ಬಾಟ್ಲಿಬಂದ್ ನೀರನ್ನೇ ಅವಲಂಬಿಸಿಕೊಂಡಿರುವುದು ಅಪಾಯಕಾರಿಯಾಗಿದೆ !

‘ಇಂದಿನ ವರೆಗೆ ಬಂದ್ ಬಾಟ್ಲಿಯಲ್ಲಿ ಕುಡಿಯಲು ಕೊಡುವ ನೀರನ್ನು ಸಾಮಾನ್ಯ ನೀರಿನ ತುಲನೆಯಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಸುರಕ್ಷಿತವೆಂದು ತಿಳಿಯಲಾಗುತ್ತಿತ್ತು; ಆದರೆ ಒಂದು ಹೊಸ ಸಮೀಕ್ಷೆಯ ನಂತರ ಗಮನಕ್ಕೆ ಬಂದ ವಿಷಯವೆಂದರೆ, ರಾಜಧಾನಿ ದೆಹಲಿಯಲ್ಲಿ ವಿವಿಧ ‘ಬ್ರ್ಯಾಂಡ್’ನ ಕುಡಿಯುವ ನೀರಿನ ಬಂದ್ ಬಾಟ್ಲಿಗಳನ್ನು ಮಾರಾಟ ಮಾಡಲಾಗುತ್ತದೆ. ಅವುಗಳೆಲ್ಲವೂ ಶರೀರಕ್ಕೆ ಹಾನಿಕರವಾಗಿವೆ. ಈ ನೀರಿನ ಗುಣಮಟ್ಟವು ಅದನ್ನು ಶುದ್ಧ ಮಾಡಲು ಉಪಯೋಗಿಸುವ ರಾಸಾಯನಿಕದಿಂದ ನಿರ್ಧರಿಸಲ್ಪಡುತ್ತದೆ. ಭಾರತೀಯ ಅಭ್ಯಾಸದ ಹೊರತು ಅಂತರರಾಷ್ಟ್ರೀಯ ಸಂಸ್ಥೆಗಳು ಈ ವಿಷಯದಲ್ಲಿ ಮಾಡಿದ ಅಭ್ಯಾಸದಿಂದಲೂ ಸ್ಪಷ್ಟವಾದುದೇನೆಂದರೆ, ನಲ್ಲಿಯಿಂದ ಬರುವ ನೀರಿನ ತುಲನೆಯಲ್ಲಿ ಬಂದ್ ಬಾಟ್ಲಿಯಲ್ಲಿನ ನೀರು ಹೆಚ್ಚು ಮಲಿನ ಹಾಗೂ ಹಾನಿಕರವಾಗಿದೆ. ನದಿ ಮತ್ತು ಅಂತರ್ಜಲವೂ ಮಲಿನವಾಗಿರುವುದರಿಂದ ನೀರಿನಲ್ಲಿ ಅಪಾಯಕಾರಿ ಜೀವಾಣುಗಳು (ಬ್ಯಾಕ್ಟೇರಿಯಾ) ಹೆಚ್ಚಾಗುತ್ತಿವೆ. ಈ ಮೂಲಗಳನ್ನು ಮಾಲಿನ್ಯರಹಿತಗೊಳಿಸಲು ಯಾವುದೇ ಯೋಗ್ಯವಾದ ಪರಿಹಾರೋಪಾಯ ಮಾಡಲಾಗುತ್ತಿಲ್ಲ. ಅದರ ಬದಲು ಬಂದ್ ಬಾಟ್ಲಿಯಲ್ಲಿನ ನೀರಿನ ವ್ಯಾಪಾರ ವರ್ಷಕ್ಕೆ ೧೦೦೦೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗುತ್ತಿದೆ. ಲಭ್ಯ ಮಾಹಿತಿಯ ಆಧಾರದಲ್ಲಿ ಮಾಡಿದ ಅಭ್ಯಾಸದಿಂದ ಬಂದಿರುವ ಯೋಗ್ಯವಾದ ಮಾಹಿತಿ ಹೇಗಿದೆಯೆಂದರೆ, ದೇಶದ ಕೆಲವು ಭಾಗಗಳಲ್ಲಿ ಭೂಮಿಯ ಕೆಳಗಿನ ನೀರು ಕುಡಿಯಲು ಅಯೋಗ್ಯವಾಗಿದೆ. ಆದ್ದರಿಂದ ಬಂದ್ ಬಾಟ್ಲಿಯಲ್ಲಿನ ನೀರಿನ ವ್ಯಾಪಾರ ಆರಂಭವಾಗಿತ್ತು’.

