ಭಾರತ-ಚೀನಾ ಗಡಿಪ್ರದೇಶದಲ್ಲಿ ಸಮೀಕ್ಷೆ ಮಾಡಲಾಗಿತ್ತು. ಆ ಸಮೀಕ್ಷೆಯ ಮಾಹಿತಿ ಮತ್ತು ನಿಷ್ಕರ್ಷೆಯನ್ನು ಇಲ್ಲಿ ಕೊಡುತ್ತಿದ್ದೇವೆ.
೧. ಗಡಿಪ್ರದೇಶದ ನಿವಾಸಿಗಳಿಗೆ ಮೂಲ ಸೌಕರ್ಯಗಳ ಅಭಾವ
‘ಭಾರತ ಮತ್ತು ಚೀನಾ ಗಡಿಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಮೂಲ ಸೌಕರ್ಯಗಳ ತೀವ್ರ ಅಭಾವವಿದೆ. ಈ ನಾಗರಿಕರಿಗೆ ರಸ್ತೆ, ವಿದ್ಯುತ್, ನೀರು ಮತ್ತು ಆರೋಗ್ಯ ಸೇವೆ ಸಿಗುವುದಿಲ್ಲ. ವಾಸ್ತವದಲ್ಲಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಪ್ರದೇಶವಷ್ಟೇ ಅಲ್ಲ; ಕಡಿಮೆ ಪಕ್ಷ ಭಾರತೀಯ ಸೇನೆಯ ಚೌಕಿಯ ವರೆಗಿನ ರಸ್ತೆಗಳನ್ನು ಜೋಡಿಸುವ ಪ್ರಯತ್ನ ಸಹ ಆಗಿಲ್ಲ. ಅದರಿಂದಾಗಿ ಯುದ್ಧ ಪರಿಸ್ಥಿತಿಯಲ್ಲಿ ನಮ್ಮದೇ ಸೇನೆಗೆ ಆಹಾರ ಮತ್ತು ಯುದ್ಧಸಾಮಗ್ರಿಗಳನ್ನು ಪೂರೈಸುವುದು ಇಂದಿಗೂ ಅಸಾಧ್ಯವಾಗಿದೆ.
೨. ‘ಗಡಿ ಪ್ರದೇಶಾಭಿವೃದ್ಧಿ ನಿಧಿ’ಯ ಹೆಸರಿನಲ್ಲಿ ನೀಡಿರುವ ಹಣವು ಸರಕಾರದ ನಿರ್ಲಕ್ಷ್ಯದ ಪ್ರತೀಕ !
ಕೇಂದ್ರೀಯ ಸಹಾಯದ ಹೆಸರಿನಲ್ಲಿ ದೆಹಲಿಯಿಂದ ಬರುವ ನಿಧಿಯು ಸೋರಿ-ಸೋರಿ (ಭ್ರಷ್ಟಾಚಾರವಾಗುತ್ತಾ) ಈ ಕ್ರೇತ್ರಕ್ಕೆ ತಲುಪುತ್ತದೆ. ಈ ಒಂದಿಷ್ಟು ನಿಧಿಯಲ್ಲಿ ಯಾವುದೇ ದೃಢ ಹಾಗೂ ಸ್ಥಿರವಾದ ಅಭಿವೃದ್ಧಿ ಕಾರ್ಯ ನಡೆಸಲು ಅಸಾಧ್ಯವಾಗಿರುತ್ತದೆ. ‘ಗಡಿ ಪ್ರದೇಶಾಭಿವೃದ್ಧಿ ನಿಧಿ’ಯ ಹೆಸರಿನಲ್ಲಿ ನೀಡಲಾಗುವ ಈ ಹಣಕ್ಕೆ ಗ್ರಾಮೀಣ ಸರಕಾರಿ ಸಹಾಯವಿಲ್ಲ, ಇದನ್ನು ‘ಸರಕಾರಿ ನಿರ್ಲಕ್ಷ್ಯ’ದ ಪ್ರತೀಕವೆಂದು ತಿಳಿಯಲಾಗುತ್ತದೆ.
