ಶ್ರೀ ಗಣೇಶ ಜಯಂತಿ (೪.೨.೨೦೨೨)

ಇತಿಹಾಸ

ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.

ಗಣೇಶ ಜಯಂತಿ ಮಹತ್ವ

ಮಾಘ ಶುಕ್ಲ ಚತುರ್ಥಿಯನ್ನು ‘ಗಣೇಶ ಜಯಂತಿ’ ಎಂದು ಆಚರಿಸುತ್ತಾರೆ. ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ.

ಶ್ರೀ ಗಣೇಶ ಚತುರ್ಥಿ ಮಹತ್ವ

ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆಯ ವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮ ಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶ್ರೀ ಗಣಪತಿ’)