‘ಸರಕಾರಿ ಭೂಮಿ ಅಕ್ರಮ ಅತಿಕ್ರಮಣ – ಲ್ಯಾಂಡ್ ಜಿಹಾದ್ ?’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !
ರಸ್ತೆ, ಸೇತುವೆ, ನಿಲ್ದಾಣಗಳು ಇತ್ಯಾದಿಗಳಲ್ಲಿ ಅತಿಕ್ರಮಣ ಮಾಡಿ ಮಸೀದಿ, ಮಜಾರಗಳನ್ನು ನಿರ್ಮಿಸುವುದು ಇದು ದೆಹಲಿ, ಗುರುಗ್ರಾಮ್‌ನಂತಹ ನಗರಗಳಲ್ಲಿ ಪ್ರತಿನಿತ್ಯವಾಗಿದೆ ಮತ್ತು ಇದನ್ನು ವಿರೋಧಿಸಿದರೆ ವಕ್ಫ್ ಬೋರ್ಡ್ ಅವರಿಗಾಗಿ ಓಡಿ ಬರುತ್ತದೆ. ಜಾಗೃತ ನಾಗರಿಕರು ತಮ್ಮ ಪ್ರದೇಶಗಳಲ್ಲಿ ಇಂತಹ ಅತಿಕ್ರಮಣಗಳನ್ನು ತಡೆಗಟ್ಟಲು ಪೊಲೀಸ್-ಆಡಳಿತಕ್ಕೆ ನೇರ ಅಥವಾ ಆನ್‌ಲೈನ್ ದೂರುಗಳನ್ನು ಸಲ್ಲಿಸಲು ಮುಂದೆ ಬರುವುದು ಅಗತ್ಯವಾಗಿದೆ. ಸರಿಯಾಗಿ ದೂರು ನೀಡಿದರೆ ಪೊಲೀಸ್-ಆಡಳಿತ ಖಂಡಿತವಾಗಿಯೂ ಗಮನಹರಿಸಬೇಕಾಗುತ್ತದೆ. ಈ ಅತಿಕ್ರಮಣಗಳನ್ನು ತಡೆಯಲು ಈಗಲೇ ಪ್ರಯತ್ನಿಸದಿದ್ದರೆ ಭವಿಷ್ಯದಲ್ಲಿ ಹಿಂದೂಗಳಿಗೆ ಕಠಿಣವಾಗಲಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಸರಕಾರಿ ಭೂಮಿಯ ಮೇಲೆ ಅಕ್ರಮ ಅತಿಕ್ರಮಣ – ಲ್ಯಾಂಡ್ ಜಿಹಾದ್ ?’ ಎಂಬ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಸರಕಾರಿ ಹಾಗೂ ಇತರೆ ಭೂಮಿಯ ಮೇಲೆ ಅತಿಕ್ರಮಣವಾಗುತ್ತಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ
ಬೆಂಗಳೂರಿನ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿರುವ ಕಾರ್ಮಿಕರ ವಿಶ್ರಾಂತಿಗೃಹವನ್ನು ಮಸೀದಿಯಾಗಿ ಪರಿವರ್ತಿಸಿದ್ದರು. ಕಳೆದ ೧೦ ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮವಾಗಿ ರೂಪಾಂತರಗೊಂಡ ಮಸೀದಿಗೆ ಹಿಂದೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವನಿಷ್ಠ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಪ್ರಕರಣದಲ್ಲಿ ರೈಲ್ವೆ ಆಡಳಿತ ಗಮನಹರಿಸಬೇಕಾಯಿತು. ಇದರಿಂದಾಗಿ ಇಲ್ಲಿಯ ವಿಶ್ರಾಂತಿ ಗೃಹದಲ್ಲಿದ್ದ ಮಸೀದಿಯ ಅವಶೇಷಗಳನ್ನು ತೆಗೆದು ಮೊದಲಿನ ಸ್ಥಿತಿಗೆ ತರಬೇಕಾಯಿತು. ಈ ಬಗ್ಗೆ ತಪ್ಪಿತಸ್ಥ ರೈಲ್ವೆ ಅಧಿಕಾರಿಗಳ ವಿರುದ್ಧ ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸರಕಾರಿ ಹಾಗೂ ಇತರೆ ಭೂಮಿಯ ಮೇಲೆ ಅತಿಕ್ರಮಣವಾಗುತ್ತಿದ್ದೂ ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ. ಹಿಂದೂಗಳು ಜಾಗೃತಗೊಂಡು ಇದನ್ನು ತಡೆಯಲು ಮುಂದಾಗಬೇಕು ಎಂದು ಹೇಳಿದರು.
ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಶ್ರೀ. ಸುರೇಶ ಜೈನ್ ಇವರು ಮಾತನಾಡುತ್ತಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ಕೋಟೆಗಳ ಮೇಲೆ ಅಕ್ರಮವಾಗಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಇಲ್ಲಿನ ಸರಕಾರಗಳು ಕಿವುಡು-ಮೂಕರಾಗಿ ಬಿಟ್ಟಿವೆ. ಹಿಂದೂಗಳು ಮುಂದೆ ಬಂದು ಇದನ್ನು ವಿರೋಧಿಸಬೇಕು. ಹಿಂದೂಗಳು ಈಗ ಜಾಗೃತರಾಗುತ್ತಿದ್ದಾರೆ. ಈ ಅತಿಕ್ರಮಣಗಳನ್ನು ತಡೆಯಲು ನಮ್ಮ ಸಂಘಟನೆಯ ವತಿಯಿಂದ ಎಲ್ಲಾ ರೀತಿಯಲ್ಲಿ ವಿರೋಧಿಸುವೆವು ಎಂದು ಹೇಳಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮೀರಾ ರಾಘವೇಂದ್ರ ಇವರು ಮಾತನಾಡುತ್ತಾ, ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ರಸ್ತೆ ಹಾಗೂ ಸರಕಾರಿ ಆಸ್ತಿಯಲ್ಲಿ ಅತಿಕ್ರಮಣವನ್ನು ಮಾಡಿ ಅಲ್ಲಿ ಮಸೀದಿಗಳನ್ನು ನಿರ್ಮಿಸುವ ಪ್ರಮಾಣ ಹೆಚ್ಚಾಗುತ್ತಿವೆ. ಇದು ನಡೆಯುತ್ತಿರುವ ‘ಲ್ಯಾಂಡ್ ಜಿಹಾದ್’ ತಡೆಯಲು ನಮ್ಮ ದೇಶದಲ್ಲಿ ಕಾನೂನನ್ನು ತರುವುದು ಅಗತ್ಯವಿದೆ. ಇಂದು ನಮ್ಮ ದೇಶದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಇಂತಹ ಪರಿಸ್ಥಿತಿ ಉದ್ಭವಿಸಿದೆ. ಹಿಂದೂಗಳನ್ನು ವಿವಿಧ ರೀತಿಯಲ್ಲಿ ಕಾರ್ಯ ಮಾಡುವಾಗ ಕಾನೂನಿನ ಸಹಾಯದ ಅಗತ್ಯವಿದೆ ಎಂದು ಹೇಳಿದರು.