ಹ್ಯುಂಡೈ ಸಂಸ್ಥೆಯಿಂದ ಪ್ರತ್ತೇಕವಾದಿ ಕಾಶ್ಮೀರಿಗಳ ಕಪಟ ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲ

ಭಾರತೀಯರಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವಾಗಿದ್ದರಿಂದ ಹ್ಯುಂಡೈನಿಂದ ಕ್ಷಮಾಯಾಚನೆಯ ಬದಲು ಕೇವಲ ಮೇಲುಮೇಲಿನ ಸ್ಪಷ್ಟೀಕರಣ

ಇಂತಹ ಭಾರತ ವಿರೋಧಿ ಮತ್ತು ಪಾಕ್ ಪ್ರೇಮಿ ಸಂಸ್ಥೆ, ಹಾಗೆಯೇ ಅದರ ಉತ್ಪಾದನೆಗಳನ್ನು ಭಾರತೀಯರು ಬಹಿಷ್ಕರಿಸಬೇಕು ! ಕೇಂದ್ರ ಸರಕಾರವೂ ಈ ಸಂಸ್ಥೆಯ ಮೇಲೆ ಕಾರ್ಯಾಚರಣೆ ನಡೆಸಬೇಕು, ಆಗಲೇ ಇತರ ವಿದೇಶಿ ಸಂಸ್ಥೆಗಳಿಗೆ ಇಂತಹ ಭಾರತ ವಿರೋಧಿ ಕೃತ್ಯಗಳನ್ನು ಮಾಡಲು ಹೆದರಿಕೆಯಾಗುವುದು !

ನವದೆಹಲಿ – ‘ಹ್ಯುಂಡೈ’ ಎಂಬ ದಕ್ಷಿಣ ಕೊರಿಯಾದ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಫೆಸಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಪರ ಪೋಸ್ಟನ್ನು ಪ್ರಸಾರಿಸಲಾಗಿದೆ. ಪಾಕಿಸ್ತಾನವು ಫೆಬ್ರುವರಿ 5 ನ್ನು ‘ಕಾಶ್ಮೀರ ದಿವಸ’ ಎಂದು ಆಚರಿಸುತ್ತದೆ. ಈ ನಿಮಿತ್ತ ಈ ಸಂಸ್ಥೆಯು ಪೋಸ್ಟಿನಲ್ಲಿ ‘ಬನ್ನಿ, ಕಾಶ್ಮೀರಿ ಬಂಧುಗಳ ಬಲಿದಾನವನ್ನು ನೆನೆಯೋಣ ಮತ್ತು ಅದನ್ನು ಸಮರ್ಥಿಸೋಣ; ಏಕೆಂದರೆ ಅವರು ಇಂದಿಗೂ ಸ್ವಾತಂತ್ರ್ಯಕ್ಕಾಗಿ ಸಂಘರ್ಷ ನಡೆಸುತ್ತಿದ್ದಾರೆ’, ಎಂಬ ವಿಷಯವನ್ನು ಪ್ರಸಾರಿಸಲಾಗಿದೆ. ಈ ಪೋಸ್ಟಿನಿಂದಾಗಿ ಭಾರತದಲ್ಲಿ ಹ್ಯುಂಡೈಗೆ ವಿರೋಧ ವ್ಯಕ್ತವಾಗುತ್ತಿದೆ. ‘#BoycottHyundai’ ಎಂಬ ಹೆಸರಿನ ಟ್ರೆಂಡ್ ನಡೆಸಲಾಗುತ್ತಿದೆ. ‘ಹ್ಯುಂಡೈ’ 1996ರಿಂದ ಭಾರತದಲ್ಲಿ ವ್ಯವಸಾಯ ನಡೆಸುತ್ತಿದೆ.

‘ಭಾರತವು ನಮಗೆ ಎರಡನೇಯ ಮನೆಯಾಗಿದೆ !'(ಅಂತೆ) – ಹ್ಯುಂಡೈ

ಕೇವಲ ವ್ಯಾಪಾರಿ ಲಾಭಕ್ಕಾಗಿ ಭಾರತವು ಈ ಸಂಸ್ಥೆಯ ಎರಡನೇಯ ಮನೆಯಾಗಿದೆ. ಹ್ಯುಂಡೈಗೆ ನಿಜವಾಗಿಯೂ ಭಾರತದ ವಿಷಯದಲ್ಲಿ ಪ್ರೀತಿಯಿದ್ದರೆ ಅದು ಭಾರತೀಯರ ಮನಸ್ಸು ಮತ್ತು ಐಕ್ಯತೆಯನ್ನು ನೋಯಿಸುವ ಪೋಸ್ಟನ್ನು ತಯಾರಿಸುತ್ತಿರಲಿಲ್ಲ ! ಇದರೊಂದಿಗೆ ಇಂತಹ ಪೋಸ್ಟ್ ನ ನಂತರವೂ ಹ್ಯುಂಡೈ ಕ್ಷಮಾಯಾಚನೆ ಮಾಡಿಲ್ಲ !

ಹ್ಯುಂಡೈ ನಿಂದ ಪ್ರಸಾರಿತಗೊಳಿಸಲಾದ ಮನವಿಯಲ್ಲಿ ‘ನಾವು ಭಾರತದ ಮಾರುಕಟ್ಟೆಯಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರತರಾಗಿದ್ದೇವೆ. ನಾವು ಭಾರತದ ರಾಷ್ಟ್ರವಾದವನ್ನು ಸಮರ್ಥಿಸಲು ದೃಢವಾಗಿ ನಿಂತಿದ್ದೇವೆ. ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುವ ಅನೇಕ ಪೋಸ್ಟಗಳು ನಮ್ಮ ಸೇವೆಯನ್ನು ನೋಯಿಸುತ್ತವೆ. ಭಾರತವು ನಮಗೆ ಎರಡನೇಯ ಮನೆಯಾಗಿದೆ. ಭಾರತದ ನಾಗರೀಕರ ಒಳಿತಿಗಾಗಿ ನಾವು ಭಾರತದೊಂದಿಗೆ ಸರ್ವತೋಪರಿ ಪ್ರಯತ್ನ ಮಾಡುತ್ತಿರುತ್ತೇವೆ ‘ ಎಂದು ಹೇಳಲಾಗಿದೆ.