ಬಾಂಗ್ಲಾದೇಶದ ಹಿಂದೂಗಳ ದಯನೀಯ ಸ್ಥಿತಿ !

೧. ನವರಾತ್ರ್ಯುತ್ಸವ ಮತ್ತು ದಸರಾದ ಸಮಯದಲ್ಲಿ ಮತಾಂಧರು ಹಿಂದೂ, ದೇವಸ್ಥಾನಗಳು, ಪೂಜಾ ಮಂಟಪ ಇತ್ಯಾದಿಗಳ ಮೇಲೆ ಹಲ್ಲೆ ನಡೆಸಿ ಹಿಂದೂಗಳ ಹತ್ಯೆ ಮತ್ತು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡುವುದು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

‘೧೫ ಅಕ್ಟೋಬರ್ ೨೦೨೧ ರಂದು ನಾವೆಲ್ಲರೂ ವಿಜಯದಶಮಿ, ಅಂದರೆ ದಸರಾ ಆಚರಿಸುತ್ತಿದ್ದೆವು. ಆ ದಿನ ಮತ್ತು ಅದರ ಎರಡು ದಿನ ಮೊದಲು ನಮ್ಮ ಪಕ್ಕದಲ್ಲಿರುವ ಬಾಂಗ್ಲಾದೇಶದಲ್ಲಿ ಮತಾಂಧರು ಹಿಂದೂ ದೇವಸ್ಥಾನಗಳನ್ನು ಮತ್ತು ದೇವಿಯನ್ನು ಸ್ಥಾಪಿಸಿದ ದುರ್ಗಾದೇವಿಯ ಪೂಜಾಮಂಟಪದ ಮೇಲೆ ದಾಳಿ ಮಾಡಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಮಾಡಿದರು. ಅಕ್ಟೋಬರ್ ೧೩ ರಂದು ಶುಕ್ರವಾರದ ನಮಾಜಿನ ನಂತರ ೨೦೦ ಕ್ಕಿಂತಲೂ ಹೆಚ್ಚು ಮತಾಂಧರು ಹಿಂದೂ, ದೇವತೆಗಳ ಮೂರ್ತಿ, ದೇವಸ್ಥಾನಗಳು ಮತ್ತು ಸಾಧು-ಸಂತರ ಮೇಲೆ ದಾಳಿ ಮಾಡುತ್ತಿದ್ದರು, ಮತ್ತು ಬೆಂಕಿ ಹಚ್ಚುತ್ತಿದ್ದರು. ಈ ದಾಳಿಯ ಹಿಂದಿನ ದಿನ ಇಸ್ಕಾನ್‌ನ ಇಬ್ಬರು ಸಾಧುಗಳನ್ನು ಮತ್ತು ಕೆಲವು ಭಕ್ತರನ್ನು ಹತ್ಯೆಗೈಯ್ಯಲಾಗಿತ್ತು. ಮತಾಂಧರು ದುರ್ಗಾದೇವಿಯ ೧೬೦ ಮಂಟಪಗಳಿಗೆ ಮತ್ತು ದೇವಸ್ಥಾನಗಳಿಗೆ ಬೆಂಕಿ ಹಚ್ಚಿದರು. ೧೨ ಜನ ಹಿಂದೂಗಳನ್ನು ಹತ್ಯೆಗೈಯ್ಯಲಾಯಿತು, ೨೩ ಜನ ಹಿಂದೂ ಮಾತೆಯರನ್ನು-ಸಹೋದರಿಯರನ್ನು ಬಲಾತ್ಕರಿಸಲಾಯಿತು ಹಾಗೂ ೧೭ ಜನ ಹಿಂದೂಗಳು ಕಾಣೆಯಾಗಿದ್ದಾರೆ.

