ಮತಾಂತರ ನಿಷೇಧ ಕಾಯಿದೆ ಬೇಕೇಬೇಕು !

ತಮಿಳುನಾಡಿನ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಕಲಿಯುವ ಹುಡುಗಿಯೊಬ್ಬಳು ಆತ್ಮಹತ್ಯೆಯನ್ನು ಮಾಡಿಕೊಂಡ ಪ್ರಕರಣವು ದೇಶದಾದ್ಯಂತ ವ್ಯಾಪಿಸುತ್ತಿದೆ. ಅದರ ಕಾರಣವು ಸಹ ಅಷ್ಟೇ ಗಂಭೀರವಾಗಿದೆ. ಮಹಾವಿದ್ಯಾಲಯವು ಸಂಬಂಧಿತ ಹುಡುಗಿಗೆ ಕ್ರೈಸ್ತ ಪಂಥಕ್ಕೆ ಮತಾಂತರವಾಗಲು ಒತ್ತಡ ಹೇರಲಾಗುತ್ತಿತ್ತು, ಅದಕ್ಕಾಗಿ ಅವಳನ್ನು ಪೀಡಿಸಲಾಗುತ್ತಿತ್ತು.  ಶಾಲೆಯಲ್ಲಿ ಮುಂದಿನ ಶಿಕ್ಷಣವನ್ನು ಮುಂದುವರಿಸುವುದಿದ್ದರೆ, ಅವಳು ಮತಾಂತರವಾಗಲೇಬೇಕು, ಎಂದು ಅವಳ ತಾಯಿ-ತಂದೆಯರೆದುರು ಹೇಳಲಾಯಿತು. ಅವಳಿಗೆ ತಮಿಳುನಾಡಿನ ಸಾಂಪ್ರದಾಯಿಕ ಹಿಂದೂ ಧಾರ್ಮಿಕ ಹಬ್ಬ ಪೊಂಗಲ್‌ಅನ್ನು ಆಚರಿಸಲು ಸಹ ನಿಷೇಧಿಸಲಾಗಿತ್ತು. ಅವಳಿಗೆ ಈ ಅನ್ಯಾಯವು (ದಬ್ಬಾಳಿಕೆ) ಸಹನೆಯಾಗಲಿಲ್ಲ ಮತ್ತು ಅವಳು ಆತ್ಮಹತ್ಯೆಯ ಅಂತಿಮ ನಿರ್ಣಯವನ್ನು ತೆಗೆದುಕೊಂಡಳು.

ಈ ೧೭ ವರ್ಷಗಳ ಹುಡುಗಿಯ ಪಾಲಕರು ಮಾಧ್ಯಮಗಳೆದುರು ಮಾತನಾಡುವಾಗ, ‘ನನ್ನ ಮಗಳು ಮತಾಂತರಕ್ಕೆ ನಿರಾಕರಿಸುತ್ತಿದ್ದುದರಿಂದ ಮಹಾವಿದ್ಯಾಲಯವು ಅವಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಇತರ ಸ್ವಚ್ಛತೆಗಳನ್ನು ಮಾಡಿಸುವುದು ಇತ್ಯಾದಿಗಳಲ್ಲಿ ತೊಡಗಿಸಿತು. ಅವಳ ಪ್ರಸಂಗದಲ್ಲಿ ಏನು ಘಟಿಸಿತೋ, ಅದು ಇತರ ಮಕ್ಕಳ ಸಂದರ್ಭದಲ್ಲಿ ಘಟಿಸಬಾರದು ಮತ್ತು ಇದೇ ಕೊನೆಯ ಮತಾಂತರದ ಘಟನೆಯಾಗಬೇಕು. ಹುಡುಗಿಗೆ ನ್ಯಾಯ ದೊರಕಬೇಕು ಮತ್ತು ರೋಚಲೀನ್ ಮೇರಿ ಮತ್ತು ಸಗಾಯಾ ಮೇರಿ ಇವರಿಗೆ ಶಿಕ್ಷೆಯಾಗಬೇಕು’, ಎಂದು ಹೇಳಿದರು.

ಕಾನ್ವೆಂಟ್ ಶಾಲೆಗಳ ಭೀಕರ ಸ್ವರೂಪ !

