ಶೌರ್ಯದ ಸಾಕಾರರೂಪ ಮಹಾರಾಣಾ ಪ್ರತಾಪ !

೧೨ ಫೆಬ್ರವರಿ ೨೦೨೨ ರಂದು ಮಹಾರಾಣಾ ಪ್ರತಾಪ ಇವರ ಸ್ಮೃತಿದಿನವಿದೆ. ಈ ನಿಮಿತ್ತ…

ಮಹಾರಾಣಾ ಪ್ರತಾಪ ಅವರ ಕಾಲದಲ್ಲಿ ಅಕ್ಬರನು ಬಲಪ್ರಯೋಗಿಸಿ ರಜಪೂತ ರಾಜರನ್ನು ಮಾಂಡಲಿಕನನ್ನಾಗಿಸಿದನು. ಅಕ್ಬರನು ಮೇವಾಡ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಂಡಿದ್ದನು ಮತ್ತು ಎಷ್ಟೋ ರಜಪೂತ ರಾಜರ ಮಕ್ಕಳು-ಸೊಸೆಯಂದಿರನ್ನು ತನ್ನ ಅಂತಃಪುರದಲ್ಲಿ (ಜನಾನಖಾನಾದಲ್ಲಿ) ಹೆಂಡತಿಯರನ್ನಾಗಿ ಇರಿಸಿದನು. ಇಂತಹ ಅತ್ಯಾಚಾರಿ ಅಕ್ಬರನ ವಿರುದ್ಧ ಮಹಾರಾಣಾ ಪ್ರತಾಪನು ಯುದ್ಧ ಸಾರಿದನು. ಅಕ್ಬರನ ಆಜ್ಞೆಯಿಂದ ರಾಜಾ ಮಾನಸಿಂಗ ಮತ್ತು ಅಕ್ಬರನ ಪುತ್ರ ಸಲೀಮ (ಜಹಾಂಗೀರ)ನು ಮಹಾರಾಣಾ ಪ್ರತಾಪರ ಮೇಲೆ ದಂಡೆತ್ತಿ ಹೋದರು. ಹಳದಿಘಾಟನಲ್ಲಿ ಈ ಯುದ್ಧ ನಡೆಯಿತು. ಅದರಲ್ಲಿ ಮಹಾರಾಣಾ ಪ್ರತಾಪರು ಪರಾಕ್ರಮದ ಪರಾಕಾಷ್ಠೆಯನ್ನು ಪ್ರದರ್ಶಿಸಿದರು. ಅವರು ತಮ್ಮ ಕುದುರೆಯನ್ನು ಸಾವಿರಾರು ಮುಸಲ್ಮಾನ ಸೈನಿಕರಿಂದ ಸುತ್ತುವರಿದಿದ್ದ ಸಲೀಮನ ಆನೆಯ ಮೇಲೆ ನೆಗೆಯುವಂತೆ ಮಾಡಿದರು. ‘ಚೇತಕ’ ಕುದುರೆಯು ಸಲೀಮನ ಆನೆಯ ಸೊಂಡಿಲಿನ ಮೇಲೆ ನೆಗೆದು ತನ್ನ ಕಾಲನ್ನು ಬಿಗಿ ಮಾಡಿತು. ವಿದ್ಯುತ್ ವೇಗದಿಂದ ಮಹಾರಾಣಾ ಪ್ರತಾಪರ ಭರ್ಚಿ ಸಲೀಮನ ಕೊರಳಿನ ಹತ್ತಿರದಿಂದ ಮಿಂಚಿ ಹೋಯಿತು. ದೈವ ಬಲದಿಂದ ಸಲೀಮ ಬದುಕುಳಿದ. ಈ ಯುದ್ಧವು ಅವರ್ಣನೀಯವಾಗಿತ್ತು. ಅನಂತರ ಹಿಂದೂಕುಲಭೂಷಣ ಮಹಾರಾಣಾ ಪ್ರತಾಪರು ಚಿತ್ತೋಡು ಹೊರತು ಪಡಿಸಿ ಉಳಿದ ಮೇವಾಡ ಪ್ರಾಂತವನ್ನು ಮೊಗಲರಿಂದ ಮುಕ್ತಗೊಳಿಸಿದರು.

(ಆಧಾರ : ಸ್ವಾ. ಸಾವರಕರರು ಬರೆದ ಗ್ರಂಥ ‘ಸಹಾ ಸೋನೇರಿ ಪಾನೆ’(ಮರಾಠಿ)