ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಿಂದ ಅಪಾರ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು, ದೇವರಕೋಣೆಯಲ್ಲಿನ ದೇವತೆಗಳ ಜೋಡಣೆಯಲ್ಲಿ ಬದಲಾವಣೆ ಮಾಡಿದ ನಂತರ ದೇವರಕೋಣೆಯಿಂದ ಪ್ರಕ್ಷೇಪಿಸುವ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ದುಪ್ಪಟ್ಟಿಗಿಂತ ಹೆಚ್ಚು ಹೆಚ್ಚಳವಾಗುವುದು

ದೇವರಕೋಣೆಯ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿಯೊಂದು ವಿಷಯವನ್ನು ಸತ್ಯಂ ಶಿವಂ ಸುಂದರಂ ಆಗಿರುವಂತೆ ಹೇಗೆ ಮಾಡಬೇಕು ? ಎಂಬುದರ ಬಗ್ಗೆ ಸಾಧಕರಿಗೆ ಅನೇಕ ವಿಷಯಗಳಿಂದ ಕಲಿಸಿದ್ದಾರೆ ಮತ್ತು ಇಂದಿಗೂ ಕಲಿಸುತ್ತಿದ್ದಾರೆ, ಪ್ರತಿಯೊಂದು ವಿಷಯ ಹೆಚ್ಚೆಚ್ಚು ಸಾತ್ತ್ವಿಕವಾಗಿ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಬೇಕೆಂದು ತಳಮಳದಿಂದ ಅವರು ಸತತ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಅವರಲ್ಲಿರುವ ಜಿಜ್ಞಾಸೆಯಿಂದ ಅಧ್ಯಾತ್ಮದಲ್ಲಿನ ವೈಶಿಷ್ಟ್ಯಪೂರ್ಣ ಅಂಶಗಳು ಕಲಿಯಲು ಸಿಗುತ್ತದೆ. ಅದೇ ರೀತಿಯ ಒಂದು ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಇಲ್ಲಿ ನೀಡುತ್ತಿದ್ದೇವೆ. ಪರಾತ್ಪರ ಗುರು ಡಾ. ಆಠವಲೆಯವರ ಸದ್ಯದಲ್ಲಿ ತಮ್ಮ ದೇವರಕೋಣೆಯ ರಚನೆಯನ್ನು ಬದಲಾಯಿಸಲು ಹೇಳಿದರು. ಪರಾತ್ಪರ ಗುರು ಡಾ. ಆಠವಲೆಯವರ ದೇವರಕೋಣೆಯಿಂದ ಪ್ರಕ್ಷೇಪಿತವಾಗುವ ಸ್ಪಂದನವನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿ ಅವರ ಕೋಣೆಯಲ್ಲಿನ ಛಾಯಾಚಿತ್ರವನ್ನು ತೆಗೆದು ಅದನ್ನು ‘ಯು.ಎ.ಎಸ್ (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷೆಯ ವಿವೇಚಣೆಯನ್ನು ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೧. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುವುದು

ಸೌ. ಮಧುರಾ ಕರ್ವೆ

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಲ್ಲಿನ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಇರಲೇ ಇಲ್ಲ; ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿತ್ತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಪರಾತ್ಪರ ಗುರು ಡಾ. ಆಠವಲೆಯವರ ದೇವರಕೋಣೆ ಖಾಲಿಯಿದ್ದಾಗಲೂ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವಿರುವುದು : ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ಮರದ ಕಪಾಟಿನ ಒಂದು ಖಾನೆಯಲ್ಲಿ ಬಹಳಷ್ಟು ವರ್ಷಗಳಿಂದಲೇ ಅವರು ದೇವರ ಕೋಣೆಯನ್ನು ಮಾಡಿದ್ದಾರೆ. ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿನ ದೇವರ ಕೋಣೆಯಲ್ಲಿನ ದೇವತೆಗಳ ಅಸ್ತಿತ್ವದಿಂದ ಅವರ ದೇವರಕೋಣೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ನಿರ್ಮಾಣವಾಗಿದೆ. ಇದರಿಂದ ಅವರ ಖಾಲಿಯಿರುವ (ಮಂಟಪ ಇತ್ಯಾದಿ ಏನೂ ಇಲ್ಲದ) ದೇವರ ಕೋಣೆಯಿಂದಲೂ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತದೆ. (೨೦೨೧ ನೇ ಇಸವಿಯಲ್ಲಿ ದೇವರಕೋಣೆಯಲ್ಲಿನ ಬದಲಾವಣೆ ಮಾಡಿದ ರಚನೆಯ ಅಧ್ಯಯನವನ್ನು ಮಾಡಲು ಬರಬೇಕೆಂದು, ದೇವರ ಕೋಣೆಯಲ್ಲಿನ ದೇವತೆಗಳ ಪ್ರತಿಮೆ ಮತ್ತು ಮೂರ್ತಿಗಳನ್ನು ತೆಗೆದಿಟ್ಟ ನಂತರ (ದೇವರಕೋಣೆ ಖಾಲಿಯಾದ ನಂತರ), ಅದರ ಛಾಯಾಚಿತ್ರವನ್ನು ತೆಗೆಯಲಾಯಿತು.)

೨ ಆ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಿಂದ (೨೦೧೭ ನೇ ಇಸವಿಯಲ್ಲಿನ ಛಾಯಾಚಿತ್ರದಿಂದ) ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು :

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರ ಕೋಣೆಯು ಚೈತನ್ಯದ ಸ್ರೋತವಾಗಿದೆ. ಅವರ ಕೋಣೆಯಲ್ಲಿನ ದೇವರಕೋಣೆಯಲ್ಲಿ ಅವರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆ, ಅವರ ಕುಲದೇವತೆ ಮತ್ತು ಕುಲದೇವಿ, ಶ್ರೀ ದುರ್ಗಾದೇವಿ, ಶ್ರೀವಿಷ್ಣು ಈ ದೇವತೆಗಳ ಪ್ರತಿಮೆಗಳು, ಬಾಲಕೃಷ್ಣ ಮತ್ತು ಶ್ರೀ ಗಣಪತಿ ಈ ದೇವತೆಗಳ ವಿಗ್ರಹಗಳು ಹಾಗೆಯೇ ಸಪ್ತರ್ಷಿ ಮತ್ತು ಕೆಲವು ಸಂತರು ಅವರಿಗೆ ದೇವರಕೋಣೆಯಲ್ಲಿಡಲು ನೀಡಿದ ದೇವತೆಗಳ ಕೆಲವು ಪ್ರತಿಮೆಗಳು ಮತ್ತು ಮೂರ್ತಿಗಳಿವೆ. ದೇವರಕೋಣೆಯಲ್ಲಿನ ಮೂರ್ತಿ ಮತ್ತು ಪ್ರತಿಮೆಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತದೆ. ೨೦೧೭ ರಲ್ಲಿನ ದೇವರಕೋಣೆಯ ಛಾಯಾಚಿತ್ರದಲ್ಲಿ ಬಹಳಷ್ಟು ಪ್ರಮಾಣದಲ್ಲಿ (೧೧೦.೩೦ ಮೀಟರ್) ಸಕಾರಾತ್ಮಕ ಊರ್ಜೆಯು ಕಂಡುಬಂದಿತು. ಇದರಿಂದ ಹಿಂದೂ ಧರ್ಮದಲ್ಲಿ ಮನೆಮನೆಗಳಲ್ಲಿ ದೇವರಕೋಣೆಯ ಸುಂದರ ಪರಂಪರೆಯನ್ನು ಏಕೆ ಜೋಪಾನ ಮಾಡಲಾಗಿದೆ ? ಎಂಬುದರ ಮಹತ್ವ ಗಮನಕ್ಕೆ ಬರುತ್ತದೆ.