೧. ಅಂತರ್ಜಲದ ಮಾಲಿನ್ಯದಿಂದ ಗಂಭೀರವಾದ ವ್ಯಾಧಿಗಳಾಗುವುದು

ಪಂಜಾಬನ ‘ಭಟಿಂಡಾ’ ಜಿಲ್ಲೆಯಲ್ಲಿ ಮಾಡಿದ ಒಂದು ಅಧ್ಯಯನದಿಂದ ಬೆಳಕಿಗೆ ಬಂದಿರುವ ಮಾಹಿತಿಯೆಂದರೆ, ಅಂತರ್ಜಲ ಹಾಗೂ ಮಣ್ಣಿನಲ್ಲಿ ತುಂಬಾ ಪ್ರಮಾಣದಲ್ಲಿ ವಿಷಯುಕ್ತ ರಾಸಾಯನಿಕಗಳು ಮಿಶ್ರಣವಾಗಿವೆ. ಈ ನೀರನ್ನು ಕುಡಿಯಲು ಉಪಯೋಗಿಸುವುದರಿಂದ ಈ ಜಿಲ್ಲೆಯ ಜನರು ಹೃದಯ ಹಾಗೂ ಪುಪ್ಪುಸದ ರೋಗಗಳಂತಹ ಗಂಭೀರ ವ್ಯಾಧಿಗೆ ತುತ್ತಾಗುತ್ತಿದ್ದಾರೆ. ಈ ಹಿಂದೆ ಉತ್ತರಪ್ರದೇಶ ಹಾಗೂ ಬಿಹಾರದ ಗಂಗಾ ನದಿಯ ತೀರದ ಪ್ರದೇಶದಲ್ಲಿ ಅಂತರ್ಜಲ ವಿಷಯುಕ್ತ ಆಗಿರುವುದು ಕಂಡುಬಂದಿತ್ತು. ‘ನರೌರಾ ಪರಮಾಣು’ ಕೇಂದ್ರ ಘಟಕದ ಅವಶೇಷವನ್ನು ಗಂಗಾ ನದಿಯಲ್ಲಿ ವಿಸರ್ಜಿಸಿ ಗಂಗೆಯ ನೀರನ್ನು ವಿಷಯುಕ್ತಗೊಳಿಸಲಾಗುತ್ತದೆ. ಕಾನ್ಪುರದ ೪೦೦ ಕ್ಕಿಂತಲೂ ಹೆಚ್ಚು ಕಾರ್ಖಾನೆಗಳಲ್ಲಿನ ಮಲಿನ ನೀರನ್ನು ಗಂಗಾನದಿಗೆ ಬಿಡಲಾಗುತ್ತಿದ್ದು ಅದರಿಂದ ನದಿಯು ಅತ್ಯಂತ ಮಲಿನವಾಗಿದೆ. ಗಂಗೆಗಿಂತಲೂ ಹೆಚ್ಚು ಭಯಂಕರ ಸ್ಥಿತಿ ಯಮುನಾ ನದಿಯದ್ದಾಗಿದೆ. ಆದ್ದರಿಂದ ಅದಕ್ಕೆ ‘ಮೃತ ನದಿ’ ಎಂದು ಹೇಳಲಾಗುತ್ತದೆ. ಯಮುನೋತ್ರಿಯಿಂದ ‘ಪ್ರಯಾಗ’ದ ಸಂಗಮ ಸ್ಥಳದ ವರೆಗೆ ಈ ನದಿ ಹೆಚ್ಚು ಕಡಿಮೆ ೧೪೦೦ ಕಿ.ಮೀ. ಗಿಂತ ಹೆಚ್ಚು ಅಂತರವನ್ನು ಆವರಿಸಿಕೊಂಡಿದೆ. ಧಾರ್ಮಿಕ ದೃಷ್ಟಿಯಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟ ಈ ನದಿಯ ಹೆಚ್ಚಿನ ಭಾಗವು ಒಂದು ಚರಂಡಿಯ ಹಾಗೆ ಆಗಿದೆ. ಅದನ್ನು ಮಲಿನ ಮುಕ್ತಗೊಳಿಸಲು ಇಂದಿನ ವರೆಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ; ಆದರೆ ನದಿಯ ಸ್ಥಿತಿ ಹೇಗಿತ್ತೋ ಹಾಗೆಯೆ ಇದೆ.

