ದೈನಿಕ ‘ಸನಾತನ ಪ್ರಭಾತ’ದ ‘ಕಪ್ಪುಬಿಳುಪು’ ಸಂಚಿಕೆಯ ತುಲನೆಯಲ್ಲಿ ‘ಬಣ್ಣದ ಗುರುಪೂರ್ಣಿಮಾ ವಿಶೇಷಾಂಕ’ದಿಂದ ತುಂಬಾ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಣೆಯಾಗುವುದು ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ದಿನಪತ್ರಿಕೆಗೆ ಸಂಬಂಧಿಸಿ ನಾವೀನ್ಯಪೂರ್ಣ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯು ‘ದೈನಿಕ ‘ಸನಾತನ ಪ್ರಭಾತ’ದ ಧ್ಯೇಯವಾಗಿದೆ. ದೈನಿಕದಿಂದ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಮಾರ್ಗದರ್ಶಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಅದೇ ರೀತಿ ಹಿಂದೂ ಧರ್ಮದ ಪ್ರಮುಖ ಹಬ್ಬ ಮತ್ತು ಉತ್ಸವಗಳ ಹಿಂದಿನ ಅಧ್ಯಾತ್ಮಶಾಸ್ತ್ರ ಹಾಗೂ ಅವುಗಳನ್ನು ಆಚರಿಸುವ ಯೋಗ್ಯ ಪದ್ಧತಿಯ ವಿಷಯದಲ್ಲಿ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ. ದೈನಿಕದ ಮೂಲಕ ಸಾರ್ವಜನಿಕ ಉತ್ಸವಗಳಲ್ಲಿನ ಅಯೋಗ್ಯ ಕೃತಿಗಳ ವಿರುದ್ಧ ಜನಜಾಗೃತಿಯನ್ನೂ ಮಾಡಲಾಗುತ್ತದೆ. ಇದರಿಂದ ಸಮಾಜಕ್ಕೆ ಧರ್ಮಶಿಕ್ಷಣ ದೊರೆತು ಅದು ಧರ್ಮಾಚರಣಿಯಾಗುತ್ತದೆ. ‘ಸಮಾಜಕ್ಕೆ ಏನು ಇಷ್ಟವಾಗುತ್ತದೆ’, ಎನ್ನುವುದ ಕ್ಕಿಂತ ‘ಸಮಾಜಕ್ಕೆ ಏನು ಆವಶ್ಯಕವಿದೆ’, ಎನ್ನುವ ವಿಚಾರ ಮಾಡಲಾಗುತ್ತದೆ. ದೇಶ-ವಿದೇಶಗಳಲ್ಲಿನ ಮಹತ್ವದ ಘಟನೆಗಳ ವಾರ್ತೆಗಳನ್ನು ನೀಡುವಾಗ ಆ ಘಟನೆಗಳನ್ನು ನೋಡುವ ಯೋಗ್ಯ ದೃಷ್ಟಿಕೋನವನ್ನೂ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಅದರಿಂದ ಸಮಾಜಕ್ಕೆ ಯೋಗ್ಯ-ಅಯೋಗ್ಯ ಯಾವುದು, ಎಂಬುದು ಅರಿವಾಗುತ್ತದೆ. ಅದೇ ರೀತಿ ಸಮಾಜಪ್ರಬೋಧನೆ ಮಾಡುವ ‘ಬೋಧಚಿತ್ರ’ಗಳನ್ನು ಪ್ರಕಟಿಸಲಾಗುತ್ತದೆ; ಅದರಿಂದ ಸಮಾಜವು ಯೋಗ್ಯ ದಿಕ್ಕಿನಲ್ಲಿ ವಿಚಾರ ಮಾಡಲು ಪ್ರವೃತ್ತವಾಗುತ್ತದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಪ್ರತಿದಿನ ದೈನಿಕ ‘ಸನಾತನ ಪ್ರಭಾತ’ದ ೮ ಪುಟಗಳ ಕಪ್ಪುಬಿಳುಪು ಸಂಚಿಕೆಯನ್ನು ಪ್ರಕಟಿಸಲಾಗುತ್ತದೆ. ವರ್ಷವಿಡೀ ಕೆಲವು ಬಣ್ಣದ ವಿಶೇಷಾಂಕಗಳನ್ನು ಪ್ರಕಟಿಸಲಾಗುತ್ತದೆ. ಅದೇ ರೀತಿ ಪ್ರತಿವರ್ಷ ಗುರು ಪೂರ್ಣಿಮೆಯ ನಿಮಿತ್ತದಲ್ಲಿ ಬಣ್ಣದ ವಿಶೇಷಾಂಕಗಳನ್ನು ಕೂಡ ಪ್ರಕಟಿಸಲಾಗುತ್ತದೆ. ದೈನಿಕ ‘ಸನಾತನ ಪ್ರಭಾತ’ದಿಂದ ಪ್ರಕ್ಷೇಪಣೆಯಾಗುವ ಸ್ಪಂದನವನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ೧೮.೧೨.೨೦೧೯ ರಂದು ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗೆ ‘ಯು.ಎ.ಎಸ್.’ ಈ ಉಪಕರಣವನ್ನು ಉಪಯೋಗಿಸಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