ಕಾನ್ವೆಂಟ್ ಶಾಲೆಗಳ ಸಂದರ್ಭದಲ್ಲಿ ಹಿಂದೂ ಹುಡುಗಿಯರಿಗೆ ಕುಂಕುಮ ಹಚ್ಚಿಕೊಳ್ಳಲು, ಬಳೆಗಳನ್ನು ತೊಡಲು ಅಥವಾ ಭಾರತೀಯ ಉಡುಪನ್ನು ಧರಿಸಿ ಬರಲು ಅಡ್ಡಿ ಮಾಡಲಾಗುತ್ತದೆ. ಹಿಂದೂ ಹುಡುಗರ ಕೈಯಲ್ಲಿನ ದಾರಗಳನ್ನು ಕತ್ತರಿಸಲಾಗುತ್ತದೆ, ತಿಲಕವನ್ನು ಹಚ್ಚಲು ಅಥವಾ ಕೊರಳಲ್ಲಿ ದೇವತೆಗಳ ಪದಕಗಳನ್ನು ಧರಿಸಲು ವಿರೋಧಿಸಲಾಗುತ್ತದೆ. ಹಿಂದೂಗಳಿಗೆ ರಾಖಿಯನ್ನು ಕಟ್ಟಿಕೊಂಡು ಶಾಲೆಗೆ ಬರಲು ಬಿಡುವುದಿಲ್ಲ. ಹೀಗೆ ಹಿಂದೂ ಧರ್ಮವಿರೋಧಿ ಅನೇಕ ಪ್ರಸಂಗಗಳು ಶಾಲೆಗಳಲ್ಲಿ ನಡೆಯುತ್ತವೆ. ಮತಾಂತರದ ಪ್ರಕ್ರಿಯೆಯು ಶಾಲೆಗಳಲ್ಲಿ ಪ್ರಾರಂಭವಾಗುತ್ತವೆ. ಹಿಂದೂಗಳ ದೇವತೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಾಸ್ಪದವಾಗಿ ಉಲ್ಲೇಖಿಸಲಾಗುತ್ತದೆ. ಗಣಪತಿಯನ್ನು ‘ಎಲಿಫಂಟ್ ಗಾಡ್’, ಮಾರುತಿಯನ್ನು ‘ಮಂಕಿ ಗಾಡ್’ ಎಂದು ಸಂಬೋಧಿಸಲಾಗುತ್ತದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಬಸ್‌ಅನ್ನು ಉದ್ದೇಶಪೂರ್ವಕವಾಗಿ ಕೆಡಿಸಿಡಲಾಗುತ್ತದೆ ಮತ್ತು ಮಕ್ಕಳಿಗೆ ‘ನಿಮ್ಮ ಉಪಾಸ್ಯದೇವರಲ್ಲಿ ಪ್ರಾರ್ಥನೆಯನ್ನು ಮಾಡಿರಿ’, ಎಂದು ಹೇಳಲಾಗುತ್ತದೆ, ಆಗ ಬಸ್ ಆರಂಭಿಸಲು ಆಗುವುದಿಲ್ಲ. ನಂತರ ‘ಯೇಸುವಿನಲ್ಲಿ ಪ್ರಾರ್ಥನೆಯನ್ನು ಮಾಡಿರಿ’, ಎಂದು ಹೇಳಲಾಗುತ್ತದೆ. ಆಗ ಬಸ್‌ಅನ್ನು ಚಾಲು ಮಾಡಲಾಗುತ್ತದೆ. ಇದರಿಂದ ಯೇಸುವಿಗೆ ಪ್ರಾರ್ಥನೆ ಮಾಡುವುದರ ಮಹತ್ವ, ಯೇಸುವೇ ನಿಮ್ಮನ್ನು ಕಾಪಾಡುವವನು ಎಂದು ಮಕ್ಕಳಲ್ಲಿ ಬಿಂಬಿಸಲಾಗುತ್ತದೆ. ‘ನಿಮ್ಮ ಮನೆ ನದಿ ತೀರದಲ್ಲಿದ್ದರೆ ನದಿಗೆ ನೆರೆ ಬಂದಾಗ ನಿಮ್ಮ ಕಲ್ಲು ದೇವರು ತೇಲುವನೇ ಅಥವಾ ಯೇಸು ತೇಲುವನೇ ?’, ಎಂದು ಕೇಳಿ ಯೇಸುವಿನ ಶ್ರೇಷ್ಠತ್ವವನ್ನು ಬಿಂಬಿಸಲಾಗುತ್ತದೆ. ಇದು ಮಾನಸಿಕ ಮತಾಂತರವಾಗಿದೆ. ಒಂದೇ ಸಮಯಕ್ಕೆ ಹಿಂದೂ ದೇವತೆಗಳ ಬಗ್ಗೆ ತಿರಸ್ಕಾರ ಮತ್ತು ಯೇಸು, ಬೈಬಲ್, ಮೇರಿ ಇವರ ಬಗ್ಗೆ ಪ್ರೀತಿಯನ್ನು ಉತ್ಪನ್ನ ಮಾಡಲಾಗುತ್ತದೆ. ಇಂತಹ ಶಿಕ್ಷಣದಿಂದ ಮಕ್ಕಳ ಮೇಲೆ ಕ್ರೈಸ್ತರ ಕುಸಂಸ್ಕಾರವೇ ಆಗಲಿದೆ !