೨. ಯಮುನಾ ನದಿಯ ಮಲಿನ ನೀರಿನಿಂದಾಗಿ ಮಥುರೆಯ ಸುತ್ತಮುತ್ತಲಿನ ಪ್ರದೇಶಗಳ ಹೊಲಗಳು ಮತ್ತು ಪಶುಗಳ ಮೇವು ವಿಷಯುಕ್ತವಾಗುವುದು

ನದಿಯಲ್ಲಿ ಕೆಟ್ಟು ಹೋಗಿರುವ ಚರಂಡಿಗಳ ಉಪಚರಂಡಿಗಳ ಹಾಗೂ ಕಸಕಡ್ಡಿಗಳನ್ನು ಎಸೆಯುವ ಕ್ರಮವು ಇನ್ನೂ ನಿಂತಿಲ್ಲ. ಯಮುನಾ ನದಿಯಲ್ಲಿ ಬಿಡುವ ಶೇ. ೭೦ ರಷ್ಟು ಕಸಕಡ್ಡಿಗಳು ದೆಹಲಿಯ ನಿವಾಸಿಗಳದ್ದಾಗಿರುತ್ತದೆ. ಬಾಕಿ ಉಳಿದ ನೀರು ಹರಿಯಾಣಾ ಮತ್ತು ಉತ್ತರಪ್ರದೇಶದ ಕಸಕಡ್ಡಿಗಳಿಂದ ಕೆಟ್ಟು ಹೋಗುತ್ತಿದೆ. ಮಲಿನ ನೀರನ್ನು ಶುದ್ಧಗೊಳಿಸಲು ಅಳವಡಿಸಿರುವ ಘಟಕಗಳು ತಮ್ಮ ಕ್ಷಮತೆಯ ಶೇ. ೫೦ ರಷ್ಟು ಕೂಡ ಚಲಿಸುವುದಿಲ್ಲ. ಅದರಿಂದಾಗಿಯೇ ಮಥುರೆಯ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಯಮುನೆಯ ಮಲಿನ ನೀರಿನಿಂದಾಗಿ ಚರ್ಮರೋಗ, ಚರ್ಮದ ಅರ್ಬುದರೋಗದಂತಹ ರೋಗಗಳು ಜನರ ಜೀವನವನ್ನು ನಾಶಗೊಳಿಸುತ್ತಿವೆ. ಪಶುಗಳು ಮತ್ತು ಕೃಷಿಕ್ಷೇತ್ರವೂ ಈ ಮಾಲಿನ್ಯದಿಂದ ಮುಕ್ತವಾಗಿಲ್ಲ. ತಪಾಸಣೆಯ ನಂತರ ಅರಿವಾದ ವಿಷಯವೆಂದರೆ ಈ ಭಾಗಗಳಲ್ಲಿ ಬೆಳೆಯುವ ಕೃಷಿ ಉತ್ಪಾದನೆ ಹಾಗೂ ಪಶುಗಳ ಮೇವು ಸಹ ವಿಷಯುಕ್ತವಾಗಿವೆ.