‘ಸನಾತನ ಪ್ರಭಾತ’ದಲ್ಲಿ ರಜ-ತಮ ಪ್ರಧಾನ ವಾರ್ತೆಗಳನ್ನು ಮುದ್ರಿಸುತ್ತಿದ್ದರೂ ಅದರಿಂದ ಸಾತ್ತ್ವಿಕತೆ ಪ್ರಕ್ಷೇಪಣೆಯಾಗುವ ಕಾರಣವೆಂದರೆ, ಅದರ ಸಾತ್ತ್ವಿಕ ಉದ್ದೇಶ ಮತ್ತು ಅದರಲ್ಲಿ ಸೇವೆ ಮಾಡುವ ಸಾಧಕರು

ಪರಾತ್ಪರ ಗುರು ಡಾ. ಆಠವಲೆ

‘ಸನಾತನ ಪ್ರಭಾತ’ ನಿಯತಕಾಲಿಕೆ ಆಗಿರುವುದರಿಂದ ಅದರಲ್ಲಿ ಪ್ರತಿದಿನ ಘಟಿಸುವ ರಜ-ತಮ ಪ್ರಧಾನ ವಾರ್ತೆಗಳನ್ನೂ ಮುದ್ರಿಸಬೇಕಾಗುತ್ತದೆ. ಆದರೂ ಅದರಿಂದ ಸಾತ್ತ್ವಿಕತೆಯು ಪ್ರಕ್ಷೇಪಣೆಯಾಗುತ್ತದೆ, ಎಂಬುದು ಉಪಕರಣದ ಮೂಲಕ ಮಾಡಿದ ಪರೀಕ್ಷೆಯಿಂದ ಸಿದ್ಧವಾಗಿದೆ. ಈ ಸಾತ್ತ್ವಿಕತೆಯ ಕಾರಣವೆಂದರೆ, ಸತ್ತ್ವಪ್ರಧಾನ ಸಮಾಜದ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದೇ ನಿಯತಕಾಲಿಕೆಯ ಉದ್ದೇಶವಾಗಿದೆ ಹಾಗೂ ನಿಯತಕಾಲಿಕೆಯಲ್ಲಿ ಸೇವೆ ಮಾಡುವವರೆಲ್ಲರೂ ಸಾಧಕರಾಗಿದ್ದಾರೆ. ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯಿಂದಾಗಿ ವಾಚಕರಿಗೆ ಮತ್ತು ಸಾಧಕರಿಗೆ ಅನುಭೂತಿಗಳು ಸಹ ಬರುತ್ತದೆ’.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

‘ಸನಾತನ ಪ್ರಭಾತ’ದಲ್ಲಿ ಸಾತ್ತ್ವಿಕತೆ ಇರುವುದರಿಂದ ಅನಿಷ್ಟ ಶಕ್ತಿಗಳ ತೊಂದರೆ ಇರುವ ಅನೇಕ ಜನರು ಚೈತನ್ಯವನ್ನು ಪಡೆಯಲು ಅದನ್ನು ಉಪಯೋಗಿಸುತ್ತಾರೆ ಹಾಗೂ ಅವರಿಗೆ ಅದರ ಲಾಭವೂ ಆಗುತ್ತದೆ.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ದೈನಿಕ ‘ಸನಾತನ ಪ್ರಭಾತ’ದ (ಮರಾಠಿ) ಗೋವಾ ಮತ್ತು ಸಿಂಧುದುರ್ಗ ಆವೃತ್ತಿಯ ಮುಂದಿನ ಎರಡು ಸಂಚಿಕೆಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.

ಅ. ದೈನಿಕ ‘ಸನಾತನ ಪ್ರಭಾತ’ದ ೧೮.೧೨.೨೦೧೯ ರಂದು ಪ್ರಕಾಶಿಸಿದ ಕಪ್ಪುಬಿಳುಪು ಸಂಚಿಕೆ : ಇದು ೮ ಪುಟಗಳದ್ದಾಗಿದ್ದು ಇದರಲ್ಲಿ ಪ್ರತಿದಿನದ ವಿಷಯಗಳನ್ನು ಪ್ರಕಾಶಿಸಲಾಗಿತ್ತು.