ಮತಾಂತರಕ್ಕೆ ನಿರಾಕರಣೆ; ವಿದ್ಯಾರ್ಥಿಗಳ ಹತ್ಯೆ !

ವಿದೇಶದಲ್ಲಿ ಮಿಶನರಿಗಳ ಶಾಲೆಗಳು ಅಪರಾಧಗಳ ಉತ್ತುಂಗವನ್ನೇ ತಲುಪಿವೆ. ಅಲ್ಲಿನ ಶಾಲೆಗಳಲ್ಲಿ ನೂರಾರು ಅಲ್ಲ, ಸಾವಿರಾರು ಹುಡುಗರ ಲೈಂಗಿಕ ಶೋಷಣೆಯಾಗಿದೆ. ಇದಕ್ಕೆ ಜವಾಬ್ದಾರರಾಗಿರುವ ಪಾದ್ರಿಗಳಿಗೆ ಶಿಕ್ಷೆಯು ಸಹ ಆಗುತ್ತಿಲ್ಲ; ಕೇವಲ ಅಲ್ಲಿನ ಚರ್ಚ್‌ನ ಮುಖ್ಯಸ್ಥನೆದುರು ‘ಕನ್‌ಫೆಶನ್’ (ಚರ್ಚ್ ನಲ್ಲಿ ಅಪರಾಧಗಳನ್ನು ಒಪ್ಪಿಕೊಳ್ಳುವ ಅಭ್ಯಾಸ) ಮಾಡಿದರೆ ಕೆಲಸವಾಯಿತು. ಆದುದರಿಂದ ಶೋಷಣೆಗೆ ಒಳಗಾದ ನನ್, ಇತರ ಮಹಿಳೆಯರು ಸಹ ತಮ್ಮ ಮೇಲಾದ ಅತ್ಯಾಚಾರದ ಬಗ್ಗೆ ಹೇಳಲು ಮುಂದೆ ಬರುವುದಿಲ್ಲ. ಕೆನಡಾದಲ್ಲಿ ಕೆಥೊಲಿಕ್ ಶಾಲೆಗಳ ಆವರಣದಲ್ಲಿ ಕೆಲವು ತಿಂಗಳುಗಳ ಹಿಂದೆಯೇ ಚಿಕ್ಕ ಮಕ್ಕಳ ನೂರಾರು ಸಮಾಧಿಗಳು ದೊರಕಿದ್ದವು. ಮತಾಂತರಗೊಳ್ಳಲು ಒಪ್ಪಿಕೊಳ್ಳದಿರುವ ಈ ಮಕ್ಕಳನ್ನು ಚರ್ಚ್‌ನವರು ಹತ್ಯೆ ಮಾಡಿದ್ದರು. ಕೆಥೋಲಿಕ್ ಚರ್ಚ್‌ನ ಈ ಕ್ರೂರ ಕೃತ್ಯಗಳ ಬಗ್ಗೆ ಜಗತ್ತಿನಾದ್ಯಂತ ಟೀಕೆಯಾಗಿ ಅವರು ಮಕ್ಕಳ ಮೇಲೆ ಮಾಡಿದ ಅತ್ಯಾಚಾರಗಳ ಬಗ್ಗೆ ಕ್ಷಮೆ ಕೇಳಬೇಕೆಂಬ ಬೇಡಿಕೆಯನ್ನಿಟ್ಟರು; ಆದರೆ ಕ್ಷಮೆ ಕೇಳುವ ಆ ಕ್ರೈಸ್ತರು ಎಲ್ಲಿ ? ಚಿಕ್ಕ ಮಕ್ಕಳ ಮೇಲೆ ಪಾದ್ರಿಗಳಿಂದಾದ ಲೈಂಗಿಕ ಶೋಷಣೆಯ ಬಗ್ಗೆ, ಮಕ್ಕಳ ಮೇಲೆ ಅನೈಸರ್ಗಿಕ ಅತ್ಯಾಚಾರ ಎಸಗಿದ ಬಗ್ಗೆ ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಇವರು ಪಾದ್ರಿಗಳಿಗೆ ಕಠೋರ ಶಬ್ದಗಳಲ್ಲಿ ವಿಚಾರಣೆ ನಡೆಸಿದುದಾಗಲಿ ಅಥವಾ ಅವರ ಮೇಲೆ ಕಾನೂನುಬದ್ಧ ಕಾರ್ಯಾಚರಣೆ ಮಾಡುವಂತೆ ಆದೇಶ ನೀಡಿದ ಬಗ್ಗೆ ಹೇಳಿರುವುದಾಗಲಿ ಎಲ್ಲಿಯೂ ಕಂಡು ಬಂದಿಲ್ಲ. ಕೇವಲ ‘ಹೀಗೆ ಏನಾದರೂ ಅಯೋಗ್ಯ ಕೃತ್ಯವಾಯಿತು’, ಎಂದು ಈ ಬಗ್ಗೆ ಅವರು ತೋರಿಕೆಯ ಹೇಳಿಕೆಯನ್ನು ನೀಡಿದರು. ಚರ್ಚ್ ಸಂಸ್ಥೆಯೂ ಸಂಬಂಧಿತ ದೇಶಗಳ ಸರಕಾರಗಳ ಬಳಿ ಶಿಕ್ಷೆಯನ್ನು ವಿಧಿಸಲು ಪಾದ್ರಿಗಳಿಗೆ ಕರೆಯನ್ನು ನೀಡುತ್ತಿಲ್ಲ, ಇದು ವಿಶೇಷವಾಗಿದೆ. ‘ಆಗಿದ್ದು ಆಗಿ ಹೋಯಿತು, ಪರಸ್ಪರರಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ’, ಎಂಬುದು ಚರ್ಚ್‌ನ ನೀತಿಯಾಗಿದೆ ಅನಿಸುತ್ತದೆ. ಇಷ್ಟು ಘೋರ ಅಪರಾಧಗಳ ನಡುವೆಯೂ ಕ್ರೈಸ್ತರ ಸರ್ವೋಚ್ಚ ಸಂಸ್ಥೆಯ ಈ ನಡುವಳಿಕೆ ಎಂದರೆ ‘ಅವರಿಗೆ ಅಪರಾಧ ಮಾಡಿದ ಬಗ್ಗೆ ಯಾವುದೇ ಗಾಂಭೀರ್ಯವೇ ಇಲ್ಲ’ವೆಂದು ಗಮನಕ್ಕೆ ತಂದು ಕೊಡಲು ಸಾಕಾಗುವಂತಿದೆ.

ಹಿಂದೂಗಳ ಮತಾಂತರವೇ ಅವರ ಉದ್ದೇಶ !

