ಅಮೃತಸಮಾನವಾಗಿರುವ ದೇಶಿ ಹಸುವಿನ ತುಪ್ಪದ ಔಷಧೀಯ ಉಪಯೋಗಗಳು !

ದೇಶಿ ಹಸುವಿನ ತುಪ್ಪವು ಅಮೃತಸಮಾನವಾಗಿದೆ

ದೇಶಿ ಹಸುವಿನ ತುಪ್ಪ

‘ದೇಶಿ ಹಸುವಿನ ತುಪ್ಪಕ್ಕೆ ‘ಅಮೃತ’ವೆಂದು ಹೇಳಲಾಗಿದೆ; ಏಕೆಂದರೆ ಅದು ತಾರುಣ್ಯವನ್ನು ಕಾಪಾಡುತ್ತದೆ ಮತ್ತು ವೃದ್ಧಾಪ್ಯವನ್ನು ದೂರವಿಡುತ್ತದೆ. ಕಪ್ಪು ಹಸುವಿನ ತುಪ್ಪವನ್ನು ತಿಂದರೆ ವೃದ್ಧ ವ್ಯಕ್ತಿಯೂ ಯುವಕನಂತೆ ಆಗುತ್ತಾನೆ. ಹಸುವಿನ ತುಪ್ಪದಂತಹ ಉತ್ತಮ ವಸ್ತು ಬೇರೆ ಯಾವುದೂ ಇಲ್ಲ.

ದೇಶಿ ಹಸುವಿನ ತುಪ್ಪದ ಔಷಧಿಯ ಉಪಾಯಗಳು ಮುಂದಿನಂತಿವೆ – 

ದೇಶಿ ಹಸು

೧. ದೇಶಿ ಹಸುವಿನ ತುಪ್ಪದ ಎರಡು ಹನಿಗಳನ್ನು ಬೆಳಗ್ಗೆ ಮತ್ತು ಸಾಯಂಕಾಲ ಮೂಗಿನಲ್ಲಿ (ಎರಡೂ ಹೊಳ್ಳೆಗಳಲ್ಲಿ) ಹಾಕಿಕೊಂಡರೆ (‘ಮೈಗ್ರೇನ್’ನ) ವೇದನೆಗಳು ಅರ್ಧದಷ್ಟು ಕಡಿಮೆಯಾಗುತ್ತದೆ.

೨. ತಲೆ ನೋಯುತ್ತಿರುವಾಗ ಮೈಯಲ್ಲಿನ ಉಷ್ಣತೆ ಹೆಚ್ಚಾಗುತ್ತದೆ, ಇಂತಹ ಸಮಯದಲ್ಲಿ ಹಸುವಿನ ತುಪ್ಪವನ್ನು ಅಂಗಾಲುಗಳಿಗೆ ಉಜ್ಜಿದರೆ ತಲೆನೋವು ಕಡಿಮೆಯಾಗುತ್ತದೆ.

೩. ಮೂಗಿನಲ್ಲಿ ತುಪ್ಪದ ೨ ಹನಿಗಳನ್ನು ಹಾಕಿದರೆ ಮೂಗಿನಲ್ಲಿನ ಶುಷ್ಕತೆ (ಒಣಗುವಿಕೆ) ದೂರವಾಗುತ್ತದೆ ಮತ್ತು ಬುದ್ಧಿ ಚುರುಕಾಗುತ್ತದೆ.

೪. ಹಸುವಿನ ತುಪ್ಪವನ್ನು ಮೂಗಿನಲ್ಲಿ ಹಾಕಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಸ್ಮರಣಶಕ್ತಿಯು ಉತ್ತಮವಾಗುತ್ತದೆ.

೫. ಕೈ-ಕಾಲುಗಳು ಉರಿಯುತ್ತಿದ್ದರೆ ಹಸುವಿನ ತುಪ್ಪವನ್ನು ಅಂಗೈ ಮತ್ತು ಅಂಗಾಲುಗಳಿಗೆ ಉಜ್ಜಬೇಕು (ತಿಕ್ಕಬೇಕು). ಇದರಿಂದ ಕೈ-ಕಾಲುಗಳು ಉರಿಯುವುದು ನಿಲ್ಲುತ್ತದೆ.

೬. ೨೦ ರಿಂದ ೨೫ ಗ್ರಾಮ್‌ನಷ್ಟು ದೇಶಿ ಹಸುವಿನ ತುಪ್ಪವನ್ನು ಸಕ್ಕರೆಯ ಜೊತೆಗೆ ತಿಂದರೆ ಸರಾಯಿ, ಭಾಂಗ ಅಥವಾ ಗಾಂಜಾ ಇವುಗಳ ಅಮಲು ಇಳಿಯುತ್ತದೆ.

೭. ಕಾಲುಗಳಲ್ಲಿನ ಬಿರುಕುಗಳಿಗೆ (ಕ್ರ್ಯಾಕ್ಸ್‌ಗಳಿಗೆ) ದೇಶಿ ಹಸುವಿನ ತುಪ್ಪವನ್ನು ಹಚ್ಚಿದರೆ ಆರಾಮವೆನಿಸುತ್ತದೆ.

೮. ಹಸುವಿನ ತುಪ್ಪವನ್ನು ಚಿಕ್ಕ ಮಕ್ಕಳ ಎದೆಯ ಮೇಲೆ ಉಜ್ಜಿದರೆ ಎದೆಯಲ್ಲಿನ ಕಫ ಹೊರಗೆ ಬರಲು ಸಹಾಯವಾಗುತ್ತದೆ.

೯. ಸರ್ಪದಂಶವಾದರೆ (ಹಾವು ಕಡಿದರೆ) ೧೦೦ ರಿಂದ ೧೫೦ ಗ್ರಾಮ್ ತುಪ್ಪವನ್ನು ಕುಡಿಸಬೇಕು. ಆ ಮೇಲೆ ಅವನಿಗೆ ಎಷ್ಟು ಸಾಧ್ಯವಿದೆಯೋ, ಅಷ್ಟು ಉಗುರುಬೆಚ್ಚಗಿನ ನೀರನ್ನು ಕುಡಿಸಬೇಕು. ಇದರಿಂದ ವಾಂತಿ ಮತ್ತು ಭೇದಿಯಾಗತೊಡಗುತ್ತದೆ ಮತ್ತು ಹಾವಿನ ವಿಷ ಇಳಿಯಲು ಸಹಾಯವಾಗುತ್ತದೆ.

೧೦. ಒಂದು ವೇಳೆ ಹೆಚ್ಚು ನಿಶಕ್ತಿ (ವೀಕನೆಸ್) ಅನಿಸುತ್ತಿದ್ದರೆ, ಒಂದು ಲೋಟ ಹಾಲಿನಲ್ಲಿ ಒಂದು ಚಮಚ ಹಸುವಿನ ತುಪ್ಪ ಮತ್ತು ಸ್ವಲ್ಪ ಸಕ್ಕರೆಯನ್ನು ಹಾಕಿ ನಿಯಮಿತವಾಗಿ ಕುಡಿಯಬೇಕು.

೧೧. ಹಸುವಿನ ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಪಿತ್ತ (ಎಸಿಡಿಟಿ) ಮತ್ತು ಮಲಬದ್ಧತೆಯ ತೊಂದರೆಗಳು ಕಡಿಮೆಯಾಗುತ್ತವೆ.

೧೨. ಯಾರಿಗೆ ಹೃದಯರೋಗದ ತೊಂದರೆ ಇದ್ದು ಅವರಿಗೆ ಸ್ನಿಗ್ಧ (ಎಣ್ಣೆಯ) ಪದಾರ್ಥಗಳನ್ನು ತಿನ್ನಬಾರದೆಂಬ ಪಥ್ಯವಿದೆಯೋ, ಅವರು ದೇಶಿ ಹಸುವಿನ ತುಪ್ಪವನ್ನು ತಿನ್ನಬೇಕು. ಅದರಿಂದ ಹೃದಯ ಬಲಶಾಲಿಯಾಗುತ್ತದೆ.

೧೩. ಹಸುವಿನ ತುಪ್ಪದಿಂದ ತೂಕ ಸಮತೋಲನವಾಗಿರುತ್ತದೆ, ಅಂದರೆ ತೆಳ್ಳಗಿರುವ (ಸಪೂರ) ವ್ಯಕ್ತಿಯ ತೂಕ ಹೆಚ್ಚಾಗುತ್ತದೆ ಮತ್ತು ಸ್ಥೂಲಕಾಯವಿರುವ ವ್ಯಕ್ತಿಯ ಸ್ಥೂಲತೆ (ಬೊಜ್ಜು) ಕಡಿಮೆಯಾಗಿ ತೂಕ ಕಡಿಮೆಯಾಗುತ್ತದೆ.

೧೪. ಹಸುವಿನ ತುಪ್ಪದಿಂದ ಬಲ ಮತ್ತು ವೀರ್ಯ ಹೆಚ್ಚಾಗುತ್ತದೆ. ಅದರಿಂದ ಶಾರೀರಿಕ ಮತ್ತು ಮಾನಸಿಕ ಶಕ್ತಿಯೂ ಹೆಚ್ಚಾಗುತ್ತದೆ.

೧೫. ದೇಶಿ ಹಸುವಿನ ತುಪ್ಪದಲ್ಲಿ ಅರ್ಬುದರೋಗದೊಂದಿಗೆ (ಕ್ಯಾನ್ಸರ್) ಹೋರಾಡುವ ಕ್ಷಮತೆಯಿರುತ್ತದೆ. ತುಪ್ಪವನ್ನು ತಿನ್ನುವುದರಿಂದ ಸ್ತನಗಳ ಮತ್ತು ಕರುಳುಗಳ ಗಂಭೀರ ಅರ್ಬುದ ರೋಗದಿಂದ ರಕ್ಷಣೆಯಾಗುತ್ತದೆ.