ಆ. ದೈನಿಕ ‘ಸನಾತನ ಪ್ರಭಾತ’ದ ೧೬.೭.೨೦೧೯ ರ ಗುರು ಪೂರ್ಣಿಮೆಯ ನಿಮಿತ್ತದಲ್ಲಿ ಪ್ರಕಾಶಿಸಿದ ಬಣ್ಣದ ಗುರುಪೂರ್ಣಿಮಾ ವಿಶೇಷಾಂಕ : ಇದು ೧೬ ಪುಟಗಳ ಸಂಚಿಕೆಯಾಗಿದ್ದು ಇದರಲ್ಲಿ ಗುರುಪೂರ್ಣಿಮೆಯ ನಿಮಿತ್ತದಲ್ಲಿ ಸಂತರ ಸಂದೇಶ (ಅವರ ಬಣ್ಣದ ಛಾಯಾಚಿತ್ರಗಳೊಂದಿಗೆ), ಸನಾತನದ ಸಂತರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಭೇಟಿಯ ಭಾವಸ್ಪರ್ಶಿ (ಬಣ್ಣದ) ಛಾಯಾಚಿತ್ರಗಳು ಹಾಗೂ ವಿಶೇಷ ಲೇಖನಗಳನ್ನು ಕೂಡ ಪ್ರಕಟಿಸಲಾಗಿತ್ತು.

೨. ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ – ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚು ಪ್ರಮಾಣದಲ್ಲಿರುವುದು

ದೈನಿಕ ‘ಸನಾತನ ಪ್ರಭಾತ’ದ ಕಪ್ಪುಬಿಳುಪು ಸಂಚಿಕೆ ಮತ್ತು ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಇವೆರಡೂ ವಿಧದ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. ಕಪ್ಪುಬಿಳುಪು ಸಂಚಿಕೆ ಮತ್ತು ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದಲ್ಲಿ ಸಕಾರಾತ್ಮಕ ಊರ್ಜೆ ಇದೆ ಹಾಗೂ ಅದರ ಪ್ರಭಾವಲಯ ಅನುಕ್ರಮವಾಗಿ ೮.೫೮ ಮೀಟರ್ ಮತ್ತು ೧೫.೭೫ ಮೀಟರ್ ಇದೆ; ಅಂದರೆ ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೭.೧೭ ಮೀಟರ್‌ನಷ್ಟು ಹೆಚ್ಚು ಇದೆ.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದೈನಿಕ ‘ಸನಾತನ ಪ್ರಭಾತ’ದಿಂದ ಅಪಾರ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಯಾಗುವುದರ ಹಿಂದಿನ ಕಾರಣಗಳು

೧. ದೈನಿಕ ‘ಸನಾತನ ಪ್ರಭಾತ’ವು ಭಾಷಾಶುದ್ಧಿಗೆ ಮಹತ್ವ ನೀಡುತ್ತದೆ; ಏಕೆಂದರೆ ಭಾಷೆ ಎಷ್ಟು ಶುದ್ಧವಿರುತ್ತದೆಯೋ ಅಷ್ಟು ಅದರಿಂದ ಸಾತ್ತ್ವಿಕ ಸ್ಪಂದನವು ಪ್ರಕ್ಷೇಪಣೆಯಾಗುತ್ತದೆ.

೨. ದೈನಿಕದಲ್ಲಿ ಸಂಸ್ಕೃತ ಸುಭಾಷಿತಗಳು, ಶ್ಲೋಕಗಳು, ಸಂತರ ಸುವಚನಗಳನ್ನು ಅರ್ಥಸಹಿತ ಮುದ್ರಿಸಲಾಗುತ್ತದೆ. ಇದರಿಂದ ದೈನಿಕದ ಸಾತ್ತ್ವಿಕತೆಯು ಇನ್ನಷ್ಟು ಅಮೂಲ್ಯವಾದ ಹೆಚ್ಚಳವಾಗುತ್ತದೆ.

