ಸಂದೇಹ ನಿವಾರಣೆ

ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’ ಮಾಲಿಕೆ ೭

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/56542.html

ಅನಿತಾ ಜಗತಾಪ, ಮೀರಾ ರೋಡ, ಠಾಣೆ ಇವರ ಪ್ರಶ್ನೆ

ಕೆಲವು ಜನರು ಬಾಡಿಗೆಯ ಮನೆಗಳಲ್ಲಿರುತ್ತಾರೆ. ಇದರಿಂದ ಗಿಡಗಳನ್ನು ಬೆಳೆಸಲು ಅಡಚಣೆ ಬರುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ?

ಉತ್ತರ : ಮನೆಗೆ ಯಾವುದೇ ರೀತಿಯ ಹಾನಿಯಾಗಬಾರದು, ಹಾಗೆಯೇ ಅಕ್ಕ-ಪಕ್ಕದ ಜನರಿಗೆ ಅಥವಾ ನಿಮ್ಮ ಕಟ್ಟಡದಲ್ಲಿನ ಜನರಿಗೆ ಯಾರಿಗೂ ಯಾವುದೇ ರೀತಿಯ ತೊಂದರೆಗಳು ಆಗಬಾರದು, ಈ ರೀತಿಯಿಂದ ಕೃಷಿಯನ್ನು ಮಾಡಿದರೆ, ಸಾಮಾನ್ಯವಾಗಿ ಯಾರೂ ವಿರೋಧ ಮಾಡುವುದಿಲ್ಲ. ಸೊಸೈಟಿ ಇದ್ದಲ್ಲಿ, ಸೊಸೈಟಿಯ ಸಾರ್ವಜನಿಕ ಜಾಗದಲ್ಲಿ ಮುಂದಾಳತ್ವವನ್ನು ವಹಿಸಿ ಕೃಷಿ ಮಾಡಿದರೆ ಉತ್ತಮ ಬೆಂಬಲ ಸಿಗುತ್ತದೆ. ನಮಗೆ ಇತರರ ಪರಿಚಯವೂ ಹೆಚ್ಚಾಗುತ್ತದೆ ಮತ್ತು ಈ ರೀತಿ ಸಮಷ್ಟಿ ಸೇವೆಯೂ ಆಗುತ್ತದೆ. ಸ್ಥಳೀಯ ಪರಿಸ್ಥಿತಿಗನುಸಾರ ಇದನ್ನು ತಾರತಮ್ಯದಿಂದ ನಿರ್ಧರಿಸಬೇಕು.

ಸೌ. ನೇಹಾ ಜೋಶಿ, ಮುಲುಂಡ, ಮುಂಬೈ ಇವರ ಪ್ರಶ್ನೆ

೧. ಗಿಡಗಳಿಗೆ ಬೂಸ್ಟು (ಫಂಗಸ್) ಬರುತ್ತದೆ. ಅದಕ್ಕೆ ಏನು ಮಾಡಬೇಕು ?

ಉತ್ತರ : ಗೋಮೂತ್ರ, ಜೀವಾಮೃತ, ಹುಳಿ ಮಜ್ಜಿಗೆ ಇವುಗಳಲ್ಲಿನ ಯಾವುದಾದರೊಂದು ಪದಾರ್ಥದಲ್ಲಿ ೧೦ ಪಟ್ಟು ನೀರು ಹಾಕಿ ಗಿಡಗಳ ಮೇಲೆ ಸಿಂಪಡಿಸಬೇಕು.

೨. ಅರಿಶಿಣದ ಗಿಡಗಳು ಬೆಳೆಯುತ್ತಿವೆ; ಆದರೆ ಅದರ ಕೆಳಗಿನ ಎಲೆಗಳು ಹಳದಿಯಾಗಿವೆ. ಇದಕ್ಕೆ ಕಾರಣವೇನು ?

ಉತ್ತರ : ಅರಿಶಿಣದ ಗಿಡಗಳಿಗೆ ೪ ತಿಂಗಳಿಗಿಂತ ಹೆಚ್ಚಾಗಿದ್ದರೆ, ಹಳೆಯ ಎಲೆಗಳು ಹಳದಿಯಾಗುತ್ತವೆ, ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸಂಪೂರ್ಣ ಗಿಡಗಳೂ ಬೇಗ ಹಳದಿಯಾಗುತ್ತವೆ.

೩. ಕಳೆದ ೫ ತಿಂಗಳುಗಳಿಂದ ನಮ್ಮ ಮನೆಯಲ್ಲಿನ ಅಮೃತಬಳ್ಳಿಗೆ ಎಲೆಗಳು ಬರುವುದಿಲ್ಲ; ಆದರೆ ಅದು ಜೀವಂತವಾಗಿದೆ. ಇದಕ್ಕೆ ಕಾರಣವೇನು ?

ಉತ್ತರ : ಅಮೃತಬಳ್ಳಿಗೆ ಮಳೆಗಾಲದಲ್ಲಿಯೇ ಎಲೆಗಳಿರುತ್ತವೆ. ನಂತರ ಎಲೆಗಳು ಕಡಿಮೆಯಾಗುತ್ತವೆ. ಅಮೃತಬಳ್ಳಿಯು ಜೀವಂತವಾಗಿದ್ದರೆ, ಅದಕ್ಕೆ ಎಲೆಗಳು ಬರುತ್ತವೆ. ಜೀವಾಮೃತ ಮತ್ತು ಹುಳಿ ಮಜ್ಜಿಗೆಯನ್ನು (೧೦ ಪಟ್ಟು ನೀರಿನಲ್ಲಿ ಸೇರಿಸಿ) ವಾರಕ್ಕೊಮ್ಮೆ ಸಿಂಪಡಿಸಬೇಕು.

(ಬರವಣಿಗೆಯಲ್ಲಿನ ಎಲ್ಲ ಅಂಶಗಳ ದಿನಾಂಕ ೨.೧೨.೨೦೨೧)

ನಮಗೆ ದೇಶಹಿತ, ರಾಷ್ಟ್ರಹಿತ ಹಾಗೂ ಧರ್ಮಹಿತಕ್ಕಾಗಿ ಹಿಂದೂ ರಾಷ್ಟ್ರದ ಆವಶ್ಯಕತೆಯಿದೆ !

ನಮಗೆ ದೇಶಹಿತ, ರಾಷ್ಟ್ರಹಿತ ಹಾಗೂ ಧರ್ಮಹಿತಕ್ಕಾಗಿ ಹಿಂದೂ ರಾಷ್ಟ್ರ ಬೇಕಾಗಿದೆ,

ಹಸ್ಕೆ ಲಿಯಾ ಪಾಕಿಸ್ತಾನ, ಲಡಕೆ ಲೇಂಗೆ ಹಿಂದು ಸ್ತಾನ, ಅಬ್ ಯೇ ನಹೀ ಚಲೆಗಾ | ಯೇ ನಯಾ ಹಿಂದುಸ್ತಾನ ಹೈ |

ಬತಾನಾ ಪಡೆಗಾ ಕೀ, ಘುಸ ಕೆ ಲೇಂಗೆ ಪಾಕಿಸ್ತಾನ ಔರ ಬನಾ ದೇಂಗೆ ಅಖಂಡ ಹಿಂದುಸ್ಥಾನ |

ಹಿಂದೂಗಳು ಈಗ ಎಚ್ಚರಗೊಂಡು ಹಿಂದೂ ರಾಷ್ಟ್ರದ ಬೇಡಿಕೆ ಮಾಡುವುದು ಆವಶ್ಯಕವಾಗಿದೆ; ಏಕೆಂದರೆ ೮ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. – ಶ್ರೀ. ಸುನೀಲ ಘನವಟ, ಹಿಂದು ಜನಜಾಗೃತಿ  ಸಮಿತಿ.

ಪ್ರವಾಹದೊಂದಿಗೆ ಹರಿದುಕೊಂಡು ಹೋಗುವವರು ಶವಗಳಾಗಿರುತ್ತಾರೆ. ಆ ಪ್ರವಾಹದಲ್ಲಿ ತಮ್ಮ ದಿಶೆಯನ್ನು ನಿರ್ಧರಿಸುವವರು ಜೀವಂತರಾಗಿರುತ್ತಾರೆ.

– ಡಾ. ಸಚ್ಚಿದಾನಂದ ಶೇವಡೆ, ರಾಷ್ಟ್ರೀಯ ಪ್ರವಚನಕಾರರು ಹಾಗೂ ಸಾಹಿತ್ಯಕಾರರು, ಡೊಂಬಿವಿಲಿ, ಠಾಣೆ.