ಈಗ ಬರುತ್ತಿರುವ ವಾರ್ತೆಗಳಿಗನುಸಾರ ‘ವರ್ಲ್ಡ್ ಹಿಂದೂ ಫೆಡರೇಶನ್ ಬಾಂಗ್ಲಾದೇಶ ಶಾಖೆ’ಯ ಮಾಹಿತಿಗನುಸಾರ ೧೩ ರಿಂದ ೧೭ ಅಕ್ಟೋಬರ್ ಈ ೫ ದಿನಗಳಲ್ಲಿ ೩೩೫ ದೇವಸ್ಥಾನಗಳನ್ನು ಕೆಡವಲಾಯಿತು. ಹಿಂದೂಗಳ ೧೮೦೦ ಮನೆಗಳನ್ನು ಸುಟ್ಟು ಹಾಕಲಾಯಿತು. ಬಾಂಗ್ಲಾದೇಶದ ಕಾಮಿಲಾ, ಜಾನಪುರ, ನೌಖಾಲಿ, ವಡಗಾವ ಬಾಜಾರ, ನವಾಬಗಂಜ ಮತ್ತು ರಂಗಪುರದಲ್ಲಿ ಅತೀ ಹೆಚ್ಚು ದಾಳಿಗಳಾಗಿವೆ. ೧೨ ಹಿಂದೂಗಳ ಹತ್ಯೆಯಾಗಿದೆ, ಅದರಲ್ಲಿ ೭ ಜನ ಪುರೋಹಿತರಿದ್ದಾರೆ. ಇಷ್ಟು ಮಾತ್ರವಲ್ಲ, ೨೩ ಹಿಂದೂ ಹುಡುಗಿಯರ ಮತ್ತು ಮಹಿಳೆಯರ ಮೇಲೆ ಬಲಾತ್ಕಾರವಾಗಿದೆ.

ಬಾಂಗ್ಲಾದೇಶದ ಹಿಂದೂಗಳ ದೇವಸ್ಥಾನಗಳನ್ನು ಮತ್ತು ಅಂಗಡಿಗಳನ್ನು ಧ್ವಂಸ ಮಾಡಿದ ಮತಾಂಧರು

 

ಟ್ವಿಟರ್‌ನ ಹಿಂದೂಗಳ ಬಗ್ಗೆ ಇರುವ ಪಕ್ಷಪಾತದ ವರ್ತನೆ

ಟ್ವಿಟರ್‌ನ ಹಿಂದೂಗಳ ಬಗ್ಗೆ ಇರುವ ಪಕ್ಷಪಾತ

ಇಸ್ಕಾನ್ ಮತ್ತು ಕೆಲವು ಹಿಂದೂಗಳು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಆಕ್ರಮಣದ ವಿಷಯವನ್ನು ಎತ್ತಿ ಹಿಡಿಯಲು ಟ್ವಿಟರ್‌ನಲ್ಲಿ ಮಾಹಿತಿ ಸಹಿತ ಆಕ್ರಮಣದ ಕೆಲವು ಛಾಯಾಚಿತ್ರಗಳನ್ನು ಇಡುತ್ತಿದ್ದರು; ಆದರೆ ‘ಈ ಟ್ವೀಟ್ಸ್ ಅಳಿಸದಿದ್ದರೆ, ಅವರ ಖಾತೆಯನ್ನು ಬಂದ್ ಮಾಡಲಾಗುವುದು’, ಎಂದು ಟ್ವಿಟರ್ ಬೆದರಿಕೆ ನೀಡಿತು. ಅಂದರೆ ಮತಾಂಧರು ಹಿಂದೂಗಳ ಮೇಲೆ ಅತ್ಯಾಚಾರ ಮಾಡಬಹುದು ಹಾಗೂ ಅದನ್ನು ಎತ್ತಿ ಹಿಡಿಯಲು ಹಿಂದೂಗಳು ‘ಟ್ವಿಟರ್ ಹ್ಯಾಂಡಲ್’ ಉಪ ಯೋಗಿಸಿದರೆ ಅದನ್ನು ಮಾತ್ರ ಟ್ವಿಟರ್ ವಿರೋಧಿಸುತ್ತದೆ. ಟ್ವಿಟರ್ ‘ಇಸ್ಕಾನ್ ಬಾಂಗ್ಲಾದೇಶ’ ಮತ್ತು ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ ಇವರ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿತು. ಟ್ವಿಟರ್‌ನ ಹಾಗೆ ಇತರ ಎಲ್ಲ ಬಾಂಗ್ಲಾದೇಶೀ ಪ್ರಸಾರಮಾಧ್ಯಮಗಳು ಮತ್ತು ವಾರ್ತಾವಾಹಿನಿಗಳು ಹಿಂದೂಗಳ ಮೇಲಿನ ಅತ್ಯಾಚಾರದ ವಾರ್ತೆಯು ಜಗತ್ತಿನ ಮುಂದೆ ಬರಬಾರದು ಎಂದು ಪ್ರಯತ್ನಿಸಿದವು.

