ನಾವು ರಾಹುಲ್ ಗಾಂಧಿಯವರ ಹೇಳಿಕೆಗೆ ಬೆಂಬಲಿಸುವುದಿಲ್ಲ ! – ಅಮೇರಿಕಾದಿಂದ ಸ್ಪಷ್ಟನೆ

ರಾಹುಲ್ ಗಾಂಧಿಯವರು ಭಾರತ ಸರಕಾರದ ತಪ್ಪಾದ ಧೋರಣೆಯಿಂದ ಚೀನಾ ಮತ್ತು ಪಾಕಿಸ್ತಾನ ಒಟ್ಟಾದರು ಎಂದು ಟೀಕಿಸಿದ ಪ್ರಕರಣ

ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗಲು ಭಾಜಪ ಸರಕಾರವೇ ಹೊಣೆ ಎಂದು ನಿರ್ಧರಿಸಿ ರಾಹುಲ ಗಾಂಧಿ ನಗೆಪಾಟಲಿಗೀಡಾಗಿದ್ದರೆ, ಇದು ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಇದು ಅಮೇರಿಕಾದ ಹೇಳಿಕೆಯಿಂದಲೂ ಸ್ಪಷ್ಟವಾಗಿದೆ! – ಸಂಪಾದಕರು

ವಾಷಿಂಗ್ಟನ್ (ಅಮೇರಿಕಾ) – ಪಾಕಿಸ್ತಾನ ಮತ್ತು ಚೀನಾ ಇವರಲ್ಲಿ ಹೇಗೆ ಸಂಬಂಧವಿದೆ, ಇದರ ಬಗ್ಗೆ ಆ ಉಭಯ ದೇಶಗಳೇ ಹೇಳಬೇಕು; ಆದರೆ ನಾವು ನಿಶ್ಚಿತವಾಗಿ ಇಂತಹ ಹೇಳಿಕೆಗೆ ಬೆಂಬಲ ನೀಡುವುದಿಲ್ಲ, ಎಂಬ ಶಬ್ದಗಳಲ್ಲಿ ಅಮೆರಿಕಾವು ಕಾಂಗ್ರೆಸ್ಸಿನ ನಾಯಕ ಮತ್ತು ಸಂಸದ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಇವರು ಲೋಕಸಭೆಯಲ್ಲಿ ಭಾಷಣ ಮಾಡುವಾಗ ‘ಚೀನಾ ಮತ್ತು ಪಾಕಿಸ್ತಾನ ಇವರಿಗೆ ಭಾರತದ ವಿರುದ್ಧ ಒಟ್ಟಾಗಲು ಕೇಂದ್ರ ಸರಕಾರದ ವಿದೇಶಾಂಗ ನೀತಿಯಿಂದಲೇ ಈ ದೊಡ್ಡ ತಪ್ಪಿಗೆ ಕಾರಣವಾಗಿದೆ. ಭಾಜಪ ದೇಶದ ಸುರಕ್ಷತೆ ಜೊತೆಗೆ ಆಟವಾಡುತ್ತಿದೆ. ನಾಗರಿಕರನ್ನು ಅಪಾಯದ ಹಳ್ಳಕ್ಕೆ ತಳ್ಳುತ್ತಿದೆ’, ಎಂದು ಟೀಕಿಸಿದ್ದಾರೆ. ಈ ಬಗ್ಗೆ ಅಮೇರಿಕಾದ ವಿದೇಶಾಂಗ ಮಂತ್ರಾಲಯದ ವಕ್ತಾರ ನೆಡ್ ಪ್ರೈಸ್ ಇವರು ಮೇಲಿನ ಪ್ರತಿಕ್ರಿಯೆ ನೀಡಿದರು.