೩. ಕೀಟನಾಶಕಗಳ ಮಿತಿ ಮೀರಿದ ಉಪಯೋಗದಿಂದ ಅಂತರ್ಜಲ ಮಲಿನವಾಗುವುದು

ನದಿಗಳ ನೀರನ್ನು ತಪಾಸಣೆ ಮಾಡಿದಾಗ ನೀರಿನಲ್ಲಿ ಕ್ಯಾಲ್ಶಿಯಮ್, ಮ್ಯಾಗ್ನೇಶಿಯಮ್ ಕ್ಲೋರಾಯಿಡ್, ಆಮ್ಲ (ಪಿ.ಎಚ್), ಬಿ.ಓ.ಡಿ. (ಬಯೋಲಾಜಿಕಲ್ ಆಕ್ಸಿಜನ್ ಡಿಮಾಂಡ್), ಕ್ಷಾರತ್ವ (ಲವಣ/ಆಲ್ಕಲಿನಿಟಿ) ಮುಂತಾದ ತತ್ತ್ವಗಳ ಪ್ರಮಾಣ ಅವಶ್ಯಕತೆಗಿಂತ ಹೆಚ್ಚು ಕಂಡುಬಂದಿದೆ. ಕೀಟನಾಶಕಗಳ ಮಿತಿಮೀರಿದ ಉಪಯೋಗ ಮತ್ತು ಕಾರ್ಖಾನೆಗಳಿಂದ ಹೊರಬೀಳುವ ವಿಷಯುಕ್ತ ನೀರು ಹಾಗೂ ತ್ಯಾಜ್ಯವನ್ನು ಯೋಗ್ಯ ರೀತಿಯಲ್ಲಿ ನಷ್ಟಗೊಳಿಸದಿರುವುದರಿಂದ ನದಿಗಳ ನೀರಿನಲ್ಲಿ ಈ ಮೇಲಿನ ಬದಲಾವಣೆ ಆಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ‘ಜಿ.ಎಮ್’ (ಜಿನೆಟಿಕಲಿ ಮೋಡಿಫೈಡ್ ಅಂದರೆ ಜನಾಂಗೀಯ ಬದಲಾವಣೆ ಮಾಡಿರುವ) ಬೀಜಗಳ ಉಪಯೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ದ್ರವ್ಯಗಳ ಹಾಗೂ ಕೀಟನಾಶಕಗಳ ಅವಶ್ಯಕತೆ ಹೆಚ್ಚಾಗಿದೆ. ಈ ರಾಸಾಯನಿಕವನ್ನು ಮಣ್ಣು ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಬಂದ್ ಬಾಟ್ಲಿಯಲ್ಲಿನ ನೀರಿನ ಅಂಶ ತಯಾರಾಗುತ್ತಿದೆ, ಅದರಿಂದ ಶುದ್ಧತೆಯ ಹೆಸರಿನಲ್ಲಿ ಜನರ ಆರೋಗ್ಯವನ್ನು ಕೆಡಿಸುವ ಕಾರ್ಯ ನಡೆಯುತ್ತಿದೆ. ಕೀಟನಾಶಕಗಳ ರೂಪದಲ್ಲಿ ಉಪಯೋಗಿಸುವ ‘ಎಂಡೋಸಲ್ಫಾನ್’ನಿಂದಲೂ ದೊಡ್ಡ ಪ್ರಮಾಣದಲ್ಲಿ ಅಂತರ್ಜಲವನ್ನು ಮಲಿನಗೊಳಿಸಲಾಗುತ್ತಿದೆ.