೩. ತುಂಬಾ ದುಬಾರಿ ಹಾಗೂ ನಿರ್ಜನ ಮಾರ್ಗಗಳಲ್ಲಿ ವಾಹನಗಳ ಮೂಲಕ ಮಾಡಲಾಗುವ ಸಂಚಾರಸಾರಿಗೆ
ಇಲ್ಲಿ ಸಂಚರಿಸುವ ವಾಹನಗಳ ಸ್ಥಿತಿಯೂ ದಯನೀಯವಾಗಿದೆ. ಅನೇಕ ಸ್ಥಳಗಳಿಂದ ‘ಲೇಹ್’ಗೆ ವಾರದಲ್ಲೊಮ್ಮೆ ಮಾತ್ರ ಬಸ್ ಸೇವೆ ಇದೆ. ಕಾಯಿಲೆ ಅಥವಾ ದುರ್ಘಟನೆಯಂತಹ ಯಾವುದೇ ಆಪತ್ಕಾಲೀನ ಸ್ಥಿತಿಯಲ್ಲಿ ವಾಹನದ ಮೂಲಕ ಪ್ರಯಾಣಿಸುವುದು ಸಾಧ್ಯವಿದೆ. ಆದರೆ ಹೀಗೆ ಪ್ರಯಾಣ ಮಾಡುವುದು ತುಂಬಾ ದುಬಾರಿಯಾಗಿದೆ. ಈ ಸಾರಿಗೆ ವ್ಯವಸ್ಥೆಯು ತುಂಬಾ ದೂರ ಮತ್ತು ನಿರ್ಜನ ಮಾರ್ಗಗಳಿಂದ ಕೂಡಿದೆ. ಅದರ ಹೊರತು ಅಲ್ಲಲ್ಲಿ ವಿಚಾರಣೆ, ತಪಾಸಣೆ, ಶೋಧನೆ ನಡೆಯುತ್ತಾ ಇರುತ್ತದೆ. ಇದರ ಅಧಿಕಾರವನ್ನು ಈಗ ಭಾರತ-ಟಿಬೇಟ್ ಗಡಿಯ ಪೊಲೀಸರಿಗೆ ವಹಿಸಲಾಗಿದೆ.
೪. ಭಾರತದ ಗಡಿಯಲ್ಲಿ ಚೀನಾದಿಂದ ಪದೇ ಪದೇ ನಡೆಯುವ ಅತಿಕ್ರಮಣ
ಭಾರತೀಯ ಕ್ಷೇತ್ರಗಳಲ್ಲಿ ಚೀನಾದಿಂದ ಪದೇ ಪದೇ ಅತಿಕ್ರಮಣಗಳು ನಡೆಯುತ್ತಿರುತ್ತದೆ. ಆಡು-ಕುರಿಗಳನ್ನು ಮೇಯಿಸುವ ಚೀನಾದವರು ಮೊದಲು ಭಾರತದ ಗಡಿಗೆ ಬಂದು ತಮ್ಮ ಡೇರೆಯನ್ನು ನಿರ್ಮಿಸುತ್ತಾರೆ. ಅಲ್ಲಿದ್ದು ಅವರು ತಮ್ಮ ಕುರಿ-ಆಡುಗಳನ್ನು ಮೇಯಲು ಬಿಡುತ್ತಾರೆ, ಆದರೆ ಆ ಕ್ಷೇತ್ರದಲ್ಲಿ ಭಾರತದ ಕುರಿಮೇಯಿಸುವವರಿಗೆ ತಮ್ಮ ಕುರಿ ಮತ್ತು ಆಡುಗಳನ್ನು ಮೇಯಿಸಲು ನಿರ್ಬಂಧಿಸುತ್ತಾರೆ. ದೂರು ನೀಡಿದರೆ ಭಾರತೀಯ ಸೇನೆ ಮತ್ತು ಭಾರತ ಟಿಬೇಟ್ ಗಡಿಯ ಪೊಲೀಸರು (ಐಟಿಬಿಪಿ) ಚೀನಾದ ಕುರಿ ಮೇಯಿಸುವವರನ್ನು ತಡೆಯುವ ಬದಲು