ಟ್ವಿಟರ್‌ನಿಂದ ಹಿಂದೂಗಳಿಗೆ ಒಂದು ನ್ಯಾಯ ಹಾಗೂ ಉಗ್ರವಾದಿಗಳಿಗೆ ಇನ್ನೊಂದು ನ್ಯಾಯವಿದೆ. ಜಿಹಾದಿ ಉಗ್ರವಾದಿ ಸಮರ್ಥಕ ಡಾ. ಝಾಕೀರ್ ನಾಯಿಕ್ ಇವನ ಖಾತೆ ಇನ್ನೂ ನಡೆಯುತ್ತಿದೆ. ಉಗ್ರವಾದಿ ಕುಕೃತ್ಯ ಮಾಡಿರುವ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸಂಘಟನೆಗೆ ನಿರ್ಬಂಧ ಹೇರುವ ಕಾರ್ಯ ನಡೆಯುತ್ತಿದೆ, ಆದರೆ ಅದರ ಟ್ವಿಟರ್ ಖಾತೆ ನಡೆಯುತ್ತಿದೆ;  ಧರ್ಮಪ್ರೇಮಿ ಹಿಂದೂ ಮತ್ತು ಹಿಂದೂಗಳಿಗೆ ಧರ್ಮಪ್ರಸಾರ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನೀಡುವ ಸಂಘಟನೆಗಳ ಟ್ವಿಟರ್ ಖಾತೆಯನ್ನು ಮೊದಲೆ ಸ್ಥಗಿತಗೊಳಿಸಲಾಗಿದೆ. ಆದರೂ ಭಾರತದಲ್ಲಿ ಪ್ರತಿದಿನ ವರ್ತಮಾನಪತ್ರಿಕೆಗಳಿಂದ ಬಾಂಗ್ಲಾದೇಶದ ಭಯಂಕರ ಸ್ಥಿತಿಯು ತಿಳಿಯುತ್ತಿತ್ತು.

೨. ವಿಭಜನೆಯ ಕಾಲದಂತೆಯೇ ಮತಾಂಧರಿಂದ ನೌಖಾಲಿ ಪರಿಸರದಲ್ಲಿ ಹಿಂದೂಗಳ ಮೇಲೆ ಅಪಾರ ಅತ್ಯಾಚಾರ

ವಿಭಜನೆಯ ಸಮಯದಲ್ಲಿ ಮತಾಂಧರು ನೌಖಾಲಿ ಪರಿಸರದಲ್ಲಿ ಹಿಂದೂಗಳ ಮೇಲೆ ಅಪಾರವಾಗಿ ದೌರ್ಜನ್ಯವೆಸಗಿದ್ದರು. ೧೯೪೭ ರಲ್ಲಿ ವಿಭಜನೆಯ ಕಾಲದಲ್ಲಿ ಮತಾಂಧರು ನೌಖಾಲಿ ಪರಿಸರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಹತ್ಯೆಗೈದಿದ್ದರು ಹಾಗೂ ಮಾತೆ-ಸಹೋದರಿಯರ ಮೇಲೆ ಬಲಾತ್ಕಾರ ಮಾಡಿದ್ದರು. ಆಗ ಹಿಂದೂಗಳು ಪ್ರತೀಕಾರ ಮಾಡಬಾರದೆಂದು ಮೋಹನದಾಸ ಗಾಂಧಿ ಉಪವಾಸಕ್ಕೆ ಕುಳಿತರು. ಅಲ್ಲಿಂದಲೇ ನಿಜವಾದ ಗಾಂಧಿಗಿರಿ ಆರಂಭವಾಯಿತು. ಬಾಂಗ್ಲಾದೇಶದಲ್ಲಿ ಮತಾಂಧರು ಅನೇಕ ಸ್ಥಳಗಳಲ್ಲಿ ದುರ್ಗಾ ಮಂಟಪದ ಮೇಲೆ ದಾಳಿ ಮಾಡಿದರು. ಅದರಲ್ಲಿಯೂ ನೌಖಾಲಿಯಲ್ಲಿನ ಸ್ಥಿತಿ ಗಂಭೀರವಾಗಿತ್ತು. ಅದರಲ್ಲಿ ೪೦ ಕ್ಕೂ ಹೆಚ್ಚು ಜನರು ಗಾಯಗೊಂಡರು, ಎನ್ನುವ ಮಾಹಿತಿಯನ್ನು ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ ನೀಡಿತು. ದೇವಸ್ಥಾನಗಳನ್ನು ಕೇವಲ ಕೆಡವಿದ್ದು ಮಾತ್ರವಲ್ಲ, ಅದರಲ್ಲಿನ ಸಂಪತ್ತನ್ನೂ ಲೂಟಿ ಮಾಡಲಾಯಿತು.

