೧. ಪೂ. ಭಾರ್ಗವರಾಮರು ನಿದ್ದೆಯಲ್ಲಿದ್ದಾಗ ಸಾಧಕಿಯು ‘ಪ.ಪೂ. ದೇವಬಾಬಾರವರು ಭೇಟಿಯಾದರು’, ಎಂದು ಹೇಳಿದ ವಾಕ್ಯವನ್ನು ಕೇಳಿದಾಗ ಅವರು ತಕ್ಷಣ ಎದ್ದು, ‘ನನಗೆ ದೇವಬಾಬಾರ ಬಳಿಗೆ ಕರೆದುಕೊಂಡು ಹೋಗಿರಿ’ ಎಂದು ಹೇಳುವುದು
‘ಡಿಸೆಂಬರ್ ೨೦೧೯ ರಲ್ಲಿ, ನಾವು ಗೋವಾದಲ್ಲಿರುವ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ್ದೆವು. ಆ ಸಮಯದಲ್ಲಿ ಕಿನ್ನಿಗೋಳಿಯಿಂದ ಸಂತ ಪ.ಪೂ. ದೇವಬಾಬಾರವರೂ ಆಶ್ರಮಕ್ಕೆ ಬಂದಿದ್ದರು. ೧.೧೨.೨೦೧೯ ರಂದು, ನಾನು ಭೋಜನ ಕಕ್ಷೆಯಲ್ಲಿ ಪ.ಪೂ. ದೇವಬಾಬಾ ಅವರನ್ನು ಭೇಟಿಯಾದೆನು. ಈ ವಿಷಯವನ್ನು ನಮ್ಮ ಕೋಣೆಗೆ ಹೋಗಿ ನಾನು ಸೌ. ಭವಾನಿಗೆ (ಪೂ. ಭಾರ್ಗವರಾಮ ಅವರ ತಾಯಿ) ಹೇಳುತ್ತಿದ್ದೆ. ಆಗ ಅವಳು ಪೂ. ಭಾರ್ಗವರಾಮ ಅವರನ್ನು ಮಲಗಿಸುತ್ತಿದ್ದಳು. ನನ್ನ ಮಾತು ಕೇಳುತ್ತಿದ್ದಂತೆಯೇ ಪೂ. ಭಾರ್ಗವರಾಮರು ತಕ್ಷಣ ಎದ್ದು, ‘ನನಗೆ ಈಗಲೇ ಪ.ಪೂ. ದೇವಬಾಬಾ ಅವರ ಬಳಿಗೆ ಕರೆದುಕೊಂಡು ಹೋಗಿ’ ಎಂದು ಹೇಳುತ್ತಾ ನನ್ನ ಬಳಿ ಬಂದರು. ನಾನು ಅವರನ್ನು ಭೋಜನ ಕಕ್ಷೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ.ಪೂ. ದೇವಬಾಬಾ ಅವರು ತಮ್ಮ ಕೋಣೆಗೆ ಹೋಗಿದ್ದರು.
೨. ಪೂ. ಭಾರ್ಗವರಾಮ ಅವರು ಪ.ಪೂ. ದೇವಬಾಬಾರವರ ಕಾರನ್ನು ನೋಡಲು ಇಚ್ಛಿಸುವುದು ಮತ್ತು ಕಾರು ಬರುವಿಕೆಗಾಗಿ ಸಂತೋಷದಿಂದ ಕಾಯುವುದು
ಅನಂತರ ಪ.ಪೂ. ದೇವಬಾಬಾ ಅವರನ್ನು ಭೇಟಿಯಾದ ನಂತರ ಅವರು ಪೂ. ಭಾರ್ಗವರಾಮ ಅವರಿಗೆ ೨ ಚಾಕಲೇಟ್ ಕೊಟ್ಟರು. ಪೂ. ಭಾರ್ಗವರಾಮ ಒಂದು ಚಾಕಲೇಟ್ ತಿಂದು ಇನ್ನೊಂದನ್ನು ನನಗೆ ಕೊಟ್ಟರು. ಆಗ ಅವರು ನನಗೆ, “ನನಗೆ ಪ.ಪೂ. ದೇವಬಾಬಾ ಅವರ ಕಾರನ್ನು ನೋಡಬೇಕು. ಅಲ್ಲಿಗೆ ಕರೆದುಕೊಂಡು ಹೋಗಿ”, ಎಂದು ಹೇಳಿದರು. ಹಾಗಾಗಿ ನಾವು ಪ.ಪೂ. ದೇವಬಾಬಾರವರ ವಾಹನದ ದಾರಿ ಕಾಯುತ್ತಿದ್ದೆವು.
೩. ಪ.ಪೂ. ದೇವಬಾಬಾ ಅವರು ಹಿಂದಿರುಗಿ ಹೋಗಲು ಕಾರಿನಲ್ಲಿ ಕುಳಿತ ನಂತರ, ಪೂ. ಭಾರ್ಗವರಾಮ ‘ನಾನೂ ಬರುತ್ತೇನೆ’ ಎಂದು ಹೇಳುವುದು
ಪ.ಪೂ. ದೇವಬಾಬಾ ಊರಿಗೆ ಹಿಂದಿರುಗಲು ಕಾರಿನಲ್ಲಿ ಕುಳಿತ ನಂತರ, ಪೂ. ಭಾರ್ಗವರಾಮ ‘ನಾನೂ ಬರುತ್ತೇನೆ. ನಾನು ದೇವಬಾಬಾ ಅವರ ಜೊತೆ ಹೋಗಲಿಕ್ಕಿದೆ,’ ಎಂದು ಹೇಳಿದರು. ಸಾಮಾನ್ಯವಾಗಿ ಅವರು ಮನೆಯವರನ್ನು ಬಿಟ್ಟು ಇತರರೊಂದಿಗೆ ಹೋಗಲು ಇಷ್ಟಪಡುವುದಿಲ್ಲ. ಹಾಗಾಗಿ ಅವರು ‘ಪ.ಪೂ. ದೇವಬಾಬಾ ಜೊತೆ ಹೋಗಬೇಕು’ ಎಂದಾಗ, ನನಗೂ ತುಂಬಾ ಆಶ್ಚರ್ಯವಾಯಿತು. ಪ.ಪೂ. ದೇವಬಾಬಾರವರು ಪೂ. ಭಾರ್ಗವರಾಮರಿಗೆ ‘ನಾಳೆ ಬರುತ್ತೇನೆ’ ಎಂದು ಹೇಳಿದ ಮೇಲೆ ಅವರು ಪ.ಪೂ. ದೇವಬಾಬಾ ಅವರನ್ನು ಹೋಗಲು ಬಿಟ್ಟರು.
– ಶ್ರೀಮತಿ ಅಶ್ವಿನಿ ಪ್ರಭು (ಅಜ್ಜಿ (ಪೂ. ಭಾರ್ಗವರಾಮ ಅವರ ತಂದೆ ಶ್ರೀ. ಭರತ ಪ್ರಭು ಅವರ ತಾಯಿ), ಆಧ್ಯಾತ್ಮಿಕ ಮಟ್ಟ ಶೇಕಡಾ ೬೧), ಮಂಗಳೂರು. (೧.೧೨.೨೦೧೯)