ಭಾರತದ ನಾಗರಿಕರಿಗೆ ಮುಂದೆ ಹೋಗದಂತೆ ತಡೆಯುತ್ತಾರೆ. ಸ್ವಲ್ಪ ಸಮಯದ ನಂತರ ಭಾರತೀಯರ ಧ್ವನಿಯೂ ಅಡಗಿ ಬಿಡುತ್ತದೆ. ಆಗ ಅಲ್ಲಿ ‘ಪೀಪಲ್ಸ್ ಲಿಬರೇಶನ್ ಅರ್ಮಿ’ಯ ಸೈನಿಕರು ತಮ್ಮ ಅಡ್ಡೆಯನ್ನು ನಿರ್ಮಿಸುತ್ತಾರೆ ಹಾಗೂ ಚೀನಾದ ಜನರು ಇನ್ನೂ ಮುಂದುವರಿದು ಆ ಸ್ಥಾನವನ್ನು ಕಬಳಿಸುತ್ತಾರೆ. ಈ ರೀತಿಯಲ್ಲಿ ಚೀನಾ ೧೯೬೨ ರ ನಂತರ ಸಾವಿರಾರು ಚದರ ಕಿ.ಮೀ. ಭೂಮಿಯನ್ನು ಯಾವುದೇ ಘರ್ಷಣೆಯಿಲ್ಲದೆ ವಶಪಡಿಸಿಕೊಂಡಿದೆ. ಇದರ ದುಷ್ಪರಿಣಾಮವೆಂದರೆ, ಹೆಚ್ಚಿನ ಹುಲ್ಲುಗಾವಲು ಪ್ರದೇಶಗಳ ಮೇಲೆ ಚೀನಾದ ನಿಯಂತ್ರಣವಿದೆ ಹಾಗೂ ಭಾರತೀಯ ಕುರಿ ಮೇಯಿಸುವವರಿಗೆ ಮಾತ್ರ ಪಶುಗಳ ಮೇವಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಪಶುಸಂಗೋಪನೆಯೇ ಸ್ಥಳೀಯ ನಾಗರಿಕರ ಜೀವನೋಪಾಯದ ಮುಖ್ಯ ಮೂಲವಾಗಿದೆ; ಆದರೆ ಆ ಪ್ರದೇಶಗಳಲ್ಲಿ ಪಶುಗಳ ಸಂಖ್ಯೆಯು ಪ್ರತಿದಿನ ಕುಸಿಯುತ್ತಿದೆ. ಅದರಿಂದ ಆರ್ಥವ್ಯವಸ್ಥೆಯ ಸಂಕಟ ಉದ್ಭವಿಸಿದೆ.
೧೦ ವರ್ಷಗಳ ಹಿಂದೆ ಯಾರಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಕುರಿಗಳು ಮತ್ತು ಆಡುಗಳಿದ್ದವೋ ಈಗ ಅವರಲ್ಲಿ ಹೆಚ್ಚೆಂದರೆ ನೂರೈವತ್ತು ಕುರಿಗಳು ಮತ್ತು ಆಡುಗಳು ಉಳಿದಿವೆ. ಈ ಸ್ಥಿತಿಯಿಂದ ಪಶುಗಳು ಹಸಿವಿನಿಂದ ಸಾಯುತ್ತಿವೆ. ಆದ್ದರಿಂದ ಪಶುಗಳ ಸಂಖ್ಯೆಯಲ್ಲಿ ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಕುಸಿತವಾಗುತ್ತಿದೆ.
