ಹಿಂದೂ ಸಂಘಟನೆ ಮತ್ತು ಧರ್ಮಾಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದೂ ಜಾಗೃತಿ ಸಮಿತಿ’
‘ಕಾಶ್ಮೀರಿ ಹಿಂದೂ ನಿರಾಶ್ರಿತ ದಿನ’ ಸಂದರ್ಭದಲ್ಲಿ ‘ಆನ್‌ಲೈನ್’ ವಿಶೇಷ ಸಂವಾದ !
ಮುಂಬೈ – ೧೯೯೦ ರಲ್ಲಿ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಸಾಮೂಹಿಕ ಹತ್ಯಾಕಾಂಡವನ್ನು ಸರಕಾರವು ‘ನರಮೇಧ’ ಎಂದು ಒಪ್ಪಿಕೊಳ್ಳಬೇಕು; ಈ ನರಮೇಧಕ್ಕೆ ಕಾರಣರಾದವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು; ಈ ನರಮೇಧದಲ್ಲಿ ಪೀಡಿತ ಹಿಂದೂಗಳ ಭೂಮಿ, ಸಂಪತ್ತನ್ನು ಅಲ್ಲಿನ ಮತಾಂಧ ಮುಸಲ್ಮಾನರು ಕಬಳಿಸಿದ್ದಾರೆ. ಅದನ್ನು ಹಿಂದೂಗಳಿಗೆ ಹಿಂದಿರುಗಿಸಬೇಕು ಮತ್ತು ನಿರಾಶ್ರಿತ ಹಿಂದೂಗಳಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲು ವಿಶಿಷ್ಟ ಸ್ಥಳಗಳನ್ನು ನೀಡಬೇಕು, ಎಂದು ನಾವು ಕೇಂದ್ರ ಸರಕಾರದ ಬಳಿ ಒತ್ತಾಯಿಸುತ್ತೇವೆ. ನಾವು ಕಾಶ್ಮೀರಿ ಹಿಂದೂಗಳು ತಲೆಬಾಗುವುದಿಲ್ಲ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ, ಎಂದು ‘ರೂಟ್ಸ್ ಇನ್ ಕಾಶ್ಮೀರ’ದ ಸಂಸ್ಥಾಪಕ ಶ್ರೀ. ಸುಶೀಲ ಪಂಡಿತ ಸ್ಪಷ್ಟವಾಗಿ ಹೇಳಿದರು. ಅವರು ೧೯ ಜನವರಿ ೨೦೨೨ ರಂದು ‘ಹಿಂದೂ ಜನಜಾಗೃತಿ ಸಮಿತಿ’ ಆಯೋಜಿಸಿದ್ದ ‘ಜನವರಿ ೧೯ : ಕಾಶ್ಮೀರಿ ಹಿಂದೂ ನಿರಾಶ್ರಿತ ದಿನ – ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವುದು ಯಾವಾಗ ?’ ಎಂಬ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಇವರು ಶ್ರೀ. ಸುಶೀಲ ಪಂಡಿತ ಅವರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ೨ ಸಾವಿರದ ೪೭೭ ಜನರು ವೀಕ್ಷಿಸಿದರು.
ಶ್ರೀ. ಸುಶೀಲ ಪಂಡಿತರು ವಿಶೇಷ ಸಂವಾದದಲ್ಲಿ ಮಂಡಿಸಿದ ಮಹತ್ವ ಅಂಶಗಳು
೧. ‘ಕಾಶ್ಮೀರಿ ಹಿಂದೂಗಳ ಹತ್ಯೆ ಮಾಡಿದವರು ಇನ್ನೂ ಜೀವಂತವಾಗಿದ್ದಾರೆ, ಅವರ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿಲ್ಲ. ಕಾಶ್ಮೀರಿ ಹಿಂದೂಗಳ ಸ್ಥಿತಿಗೆ ಕಾರಣರಾದ ತಪ್ಪಿತಸರ ವಿರುದ್ಧ ದೋಷಾರೋಪಣೆಯನ್ನು ದಾಖಲಿಸಿ, ಅವರ ಆಸ್ತಿಯನ್ನು ವಶಕ್ಕೆ ಪಡೆದು ಅವರಿಗೆ ಶಿಕ್ಷೆ ನೀಡಬೇಕು; ಆದರೆ ಹೀಗೆ ಏನೂ ಮಾಡದೇ ಅವರ ಓಲೈಕೆ ಮಾಡುತ್ತಾ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಎಲ್ಲ ಕೇಂದ್ರ ಸರಕಾರಗಳು ಕಲ್ಪಿಸಿವೆ.