೧೬. ಹಸುವಿನ ತುಪ್ಪವು ಕೇವಲ ಅರ್ಬುದರೋಗವನ್ನು ತಡೆಯುತ್ತದೆ, ಅರ್ಬುದರೋಗ ಶರೀರದಲ್ಲಿ ಹರಡುವುದನ್ನೂ ಕೂಡ ಆಶ್ಚರ್ಯಕರ ರೀತಿಯಲ್ಲಿ ತಡೆಯುತ್ತದೆ.

೧೭. ನಿಯಮಿತವಾಗಿ ಹಸುವಿನ ತುಪ್ಪವನ್ನು ಮೂಗಿನಲ್ಲಿ ಹಾಕಿದರೆ ಹುಚ್ಚುತನ ದೂರವಾಗಲು ಸಹಾಯವಾಗುತ್ತದೆ.

೧೮. ಹಸುವಿನ ತುಪ್ಪವನ್ನು ಮೂಗಿನಲ್ಲಿ ಹಾಕಿದರೆ ವ್ಯಕ್ತಿಗೆ ಪ್ರಜ್ಞಾಹೀನತೆಯಿಂದ (ಕೊಮಾದಿಂದ) ಪ್ರಜ್ಞೆ ಬರಲು ಸಹಾಯವಾಗುತ್ತದೆ.

೧೯. ಹಸುವಿನ ತುಪ್ಪವನ್ನು ಮೂಗಿನಲ್ಲಿ ಹಾಕಿದರೆ ಪಾರ್ಶ್ವವಾಯುವಿನ (ಅರ್ಧಾಂಗವಾಯುವಿನ) ಮೇಲೆ ಉಪಚಾರವಾಗುತ್ತದೆ.

೨೦. ಹಸುವಿನ ತುಪ್ಪವನ್ನು ಮೂಗಿನಲ್ಲಿ ಹಾಕುವುದರಿಂದ ಕೂದಲು ಉದುರುವುದು ಕಡಿಮೆಯಾಗಿ ಹೊಸ ಕೂದಲುಗಳು ಬರತೊಡಗುತ್ತವೆ, ಹಾಗೆಯೇ ಕಿವಿಯ ಪರದೆಯ ರೋಗಗಳು ಶಸ್ತ್ರಚಿಕಿತ್ಸೆಯನ್ನು ಮಾಡದೇ ಗುಣವಾಗುತ್ತವೆ.

೨೧. ಹಸುವಿನ ತುಪ್ಪವನ್ನು ಮೂಗಿನಲ್ಲಿ ಹಾಕಿದರೆ ‘ಅಲರ್ಜಿ’ (ಕೆಲವು ವಿಶಿಷ್ಟ ಪ್ರಕಾರದ ಆಹಾರಗಳ ಅಥವಾ ಔಷಧಿಗಳ ಅಹಿತಕಾರಿ ಪ್ರತಿಕ್ರಿಯೆಯನ್ನು ನಿರ್ಮಾಣ ಮಾಡುವ ಶರೀರದ ಸ್ಥಿತಿ) ಕಡಿಮೆಯಾಗುತ್ತದೆ.

೨೨. ವಿಶೇಷ : ಉತ್ತಮ ಪ್ರಕೃತಿ ಇರುವ ವ್ಯಕ್ತಿಗಳೂ ಪ್ರತಿದಿನ ನಿಯಮಿತವಾಗಿ ಮಲಗುವ ಮೊದಲು ಎರಡೂ ಮೂಗಿನ ಹೊಳ್ಳೆಗಳಲ್ಲಿ ದೇಶಿ ಹಸುವಿನ ತುಪ್ಪವನ್ನು ಉಗುರುಬೆಚ್ಚಗೆ ಮಾಡಿ ಹಾಕಬೇಕು. ಅದರಿಂದ ಶಾಂತ ನಿದ್ರೆ ಬರುತ್ತದೆ, ಗೊರಕೆ ಹೊಡೆಯುವುದು ನಿಲ್ಲುತ್ತದೆ ಮತ್ತು ಅನೇಕ ರೋಗಗಳಿಂದ ರಕ್ಷಣೆಯಾಗುತ್ತದೆ.

‘ದೇಶಿ ಹಸುವಿನ ತುಪ್ಪದಿಂದ ರಕ್ತದಲ್ಲಿನ ಕೊಲೇಸ್ಟ್ರಾಲ್ ಹೆಚ್ಚಾಗುವುದಿಲ್ಲ’ ಇದನ್ನು ಗಮನದಲ್ಲಿಡಬೇಕು.

ಲೇಖಕರು : ಶ್ರೀ. ಉಕೇಶಸಿಂಹ ಚೌಹಾನ (ಆಧಾರ : ‘ಕ್ಷಾತ್ರಧರ್ಮ ವಿಚಾರ ಮಂಥನ’)