ಕ್ರೈಸ್ತರ ಆಶ್ರಮ, ಅವರ ಸ್ವಯಂಸೇವಾ ಸಂಸ್ಥೆ ಅಥವಾ ಮಾನವೀಯತೆಯ ಹೆಸರಿನಲ್ಲಿ ಆರಂಭಿಸಲಾಗುವ ಧಾರ್ಮಿಕದತ್ತಿ ಇಲಾಖೆ, ಆಸ್ಪತ್ರೆಗಳು ಇವು ಮಾನವೀಯತೆಯನ್ನು ಸಂರಕ್ಷಿಸುವ ಸ್ಥಳಗಳಾಗಿರದೇ ಮತಾಂತರದ ಕೇಂದ್ರಗಳೇ ಆಗಿರುತ್ತವೆ. ಆ ಸ್ಥಳಗಳಲ್ಲಿ ಪ್ರಾಥಮಿಕ ಹಂತದ ಸಹಾಯ ನೀಡುವ ಮೂಲಕ ಇಂದಲ್ಲ ನಾಳೆ ಅವರು ತಮ್ಮದೇ ಆದ ಗುಪ್ತ ‘ಅಜೆಂಡಾ’ ಅನುಸರಿಸುತ್ತಾರೆ. ಸ್ವತಃ ಮದರ ತೆರೆಸಾ ಇವರೂ ತಮ್ಮ ಮತಾಂತರದ ಉದ್ದೇಶವನ್ನು ಮುಚ್ಚಿಡಲಿಲ್ಲ. ಅವರು ತಮ್ಮ ಸಂಸ್ಥೆಯ ವತಿಯಿಂದ ನಿರ್ಗತಿಕರ ಸೇವೆ ಮಾಡುವ ಹೆಸರಿನಲ್ಲಿ ಅಸಹಾಯಕ, ನಿರ್ಗತಿಕ ಜನರನ್ನು ಮತಾಂತರಿಸಿದರು. ಭಾರತದಲ್ಲಿ ಬಡತನವು ಇಂದಿಗೂ ದೊಡ್ಡ ಪ್ರಮಾಣದಲ್ಲಿದೆ, ಕೆಲವು ಭಾಗಗಳು ಇಂದಿಗೂ ಬುಡಕಟ್ಟು ವರ್ಗಕ್ಕೆ ಸೇರುತ್ತವೆ. ಅವರಿಗೆ ಆಹಾರ ಒದಗಿಸುವ ಭ್ರಮೆ ಅವರಲ್ಲಿದೆ. ಅವರನ್ನು ಹುಡುಕಿ ಅವರ ಬಡತನವನ್ನು ದೂರ ಮಾಡುವ ಹೆಸರಿನಲ್ಲಿ ಧರ್ಮದಿಂದ ದೂರ ಕರೆದೊಯ್ಯುತ್ತಾರೆ. ಆ ಸಮಯದಲ್ಲಿ ಅವರಿಗೆ ಇಚ್ಛೆಯಿಲ್ಲದಿದ್ದರೂ ಮತ ಪರಿವರ್ತನೆ ಮಾಡಬೇಕಾಗುತ್ತದೆ. ಹಿಂದೂ ಬಹುಸಂಖ್ಯಾತ ಭಾರತವನ್ನು ಕ್ರಿಶ್ಚಿಯನ್ ರಾಜ್ಯವನ್ನಾಗಿ ರೂಪಾಂತರಗೊಳಿಸುವ ಆದೇಶವಷ್ಟೇ ಅಲ್ಲ, ಸ್ವತಃ ಪೋಪ್ ಇವರ ಬಯಕೆಯೂ ಆಗಿದೆ. ಸಹಜವಾಗಿಯೇ ಇದು ಪ್ರತಿಯೊಬ್ಬ ಕ್ರೈಸ್ತ ಧರ್ಮೋಪದೇಶಕನ ಮೊದಲ ಪಂಥಕಾರ್ಯವಾಗಿದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರಸ್ತಾವಿತ ಮತಾಂತರ ನಿಷೇಧ ಕಾಯಿದೆಗೆ ವಿರೋಧವು ಆರಂಭವಾಗಿದೆ. ಮತಾಂತರ ನಿಷೇಧ ಕಾಯಿದೆಯು ಬಲವಂತದ ಮತಾಂತರದ ಮೇಲೆ ಕ್ರೂರ ಕ್ರಮವಾಗಿದ್ದರೂ, ಅದನ್ನು ಸರಕಾರವು ದೇಶದಾದ್ಯಂತ ಮಾಡಲೇಬೇಕು; ಆದರೆ ಅದರೊಂದಿಗೆ ಹಿಂದೂಗಳಿಗೆ ದೇವಸ್ಥಾನಗಳು, ಶಾಲೆಗಳು, ಮಹಾವಿದ್ಯಾಲಯಗಳು ಇವುಗಳಲ್ಲಿ ಧರ್ಮಶಿಕ್ಷಣದ ವ್ಯವಸ್ಥೆ ಮಾಡಿದರೆ ಯಾವ ಹಿಂದೂ ಸಹ ಮತಾಂತರಗೊಳ್ಳುವುದಿಲ್ಲ, ಎಂಬುದು ಸತ್ಯವಾಗಿದೆ.