೩. ದೈನಿಕದಲ್ಲಿ ಸಾಧಕರು ಸಾಧನೆಯ ವಿಷಯದಲ್ಲಿ ಮಾಡಿದ ಪ್ರಯತ್ನ ಹಾಗೂ ಅವರಿಗೆ ಬಂದಿರುವ ಅನುಭೂತಿ, ಕಲಿಯಲು ಸಿಕ್ಕಿದ ವಿಷಯಗಳು ಇತ್ಯಾದಿ ಸಮಾವೇಶವಿದೆ. ಅದನ್ನು ಓದಿ ಸಾಧಕರು ಮತ್ತು ‘ಸನಾತನ ಪ್ರಭಾತ’ದ ವಾಚಕರ ಭಾವಜಾಗೃತಿಯಾಗುತ್ತದೆ. ಇದರಿಂದ ಅವರಿಗೆ ಸಾಧನೆಯ ಪ್ರಯತ್ನ ಮಾಡಲು ಅಥವಾ ಅದನ್ನು ಹೆಚ್ಚಿಸಲು ಪ್ರೇರಣೆ ಸಿಗುತ್ತದೆ.

೪. ದೈನಿಕದಲ್ಲಿ ಸಂತರು ಹೇಳಿರುವ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನೂ ಮುದ್ರಿಸಲಾಗುತ್ತದೆ. ಆದ್ದರಿಂದ ಸಾಧಕರಿಗೆ ಮತ್ತು ಸಮಾಜಕ್ಕೆ ಸಂತರು ಮಾಡಿರುವ ಅಮೂಲ್ಯ ಮಾರ್ಗದರ್ಶನದ ಲಾಭವಾಗುತ್ತದೆ.

೫. ದೈನಿಕದಲ್ಲಿ ಪ್ರಕಟಿಸಲಾಗುವ ಹೆಚ್ಚಿನ ಜಾಹೀರಾತುಗಳನ್ನು ವ್ಯಾವಹಾರಿಕ ಉದ್ದೇಶದಿಂದಲ್ಲ, ಅದನ್ನು ಸಮಾಜಕ್ಕೆ ಯೋಗ್ಯ ಸಾಧನೆಯನ್ನು ಹೇಳಿ ಸೇವೆಯೆಂದು ಪಡೆಯಲಾಗುತ್ತದೆ. ಅದೇ ರೀತಿ ಜಾಹೀರಾತುಗಳ ಸಂರಚನೆಯನ್ನೂ ಸಾತ್ತ್ವಿಕವಾಗಿ ಮಾಡಲಾಗುತ್ತದೆ. ಆದ್ದರಿಂದ ಅವುಗಳಲ್ಲಿಯೂ ಸಾತ್ತ್ವಿಕತೆಯಿರುತ್ತದೆ.

೬. ದೈನಿಕದಲ್ಲಿನ ವಾರ್ತೆಗಳನ್ನು ಬೆರಳಚ್ಚು-ಸಂಕಲನ ಮತ್ತು ಮುದ್ರಿತಶೋಧನ, ದೈನಿಕದ ಸಂರಚನೆ ಮತ್ತು ದೈನಿಕಗಳ ವಿತರಣೆ ಇತ್ಯಾದಿಗಳನ್ನೆಲ್ಲ ಸಾಧಕರು ಸೇವಾಭಾವದಿಂದ ಮಾಡುತ್ತಾರೆ.

೭. ದೈನಿಕ ‘ಸನಾತನ ಪ್ರಭಾತ’ದ ಸಾತ್ತ್ವಿಕ ಉದ್ದೇಶದಿಂದಾಗಿ ಅದಕ್ಕೆ ಇಂದಿನವರೆಗೆ ಅನೇಕ ಸಂತರ ಆಶೀರ್ವಾದ ಲಭಿಸಿದೆ. ಈಶ್ವರನ ಬೆಂಬಲದಿಂದ ನಿರ್ಬಂಧದ ಸಂಕಟಕಾಲವನ್ನೂ ಅದು ಧೈರ್ಯದಿಂದ ಎದುರಿಸಿದೆ.

ಸಂಕ್ಷಿಪ್ತದಲ್ಲಿ ಹೇಳುವುದಾದರೆ ದೈನಿಕ ‘ಸನಾತನ ಪ್ರಭಾತ’ದ ಉದ್ದೇಶ ಹಾಗೂ ದೈನಿಕಕ್ಕೆ ಸಂಬಂಧಿಸಿದ ಎಲ್ಲ ಘಟಕಗಳು ಸಾತ್ತ್ವಿಕವಾಗಿವೆ. ಆದ್ದರಿಂದ ದೈನಿಕ ‘ಸನಾತನ ಪ್ರಭಾತ’ದಿಂದ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಯಾಗುತ್ತವೆ.

