ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಯ ಹತ್ಯೆ

‘ಭಾರತಕ್ಕೆ ಹೊರಟು ಹೋಗು’ ಎಂದು ಬೆದರಿಕೆ ಒಡ್ಡುತ್ತಿದ್ದ !

ಪಾಕಿಸ್ತಾದಲ್ಲಿನ ಅಸುರಕ್ಷಿತ ಹಿಂದೂಗಳು ! ಭಾರತವು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಯಾವಾಗ ಹೆಜ್ಜೆ ಇಡಲಿದೆ ?- ಸಂಪಾದಕರು 

ಘೋಟಕಿ (ಪಾಕಿಸ್ತಾನ) – ಘೋಟಕಿ ಜಿಲ್ಲೆಯ ಡಹಾರಕಿ ನಗರದಿಂದ ಎರಡು ಕಿಲೋಮೀಟರ್ ಅಂತರದಲ್ಲಿ ಸುತಾನ ಲಾಲ ದೇವಾನ ಈ ಹಿಂದೂ ವ್ಯಾಪಾರಿಯನ್ನು ದುಶ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದರು. ಈ ದಾಳಿಯ ಸಮಯ ಅವರ ಜೊತೆಗೆ ಇದ್ದ ಅವರ ಸಂಬಂಧಿಕ ಹರೀಶ್ ಕುಮಾರ ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಹರ ಸಮಾಜದವರ ಕೆಲವು ಜನರಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಒಬ್ಬ ಕ್ರೈಸ್ತ ವ್ಯಾಪಾರಿಯ ಹತ್ಯೆ ಮಾಡಲಾಗಿತ್ತು.

1. ಕೆಲವು ದಿವಗಳ ಹಿಂದೆ ಸುತಾನ ಇವರು ಕೆಲವು ಜನರಿಂದ ನನಗೆ ಬೆದರಿಕೆ ಬರುತ್ತಿದೆ ಎಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ‘ಜೀವಂತವಾಗಿ ಇರುವುದಿದ್ದರೇ, ಭಾರತಕ್ಕೆ ಹೊರಟುಹೋಗು’ ಎಂಬ ಬೆದರಿಕೆ ನೀಡುತ್ತಿದ್ದರು ಎಂದು ಹೇಳುತ್ತಾ ಸುತಾನ ಇವರು ಪೊಲೀಸರಲ್ಲಿ ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದರು. `ಪಾಕಿಸ್ತಾನ ಇದೇ ನನ್ನ ಮಾತೃಭೂಮಿ ಮತ್ತು ಕರ್ಮಭೂಮಿಯಾಗಿದೆ. ಇಲ್ಲಿಂದ ನಾನು ಎಲ್ಲಿಗೂ ಹೋಗುವುದಿಲ್ಲ’, ಎಂದು ಸುತಾನನು ಅವರಿಗೆ ಹೇಳಿದ್ದರು ಎಂದು ಹೇಳಲಾಗುತ್ತಿದೆ.

2. ದಾಳಿಯ ನಂತರ ಗಾಯಗೊಂಡ ಸೂತಾನ ಒಂದು ವಿಡಿಯೋ ಮಾಡಿ ಅದರಲ್ಲಿ ಅವರು, `ನನ್ನ ಮೇಲೆ ದಾಳಿ ನಡೆದಿದೆ, ಭೂಮಿಯ ವಿವಾದದಿಂದ ಸೋದರಮಾವನೇ ಬೇರೆ ನಾಲ್ಕು ಜನರ ಜೊತೆಗೆ ಸೇರಿ ನನ್ನ ಮೇಲೆ ದಾಳಿ ಮಾಡಿದರು.’ ಈ ವಿಡಿಯೋ ಪ್ರಸಾರವಾಗುತ್ತಿದೆ.

3. ಸುತಾನ ಲಾಲ ಇವರ ಹತ್ಯೆಯ ವಿರೋಧದಲ್ಲಿ ಈ ಪ್ರದೇಶದಲ್ಲಿನ ಅಂಗಡಿ-ಮುಂಗಟ್ಟುಗಳು ಮುಚ್ಚಲಾಗಿತ್ತು. ಪಾಕಿಸ್ತಾನದಲ್ಲಿ ವಿರೋಧಿ ಪಕ್ಷ `ಪಾಕಿಸ್ತಾನ್ ಮುಸ್ಲಿಮ್ ಲೀಗ್’ ನವಾಜ್ ಗುಂಪಿನಿಂದ ಹತ್ಯೆಯ ವಿರೋಧ ವ್ಯಕ್ತಪಡಿಸಿದ್ದಾರೆ.