೨ ಇ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಲ್ಲಿನ ದೇವತೆಗಳ ಜೋಡಣೆಯಲ್ಲಿ (ರಚನೆಯಲ್ಲಿ) ಬದಲಾವಣೆ ಮಾಡಿದ ನಂತರ ದೇವರಕೋಣೆಯಿಂದ (೨೦೨೧ ರಲ್ಲಿನ ಛಾಯಾಚಿತ್ರದಿಂದ) ಪ್ರಕ್ಷೇಪಿಸುವ ಚೈತನ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳವಾಗುವುದು :  ಪರಾತ್ಪರ ಗುರು ಡಾ. ಆಠವಲೆಯವರ ದೇವರ ಕೋಣೆಯಲ್ಲಿ ದೇವತೆಗಳ (ವರ್ಷ ೨೦೧೭ ರಲ್ಲಿ) ಮಾಡಿದ ಜೋಡಣೆಯಲ್ಲಿನ ಕೆಲವು ಪ್ರತಿಮೆಗಳನ್ನು ದೇವರಕೋಣೆಯಲ್ಲಿ ಎಡಬದಿಗಿನ ಮತ್ತು ಕೆಲವು ಪ್ರತಿಮೆಗಳನ್ನು ಬಲಬದಿಗಿನ ಬದಿಗಳಲ್ಲಿ ಎದರುಬದರು ಇಡಲಾಗಿತ್ತು. ಆದುದರಿಂದ ಅವುಗಳಲ್ಲಿನ ಚೈತನ್ಯವು ಪೂಜೆ ಮಾಡುವವರ ದಿಶೆಗೆ ಪ್ರಕ್ಷೇಪಿಸದೇ ಪರಸ್ಪರರ ಮೇಲೆ ಪ್ರಕ್ಷೇಪಿಸುತ್ತಿತ್ತು. ಹಾಗೆಯೇ ದೇವರಕೋಣೆಯಲ್ಲಿನ ಮೂರ್ತಿಗಳನ್ನೂ ಸಮೀಪ ಇಟ್ಟಿದುದರಿಂದ ಒಂದು ರೀತಿಯ ದಟ್ಟಣೆಯಾಗಿತ್ತು. ೨೦೨೧ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಈ ರಚನೆಯಲ್ಲಿ ಮುಂದಿನ ಬದಲಾವಣೆಗಳನ್ನು ಹೇಳಿದರು.

೧. ದೇವರಕೋಣೆಯದಲ್ಲಿ ಕೆಲವು ಅನಾವಶ್ಯಕವಾದ: ಚಿಕ್ಕ ಮೂರ್ತಿಗಳನ್ನು ತೆಗೆಯಲಾಯಿತು.

೨. ಹೊಸದಾಗಿ ಬದಲಾಯಿಸಲಾದ ಜೋಡಣೆಯಲ್ಲಿ ದೇವತೆಗಳ ಮೂರ್ತಿಗಳನ್ನು ದೇವರಕೋಣೆಯ ಎಡಬದಿಗೆ ಮತ್ತು ಬಲಬದಿಗೆ ಪರಸ್ಪರರೆದುರು ಇಡದೇ ಅವುಗಳನ್ನು ಸ್ವಲ್ಪ ಹಿಂದೆ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದ ಬದಿಗೆ ಇಡಲಾಯಿತು. ದೇವರಕೋಣೆಯಲ್ಲಿನ ಚಿಕ್ಕ ಮೂರ್ತಿಗಳನ್ನು ಕಡಿಮೆ ಎತ್ತರದಿಂದ ಹೆಚ್ಚು ಎತ್ತರದಂತೆ ದೇವರಕೋಣೆಯಲ್ಲಿ ಮುಂದಿನಿಂದ ಹಿಂದಿನ ಕಡೆಗೆ ಜೋಡಿಸಿಡಲಾಯಿತು.

ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಜೋಡಣೆಯಲ್ಲಿ ಬದಲಾವಣೆ ಮಾಡಿದುದರಿಂದ ದೇವರಕೋಣೆಯಲ್ಲಿನ ದೇವರ ಮೂರ್ತಿ ಮತ್ತು ಪ್ರತಿಮೆಗಳಿಂದ ಪ್ರಕ್ಷೇಪಿಸುವ ಚೈತನ್ಯವು ಪೂಜಕನ ದಿಶೆಗೆ ಪ್ರಕ್ಷೇಪಿಸಲು ಸಂಪೂರ್ಣ ಅವಕಾಶ ಸಿಕ್ಕಿದುದರಿಂದ ಆ ಚೈತನ್ಯವು ಹೆಚ್ಚು ದೂರದ ವರೆಗೆ ಹರಡತೊಡಗಿತು. ದೇವರಕೋಣೆಯಲ್ಲಿನ ದೇವತೆಗಳ ಮಂಡಣೆಯಲ್ಲಿ ಬದಲಾವಣೆ ಮಾಡಿದುದರಿಂದ ಅದರಲ್ಲಿನ ಚೈತನ್ಯದಲ್ಲಾದ ಹೆಚ್ಚಳವು ವೈಜ್ಞಾನಿಕ ಉಪಕರಣದ ಮೂಲಕ ಮಾಡಿದ ನಿರೀಕ್ಷಣೆಯಲ್ಲಿಯೂ ಕಂಡು ಬಂದಿತು. ೨೦೨೧ ರಲ್ಲಿನ ದೇವರಕೋಣೆಯ ಛಾಯಾಚಿತ್ರದಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೨೩೯.೫೦ ಮೀಟರ್ ಇದೆ, ಅಂದರೆ ಹಿಂದಿನ ತುಲನೆಯಲ್ಲಿ ಅದು ದುಪ್ಪಟ್ಟಿಗಿಂತ ಹೆಚ್ಚಿದೆ. ಇದರಿಂದ ಯಾವುದೇ ವಿಷಯವನ್ನು ಮಾಡುವಾಗ ಅದು ಹೆಚ್ಚೆಚ್ಚು ಸಾತ್ತ್ವಿಕವಾಗುವ ದೃಷ್ಟಿಯಿಂದ ಹೇಗೆ ಪ್ರಯತ್ನಿಸಬೇಕು, ಎಂಬುದು ಕಲಿಯಲು ಸಿಕ್ಕಿತು. ಈ ರೀತಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಅವುಗಳಿಂದ ಅಧ್ಯಾತ್ಮದಲ್ಲಿನ ಹೊಸ ಹೊಸ ಆಯಾಮಗಳನ್ನು ಕಲಿಸುವ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೩.೭.೨೦೨೧)

ವಿ-ಅಂಚೆ : [email protected]

ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದ ಈ ಲೇಖನದಲ್ಲಿನ ‘ಯು.ಎ.ಎಸ್ ಉಪಕರಣದ ಪರಿಚಯ, ‘ಉಪಕರಣದ ಮೂಲಕ ಮಾಡುವ ಪರೀಕ್ಷಣೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ, ‘ಘಟಕದ ಪ್ರಭಾವಲಯವನ್ನು ಅಳೆಯುವುದು, ಪರೀಕ್ಷಣೆಯ ಪದ್ಧತಿ ಮತ್ತು ‘ಪರೀಕ್ಷಣೆಯಲ್ಲಿ ಸಮಾನತೆಯು ಬರಲು ವಹಿಸಿದ ಜಾಗರೂಕತೆ ಇತ್ಯಾದಿ ನಿತ್ಯದ ಅಂಶಗಳನ್ನು ಸನಾತನ ಸಂಸ್ಥೆಯ ಜಾಲತಾಣದಲ್ಲಿನ

bit.ly/UASResearch ಈ ಲಿಂಕ್‌ನಲ್ಲಿ ಇಡಲಾಗಿದೆ. ಈ ಲಿಂಕ್ ನಲ್ಲಿನ ಕೆಲವು ಅಕ್ಷರಗಳು (Capital) ಕ್ಯಾಪಿಟಲ್ ಇವೆ.