೫. ಭಾರತ ಸರಕಾರದ ಮೌನಧಾರಣೆಯಿಂದ ನಿರಾಶರಾಗಿರುವ ಗಡಿಪ್ರದೇಶದ ನಾಗರಿಕರು
ವಿರೋಧವಿಲ್ಲದೇ ಭಾರತೀಯ ಭೂಮಿಯು ಕೈತಪ್ಪಿ ಹೋಗಿರುವುದಕ್ಕೆ ಸಾಕ್ಷಿದಾರರಾಗಿರುವ ಅಲ್ಲಿನ ಸ್ಥಳೀಯ ನಾಗರಿಕರು ತಮ್ಮ ಭವಿಷ್ಯದ ಬಗ್ಗೆ ಗೊಂದಲಕ್ಕೊಳಗಾಗಿದ್ದು ಆತಂಕದಲ್ಲಿದ್ದಾರೆ. ೧೯೬೨ ರ ನಂತರವೂ ಅವರು ಭಾರತೀಯರೊಂದಿಗೆ ಪರಿಚಯವಿರುವ ಚೀನಾದ ನಾಗರಿಕರನ್ನು ಮತ್ತು ಚೀನಾದ ಸೈನಿಕರನ್ನು ಆ ಪ್ರದೇಶಗಳಿಗೆ ಪ್ರವೇಶ ಮಾಡದಂತೆ ತಡೆಯುತ್ತಲೆ ಇದ್ದರು ಹಾಗೂ ಸಂಘರ್ಷ ಮಾಡುತ್ತಿದ್ದರು; ಆದರೆ ಈಗ ಅವರು ಭಾರತ ಸರಕಾರದ ಮೌನದಿಂದ ನಿರಾಶರಾಗಿದ್ದು ಆ ಬಗ್ಗೆ ವಿಚಲಿತರಾಗಿದ್ದಾರೆ.
ಹುಲ್ಲುಗಾವಲು ಪ್ರದೇಶ ಕೈತಪ್ಪಿ ಹೋದ ನಂತರ ಈಗ ಊರು ಕೂಡ ಕೈತಪ್ಪಿ ಹೋಗುವ ಸಮಯ ಬಂದಿದೆ, ಎಂದು ಅಲ್ಲಿನ ನಾಗರಿಕರಿಗೆ ಅನಿಸುತ್ತದೆ. ಅವರ ಊರನ್ನು ಚೀನಾದ ಸೈನಿಕರು ವಶಪಡಿಸಿಕೊಂಡರೆ ಹಾಗೂ ಅದರ ವಿಷಯದಲ್ಲಿ ಸರಕಾರದ ಉದಾಸೀನತೆ ಹೀಗೆಯೆ ಮುಂದುವರಿದರೆ, ಏನಾಗಬಹುದು ? ಆ ಸ್ಥಳೀಯ ನಾಗರಿಕರು ಹಿಂದಿನ ತುಲನೆಯಲ್ಲಿ ಚೀನಾದ ವಿರುದ್ಧ ಈಗ ಸಂಯಮದಿಂದ ವರ್ತಿಸುತ್ತಾರೆ; ಏಕೆಂದರೆ ಭವಿಷ್ಯದಲ್ಲಿ ಚೀನಾ ಅವರ ಊರನ್ನು ವಶಪಡಿಸಿಕೊಂಡರೆ ಮತ್ತು ಭಾರತವು ಮೌನ ತಾಳಿದರೆ ಅವರಿಗೆ ಬದುಕಲು ಅಸಾಧ್ಯವಾಗಬಹುದು ಎಂದು ಅನೇಕ ಜನರ ವೈಯಕ್ತಿಕ ಮಾತುಕತೆಯಿಂದ ಗಮನಕ್ಕೆ ಬರುತ್ತದೆ.