೩ ಆ. ದೈನಿಕ ‘ಸನಾತನ ಪ್ರಭಾತ’ದ ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದಿಂದ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಯಾಗುವುದರ ಹಿಂದಿನ ಕಾರಣ : ಗುರುಪೂರ್ಣಿಮೆಯಂದು ಗುರುತತ್ತ್ವ (ಈಶ್ವರೀ ತತ್ತ್ವ) ಪ್ರತಿದಿನದ ತುಲನೆಯಲ್ಲಿ ೧ ಸಾವಿರ ಪಟ್ಟು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತದಲ್ಲಿ ಮಾಡುವ ಸೇವೆ ಮತ್ತು ತ್ಯಾಗದಿಂದ (ಸತ್‌ಗಾಗಿ ಅರ್ಪಣೆ) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟಿನಲ್ಲಿ ಲಾಭವಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯೆಂದರೆ ಇದು ಈಶ್ವರನ ಕೃಪೆಯ ಒಂದು ಅಮೂಲ್ಯವಾದ ಹಬ್ಬವೇ ಆಗಿದೆ. ದೈನಿಕ ‘ಸನಾತನ ಪ್ರಭಾತ’ದ ಗುರುಪೂರ್ಣಿಮಾ ವಿಶೇಷಾಂಕವೆಂದರೆ ಸನಾತನದ ಸಾಧಕರಿಗೆ ಅಮೂಲ್ಯವಾದ ಸ್ವತ್ತಾಗಿದೆ. ದೈನಿಕ ‘ಸನಾತನ ಪ್ರಭಾತ’ದ ೧೬.೭.೨೦೧೯ ರ ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದಲ್ಲಿ ಸಂತರ ಛಾಯಾಚಿತ್ರಗಳು, ಸಂತರು ಗುರುಪೂರ್ಣಿಮೆಯ ನಿಮಿತ್ತದಲ್ಲಿ ಸಾಧಕರಿಗೆ ನೀಡಿರುವ ಸಂದೇಶ, ಸಂತರ ವಿಷಯದ ಲೇಖನಗಳು ಇತ್ಯಾದಿ ವಿಶೇಷ ವಿಷಯಗಳನ್ನು ಪ್ರಕಟಿಸಲಾಗಿತ್ತು. ಇದರಿಂದಾಗಿ ದೈನಿಕದ ಸಾತ್ತ್ವಿಕತೆಯು ಇನ್ನೂ ಹೆಚ್ಚಾಯಿತು. ಅದೇ ರೀತಿ ದೈನಿಕಕ್ಕೆ  ಸಂಬಂಧಿಸಿದ ಸೇವೆ ಮಾಡುವ ಸಾಧಕರು ಗುರುಪೂರ್ಣಿಮೆಯ ನಿಮಿತ್ತದಲ್ಲಿ ಮಾಡಿರುವ ಸೇವೆಯು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಭಾವಪೂರ್ಣವಾಗಿ ಆಗಿರುವುದರಿಂದ ಎಂದಿನ ತುಲನೆಯಲ್ಲಿ ಗುರುಪೂರ್ಣಿಮಾ ವಿಶೇಷಾಂಕದ ಸಂರಚನೆಯು ಹೆಚ್ಚು ಸಾತ್ತ್ವಿಕವಾಗಿತ್ತು. ಇದರಿಂದಾಗಿ ಬಣ್ಣದ ಗುರುಪೂರ್ಣಿಮಾ ವಿಶೇಷಾಂಕದಿಂದ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳ ಪ್ರಕ್ಷೇಪಣೆಯಾಯಿತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೩.೨೦೨೦)

ವಿ-ಅಂಚೆ : [email protected]

ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದ ಈ ಲೇಖನದಲ್ಲಿನ ‘ಯು.ಎ.ಎಸ್ ಉಪಕರಣದ ಪರಿಚಯ, ‘ಉಪಕರಣದ ಮೂಲಕ ಮಾಡುವ ಪರೀಕ್ಷಣೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ, ‘ಘಟಕದ ಪ್ರಭಾವಲಯವನ್ನು ಅಳೆಯುವುದು, ಪರೀಕ್ಷಣೆಯ ಪದ್ಧತಿ ಮತ್ತು ‘ಪರೀಕ್ಷಣೆಯಲ್ಲಿ ಸಮಾನತೆಯು ಬರಲು ವಹಿಸಿದ ಜಾಗರೂಕತೆ ಇತ್ಯಾದಿ ನಿತ್ಯದ ಅಂಶಗಳನ್ನು ಸನಾತನ ಸಂಸ್ಥೆಯ ಜಾಲತಾಣದಲ್ಲಿನ

bit.ly/UASResearch ಈ ಲಿಂಕ್‌ನಲ್ಲಿ ಇಡಲಾಗಿದೆ. ಈ ಲಿಂಕ್ ನಲ್ಲಿನ ಕೆಲವು ಅಕ್ಷರಗಳು (Capital) ಕ್ಯಾಪಿಟಲ್ ಇವೆ.