|
ಚೆನ್ನೈ (ತಮಿಳುನಾಡು) – ಹಿಂದೂಗಳ ದೇವತೆಗಳನ್ನು ಅಪಹಾಸ್ಯ ಮಾಡುವುದು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ. ಕಳೆದ ವರ್ಷ ಜುಲೈನಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಪ್ರಕರಣದಲ್ಲಿ ಪಾದ್ರಿ ಜಾರ್ಜ್ ಪೊನ್ನೈಯ ವಿರುದ್ಧ ಕನ್ಯಾಕುಮಾರಿ ಪೊಲೀಸರು ಅಪರಾಧವನ್ನು ದಾಖಲಿಸಿದ್ದರು. ಅದಕ್ಕೆ ಪುನುಸ್ವಾಮಿಯವರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಾಲಯವು, ಭಾರತಮಾತೆ ಮತ್ತು ಭೂಮಿದೇವಿ ವಿರುದ್ಧ ಪುನುಸ್ವಾಮಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಂತೆ ಇದೆ; ಏಕೆಂದರೆ ಹಿಂದೂ ಪರಿಕಲ್ಪನೆಯ ಪ್ರಕಾರ ಇಬ್ಬರೂ ದೇವರಿದ್ದಾರೆ. ಆದ್ದರಿಂದ ಈ ಹೇಳಿಕೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧವಾಗಿದೆ. ಅಪರಾಧ ವರದಿ ಮಾಡುವ ಪೊಲೀಸರನ್ನು ದೂಷಿಸುವಂತಿಲ್ಲ’ ಎಂದೂ ಹೇಳಿದೆ.