೬. ಭಾರತೀಯ ಚೌಕಿಗಳನ್ನು ವಶಪಡಿಸಿಕೊಂಡು ಅಲ್ಲಿ ಕ್ಯಾಮೆರಾವನ್ನು ಅಳವಡಿಸಿ ನಿರೀಕ್ಷಣೆ ಮಾಡುವುದು
ಸಿಂಧು ಹಾಗೂ ಪೆಂಗಾಗ್ ನದಿಗಳ ಇನ್ನೊಂದು ದಿಕ್ಕಿನಲ್ಲಿ ಸುಸಜ್ಜಿತ ರಸ್ತೆಗಳು ಮತ್ತು ಅದರಲ್ಲಿ ವೇಗವಾಗಿ ಹೋಗುವ ವಾಹನಗಳನ್ನು ಕಣ್ತೆರದು ನೋಡಬಹುದು. ಗಡಿಯಲ್ಲಿ ಅವರು ಸುಸಜ್ಜಿತ ಚೌಕಿಗಳನ್ನು ಸಿದ್ಧಪಡಿಸಿದ್ದಾರೆ. ಅದರಲ್ಲಿನ ಹೆಚ್ಚಿನ ಚೌಕಿಗಳು ಮೊದಲು ಭಾರತೀಯರದ್ದಾಗಿದ್ದವು. ಈ ಚೌಕಿಗಳ ಮೇಲೆ ಉತ್ತಮ ಕ್ಷಮತೆಯಿರುವ ಆಧುನಿಕ ‘ಕ್ಯಾಮೆರಾ’ಗಳನ್ನು ಅಳವಡಿಸಲಾಗಿದೆ, ಆ ಮೂಲಕ ನಿಯಮಿತ ನಿರೀಕ್ಷಣೆ ಮಾಡುತ್ತಿದ್ದಾರೆ.
೭. ‘ಭಾರತ ನಮ್ಮ ಅಭಿವೃದ್ಧಿಗಾಗಿ ಏನೂ ಮಾಡುವುದಿಲ್ಲ’, ಎನ್ನುವ ಭಾವನೆಯನ್ನು ಭಾರತೀಯ ನಾಗರಿಕರಲ್ಲಿ ಹುಟ್ಟಿಸುತ್ತಿರುವ ಮೋಸಗಾರ ಚೀನಾ !
ನಮ್ಮ ಹುಲ್ಲುಗಾವಲು ಪ್ರದೇಶಕ್ಕಾಗಿ ಅವರು ಭಾರತೀಯ ಗಡಿಗೆ ಹೊಂದಿಕೊಂಡು ಸುಸಜ್ಜಿತ ರಸ್ತೆ, ಫ್ಲಾಟ್‌ಗಳು, ಆಸ್ಪತ್ರೆ ಗಳು, ಶಾಲೆ ಇತ್ಯಾದಿಗಳನ್ನು ನಿರ್ಮಿಸಿದ್ದಾರೆ. ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಇವರು ಹಸಿರು ತರಕಾರಿಗಳನ್ನು ತಿನ್ನಲು ಸಾಧ್ಯವಿದೆಯೆಂದು ಇವರಿಗಾಗಿ ‘ಗ್ರೀನ್ ಹೌಸ್’ ತಯಾರಿಸಿಕೊಟ್ಟಿದ್ದಾರೆ. ಇಲ್ಲಿ ೨೪ ಗಂಟೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಅದರೊಂದಿಗೆ ಅವರಿಗೆ ಉಚಿತ ಸಂಚಾರಿವಾಣಿಯನ್ನು ಒದಗಿಸಲಾಗಿದೆ. ಅದರಲ್ಲಿ ವಿವಿಧ ಫಂಕ್ಶನಗಳು ಆಂಗ್ಲ ಭಾಷೆಯಲ್ಲಿರದೆ ಸ್ಥಳೀಯ ಭಾಷೆಯಲ್ಲಿದೆ.