೩. ಇಸ್ಕಾನ್, ಹಿಂದೂ ಜನಜಾಗೃತಿ ಸಮಿತಿ, ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಮತ್ತು ಇತರ ಸಂಘಟನೆಗಳಿಂದ ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರಕ್ಕೆ ವಿರೋಧ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ರಾಜಕೀಯ ಪಕ್ಷ ಅಥವಾ ನೇತಾರರಲ್ಲಿ ಕೇವಲ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರು ಮಾತ್ರ ಖಂಡಿಸಿದ್ದಾರೆ. ‘ಬಾಂಗ್ಲಾದೇಶದ ಮೇಲೆ ನೇರವಾಗಿ ದಾಳಿ ಮಾಡಿರಿ’, ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸರೀನ ಇವರು, “ಬಾಂಗ್ಲಾದೇಶದ ಹೆಸರು ಜಿಹಾದಿಸ್ಥಾನವಾಗಿದೆ ಹಾಗೂ ಶೇಖ ಹಸೀನಾ ಅದರ ರಾಣಿಯಾಗಿದ್ದಾಳೆ”, ಎಂದು ಹೇಳಿದರು. ಅಲ್ಲಿ ಇಂತಹ ಸ್ಥಿತಿ ಇರುವಾಗ ಅಲ್ಲಿನ ಪ್ರಸಾರಮಾಧ್ಯಮಗಳು ಬಾಂಗ್ಲಾದೇಶದಲ್ಲಿ ಬೊಬ್ಬೆ ಹೊಡೆಯಲು ಆರಂಭಿಸಿದವು ಮತ್ತು “ಹಿಂದೂಗಳು ಸ್ವತಃ ತಮ್ಮ ಮನೆಗಳಿಗೆ ಮತ್ತು ದೇವಸ್ಥಾನಗಳಿಗೆ ಬೆಂಕಿ ಹಚ್ಚಿದರು ಹಾಗೂ ಕುರಾನನ್ನು ಅವಮಾನಿಸಿದರು” ಎಂದು ಹೇಳಿದವು.

ವಾಸ್ತವದಲ್ಲಿ ೩೫ ವರ್ಷದ ಇಕ್ಬಾಲ್ ಹುಸೇನ ಕಾಮಿಲಾ ಇವನು ಆ ದಿಘಿ ಪರಿಸರದ ದೇವಸ್ಥಾನದಲ್ಲಿ ಹನುಮಂತನ ಚರಣಗಳಲ್ಲಿ ಕುರಾನ್ ಇಟ್ಟಿರುವುದು ಬೆಳಕಿಗೆ ಬಂತು. ದೌರ್ಭಾಗ್ಯದ ವಿಷಯವೆಂದರೆ ಯಾವುದೇ ರಾಜಕೀಯ ಪಕ್ಷ (ಭಾಜಪದ ಹೊರತು), ಸಾಮ್ಯವಾದಿ, ಪ್ರಗತಿಪರರು, ಪ್ರಸಾರ ಮಾಧ್ಯಮಗಳು ಪ್ರಖರ ವಿರೋಧ ಮಾಡುವುದಂತೂ ದೂರದ ಮಾತು, ಖಂಡನೆಯನ್ನೂ ವ್ಯಕ್ತಪಡಿಸಲಿಲ್ಲ. ಇಷ್ಟು ಮಾತ್ರವಲ್ಲ, ಬಂಗಾಲದಲ್ಲಿ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಪ್ರಸಿದ್ಧವಿರುವ ಮೌಲ್ವಿ ಪೀರಜಾದಾ ಅಬ್ಬಾಸ ಸಿದ್ದಿಕಿ, “ಒಂದು ವೇಳೆ ಕುರಾನ್‌ಗೆ ಅವಮಾನವಾಗುತ್ತಿದೆ ಎಂದಾದರೆ, ಅವಮಾನಿಸಿದವರ ತಲೆ ಕಡಿಯಲೇಬೇಕು”, ಎಂದನು. ಇಂತಹ ಉದ್ಧಟತನದ ಮೌಲ್ವಿಗೆ ಕಾನೂನಿನ ದೊಣ್ಣೆಯನ್ನು ತೋರಿಸಲೇಬೇಕು.

