ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧನ

ಮುಂಬಯಿಯಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ

ಶೀಘ್ರವೇ ಭಾರತಕ್ಕೆ ಕರೆತರುವರು !

ನವದೆಹಲಿ – ಮುಂಬಯಿಯಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧಿಸಲಾಗಿದೆ. ಕಳೆದ 29 ವರ್ಷಗಳಿಂದ ತನಿಖಾ ದಳ ಅವನನ್ನು ಹುಡುಕುತ್ತಿದ್ದರು. ಆತನ ವಿರುದ್ಧ 1997 ರಲ್ಲಿ `ರೆಡ್ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿತ್ತು.

1. ಭಾರತೀಯ ವ್ಯವಸ್ಥೆಯಿಂದ ನೀಡಿರುವ ಮಾಹಿತಿಯ ಆಧಾರದ ಮೇಲೆ ಅವನ ಮೇಲೆ ಕ್ರಮ ಕೈಗೊಳ್ಳಲಾಯಿತು. ಅವನ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಆತನನ್ನು ಭಾರತಕ್ಕೆ ಒಪ್ಪಿಸಲಾಗುವುದು.

2. ಅಬೂಬಕರ ಇವನು ಅಂತರರಾಷ್ಟ್ರೀಯ ಜಿಹಾದಿ ಭಯೋತ್ಪಾದಕ ದಾವೂದ್ ಇಬ್ರಾಹಿಂ ಇವನ ಆಪ್ತ ಸಹಚರನಾಗಿದ್ದಾನೆ 2021 ರಲ್ಲಿ ಅಬೂಬಕರ್ ನನ್ನು ಯು.ಎ.ಇ. ಯಿಂದ ಬಂಧಿಸಲಾಗಿತ್ತು. ಆ ಸಮಯದಲ್ಲಿ ದಾಖಲೆಗಳ ಕೊರತೆಯಿಂದಾಗಿ ಅವನು ಬಿಡುಗಡೆಗೊಂಡಿದ್ದನು.

3. ಅಬೂಬಕರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಪ್ರಶಿಕ್ಷಣ ಹಾಗೂ ಸ್ಫೋಟ ನಡೆಸುವ ಪ್ರಶಿಕ್ಷಣ ಪಡೆದಿರುವ ಸಾಕ್ಷಿಗಳು ದೊರಕಿವೆ. ಪಾಕಿಸ್ತಾನ ಮತ್ತು ಯು.ಎ.ಇ.ಯಲ್ಲಿ ಅವನು ವಾಸವಾಗಿದ್ದನು.