೪. ನೀರನ್ನು ಸ್ವಂತದ ಲಾಭಕ್ಕಾಗಿ ಉಪಯೋಗಿಸುವುದು ದುರದೃಷ್ಟಕರವಾಗಿದೆ

ಕೇರಳದ ‘ಕಾಸರಗೋಡು’ ಜಿಲ್ಲೆಯಲ್ಲಿ ಇಷ್ಟರವರೆಗೆ ೧೦೦೦ ಜನರ ಜೀವ ಹೋಗಿದೆ ಹಾಗೂ ೧೦೦೦೦ ಕ್ಕಿಂತಲೂ ಹೆಚ್ಚು ಜನರು ಗಂಭೀರ ವ್ಯಾಧಿಗಳಿಗೆ ತುತ್ತಾಗಿದ್ದಾರೆ. ನಮ್ಮಲ್ಲಿ ಎಷ್ಟು ಬಂದ್ ಬಾಟ್ಲಿ ನೀರಿನ ಘಟಕಗಳಿವೆಯೊ. ಅವುಗಳು ಇದೇ ನದಿಯ ಮಲಿನ ನೀರನ್ನು ಶುದ್ಧ ಮಾಡಲು ಅನೇಕ ರಾಸಾಯನಿಕಗಳನ್ನು ಉಪಯೋಗಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ಈ ಮಲಿನ ನೀರಿನಲ್ಲಿ ಈ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತದೆ, ಅವು ಮಾನವನ ಶರೀರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ಘಟಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅನಿಯಮಿತತೆ ಇರುತ್ತದೆ. ಅನೇಕ ಜನರು ಅನುಮತಿಯಿಲ್ಲದೆಯೆ ಪೇಯಜಲ(ಕುಡಿಯುವ ನೀರು) ವನ್ನು ಮಾರಾಟ ಮಾಡುತ್ತಾರೆ ಹಾಗೂ ಅನೇಕರಲ್ಲಿ ಭಾರತ ಸರಕಾರ ಪುರಸ್ಕೃತ ಸಂಸ್ಥೆಗಳ ಪ್ರಮಾಣಪತ್ರವಿಲ್ಲ. ನಾವು ಯಾವ ದೇಶದ ಔದ್ಯೋಗೀಕರಣ ಮಾದರಿಯನ್ನು ಅವಲಂಬಿಸಿದ್ದೇವೆಯೊ, ಆ ದೇಶಗಳಿಂದ ನಾವು ‘ಅವರು ಅವರ ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಉಳಿಸಿಕೊಂಡರು’, ಎಂಬುದನ್ನು ಕಲಿತುಕೊಳ್ಳಲಿಲ್ಲ. ಆದ್ದರಿಂದಲೇ ಅಲ್ಲಿನ ನದಿಗಳು, ಸರೋವರ, ಮತ್ತು ಆಣೆಕಟ್ಟುಗಳು ನಮ್ಮ ದೇಶಕ್ಕಿಂತ ಹೆಚ್ಚು ಶುದ್ಧ ಹಾಗೂ ನಿರ್ಮಲವಾಗಿವೆ. ‘ಕುಡಿಯುವ ಸ್ವಚ್ಛ ನೀರು’ ಇದು ದೇಶದ ನಾಗರಿಕರ ಸಂವಿಧಾನಾತ್ಮಕ ಅಧಿಕಾರವಾಗಿದೆ; ಆದರೆ ಅದಕ್ಕೆ ಸಾಕಾರ ರೂಪವನ್ನು ನೀಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀರನ್ನು ಲಾಭದಾಯಕ ಉತ್ಪನ್ನವೆಂದು ತಿಳಿದಿವೆ. ಈ ಸ್ಥಿತಿಯು ದೇಶದ ದೌರ್ಭಾಗ್ಯವಾಗಿದೆ.’

