ರತಿಫಲಿಸುತ್ತದೆ. ಓಂಕಾರವನ್ನು ಪರಿಪೂರ್ಣತ್ವದ ಲಕ್ಷಣ ಎನ್ನಲಾಗುತ್ತದೆ.  ಶ್ರೀಚಿತ್‌ಶಕ್ತಿ  (ಸೌ.) ಅಂಜಲಿ ಇವರಲ್ಲಿನ ಪರಿಪೂರ್ಣತ್ವದ ಪರಿಚಯವನ್ನು ಓಂಕಾರವು ಮಾಡಿಕೊಟ್ಟಿತು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೧೨.೨೦೨೧)

ತಜ್ಞ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಲ್ಲಿ ವಿನಂತಿ !

‘ಸಂತರ ಶರೀರ ಮತ್ತು ಅವರು ಉಪಯೋಗಿಸುವ ವಸ್ತುಗಳಲ್ಲಿ ಬುದ್ಧಿಗೆ ನಿಲುಕದ ಬದಲಾವಣೆಯ ಕಾರಣವನ್ನು ಕಂಡುಹಿಡಿಯಲು ಸಾಧಕರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ’ ಇವರು ಉಪಯೋಗಿಸುತ್ತಿರುವ ‘ಲ್ಯಾಪ್‌ಟಾಪ್’ನ ‘ಸ್ಟಿಕ್ಕರ್’ ಮೇಲೆ ಬೀಳುವ ಪ್ರಕಾಶದ ಪ್ರತಿಬಿಂಬ ‘‘ ನ ರೂಪದಲ್ಲಿ ಗೋಚರಿಸಲು ಏನು ಕಾರಣ ? ಈ ಬಗ್ಗೆ ತಜ್ಞ, ಅಧ್ಯಯನಕಾರರು, ಈ ಬಗ್ಗೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ವೈಜ್ಞಾನಿಕವಾಗಿ ಸಂಶೋಧನೆ ಮಾಡಲು ಸಹಾಯ ಸಿಕ್ಕಿದರೆ ನಾನು ಆಭಾರಿಯಾಗಿರುತ್ತೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ

ಸಂಪರ್ಕ : ಶ್ರೀ. ರೂಪೇಶ ರೇಡಕರ

ವಿ-ಅಂಚೆ ವಿಳಾಸ : [email protected]