ಇಸ್ಕಾನ್ ಈ ಘಟನೆಗೆ ಸ್ವಲ್ಪ ಪ್ರಸಿದ್ಧಿ ಕೊಡಲು ಪ್ರಯತ್ನಿಸಿತು; ಆದರೆ ‘ಇಸ್ಕಾನ್ ಬಾಂಗ್ಲಾದೇಶ’ ಮತ್ತು ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ ಇವರ ಟ್ವಿಟರ್ ಖಾತೆಯನ್ನೇ ಸ್ಥಗಿತಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ದೌರ್ಜನ್ಯವನ್ನು ಖಂಡಿಸಿ ಭಾರತದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಪ್ರಖರ ಹಿಂದುತ್ವನಿಷ್ಠ ಸಂಘಟನೆಗಳು ಅನೇಕ ಸ್ಥಳದಲ್ಲಿ ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿಗಳಿಗೆ ಮನವಿಪತ್ರವನ್ನು ನೀಡಿ ನಿಷೇಧಿಸಿದವು. ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು, ‘ನಾವು ಬಾಂಗ್ಲಾದೇಶಕ್ಕೆ ಕೂಡ ಹೆದರುತ್ತೇವೆಯೆ ? ಕೇಂದ್ರದಲ್ಲಿನ ಭಾಜಪ ಸರಕಾರವು ಏಕೆ ಖಂಡಿಸುತ್ತಿಲ್ಲ ?’ ಎಂದು ಪ್ರಶ್ನಿಸಿದರು. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಅಥವಾ ಇನ್ನಿತರ ಕಡೆಗಳಲ್ಲಿ ಎಲ್ಲಿಯೇ ಹಿಂದೂಗಳ ಮೇಲೆ ದಾಳಿಯಾದಾಗ, ಅವರ ನರಮೇಧವಾದಾಗ, ಅವರ ಮಹಿಳೆಯರ ಮೇಲೆ ಬಲಾತ್ಕಾರವಾಗುವಾಗ, ದೇವಸ್ಥಾನಗಳ ಮೇಲೆ ದಾಳಿಯಾಗುವಾಗ, ಸಾಧುಸಂತರ ಹತ್ಯೆ ಮಾಡುವಾಗ ಸದ್ಯ ಕೇಂದ್ರದಲ್ಲಿ ಆಡಳಿತದಲ್ಲಿರುವ ಹಿಂದುತ್ವನಿಷ್ಠ ಸರಕಾರ ಹಿಂದೂಗಳ ಪರವಾಗಿ ಕ್ರಮ ತೆಗೆದುಕೊಳ್ಳುವುದಿಲ್ಲ. ಇದರ ಹಿಂದೆ ‘ಈ ದೇಶಗಳಿಗೆ ನಾವು ನೋಯಿಸಿದರೆ, ಇವರು ಚೀನಾಕ್ಕೆ ಅನುಕೂಲಕರವಾಗಿ ವರ್ತಿಸುವರು’, ಎನ್ನುವ ದೃಷ್ಟಿಕೋನವಿರಬಹುದು. ಇಂತಹ ಸಮಯದಲ್ಲಿ ಭವಿಷ್ಯದಲ್ಲಿ ಏನಾಗಬಹುದು ಎಂಬ ಬಗ್ಗೆ ಚಿಂತಿಸದೆ ಇಂದು ವರ್ತಮಾನ ಸ್ಥಿತಿಯಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯವನ್ನು ತಡೆಯಲು ಪ್ರಯತ್ನಿಸುವುದು ಸರಕಾರದ ಕರ್ತವ್ಯವಾಗಿರಬೇಕು.