೨. ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮಾತನಾಡಬಾರದು, ಅವರಿಗೆ ನ್ಯಾಯ ನೀಡಬಾರದು, ಇಂತಹ ವ್ಯವಸ್ಥೆಯನ್ನು ನಾವು ಆರಿಸಿದ್ದೇವೆ. ಪಂಥನಿರಪೇಕ್ಷತೆಯ ಹೆಸರಿನಲ್ಲಿ ಬೂಟಾಟಿಕೆಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಅನೇಕ ರಾಜಕೀಯ ನಾಯಕರು, ನ್ಯಾಯವ್ಯವಸ್ಥೆ, ಪ್ರಸಾರಮಾಧ್ಯಮಗಳು, ಬುದ್ಧಿಜೀವಿಗಳು, ನಾಗರಿಕ ವೇದಿಕೆಗಳು, ನೌಕರವರ್ಗಗಳು ಒಳಗೊಂಡಿದ್ದಾರೆ.
೩. ೨೦೧೭ ರಲ್ಲಿ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು; ಆದರೆ ‘ಈಗ ತುಂಬಾ ತಡವಾಗಿದೆ. ಈಗ ಸಾಕ್ಷಿದಾರ ಮತ್ತು ಸಾಕ್ಷಿಗಳನ್ನು ಯಾರು ಹುಡುಕಿ ಕೊಡುವರು ?’ ಹೀಗೆ ಅನೇಕ ಕಾರಣಗಳನ್ನು ನೀಡಿ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.
೪. ಹೀಗಿದ್ದರೂ ಇದೇ ವರ್ಷ ಗಾಂಧಿ ಹತ್ಯೆಯ ನ್ಯಾಯಾಂಗ ಖಟ್ಲೆಯ ವಿಚಾರಣೆಯು ಪುನರಾರಂಭವಾಗಿದೆ, ಅದೇ ರೀತಿ ಶಿಕ್ಷೆಗೊಳಗಾದ ಭಯೋತ್ಪಾದಕರಿಗೆ ಈ ದೇಶದಲ್ಲಿ ಮಧ್ಯರಾತ್ರಿಯಲ್ಲಿ ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವುದು ದುರದೃಷ್ಟಕರ. ದೇಶದ ನ್ಯಾಯವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯು ದೇಶದ ಪಂಥನಿರಪೇಕ್ಷತೆಗೆ ಧಕ್ಕೆಯಾಗುವ ಭಯದಿಂದ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗಲು ವಂಚಿತವನ್ನಾಗಿಸಿದೆ.
ವಿಶೇಷ ಸಂವಾದದ ಉದ್ದೇಶ೧೯ ಜನವರಿ ೧೯೯೦ ರಂದು ಮತಾಂಧರು ಮಸೀದಿಯಿಂದ ‘ಹಿಂದೂಗಳೇ, ಕಾಶ್ಮೀರ ಬಿಟ್ಟು ತೊಲಗಿರಿ !’ ಎಂದು ಘೋಷಣೆ ನೀಡುತ್ತ ಲಕ್ಷಾಂತರ ಹಿಂದೂಗಳನ್ನು ಕಾಶ್ಮೀರದಿಂದ ಹೊರಗಟ್ಟಿದರು. ಒಂದೇ ರಾತ್ರಿಯಲ್ಲಿ ಕಾಶ್ಮೀರದಲ್ಲಿ ಸಾವಿರಾರು ಹಿಂದೂಗಳು ಕೊಲ್ಲಲ್ಪಟ್ಟರು ಮತ್ತು ಲಕ್ಷಾಂತರ ಹಿಂದೂಗಳು ನಿರಾಶ್ರಿತಗೊಂಡು ಎಲ್ಲವನ್ನೂ ಕಳೆದುಕೊಂಡರು. ಈ ಕ್ರೂರ ಘಟನೆ ನಡೆದು ೩೧ ವರ್ಷಗಳು ಕಳೆದರೂ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಕ್ಕಿಲ್ಲ, ಈ ನಿಮಿತ್ತ ಈ ‘ಆನ್‌ಲೈನ್’ ವಿಶೇಷ ಸಂವಾದವನ್ನು ಆಯೋಜಿಸಲಾಗಿತ್ತು. |