– ಪ್ರಮೋದ ಭಾರ್ಗವ (ಆಧಾರ : ಸಾಪ್ತಾಹಿಕ ‘ಹಿಂದೂ ಸಭಾ ವಾರ್ತಾ’, ೧೦ ರಿಂದ ೧೬ ಡಿಸೆಂಬರ್ ೨೦೧೪)

ಹಿಂದಿನ ಭಾರತೀಯರು ಎಷ್ಟು ಜ್ಞಾನಿಗಳಾಗಿದ್ದರು, ಎಂಬುದು ಈಗ ವಿಜ್ಞಾನಿಗಳ ಗಮನಕ್ಕೆ ಬರುತ್ತಿದೆ !

‘ತಾಮ್ರದ ವಸ್ತುವಿನ ಮೇಲೆ ಯಾವುದೇ ಒಂದು ರೋಗಾಣು ಇದ್ದರೆ, ಅದು ಕೆಲವೇ ನಿಮಿಷಗಳಲ್ಲಿಯೇ ನಷ್ಟವಾಗುತ್ತದೆ’, ಎಂಬ ಸಂಶೋಧನೆಯಲ್ಲಿ ಹೇಳಲಾಗಿದೆ. ೨೦೧೫ ರಲ್ಲಿ ‘ಯುನಿವರ್ಸಿಟಿ ಆಫ್ ಸೌಥ್ ಹ್ಯಾಮ್ಟನ್’ವು ಮಾಡಿದ ಒಂದು ಸಂಶೋಧನೆಗನುಸಾರ ತಾಮ್ರವು ‘ರೆಸ್ಪಿರೇಟರಿ ವೈರಸ್’ನಿಂದ (ಫುಫ್ಫುಸಗಳಲ್ಲಿ ಸಂಕ್ರಮಿತವಾಗುವ ರೋಗಾಣುಗಳಿಂದ) ರಕ್ಷಣೆ ನೀಡುವ ಸಾಧ್ಯತೆ ಇದೆ. ‘ರೆಸ್ಪಿರೇಟರಿ ವೈರಸ್’ನಲ್ಲಿ ‘ಸಾರ್ಸ’ (ಸೀವಿಯರ ಎಕ್ಯೂಟ ರೆಸ್ಪಿರೇಟರಿ ಸಿಂಡ್ರೋಮ) ಮತ್ತು ‘ಮರ್ಸ’ (ಮಿಡಲ್ ಈಸ್ಟ ರೆಸ್ಪಿರೇಟರಿ ಸಿಂಡ್ರೋಮ) ಎಂಬ ಎರಡು ರೋಗಾಣುಗಳು ಕಂಡುಬರುತ್ತವೆ.

ಈ ಪ್ರಕಾರದ ರೋಗಾಣುಗಳು ಬೇರೆ ವಸ್ತುಗಳ ಮೇಲೆ ಇದ್ದರೆ ಅನೇಕ ದಿನಗಳ ವರೆಗೆ ಜೀವಂತವಾಗಿರುತ್ತವೆ; ಆದರೆ ತಾಮ್ರವು ಇವುಗಳನ್ನು ತಕ್ಷಣ ನಷ್ಟ ಮಾಡುತ್ತದೆ. (ಭಾರತದಲ್ಲಿ ಕೆಲವು ದಶಮಾನಗಳ ವರೆಗೆ ತಾಮ್ರಗಳನ್ನೆ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತಿತ್ತು; ಆದರೆ ಅವುಗಳ ಸ್ವಚ್ಛತೆ ಮತ್ತು ಜಡತ್ವವನ್ನು ನೋಡಿ ಈಗ ಬೇರೆ ಹಗುರ ಧಾತುಗಳ ಬಳಕೆ ಮಾಡಲಾಗುತ್ತಿದೆ. ಅಲ್ಯೂಮಿನಿಯಮ್ ಮುಂತಾದ ಧಾತುಗಳಿಂದ ಶರೀರಕ್ಕೆ ಅಪಾಯ ಸಂಭವಿಸುತ್ತದೆ, ಎಂಬುದೂ ಬೆಳಕಿಗೆ ಬಂದಿದೆ. – ಸಂಪಾದಕರು)