
ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಹಿಜಾಬ್ ವಿಷಯದಲ್ಲಿ ವಿವಾದ ಶುರುವಾಗಿದ್ದು, ಇದೀಗ ಹಿಜಾಬ್ ವಿಷಯದ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಬಹುದೊಡ್ಡ ಸಂಚು ರೂಪಿಸಿರುವುದನ್ನು ಪೋಲಿಸರು ವಿಫಲಗೊಳಿಸಿದ್ದಾರೆ. ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ಮುಸಲ್ಮಾನ ಯುವತಿಯರು ಪ್ರತಿಭಟನೆ ಮಾಡುವಾಗ, ಅವರಿಗೆ ಬೆಂಬಲ ನೀಡಲು ಮತಾಂಧರು ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದು, 5 ಜನರಲ್ಲಿ ಇಬ್ಬರನ್ನು ಅಂದರೆ ಹಾಜಿ ಅಬ್ದುಲ್ ಮುಜಬ್ ಹಾಗೂ ರಜಬ್‌ನನ್ನು ಪೋಲಿಸರು ಬಂಧನ ಮಾಡಿದ್ದಾರೆ. ಉಳಿದ ಕಲೀಲ್, ಈಪಿಕರ್, ರಿಜ್ವಾನ್ ಪರಾರಿಯಾಗಿದ್ದಾರೆ. ಈ ವೇಳೆಯಲ್ಲಿ ಬಂಧಿತರಿಂದ ಅಪಾಯಕಾರಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಯಲಾದ ವಿಷಯವೇನೆಂದರೆ ಬಂಧಿತರು ರೌಡಿಶೀಟರ್ ಆಗಿದ್ದು, ಮಾರಕಾಸ್ತ್ರಗಳನ್ನು ಬೀಸಿ ಸಾರ್ವಜನಿಕರ ಪ್ರಾಣ ತೆಗೆಯುವ ಸಂಚನ್ನು ರೂಪಿಸಿದ್ದರು. ಇದು ಅತ್ಯಂತ ಅಪಾಯಕಾರಿ ಮತ್ತು ಅತ್ಯಂತ ಗಂಭೀರ ವಿಷಯವಾಗಿದೆ. ಉಡುಪಿ ಜಿಲ್ಲೆಯು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಮತಾಂಧ ಶಕ್ತಿಗಳು ಹಿಜಾಬ್ ಮೂಲಕ ಕೋಮು ಭಾವನೆಯನ್ನು ಕೆರಳಿಸಿ ಕೋಮು ಗಲಭೆಯನ್ನು ಮಾಡುವ ಷಡ್ಯಂತ್ರ್ಯ ರಚಿಸಿದ್ದು, ಇದರ ಪೂರ್ಣ ತನಿಖೆ ಮಾಡಬೇಕು ಮತ್ತು ಕೂಡಲೇ ಇದರ ಹಿಂದಿನ ಮೂಲ ರೂವಾರಿಯನ್ನು ಪತ್ತೆ ಹಚ್ಚಬೇಕು ಮತ್ತು ಯಾವುದೇ ಕಾರಣಕ್ಕೂ ಹಿಜಾಬ್‌ಗೆ ಅವಕಾಶ ನೀಡದೇ, ವಸ್ತ್ರಸಂಹಿತೆಯನ್ನು ಜಾರಿ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!