ಇಂತಹ ಸ್ಥಿತಿಯಲ್ಲಿಯೂ ಧೈರ್ಯ ಕೊಡುವ ಕೆಲವು ವಾರ್ತೆಗಳು ಬಂದವು. ಈ ದೌರ್ಜನ್ಯದ ವಿರುದ್ಧ ‘ಇಸ್ಕಾನ್’ನ ಕಾರ್ಯಕರ್ತರು ಅಕ್ಟೋಬರ್ ೨೩ ರಂದು ೧೫೦ ದೇಶಗಳಲ್ಲಿ ಪ್ರತಿಭಟನೆ ನಡೆಸಿದರು. ಸದ್ಯದ ವಾರ್ತೆಗನುಸಾರ, ಈ ದಾಳಿಯ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳು ೧೫ ರಾಜ್ಯಗಳಲ್ಲಿ ಆಂದೋಲನ ಮಾಡಿದವು ಮತ್ತು ೧೧೨ ಸ್ಥಳಗಳಲ್ಲಿ ‘ಆನ್ಲೈನ್’ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜಯಶಂಕರ ಇವರಿಗೆ ಮನವಿಪತ್ರಗಳನ್ನು ಕಳುಹಿಸಿದರು. ಆಫ್ರಿಕಾದಲ್ಲಿನ ಹಿಂದೂಗಳು ಕೂಡ ಬಾಂಗ್ಲಾದೇಶದಲ್ಲಿ ಮತಾಂಧರು ಮಾಡಿದ ಅತ್ಯಾಚಾರವನ್ನು ಖಂಡಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದರು. ಭಾರತ ಅಣ್ವಸ್ತ್ರಸಜ್ಜ ದೇಶವಾಗಿದೆ. ಪಾಕಿಸ್ತಾನವು ಬಾಂಗ್ಲಾದೇಶದ ಮೇಲೆ ದೌರ್ಜನ್ಯ ಮಾಡುತ್ತಿರುವಾಗ ಭಾರತ ಅದಕ್ಕೆ ಸ್ವಾತಂತ್ರ್ಯ ದೊರಕಿಸಿತ್ತು. ಆದರೆ ಮತಾಂಧರಿಗೆ ಆ ಉಪಕಾರದ ಸ್ಮರಣೆಯಿಲ್ಲ.

೪. ಭಾರತವು ಇಸ್ರೇಲ್‌ನ ಆದರ್ಶವನ್ನು ಇಟ್ಟುಕೊಳ್ಳಬೇಕು !

ಇಲ್ಲಿ ನಾವು ಇಸ್ರೇಲ್‌ನ ಉದಾಹರಣೆಯನ್ನು ಮುಂದಿಡಬೇಕು. ಇಸ್ರೇಲ್ ಒಂದು ಚಿಕ್ಕ ರಾಷ್ಟ್ರವಾಗಿದೆ; ಆದರೆ ಇಸ್ರೇಲ್ ಅಥವಾ ಜ್ಯೂ ನಾಗರಿಕರನ್ನು ಜಗತ್ತಿನಲ್ಲಿ ಎಲ್ಲಿಯೆ ಹತ್ಯೆಗೊಳಿಸಿದರೂ ಅವರು ಆ ದೇಶಕ್ಕೆ ಹೋಗಿ ಹಂತಕರನ್ನು ಸದೆಬಡಿಯದೆ ವಿಶ್ರಮಿಸುವುದಿಲ್ಲ. ಇದರ ಭಯದಿಂದ ಜಗತ್ತಿನ ಒಂದೇ ಒಂದು ಜಿಹಾದಿ ಸಂಘಟನೆ ಅಥವಾ ಉಗ್ರವಾದಿಗಳು ಇಸ್ರೇಲಿಯನ್ ಅಥವಾ ಜ್ಯೂ ನಾಗರಿಕರ ಮೇಲೆ ಕೈ ಎತ್ತುವ ಧೈರ್ಯ ತೋರಿಸುವುದಿಲ್ಲ. ತದ್ವಿರುದ್ಧ ನಮ್ಮ ದೇಶ ಮಹಾಶಕ್ತಿಯಾಗುವ ದಿಕ್ಕಿನಲ್ಲಿ ಪ್ರಯಾಣಿಸುತ್ತಿದೆ, ಅಣ್ವಸ್ತ್ರಯುಕ್ತವಾಗಿದೆ. ಅನೇಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ನಮ್ಮಲ್ಲಿವೆ. ಭಾರತೀಯ ನೌಕಾದಳ, ವಾಯುದಳ ಮತ್ತು ಸೈನ್ಯದಳ ಕೂಡ ಅತ್ಯಂತ ಪರಾಕ್ರಮಿಯಾಗಿವೆ; ಆದರೆ ಸ್ವಾತಂತ್ರ್ಯದ ನಂತರ ಕಳೆದ ೭೦ ವರ್ಷಗಳಲ್ಲಿ ಹಿಂದೂಗಳ ಹತ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ. ೪೦ ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ಸಂಖ್ಯೆ ೫ ಪಟ್ಟು ಕುಸಿತವಾಯಿತು. ಅಲ್ಲಿ ಮತಾಂಧರು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಹಿಂದೂಗಳು ಒಗ್ಗಟ್ಟಾಗುವ ಅವಶ್ಯಕತೆಯಿದೆ. ದೊಡ್ಡ ಪ್ರಮಾಣದಲ್ಲಿ ಹಿಂದೂ ಸಂಘಟನೆಯಾಗಬೇಕು. ಜಗತ್ತಿನಲ್ಲಿ ಎಲ್ಲಿಯೆ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೂ ಅದರ ನಿಷೇಧ, ವಿರೋಧ ಮತ್ತು ಪ್ರಚಾರವಾಗಬೇಕು. ಅದರ ಹೊರತು ಆ ವಿಷಯವು ಕಡಿಮೆಯಾಗುವ ಹಾಗಿಲ್ಲ.

ಆಂಗ್ಲರು ಹಿಂದೂಗಳಿಗೆ ಶಸ್ತ್ರವನ್ನು ಹಿಡಿಯದಂತೆ ಮಾಡಿದರು, ಮೋಹನದಾಸ ಗಾಂಧಿಯವರ ಅಹಿಂಸೆಯು ಹಿಂದೂಗಳನ್ನು ನಪುಂಸಕರನ್ನಾಗಿ ಮಾಡಿತು. ಶೌರ್ಯ ಜಾಗರಣೆಯು ಅತ್ಯಂತ ಆವಶ್ಯಕವಾಗಿದೆ. ಜಗತ್ತಿನಲ್ಲಿ ಎಲ್ಲ ಸ್ಥಳಗಳಲ್ಲಿ ಆಯಾಯ ದೇಶದ ಕಾನೂನುಗಳು, ದಾಳಿ, ಸ್ತ್ರೀಯರ ಮೇಲಿನ ಅತ್ಯಾಚಾರ ಮತ್ತು ನಿಂದನೀಯ ಅತ್ಯಾಚಾರಗಳಿಗೆ ಪ್ರತಿಕಾರ ಮಾಡಲು ನಮಗೆ ಅಧಿಕಾರವಿದೆ, ಎಂದು ಹೇಳುತ್ತದೆ; ಆದರೆ ಅನೇಕ ವರ್ಷಗಳಿಂದ ಹಿಂದೂ ಎಲ್ಲಿ ಹೋದರೂ ಪೆಟ್ಟು ತಿನ್ನುತ್ತಾನೆ. ಈ ದೌರ್ಜನ್ಯಕ್ಕೆ ನಾವು ಮೂಕ ಸಾಕ್ಷಿದಾರರಾಗಬಾರದು; ಏಕೆಂದರೆ, ಅದರಿಂದ ಸಮಷ್ಟಿ ಪಾಪ ತಗಲುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಪದ್ಧತಿಯಲ್ಲಿ ಈ ವಿಷಯವನ್ನು ವಿರೋಧಿಸಬೇಕು ಹಾಗೂ ಹಿಂದೂ ಸಂಘಟನೆ ಮಾಡಬೇಕು. ನಮಗೆ ಬೇರೆ ಯಾರೂ ಸಹಾಯ ಮಾಡುವುದಿಲ್ಲ; ಆದ್ದರಿಂದ ನಾವು ಸರ್ವಶ್ರೇಷ್ಠವಾಗಿರುವ ಭಗವಂತನಿಗೆ ಶರಣಾಗಬೇಕು ಹಾಗೂ ಶೀಘ್ರದಲ್ಲಿಯೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸಬೇಕು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ. ಮುಂಬಯಿ ಉಚ್ಚ ನ್ಯಾಯಾಲಯ. (೨೨.೧೦.೨೦೨೧)