ಅದರ ಹಿಂದೆ ಅವರ ಉದ್ದೇಶವೆಂದರೆ ಭಾರತೀಯ ನಾಗರಿಕರ ಮನಸ್ಸಿನಲ್ಲಿ ಭಾರತ ಸರಕಾರ ತಮ್ಮ ವಿಕಾಸಕ್ಕಾಗಿ ಏನೂ ಮಾಡುವುದಿಲ್ಲ, ಎನ್ನುವ ಭಾವನೆಯನ್ನು ಮೂಡಿಸುವುದೇ ಆಗಿದೆ. ದುರ್ಭಾಗ್ಯದಿಂದ ಈ ಭಾವನೆಯು ಸಂಪೂರ್ಣವಲ್ಲದಿದ್ದರೂ, ಒಂದಲ್ಲ ಒಂದು ಸ್ತರದಲ್ಲಿ ಬೇರೂರುತ್ತಿದೆ. ಈ ಪ್ರದೇಶವನ್ನು ಝಾರ್ಖಂಡ ಅಥವಾ ಛತ್ತೀಸಗಡದೊಂದಿಗೆ ತುಲನೆ ಮಾಡಲು ಸಾಧ್ಯವಿಲ್ಲ. ಗಡಿಯಲ್ಲಿನ ಈ ಪ್ರದೇಶದಲ್ಲಿ ನಾಗರಿಕರು ತಮ್ಮ ಕಣ್ಣಮುಂದೆಯೇ ತಮ್ಮ ಜೀವನ ಬದಲಾಗುತ್ತಿರುವುದನ್ನು ನೋಡುತ್ತಿದ್ದಾರೆ ಹಾಗೂ ತಮ್ಮ ದುರವಸ್ಥೆಯನ್ನು ಅನುಭವಿಸುತ್ತಿದ್ದಾರೆ. ಈ ಮೇಲಿನ ಪರಿಸ್ಥಿತಿಯಲ್ಲಿ ಭಾರತೀಯ ಭೂಭಾಗವನ್ನು ಚೀನಾದ ಅತಿಕ್ರಮಣದಿಂದ ರಕ್ಷಿಸುವ ಸವಾಲು ಸರಕಾರದ ಮುಂದಿದೆ, ಅದರೊಂದಿಗೆ ಅಲ್ಲಿನ ನಾಗರಿಕರ ಮನಸ್ಸಿನಲ್ಲಿ ಭಾರತೀಯತ್ವದ ಭಾವವೂ ಶಾಶ್ವತವಾಗಿ ಉಳಿಯುವಂತೆ ಮಾಡುವ ಹೊಣೆಯಿದೆ.
(ಆಧಾರ : ‘ಸಾಪ್ತಾಹಿಕ ಹಿಂದೂ ಸಭಾ ವಾರ್ತಾ’ (೧೮ ರಿಂದ ೨೪ ಜೂನ್ ೨೦೧೪))
೨ ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವವರಿಗೆ ದಂಡ ಬೇಕು !‘೨ ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವವರಿಂದ ಮಹತ್ವದ ಎಲ್ಲಾ ಕಾಗದಪತ್ರಗಳನ್ನು ವಶಪಡಿಸಿಕೊಂಡು ಅವರ ಮೇಲೆ ಕಠಿಣ ನಿರ್ಬಂಧ ಹಾಕಬೇಕು. ಹೆಲ್ಮೆಟ್ ಅಥವಾ ‘ಸೀಟ್ ಬೆಲ್ಟ್’ ಹಾಕದಿದ್ದರೆ ನಿಯಮದ ಪಾಲನೆಯನ್ನು ಮಾಡದಿರುವ ಕಾರಣದಿಂದ ದಂಡವನ್ನು ವಸೂಲು ಮಾಡಲಾಗುತ್ತದೆ ಅದರಂತೆ ೨ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮವನ್ನು ನೀಡುವವರಿಗೆ ನಿರ್ಬಂಧ ಹಾಗೂ ದಂಡವಿರಬೇಕು’. – ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ |